Kaal Bhairav Jayanti 2024: ನವೆಂಬರ್ 21? 22? ಕಾಲ ಭೈರವ ಜಯಂತಿ ಯಾವಾಗ? ದಿನಾಂಕ, ಶುಭ ಸಮಯ, ಪೂಜಾ ವಿಧಾನ ಇಲ್ಲಿದೆ

ಹಿಂದೂ ಧರ್ಮದಲ್ಲಿ ಕಾಲಭೈರವನ ಆರಾಧನೆಯು ವಿಶೇಷ ಮಹತ್ವವನ್ನು ಹೊಂದಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಕಾಲಭೈರವನನ್ನು ನಿಯಮಿತವಾಗಿ ಪೂಜಿಸುವ ಜನರು ಅವರ ಮನೆಯಲ್ಲಿ ಯಾವಾಗಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ. ಇದಲ್ಲದೆ ಭಯ, ಕೋಪ, ಗೊಂದಲ ಮತ್ತು ನಕಾರಾತ್ಮಕ ಶಕ್ತಿ ಇತ್ಯಾದಿಗಳಿಂದ ಪರಿಹಾರವನ್ನು ಪಡೆಯುತ್ತಾರೆ. ಶತ್ರುಗಳಿಂದ ಮುಕ್ತಿಯೂ ಸಿಗುತ್ತದೆ.

ಕಾಲ ಭೈರವನನ್ನು ಶಿವನ ಉಗ್ರ ರೂಪವೆಂದು ಪರಿಗಣಿಸಲಾಗಿದೆ. ಕಾಲಭೈರವನನ್ನು ಪ್ರತಿದಿನ ಶ್ರದ್ಧಾ ಭಕ್ತಿಯಿಂದ ಜನ ಪೂಜಿಸುತ್ತಾರೆ. ಆದರೆ ವಿಶೇಷವಾಗಿ ಕಾಲಭೈರವ ಜಯಂತಿಯ ದಿನದಂದು ಆತನನ್ನು ಪೂಜಿಸುವುದರಿಂದ ಭಕ್ತರು ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ. 2024ರಲ್ಲಿ ಕಾಳ ಭೈರವ ಜಯಂತಿಯನ್ನು ಯಾವ ದಿನದಂದು ಆಚರಿಸಲಾಗುತ್ತದೆ? ಇದರೊಂದಿಗೆ, ಕಾಲಭೈರವನ ಪೂಜೆಯ ಮಂಗಳಕರ ಸಮಯ ಮತ್ತು ವಿಧಾನದ ಬಗ್ಗೆ ತಿಳಿಯೋಣ.

kaal bhairav jayanti 2024 21 or 22 november when is kala bhairava jayanti date time pooja method

ಕಾಲಭೈರವ ಜಯಂತಿ ಯಾವಾಗ?

ಈ ಬಾರಿಯ ಅಷ್ಟಮಿ ತಿಥಿಯು 22 ನವೆಂಬರ್ 2024 ರಂದು ಸಂಜೆ 06.07 ರಿಂದ ಪ್ರಾರಂಭವಾಗುತ್ತದೆ. ಅದು ಮರುದಿನ 23 ನವೆಂಬರ್ 2024 ರಂದು ಬೆಳಿಗ್ಗೆ 07.56ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿಯ ಆಧಾರದ ಮೇಲೆ ಈ ಬಾರಿ ಕಾಲಭೈರವ ಜಯಂತಿಯ ಹಬ್ಬವನ್ನು ಶುಕ್ರವಾರ 22 ನವೆಂಬರ್ 2024 ರಂದು ಆಚರಿಸಲಾಗುತ್ತದೆ.

ಕಾಲಭೈರವನನ್ನು ಮೆಚ್ಚಿಸಲು, ಕೆಲವರು ಕಾಲಭೈರವ ಜಯಂತಿಯ ದಿನದಂದು ಉಪವಾಸವನ್ನು ಆಚರಿಸುತ್ತಾರೆ. 22 ನವೆಂಬರ್ 2024 ರಂದು ಬೆಳಿಗ್ಗೆ 6:50 ರಿಂದ 10:48 ರವರೆಗೆ ಕಾಲ ಭೈರವನ ಆರಾಧನೆಗೆ ಮಂಗಳಕರ ಸಮಯ ಇರುತ್ತದೆ.

kaal bhairav jayanti 2024 21 or 22 november when is kala bhairava jayanti date time pooja method

22 ನವೆಂಬರ್ 2024ರ ಶುಭ ಸಮಯ ಹೀಗಿದೆ:-

ಸೂರ್ಯೋದಯ- ಬೆಳಗ್ಗೆ 6:53

ಚಂದ್ರೋದಯ- ತಡರಾತ್ರಿ 11:41

ರಾಹುಕಾಲ - 10:48 ರಿಂದ 12:07 ರವರೆಗೆ

ಅಭಿಜೀತ್ ಮುಹೂರ್ತ- 11:46 ರಿಂದ 12:28 ರವರೆಗೆ

ಅಮೃತ ಕಾಲ - 03:26 ರಿಂದ 05:08 ರವರೆಗೆ

ಬ್ರಹ್ಮ ಮುಹೂರ್ತ- 05:18 ರಿಂದ 06:06 ರವರೆಗೆ

ಕಾಲ ಭೈರವನ ಪೂಜೆಯ ವಿಧಾನ:-

*ಕಾಲಭೈರವ ಜಯಂತಿಯ ದಿನ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಸ್ನಾನ ಮಾಡಿ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.

* ಈ ದಿನ ಉಪವಾಸ ಮಾಡುವುದು ತುಂಬಾ ಶುಭ ಫಲಗಳನ್ನು ನೀಡುತ್ತದೆ.

*ಭಗವಾನ್ ಶಿವನೊಂದಿಗೆ ಕಾಲಭೈರವನನ್ನು ಪೂಜಿಸಿ.

*ಕಾಲ ಭೈರವನಿಗೆ ಹೂವು, ಹಣ್ಣು, ಸಿಹಿ ತಿನಿಸು, ಕಪ್ಪು ಎಳ್ಳು, ಅಕ್ಕಿ ಅರ್ಪಿಸಿ. ತುಪ್ಪದಿಂದ ದೀಪ ಬೆಳಗಿಸಿ

*ಭೈರವನ ವಿಗ್ರಹದ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದು ಕೂಡ ಮಂಗಳಕರವಾಗಿದೆ.

* ಸಂಜೆ ಆರತಿ ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.

*ಉಪವಾಸ ಮುಗಿದ ನಂತರ ಕಪ್ಪು ನಾಯಿಗೆ 3 ರಿಂದ 5 ಬಗೆಯ ಸಿಹಿಯನ್ನು ತಿನ್ನಿಸಿ. ಇದರಿಂದ ಪಾಪಗಳಿಂ ಮುಕ್ತಿ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+