ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mahalaya Amavasya 2022: ಮಹಾಲಯ ಅಮಾವಾಸ್ಯೆ, ಪಿತೃ ಪಕ್ಷದ ಕೊನೆಯಲ್ಲಿ ಬರುವ ಇದರ ವಿಶೇಷತೆ ಏನು?

|
Google Oneindia Kannada News

ಈ ವರ್ಷ ಪಿತೃ ಪಕ್ಷ ಸೆ. 10ರಿಂದ ಆರಂಭವಾಗಿದೆ. ಇದು ಭಾದ್ರಪದ ಮಾಸದ ಕೃಷ್ಣ ಪಕ್ಷದಂದು 15 ದಿನ ಕಾಲ ಇರಲಿದೆ. ಪೌರ್ಣಿಮೆಯಿಂದ ಆರಂಭಗೊಂಡು ಅಮಾವಾಸ್ಯೆವರೆಗೂ ಪಿತೃ ಪಕ್ಷ ಇರಲಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬರುವ ಅಮಾವಾಸ್ಯೆಗೆ ಪಿತೃ ಪಕ್ಷ ಕೊನೆಗೊಳ್ಳುತ್ತದೆ. ಆ ಅಮಾವಾಸ್ಯೆ ದಿನವೇ ಮಹಾಲಯ ಅಮಾವಾಸ್ಯೆ.

ಪಿತೃ ಪಕ್ಷದಂದು ನಮ್ಮ ಪೂರ್ವಿಕರ ಆತ್ಮಗಳಿಗೆ ಮುಕ್ತಿ ದೊರಕಿಸಿಕೊಡಲು ಶ್ರಾದ್ಧ ಮಾಡಲಾಗುತ್ತದೆ. ಮಹಾಲಯ ಅಮಾವಾಸ್ಯೆ ದಿನ ಈ ಕಾರ್ಯಕ್ಕೆ ಶ್ರೇಷ್ಠ ಎನ್ನಲಾಗುತ್ತದೆ.

Pitru Paksha 2022 Pind Daan: ಪಿತೃಪಕ್ಷದಲ್ಲಿ ಹೆಣ್ಮಕ್ಕಳು ಪಿಂಡದಾನ ಮಾಡಬಹುದಾ? ಶಾಸ್ತ್ರ ಏನು ಹೇಳುತ್ತೆ?Pitru Paksha 2022 Pind Daan: ಪಿತೃಪಕ್ಷದಲ್ಲಿ ಹೆಣ್ಮಕ್ಕಳು ಪಿಂಡದಾನ ಮಾಡಬಹುದಾ? ಶಾಸ್ತ್ರ ಏನು ಹೇಳುತ್ತೆ?

ಮಹಾಲಯ ಅಮಾವಾಸ್ಯೆ ಕೇವಲ ಶ್ರಾದ್ಧ, ತರ್ಪಣ ಆಚರಣೆಗೆ ಮಾತ್ರ ಮಹತ್ವದ್ದಲ್ಲ. ಮಹಿಷಾಸುರನೆಂಬ ರಕ್ಕಸನನ್ನು ದುರ್ಗೆ ಸಂಹರಿಸಿದ ದಿನ ಇದೇ ಆಗಿದೆ. ಅದಕ್ಕಾಗಿಯೇ ಮಹಾಲಯ ಅಮಾವಾಸ್ಯೆ ನಂತರ ನವದಿನಗಳ ದಸರಾ ಹಬ್ಬ ಅಥವಾ ದುರ್ಗಾ ಪೂಜೆ ಆರಂಭವಾಗುತ್ತದೆ.

Mahalaya Amavasya Auspicious Day Pitru Paksha Ends, Its Significance and Date in Kannada

ಪಾರ್ವತಿಯ ಅವತಾರವಾದ ದುರ್ಗೆ ಅಮಾವಾಸ್ಯೆ ದಿನದಂದು ದೇವಲೋಕದಿಂದ ಭೂಮಿಗೆ ಇಳಿಯುತ್ತಾಳೆ ಎಂಬ ನಂಬಿಕೆ ಇದೆ. ಹೀಗಾಗಿ, ಅಮಾವಾಸ್ಯೆ ನಂತರದ ಶುಕ್ಲ ಪಕ್ಷವನ್ನು ದೇವಿ ಪಕ್ಷವೆಂದು ಭಾವಿಸಲಾಗುತ್ತದೆ. ಒಂಬತ್ತು ದಿನಗಳ ದುರ್ಗೆ ಪೂಜೆ ಅಥವಾ ನವರಾತ್ರಿ ಆಚರಣೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೂ ನಡೆಯುತ್ತದೆ.

Pitru Paksha 2022 Dates : ಪಿತೃ ಪಕ್ಷ ದಿನಾಂಕ, ಶುಭ ಮುಹೂರ್ತ, ಮಹತ್ವ ಮತ್ತು ಆಚರಣೆಗಳುPitru Paksha 2022 Dates : ಪಿತೃ ಪಕ್ಷ ದಿನಾಂಕ, ಶುಭ ಮುಹೂರ್ತ, ಮಹತ್ವ ಮತ್ತು ಆಚರಣೆಗಳು

ನಮ್ಮ ಮೈಸೂರು ದಸರಾದ ವೈಭವ ವಿಶ್ವಖ್ಯಾತವಾಗಿದೆ. ಬಂಗಾಳಿಯರೂ ನವರಾತ್ರಿಯನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಈ ನವರಾತ್ರಿಗೆ ಮುನ್ನುಡಿಯಂತಿರುವ ಮಹಾಲಯ ಅಮಾವಾಸ್ಯೆ ಕೂಡ ಬಹಳ ಮಹತ್ವ ಪಡೆದುಕೊಂಡಿದೆ.

ಪಿತೃ ದೋಷ ನಿವಾರಣೆಗೆ...

ಮಹಾಲಯ ಅಮಾವಾಸ್ಯೆ ದಿನ ಪಿತೃಪಕ್ಷ ಕೊನೆಗೊಳ್ಳುತ್ತದೆ. ಇದನ್ನು ವಿಸರ್ಜನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಆಗಲೇ ತಿಳಿಸಿದಂತೆ ನಮ್ಮ ಪೂರ್ವಿಕರ ಆತ್ಮಗಳಿಗೆ ಶ್ರಾದ್ಧ ಮಾಡಿ ಅವರನ್ನು ಸಂತೃಪ್ತಿಗೊಳಿಸಲು ಅವಕಾಶ ಇರುತ್ತದೆ. ನಮ್ಮ ಮೂರು ತಲೆಮಾರಿನ ಪೂರ್ವಿಕರು ಕಾಗೆ ಇತ್ಯಾದಿ ಹಕ್ಕಿಗಳ ರೂಪದಲ್ಲಿ ಪಿತೃಪಕ್ಷದ ದಿನಗಳಲ್ಲಿ ಬರುತ್ತಾರೆಂಬ ನಂಬಿಕೆ ಇದೆ. ಅದರಲ್ಲೂ ಮಹಾಲಯ ಅಮಾವಾಸ್ಯೆಯಂದು ಈ ಸಾಧ್ಯತೆ ಹೆಚ್ಚು.

Mahalaya Amavasya Auspicious Day Pitru Paksha Ends, Its Significance and Date in Kannada

ಕರ್ನಾಟಕದಲ್ಲಿ ಮಹಾಲಯ ಅಮಾವಾಸ್ಯೆಯಂದು ಇಹಲೋಕ ತ್ಯಜಿಸಿದ ನಮ್ಮ ಹಿರಿಯರಿಗೆ ನೈವೇದ್ಯ ಇಟ್ಟು ಪೂಜೆ ಮಾಡಿ, ನಂತರ ಅದನ್ನು ಬಯಲಿನಲ್ಲಿ ಎಡೆ ಇಟ್ಟು ಬರಲಾಗುತ್ತದೆ. ಕಾಗೆಗಳು ಬಂದು ಎಡೆಯಲ್ಲಿರುವುದನ್ನು ತಿಂದರೆ ನಮ್ಮ ಪೂರ್ವಜರ ಆತ್ಮಗಳು ನಮ್ಮ ವೈವೇದ್ಯ ಸ್ವೀಕರಿಸಿ ಸಂತುಷ್ಟಗೊಂಡಿದ್ದಾರೆಂಬ ನಂಬಿಕೆ ಇದೆ.

ಮನೆಯಲ್ಲಿ ಸಂತೋಷ, ಶಾಂತಿ

ಪಿತೃಪಕ್ಷದ ಅಮಾವಾಸ್ಯೆಯಂದು ಶ್ರಾದ್ಧ ಮಾಡಿದರೆ ಬಹಳ ಯೋಗ ಎನ್ನುತ್ತಾರೆ ಪಂಡಿತರು. ಈ ದಿನ ಎಡೆ ಇಟ್ಟರೆ ನಮ್ಮ ಪೂರ್ವಜರು ಸಂತೃಪ್ತಿಗೊಂಡು ನಮ್ಮನ್ನು ಹರಸುತ್ತಾರಂತೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತೋಷ ನೆಲಸುತ್ತದೆ ಎಂದು ಹೇಳಲಾಗುತ್ತದೆ.

ಪಿತೃಪಕ್ಷದಲ್ಲಿ ಭೂಮಿಗೆ ಆಗಮಿಸುವ ನಮ್ಮ ಪೂರ್ವಿಕರ ಆತ್ಮಗಳು ಅಮಾವಾಸ್ಯೆ ದಿನ ವಾಪಸ್ ಹೋಗುತ್ತಾರೆ. ನಿಮ್ಮ ಪೂರ್ವಜರು ಯಾವ ದಿನ ನಿಧನ ಹೊಂದಿದರು ಎಂಬುದು ತಿಳಿದಿಲ್ಲದಿದ್ದರೆ ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ, ಪಿಂಡದಾನ ಮಾಡಬಹುದು.

ಮಹಾಲಯ ಅಮಾವಾಸ್ಯೆ ಹೇಗೆ ಮಾಡುವುದು?
ಮಹಾಲಯ ಅಮಾವಾಸ್ಯೆ ದಿನ ಬೆಳಗ್ಗೆ ನದಿಯಲ್ಲಿ ಸ್ನಾನ ಮಾಡಿ, ಬೊಗಸೆಯಲ್ಲಿ ನೀರು ಹಿಡಿದು ಪೂರ್ವಿಕರನ್ನು ಸ್ಮರಿಸಿ ಅರ್ಪಿಸಬೇಕು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಎಡೆ ಇಡಬೇಕು. ಪೂಜೆ ಮಾಡಿದ ಬಳಿಕ ಎಡೆಯ ಆಹಾರವನ್ನು ಹಸು, ಕಾಗೆ ಮತ್ತು ಇರುವೆಗಳಿಗೆ ನೀಡಬೇಕು.

ನಮ್ಮ ಪೂರ್ವಜರು ಇಷ್ಟಪಡುವ ವಸ್ತುಗಳನ್ನು ಎಡೆಯಲ್ಲಿ ಇಡಲಾಗುತ್ತದೆ. ಅವರು ಇಷ್ಟಪಡುವ ತಿನಿಸುಗಳು, ವಸ್ತ್ರಗಳನ್ನೂ ಎಡೆಯಲ್ಲಿ ಇಡಬಹುದು. ಕೆಲ ಸಮುದಾಯಗಳು ಮಾಂಸಾಹಾರವನ್ನು ಎಡೆಯಲ್ಲಿ ಇಡುತ್ತಾರೆ. ಕೆಲ ಕಡೆ ಹೆಂಡ, ತಂಬಾಕು ಇತ್ಯಾದಿಯನ್ನೂ ಅರ್ಪಿಸುತ್ತಾರೆ.

(ಒನ್ಇಂಡಿಯಾ ಸುದ್ದಿ)

English summary
Mahalaya Amavasya is the last of Pitru Paksha that begins on September 10th 2022. This has many significant factors as an important shraddha day. And also Durga descend on this day, it is believed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X