ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ ಹೀಗಿರುತ್ತದೆ

|
Google Oneindia Kannada News

ದೇಶಾದ್ಯಂತ ಪವಿತ್ರ ರಂಜಾನ್ ಸಂಭ್ರಮ ಮನೆ ಮಾಡಿದೆ. ರಂಜಾನ್ ತಿಂಗಳಿನಲ್ಲಿ ಒಬ್ಬ ಮುಸ್ಲಿಂ ಕೈಗೊಳ್ಳುವ ಕಟ್ಟುಪಾಡುಗಳೇನು? ಇದನ್ನು ಪಾಲಿಸುವುದರಿಂದ ವೈಜ್ಞಾನಿಕವಾಗಿ ಆಗುವ ಲಾಭಗಳು ಏನು? ಉಪವಾಸದ ಪದ್ಧತಿ ಎಂಥದ್ದು? ಇಫ್ತಾರ್ ಕೂಟದ ಪ್ರಾಮುಖ್ಯವೇನು? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಇದ್ದರೆ ಅದಕ್ಕೆಲ್ಲ ಇಲ್ಲಿದೆ ಉತ್ತರ.

ಜೂನ್ 17 ರಂದು ಆರಂಭವಾಗಿರುವ ಉಪವಾಸ ಒಂದು ತಿಂಗಳ ಕಾಲ ಚಾಲ್ತಿಯಲ್ಲಿ ಇರುತ್ತದೆ. ಮುಂಜಾನೆ ಸೂರ್ಯೋದಯಕ್ಕಿಂತ ಮುನ್ನ ಸಂಜೆ ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡಬೇಕು. ಮಕ್ಕಳು, ಅನಾರೋಗ್ಯ ಪೀಡಿತರು, ಅಶಕ್ತರಿಗೆ ಮಾತ್ರ ಉಪವಾಸದಿಂದ ವಿನಾಯಿತಿ.[ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು]

ರಂಜಾನ್ ಆಚರಣೆಯ ಬಗ್ಗೆ ಮಂಗಳೂರಿನ ಸ್ನೇಹಿತ ಯೂಸಫ್ ಅವರನ್ನು ಕೇಳಿದಾಗ ಅದರ ಒಂದೊಂದೆ ವಿಚಾರಗಳನ್ನು ಮತ್ತು ಮೌಲ್ಯಗಳನ್ನು ಬಿಚ್ಚಿಟ್ಟರು. ಅವರ ಮಾತಿನಲ್ಲಿಯೇ ರಂಜಾನ್ ಮಹತ್ವವನ್ನು ತಿಳಿದುಕೊಳ್ಳೋಣ...

Daily routine of a Muslim during Ramzan or Ramadan

ಸೂರ್ಯೋದಯಕ್ಕೂ ಮುನ್ನವೇ ಎದ್ದು ಪ್ರಾರ್ಥನೆ ಸಲ್ಲಿಕೆ ಮಾಡಬೇಕು, ನಂತರ ಆಹಾರ ಸೇವನೆ. ಸೂರ್ಯ ಉದಯದ ನಂತರ ಎಂಜಲನ್ನು ಸಹ ನುಂಗುವಂತಿಲ್ಲ. ಬಡವರ ಕಷ್ಟ ಎಲ್ಲರಿಗೂ ಗೊತ್ತಾಗಲಿ, ನಮ್ಮ ಮನಸ್ಸಿನಲ್ಲಿರುವ ಅಹಂಕಾರದ ಭಾವನೆಗಳು ಮರೆಯಾಗಲಿ ಎಂಬ ಉದ್ದೇಶಕ್ಕೆ ತಿಂಗಳ ಕಾಲದ ಉಪವಾಸವನ್ನು ಧಾರ್ಮಿಕ ಮುಖಂಡರು ತಿಳಿಸಿಕೊಟ್ಟಿದ್ದಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ದೇಹದಲ್ಲಿನ ಕೊಬ್ಬಿನ ಅಂಶ ನಾಶ ಮಾಡುವುದರೊಂದಿಗೆ ಹೊಸ ಚೈತನ್ಯಕ್ಕೆ ಈ ಉಪವಾಸ ಕಾರಣವಾಗುತ್ತದೆ.

ಸಂಜೆ ನಡೆಯುವ ಇಫ್ತಾರ್ ಕೂಟಕ್ಕೆ ಉಪವಾಸ ಬಿಡುವುದು ಎಂದು ಕರೆಯಬಹುದು. ಅದು ಅಂದಿಗೆ ಮಾತ್ರ. ಮತ್ತೆ ಮರುದಿನ ದೈನಂದಿನ ಪದ್ಧತಿ ಜಾರಿಯಲ್ಲಿ ಇರುತ್ತದೆ. ದಿನದ ಐದು ಪ್ರಾರ್ಥನೆಗಳೊಂದಿಗೆ ಈ ತಿಂಗಳಲ್ಲಿ ಕೆಲ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಬೇಕು.[ಉಪವಾಸ, ಪಾರಾಯಣ, ಪಾರಣಿ : ರಂಗ್‌ರಂಗೀನ್ ರಂಜಾನ್]

ಮಸೀದಿಯಲ್ಲೇ ಇಫ್ತಾರ್ ಕೂಟ ಮಾಡುತ್ತೇವೆ. ಒಂದೊಂದು ದಿನ ಒಬ್ಬೊಬ್ಬರು ಊಟದ ಜವಾಬ್ದಾರಿ ವಹಿಸಿಕೊಂಡಿರುತ್ತಾರೆ. ಖರ್ಜೂರಕ್ಕೆ ವಿಶೇಷವಾದ ಸ್ಥಾನ ನೀಡಿದ್ದು ಸೇವನೆ ಮಾಡುತ್ತೇವೆ. ಮಾಂಸಹಾರಕ್ಕೆ ನಿರ್ಬಂಧವಿಲ್ಲ. ಖರ್ಜೂರ, ಹಣ್ಣು, ಶ್ಯಾವಿಗೆ ಮತ್ತು ಪಾಯಸ ಪ್ರಮುಖವಾದದ್ದು.

ಕುರಾನ್ ಪಠಣ ಹಬ್ಬದ ಪ್ರಮುಖ ಅಂಶ. ಕುರಾನ್ ಧರ್ಮಗ್ರಂಥದ ವಿವಿಧ ಭಾಗಗಳನ್ನು ಓದಿ ಹೇಳುವ ಮೌಲಾ ಅವರ ಆಣತಿಯಂತೆ ನಡೆದುಕೊಳ್ಳುತ್ತೇವೆ. ಮಹಿಳೆಯರು ಮನೆಯಲ್ಲಿಯೇ ಕುಳಿತು ಧರ್ಮಗ್ರಂಥ ಪಠಣ ಮಾಡಬಹುದು.

ದಾನ ನೀಡುವುದಕ್ಕೂ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಆತ ಗಳಿಸಿದ ಆದಾಯದ ಶೇ.2.5 ನ್ನು ಬಡವರಿಗೆ ನೀಡಬೇಕು ಎಂಬ ನಿಯಮವಿದೆ. ಆಹಾರ ವಸ್ತುಗಳನ್ನು, ಹಣ ಮತ್ತು ಬಟ್ಟೆ ದಾನ ಮಾಡಬಹುದು.

ಪ್ರಾರ್ಥನೆ, ಶಿಸ್ತು, ದಾನ, ತಮ್ಮನ್ನು ತಾವು ಅರಿತುಕೊಳ್ಳುವುದು, ದೇಹ ದಂಡನೆ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು, ಏಕಾಗ್ರತೆ ಸಾಧಿಸುವುದು ಹಬ್ಬದ ವಿಶೇಷ.

English summary
Ramzan or Ramadan is holy month of fasting, introspection and prayer. By the way, do you know how a Muslim spends his day or what are his day-to-day activities during Roza? Read on. Ramzan is a festival of sacrifice, togetherness, perseverance. Muslims donate lot of their belonging to the needy people. Wish you all Happy Ramzan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X