ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭ

By Mahesh
|
Google Oneindia Kannada News

Muslims observes Ramadan with prayers at mosques
ಪವಿತ್ರ ರಂಜಾನ್ ತಿಂಗಳ ಉಪವಾಸ ಬುಧವಾರದಿಂದ ವಿಶ್ವದಾದ್ಯಂತ ಸುನ್ನಿ ಮುಸ್ಲಿಮರು ಆರಂಭಿಸಿದ್ದು, ಷಿಯಾ ಪಂಗಡದವರು ಇಂದಿನಿಂದ ಉಪವಾಸ ಆರಂಭಿಸಿದ್ದಾರೆ.

ಬುಧವಾರದಿಂದ ಪವಿತ್ರ ರಂಜಾನ್ ತಿಂಗಳು ಆರಂಭಗೊಂಡಿದ್ದು, 30 ದಿನಗಳ ಕಾಲ ಉಪವಾಸ(ರೋಜಾ) ನಡೆಯಲಿದ್ದು, ಅರೆಬಿಯನ್, ಗಲ್ಫ ಸೇರಿದಂತೆ ಈಜಪ್ಟ್ , ಸೌದಿ ಅರೆಬಿಯಾ, ಇಂಡೋನೇಷ್ಯಾ, ಬಹರೇನ್, ಕುವೈಟ್, ಕತಾರ್‌ನಲ್ಲಿ ಉಪವಾಸ ಆರಂಭವಾಗಿದೆ. ಅಲ್ಲದೆ, ಅಫ್ಘಾನಿಸ್ತಾನ, ಸಿರಿಯಾ, ಯೆಮೆನ್, ಪ್ಯಾಲೆಸ್ತೇನ್, ಮಲೇಶ್ಯಾ ಹಾಗೂ ಸಿಂಗಾಪುರ್‌ಗಳಲ್ಲಿನ ಸುನ್ನಿಗಳು ರಂಜಾನ್ ಆರಂಭಿಸಿದ್ದಾರೆ.

ಪಾಕಿಸ್ತಾನ, ಇರಾನ್ ಸೇರಿದಂತೆ ವಿಶ್ವದ ಶಿಯಾ ಪಂಗಡದವರು ಗುರುವಾರದಿಂದ ಉಪವಾಸ ಆರಂಭಿಸಿದ್ದಾರೆ. ರಂಜಾನ್ ತಿಂಗಳು ಮುಸ್ಲಿಮರಿಗೆ ಪವಿತ್ರವಾಗಿದ್ದು, ಮುಸ್ಲಿಮರು ರಂಜಾನ್ ಉಪವಾಸ ಕೈಗೊಳ್ಳುವ ಮೂಲಕ ಅಲ್ಲಾಹ್ ನ ಕೃಪೆಗೆ ಪಾತ್ರರಾಗಬೇಕು ಎಂದು ಸೌದಿ ರಾಜ ಅಬ್ದು ಮನವಿ ಮಾಡಿಕೊಂಡಿದ್ದಾರೆ.

ಇಸ್ಲಾಮಿನ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ರಮದಾನ್ ಒಂಭತ್ತನೇ ತಿಂಗಳು. ಹಾಗೂ ಬಹು ಪವಿತ್ರವಾದ ಮಾಸ ಕೂಡಾ. ಇಮಾಮರ ಕಣ್ಣಿಗೆ ಚಂದ್ರ ದರ್ಶನವಾದ ನಂತರ ಮಾಸಾಚಾರಣೆಗೆ ಸಿದ್ಧತೆ ಆರಂಭವಾಗುತ್ತದೆ.

ಇಂದು(ಆ.12) ಮುಸ್ಲಿಂ ಸಮುದಾಯದ ಅನೇಕ ಜನ ದೆಹಲಿಯ ಜಮಾ ಮಸೀದಿಯಲ್ಲಿ ಮುಂಜಾನೆ ಸೆಹ್ರಿ ಸೇವಿಸಿ ನಂತರ ಒಂದು ತಿಂಗಳ ಕಾಲ ರೋಜಾ ಇರುವ ಸಂಕಲ್ಪ ಕೈಗೊಂಡರು. ಮುಂಜಾನೆ ಯಿಂದ ಮುಸ್ಸಂಜೆವರೆಗೂ ರೋಜಾ ಜಾರಿಯಲ್ಲಿರುತ್ತದೆ. ರೋಜಾ ಜಾರಿಯಲ್ಲಿರುವ ಸಂದರ್ಭದಲ್ಲಿ ಮದ್ಯ, ಮಾಂಸ, ಮಾನಿನಿಯರ ಸಂಗ ನಿಷಿದ್ಧ.ಪವಿತ್ರ ಖುರಾನ್ ಪಠಣ ಎಲ್ಲೆಡೆ ಸಾಂಗವಾಗಿ ನಡೆಯುತ್ತದೆ.

ಈದ್ ಉಲ್ ಫಿತರ್ ದಿನದಂದು ಉಪವಾಸ ಸಂಕಲ್ಪ ಪೂರ್ಣಗೊಳ್ಳುತ್ತದೆ. ಅಂದು ಸಂಭ್ರಮದಿಂದ ಸಿಹಿ ತಿನಿಸು, ಹಬ್ಬದೂಟ ಮಾಡಿ ಬಡಬಗ್ಗರಿಗೆ ಹಂಚಲಾಗುತ್ತದೆ. ಹೊಚ್ಚ ಹೊಸ ಉಡುಪುಗಳನ್ನು ಧರಿಸಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ತೊಡಗುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X