ವಿಶ್ವದ ನಂ ಒನ್ ಸಾಂತಾಕ್ಲಾಸ್ ಜಿಮ್ಮಿ ಚಾನ್

ಅವನ ಹೆಸರು ಜಿಮ್ಮಿ ಚಾನ್. 44 ವರ್ಷ. ವೃತ್ತಿ ಮತ್ತು ಹವ್ಯಾಸದಿಂದ ಮ್ಯಾಜಿಶಿಯನ್. ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಸಾಂತಾ ಕ್ಲಾಸುಗಳ ನಡುವಿನ ಹಣಾಹಣಿ ಸ್ಪರ್ಧೆಯಲ್ಲಿ ವಿಜೇತನಾದ ಚಾನ್ ಸಖತ್ ಜಾಲಿ ಫೆಲೋ. ಸಾಂತಾಕ್ಲಾಸುಗಳಿಗಾಗಿ ಏರ್ಪಡಿಸಲಾಗಿದ್ದ ಗಂಜಿಕುಡಿಯುವ ಸ್ಪರ್ಧೆ, ಚಿಮಣಿ ಹತ್ತುವ ಸ್ಪರ್ಧೆ ಮತ್ತಿತರ ತಮತಮಾಶೆ ಆದರೆ ಕ್ಲಿಷ್ಟ ಆಟಗಳಲ್ಲಿ ಆತ ಉತ್ತೀರ್ಣನಾದ.
ಚಾನ್ ಕಳೆದ 17 ವರ್ಷಗಳಿಂದ ಸಾಂತಾಕ್ಲಾಸ್ ಮತ್ತು ಜಾದೂಗಾರನಾಗಿ ಹಾಂಗ್ ಕಾಂಗಿನಲ್ಲಿ ವೃತ್ತಿಪರನಾಗಿದ್ದಾನೆ. ಏನೇ ಬರಲಿ ಉತ್ಸಾಹ ಮತ್ತು ನಗುನಗುತ್ತ ಎಲ್ಲವನ್ನೂ ಸ್ವೀಕರಿಸುವ ಮನೋಭಾವ ನನ್ನ ಯಶಸ್ಸಿನ ಒಳಗುಟ್ಟು ಎಂದು ಸ್ಪರ್ಧೆಯಲ್ಲಿ ಗೆದ್ದ ನಂತರ ಚಾನ್ ಹೇಳಿದ.
(ಒನ್ ಇಂಡಿಯಾ.ಇನ್)












Click it and Unblock the Notifications