ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾವಿದನ ಕುಂಚಕ್ಕೆ ಕುಣಿಯುವ ಕೈಗೊಂಬೆಯೋ!

By Staff
|
Google Oneindia Kannada News

Proud mother Mary and Pretty Son Ganeshaಗೌರಿ ಗಣೇಶ ಹಬ್ಬದ ಸಮಯದಲ್ಲಿ ಕಲಾವಿದರ ಕಲ್ಪನಾ ವಿಲಾಸ ಗರಿಗೆದರುವುದು ಸಹಜ. ಭಾರತೀಯ ಸಮಾಜದ ಆಗುಹೋಗುಗಳನ್ನು ವರ್ಷೇ ವರ್ಷೇ ಗಣೇಶನ ವಿಗ್ರಹ ವಿನ್ಯಾಸದಲ್ಲಿ ಬಿಂಬಿಸುವುದು ನಮ್ಮ ಕಲಾವಿದರಿಗೆ ವಾಡಿಕೆಯಾಗಿದೆ. ಸೂಕ್ಷ್ಮಮತಿ ಕಲಾವಿದರ ಸಾಮಾಜಿಕ ಪ್ರಜ್ಞೆಗೆ ಹಿಡಿಯುವ ಕೈಗನ್ನಡಿಯೂ ಆಗಿದೆ. ಒಂದು ಜನಾಂಗ ಹೇಳುವ ಕಥೆ-ವ್ಯಥೆಗಳನ್ನು ಒಬ್ಬ ಕಲಾವಿದ ಒಂದು ವಿಗ್ರಹದಲ್ಲಿ ನಿರೂಪಿಸುವುದನ್ನು ಕಂಡಾಗ ಕಲೋಪಾಸಕರಾದ ನಮಗೆ ಯಾವತ್ತೂ ವಿಸ್ಮಯವಾಗುತ್ತದೆ.

ಹುಲುಮಾನವರಾದ ನಾವು ಮಮತಾಪಾಶಕ್ಕೆ ಕುಣಿಯುವ ಕೈಗೊಂಬೆಗಳಾದರೆ, ಸರ್ವಶಕ್ತರಾದವರು ಕಲಾವಿದರ ಕೈಗೊಂಬೆಗಳಾಗುವುದು ಇಹಲೋಕದ ಸ್ವಾರಸ್ಯವಲ್ಲದೆ ಮತ್ತೇನು? ನೀವು ಇಲ್ಲಿ ನೋಡುತ್ತಿರುವ ಚಿತ್ರ ಸರ್ವಧಾರೀ ಸಂವತ್ಸರದ ವಿನಾಯಕ ಹಬ್ಬದ ಸಂದರ್ಭಕ್ಕಾಗಿ ಸೃಷ್ಟಿಯಾದುದು, ಹುಬ್ಬಳ್ಳಿಯಿಂದ ತಂದದ್ದು. ಸೃಷ್ಟಿ, ಸ್ಥಿತಿ, ಲಯ ಕರ್ತನಾದ ವಿಘ್ನವಿನಾಯಕ ಗಣೇಶ ಮಾತ್ರ ಕಲಾವಿದರ ಸೃಷ್ಟಿ ವೈಚಿತ್ರ್ಯಗಳಿಗೆತನ್ನನ್ನುತನೇ ಒಪ್ಪಿಸಿಕೊಂಡುನಗುತ್ತಿರುತ್ತಾನೆ.

ಈ ಲೇಖನ ಓದಿರಿ
ಸಂಗೀತಪ್ರಿಯ, ನಾದಲೋಲ ನಮ್ಮ ಗಣೇಶ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X