Ganesh Chaturthi 2024 Wishes: ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ನಿಮ್ಮ ಆಪ್ತರಿಗೊಂದು ಸಂದೇಶ...
ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7ರಂದು ಅಂದರೆ ಶನಿವಾರ ಆಚರಿಸಲಾಗುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಹೊಸ ಉಡುಗೆಯನ್ನುಟ್ಟು, ಮನೆಯಲ್ಲಿ ಗೌರಿ ಗಣೇಶನ ವಿಗ್ರಹವನಿಟ್ಟು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಗಣೇಶ ಚತುರ್ಥಿಯನ್ನು ಆಚರಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖ ಹಬ್ಬವೆಂದು ಪರಿಗಣಿಸಲಾದ ಗಣೇಶ ಚತುರ್ಥಿ ಭಕ್ತರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಗಣೇಶನ ಆರಾಧನೆಯೊಂದಿಗೆ ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಲು ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಹಾರೈಸಲು ಇದೊಂದು ವಿಶೇಷ ಸಂದರ್ಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ಹಾಗೂ ಕುಟುಂಬಸ್ಥರಿಗೆ ತಿಳಿಸಲು ಕೆಲವು ಶುಭಾಶಯ ಸಂದೇಶಗಳು ಇಲ್ಲಿವೆ -

ಗಣೇಶ ಚತುರ್ಥಿ 2024 ರ ಶುಭಾಶಯಗಳು:-
1. ಗಣೇಶ ಚತುರ್ಥಿ ಎಲ್ಲರ ಭಾಳಿಗೂ ಶುಭದಾಯಕವಾಗಲಿ. ಗಜಾನನ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ನಿಮಗೂ ನಿಮ್ಮ ಕುಟುಂಬಸ್ಥರಿಗೂ ಗಣೇಶ ಹಬ್ಬದ ಶುಭಾಶಯಗಳು.
2. ವಿನಾಯಕ ನಮ್ಮ ಮಾರ್ಗದರ್ಶಕ. ನಮ್ಮ ರಕ್ಷಕ, ಏಕಮನಸ್ಸಿನಿಂದ ವಿಘ್ನೇಶನನ್ನು ಪೂಜಿಸಿದರೆ ಬೇಡಿದ್ದನ್ನು ಆತನ ನೀಡುತ್ತಾನೆ. ಲೋಕಕಲ್ಯಾಣಕ್ಕಾಗಿ ನಾವೆಲ್ಲಾ ವಿಘ್ನವಿನಾಶಕನನ್ನು ಪೂಜಿಸೋಣ. ಸರ್ವರಿಗೂ ಚೌತಿಯ ಶುಭಾಶಯಗಳು.
3. ಗಜಾನನ ಅದೃಷ್ಟದ ದೇವರು, ಅವನು ನಮ್ಮ ಜೀವನದ ಅಡೆತಡೆಗಳನ್ನು ದೂರಮಾಡಿ, ಸಂತೋಷದ ಜೀವನ ನೀಡುತ್ತಾನೆ. ನಿಮಗೆ ಶುಭ ಆರಂಭವನ್ನು ಒದಗಿಸಲಿ ಎಂದು ಗಣೇಶನಲ್ಲಿ ಪ್ರಾರ್ಥನೆ. ಗಣೇಶ ಚತುರ್ಥಿ 2024 ರ ಶುಭಾಶಯಗಳು.
4. ಜ್ಞಾನವನ್ನು ನೀಡುವ ವಿದ್ಯಾದಾತ ಗಣೇಶ ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ. ಗಣೇಶನ ಶಕ್ತಿ ಸದಾ ಕಾಲ ನಿಮ್ಮೊಂದಿಗೆ ಇರಲಿ. ನಿಮ್ಮ ದು:ಖಗಲನ್ನು ನಾಶಮಾಡಲಿ. ನಿಮ್ಮ ಸಂತೋಷವನ್ನು ಹೆಚ್ಚಿಸಲಿ ಮತ್ತು ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಹರಡಲಿ ಎಂದು ಹಾರೈಸುವೆ.

5. ವಿನಾಯಕ ಅದೃಷ್ಟವನ್ನು ನಿಮ್ಮ ಜೀವನದಲ್ಲಿ ತುಂಬಲಿ, ಎಲ್ಲಾ ಪ್ರಯತ್ನಗಳಲ್ಲಿ ಗಣೇಶ ಯಶಸ್ಸನ್ನು ತರಲಿ. ಗಣಪತಿಯು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಂತೋಷದ ನಿಧಿಯನ್ನು ದಯಪಾಲಿಸಲಿ ಎಂದು ಪ್ರಾರ್ಥನೆ. ಗಣೇಶ ಚೌತಿಯ ಶುಭಾಶಯಗಳು.
6. ಇಷ್ಟಾರ್ಥಗಳನ್ನು ಸಿದ್ಧಿಸಿ, ದೇವರ ಆಶೀರ್ವಾದದಿಂದ ನಿಮ್ಮ ಜೀವನದ ಹಾದಿ ಸುಗಮವಾಗಲಿ. ನಿಮ್ಮ ಮನೆ ಮನಗಳಲ್ಲಿ ಸಂತೋಷದ ಮಳೆ ಸುರಿಯಲಿ. ದೈವಾನುಗ್ರಹ ಸದಾ ನಿಮ್ಮ ಜೊತೆಗಿರಲಿ. ನಿಮ್ಮ ಕುಟುಂಬಕ್ಕೆ ಗಣೇಶ ಹಬ್ಬದ ಶುಭಾಶಯಗಳು.
7. ಗಣೇಶನ ಕೃಪಾದೃಷ್ಟಿಯಿಂದ ಕಷ್ಟಗಳೆಲ್ಲಾ ದೂರವಾಗಲಿ. ಬದುಕಿನ ಕಷ್ಟವೆಲ್ಲಾ ದೂರವಾಗಿ, ದೇವರ ಅನುಗ್ರಹ ಅನುದಿನ ನಿಮ್ಮ ಮೇಲಿರಲಿ. ಗಣೇಶ ಚತುರ್ಥಿಯ ಶುಭಾಶಯಗಳು.
8. ಗಣೇಶ ದೇವನ ಆಶೀರ್ವಾದಿಂದ ಮನೆ ಮನದಲ್ಲಿ ಖುಷಿ ನೆಲೆಸಲಿ. ಗಜವದನ ಆಶೀರ್ವಾದದ ಬೆಳಕು ನಿಮ್ಮ ಜೀವನವನ್ನು ಇನ್ನಷ್ಟು ಸುಖಮಯವಾಗಿಸಲಿ. ಬದುಕಿನ ಎಲ್ಲಾ ಕಷ್ಟ ಕಾರ್ಪಣ್ಯಗಳು ಕೊನೆಯಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಚೌತಿಯ ಶುಭಾಶಯಗಳು.
9.ನೀವು ಜೀವನ ಸುಖ ಸಮೃದ್ಧ ಮತ್ತು ದೀರ್ಘಾಯುಷ್ಯವನ್ನು ಹೊಂದಲಿ ಎಂದು ನಾನು ಗಣೇಶನಲ್ಲಿ ಪ್ರಾರ್ಥಿಸುತ್ತೇನೆ. ದುಷ್ಟರನ್ನು ಕೊಲ್ಲುವ ಹಬ್ಬವಿದು. ಜಗತ್ತಿನಲ್ಲಿ ಪ್ರಾಮಾಣಿಕತೆ ಪ್ರೀತಿಯ ಸಂದೇಶವನ್ನು ಹರಡಿ. ಗಣೇಶ ಚತುರ್ಥಿ ಶುಭಾಶಯಗಳು.
10. ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಂಪ್ರಭ, ನಿರ್ವಿಘ್ನಂ ಕುರು ಮೇ ದೇವ್ ಸರ್ವಕಾರ್ಯೇಷು ಸರ್ವದಾ. ಗಣೇಶ ಚತುರ್ಥಿಯ ಶುಭಾಶಯಗಳು!
11. ನಿಮ್ಮ ಹೆಜ್ಜೆಯಲ್ಲಿ ಹೂವುಗಳು ಅರಳಲಿ, ನಿಮಗೆ ಎಲ್ಲಾ ಸಂತೋಷಗಳು ಸಿಗಲಿ, ನೀವು ಎಂದಿಗೂ ದುಃಖವನ್ನು ಎದುರಿಸದಿರಲಿ, ಇದು ಗಣೇಶ ಚತುರ್ಥಿಯಂದು ನನ್ನ ಹಾರೈಕೆ.
12. ಗಣಪತಿ ಬಪ್ಪ ಮೋರ್ಯ! ನನ್ನ ಪ್ರೀತಿಯ ಆಪ್ತರಿಗೆ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಲು ನಾನು ಭಯಸುತ್ತೇನೆ. ನೀವು ಬೇಡಿದ ವರವನ್ನು ಗಣೇಶ ದಯಪಾಲಿಸಲಿ.












Click it and Unblock the Notifications