Ganesh Chaturthi 2023: ವಿನಾಯಕನಿಗೆ ಅತ್ಯಂತ ಪ್ರಿಯವಾದ 6 ಹಣ್ಣುಗಳು
ಎಲ್ಲಾ ಹಿಂದೂ ದೇವರುಗಳಲ್ಲಿ ಅಚ್ಚುಮೆಚ್ಚಿನ ದೇವರು ಅಂದರೆ ಅದು ಗಣೇಶ. ಹೀಗಾಗಿ ಪ್ರತಿ ಮನೆಯಲ್ಲೂ ಗಣೇಶನ ಫೋಟೋ ಅಥವಾ ವಿಗ್ರಹ ಇದ್ದೇ ಇರುತ್ತದೆ. ಗಣೇಶನು ತನ್ನ ಬುದ್ಧಿವಂತಿಕೆ ಮತ್ತು ಆಹಾರದ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾನೆ.
ಶಿವ ಮತ್ತು ಪಾರ್ವತಿಯ ಪ್ರಿಯ ಪುತ್ರನಿಗೆ ಎಲ್ಲಾ ರುಚಿಕರವಾದ ಖಾದ್ಯಗಳು ಹಾಗೂ ಹಣ್ಣುಗಳ ಬಗ್ಗೆ ವಿಶೇಷ ಒಲವು. ಹಾಗಾಗಿ ಗಣೇಶ ಚತುರ್ಥಿಯಂದು ಗಣೇಶನಿಗೆ ಇಷ್ಟವಾದ ಹಣ್ಣುಗಳನ್ನು ನೈವೇದ್ಯ ಮಾಡಿ ಸವಿಯುವುದರಿಂದ ಆತನ ಆಶೀರ್ವಾದ ಪಡೆಯಬಹುದು. ಹಾಗಾದರೆ ಗಣೇಶನಿಗೆ ಪ್ರಿಯವಾದ ಹಣ್ಣು ಯಾವವು ಎಂದು ತಿಳಿಯೋಣ. ಜೊತೆಗೆ ಅವುಗಳನ್ನಿಟ್ಟು ಈ ಬಾರಿ ಗಣೇಶ ಚತುರ್ಥಿಯನ್ನು ಆಚರಿಸೋಣ.

ಬಾಳೆಹಣ್ಣು
ಇತರ ದೇವರುಗಳಂತೆ ಬಾಳೆಹಣ್ಣು ಗಣೇಶನ ನೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಪ್ರತಿದಿನ ಗಣೇಶನ ಪೂಜೆಗೆ ಇಡಲಾಗುತ್ತದೆ. ಗಣೇಶ ಅದನ್ನು ತಿನ್ನಲು ಇಷ್ಟಪಡುತ್ತಾನೆ. ಇದು ಸುಲಭವಾಗಿ ದೊರೆಯುವ ಹಣ್ಣಾಗಿದ್ದು, ಗಣೇಶನನ್ನು ಒಳಗೊಂಡಂತೆ ಎಲ್ಲಾ ದೇವರ ಪೂಜೆಗೂ ಇದನ್ನು ಇಡಲಾಗುತ್ತದೆ. ಬಳಿಕ ಸೇವಿಯಲಾಗುತ್ತದೆ. ಈ ಹಣ್ಣುಗಳಿಂದ ತಯಾರಿಸಿದ ಸಿಹಿತಿಂಡಿಗಳನ್ನು ಸಹ ಮಕ್ಕಳಿಗೆ ನೀಡಲಾಗುತ್ತದೆ.

ಹಲಸು
ಮುಳ್ಳು ಹಣ್ಣು ಈ ಸಿಹಿ ಹಣ್ಣು ಗಣೇಶನಿಗೆ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣು ಕುಟುಂಬದ ದೀರ್ಘಾಯುಷ್ಯದೊಂದಿಗೆ ಸಂಬಂಧಿಸಿದೆ ಮತ್ತು ಗಣೇಶನ ಮೂರು ನೆಚ್ಚಿನ ಹಣ್ಣುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಣೇಶ ಚತುರ್ಥಿಯಂದು ಈ ಸಿಹಿ ಹಣ್ಣು ಮತ್ತು ಅದರಿಂದ ತಯಾರಿಸಿದ ಆಹಾರದಿಂದ ಗಣೇಶನನ್ನು ಪೂಜಿಸಬಹುದು. ಗಣೇಶನ ಆಶೀರ್ವಾದ ಪಡೆಯಬಹುದು.

ಮಾವು
ಇದು ಗಣೇಶನಿಗೆ ಇಷ್ಟವಾದ ಹಣ್ಣು ಮಾತ್ರವಲ್ಲ, ಸಾಮಾನ್ಯವಾಗಿ ಎಲ್ಲ ಜನರ ನೆಚ್ಚಿನ ಹಣ್ಣುಗಳಲ್ಲಿ ಇದು ಸ್ಥಾನ ಪಡೆದಿದೆ. ಈ ಸಿಹಿ ಹಣ್ಣು ಗಣೇಶನಿಗೆ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ಹಾಗಾಗಿ ಗಣೇಶ ಚತುರ್ಥಿಯಂದು ಗಣೇಶನಿಗೆ ಈ ಹಣ್ಣಿನಿಂದ ಪೂಜೆ ಮಾಡುವುದನ್ನು ಮರೆಯಬೇಡಿ.

ದಾಳಿಂಬೆ
ಔಷಧೀಯ ಗುಣಗಳನ್ನು ಹೊಂದಿರುವ ಈ ಕೆಂಪು ಹಣ್ಣು ಸುಲಭವಾಗಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು ಗಣೇಶನ ನೆಚ್ಚಿನ ಹಣ್ಣುಗಳ ಪಟ್ಟಿಗೆ ಸೇರಿದೆ. ಇದರ ಆಕಾರ, ಗಾತ್ರ, ಬಣ್ಣ ಮತ್ತು ಬೀಜಗಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದೆ. ಈ ರುಚಿಕರವಾದ ಹಣ್ಣಿನ ರಸವನ್ನು ಕುಡಿಯುವುದರಿಂದ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯವಾಗುತ್ತದೆ.

ಕೆಂಪು ಸೇಬು
ಈ ಹಣ್ಣು ಗಣೇಶನಿಗೆ ಅರ್ಪಿಸುವ ಹಣ್ಣುಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಹಿಂದೂ ಪುರಾಣಗಳಲ್ಲಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಈ ಮರವು ಪ್ರಾಚೀನ ಹಿಂದೂ ಪುರಾಣಗಳಲ್ಲಿ ಪ್ರಮುಖವಾದ ಮರಗಳಲ್ಲಿ ಒಂದಾಗಿದೆ. ಐತಿಹಾಸಿ ಪುರಾಣಗಳ ಪ್ರಕಾರ ಈ ಪವಿತ್ರ ವೃಕ್ಷವನ್ನು ಜಂಬೂ ದ್ವೀಪದಲ್ಲಿ ನೆಡಲಾಗಿದೆ. ಇದನ್ನು ಜ್ಞಾನಿಗಳು ಮಾತ್ರ ನೋಡಬಹುದು ಮತ್ತು ಅಲ್ಲಿಗೆ ಹೋಗುವ ಯಾರಾದರೂ ಜ್ಞಾನವನ್ನು ಪಡೆಯಬಹುದು. ಈ ಪವಿತ್ರ ಹಣ್ಣು ಗಣೇಶನ ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ, ಆದ್ದರಿಂದ ಗಣೇಶ ಚತುರ್ಥಿ ಪೂಜೆಯಂದು ಈ ಹಣ್ಣನ್ನು ಇಡುವುದನ್ನು ಮರೆಯಬೇಡಿ.

ತೆಂಗಿನ ಕಾಯಿ
ತೆಂಗಿನಕಾಯಿಯನ್ನು ಒಡೆಯದೆ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲಾಗುವುದಿಲ್ಲ. ಯಾಕೆಂದರೆ ಇದು ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ನಂಬಿಕೆ ಇದೆ. ಅದಕ್ಕಾಗಿಯೇ ಇದು ಗಣೇಶನ ನೆಚ್ಚಿನ ಹಣ್ಣುಗಳ ಪಟ್ಟಿಯಲ್ಲಿ ಸುಲಭವಾಗಿ ಸ್ಥಾನ ಪಡೆಯುತ್ತದೆ. ಇದರಿಂದ ಅನೇಕ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಬಹುದು ಮತ್ತು ಗಣೇಶನಿಗೆ ಅರ್ಪಿಸಬಹುದು. ಗಟ್ಟಿಯಾದ ಚಿಪ್ಪಿನ ಈ ಹಣ್ಣು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications