ನವೆಂಬರ್‌ನಲ್ಲಿ ಎರಡು ಬಾರಿ ಏಕಾದಶಿ: ವಿಷ್ಣುವಿನ ಕೃಪೆಗಾಗಿ ವೃತಾಚರಣೆ ಮಾಡುವುದು ಹೇಗೆ..?
ಹಿಂದೂ ಧರ್ಮದ ಆಚರಣೆಯಲ್ಲಿ ಭಗವಾನ್ ವಿಷ್ಣುವಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲು ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷವಾದ ಮಹತ್ವವಿದೆ. ಭಕ್ತರು ಏಕಾದಶಿಯ ದಿನ ಉಪವಾಸ ಆಚರಿಸಿ ವಿಷ್ಣುವಿನ ಆರಾಧನೆ ಮಾಡುತ್ತಾರೆ. ಇದರಿಂದ ದೇವರ ಕೃಪೆಗೆ ಪಾತ್ರರಾಗುತ್ತದೆ. ಏಕಾದಶಿಯ ದಿನ ವಿಷ್ಣುವನ್ನು ಪೂಜಿಸುವುದರಿಂದ ಜೀವನದಲ್ಲಿನ ಸಂಕಷ್ಟಗಳು ದೂರಾಗಿ, ಸುಖ-ಶಾಂತಿ ನೆಲೆಸುತ್ತದೆ ಎನ್ನುವುದು ಭಕ್ತರ ನಂಬಿಕೆ.
ಏಕಾದಶಿ ವ್ರತವು ಆ ದಿನದ ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ದ್ವಾದಶಿ ತಿಥಿಯಂದು ಕೊನೆಗೊಳ್ಳುತ್ತದೆ. ಏಕಾದಶಿಯ ದಿನದಂದು ಆಚಾರ ವಿಚಾರಗಳನ್ನು ಪಾಲಿಸಿ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಜನರು ಸಕಲ ಸುಖಗಳನ್ನು ಹೊಂದುತ್ತಾರೆ ಎನ್ನುವ ಮಾತಿದೆ.

ನವೆಂಬರ್ 2023ರಲ್ಲಿ ಬರುವ ಏಕಾದಶಿಯ ದಿನಾಂಕ ಮತ್ತು ಸಮಯ
ರಾಮ ಏಕಾದಶಿ 2023: ಕೃಷ್ಣ ಪಕ್ಷ (ಕಾರ್ತಿಕ ಮಾಸ). ಈ ಏಕಾದಶಿಯು ನವೆಂಬರ್ 8 ರಂದು ಬೆಳಗ್ಗೆ 08:20 ಆರಂಭವಾಗಿ ನವೆಂಬರ್ 9 ಬೆಳಗ್ಗೆ 10:41ಕ್ಕೆ ಅಂತ್ಯಗೊಳ್ಳುತ್ತದೆ.
ದೇವುತ್ತಾನ ಏಕಾದಶಿ 2023: ಶುಕ್ಲ ಪಕ್ಷ (ಕಾರ್ತಿಕ ಮಾಸ) ಈ ಏಕಾದಶಿಯು ನವೆಂಬರ್ 22 ರಂದು ಬೆಳಗ್ಗೆ ಆರಂಭವಾಗಿ ನವೆಂಬರ್ 23 ರಂದು ಅಂತ್ಯಗೊಳ್ಳುತ್ತದೆ.
ಏಕಾದಶಿಯನ್ನು ಭಕ್ತರು ಅಪಾರ ಭಕ್ತಿ ಮತ್ತು ಸಮರ್ಪಣೆಯಿಂದ ಆಚರಿಸುತ್ತಾರೆ. ವರ್ಷದಲ್ಲಿ ಒಟ್ಟು 24 ಏಕಾದಶಿ ಆಚರಣೆಗಳಿರುತ್ತವೆ. ಈ ಮಂಗಳಕರವಾದ ದಿನದಂದು ಉಪವಾಸವನ್ನು ಆಚರಿಸುವ ಭಕ್ತರು ಕರ್ಮಗಳಿಂದ ಮುಕ್ತರಾಗುತ್ತಾರೆ. ಅಲ್ಲದೇ ಮರಣದ ನಂತರ ವೈಕುಂಠ ಧಾಮದಲ್ಲಿ ಅಂದರೆ ಭಗವಾನ್ ವಿಷ್ಣುವಿನ ನಿವಾಸ ಸ್ಥಾನವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ಏಕಾದಶಿಯ ಪೂಜಾ ವಿಧಿ-ವಿಧಾನಗಳು
ಏಕಾದಶಿಯ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ.
ಬಳಿಕ ಮನೆ ಮತ್ತು ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ.
ಮರದ ಹಲಗೆಯ ಮೇಲೆ ವಿಷ್ಣುವಿನ ವಿಗ್ರಹವನ್ನು ಇರಿಸಿ, ಅಲಂಕರಿಸಿ.
ವಿಷ್ಣುವಿನ ವಿಗ್ರಹದ ಬಳಿಕ ದೀಪವನ್ನು ಬೆಳಗಿಸಿ, ಹಳದಿ ಚಂದನ ಮತ್ತು ಕುಂಕುಮದೊಂದಿಗೆ ತಿಲಕವನ್ನು ಹಾಕಿ.
ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು ಮತ್ತು ತುಳಸಿ ಎಲೆಗಳನ್ನು ವಿಷ್ಣುವಿಗೆ ಅರ್ಪಿಸಿ.
ಇನ್ನು ಸಂಜೆ ವೇಳೆ ಪ್ರಾರ್ಥನೆ ಸಲ್ಲಿಸಿ ವಿಷ್ಣು ಸಹಸ್ರನಾಮವನ್ನು ಪರಿಸಿ, ವ್ರತ ಕಥಾ ಪರಿಸಿ ಮತ್ತು ಆರತಿಯನ್ನು ಬೆಳಗಿ.
ಪೂಜಾ ಕೈ-ಕಾರ್ಯಗಳು ಮುಗಿದ ನಂತರ ಹಣ್ಣುಗಳನ್ನು ಸೇವಿಸಿ ಉಪವಾಸವನ್ನು ಮುಗಿಸಿ












Click it and Unblock the Notifications