• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಲಕ್ಷ್ಮಿ ಪೂಜೆ 2022: ದಿನಾಂಕ, ಪೂಜಾ ವಿಧಿ, ಮುಹೂರ್ತ, ಸಾಮಗ್ರಿ, ಮಹತ್ವ ತಿಳಿಯಿರಿ

|
Google Oneindia Kannada News

ದೀಪಾವಳಿ.. ಹೆಸರೇ ಹೇಳುವಂತೆ ಇದು ದೀಪಗಳ ಹಬ್ಬ. ಮನೆ ಮನಗಳನ್ನು ಬೆಳಗಿಸುವ ಹಬ್ಬ. ವಿಜಯದ ಸಂಕೇತದ ಹಬ್ಬ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಹಬ್ಬ. ನಾವು ನಮ್ಮವರೆನ್ನುವ ಭಾವನೆಯನ್ನು ಮೂಡಿಸುವ ಹಬ್ಬ. ಲಕ್ಷ್ಮಿ ದೇವಿಯನ್ನು ಪೂಜಿಸುವ ಹಬ್ಬ. ಹೀಗೆ ದೀಪಾವಳಿಯನ್ನು ವಿವರಿಸಲು ಒಂದು ಎರಡು ಪದಗಳು ಸಾಲದು. ವಿಶ್ವದಾದ್ಯಂತ ಹಿಂದೂಗಳು ಅತ್ಯಂತ ಸಡಗರ ಸಂಭ್ರಮದಿಂದ ಕೂಡಿರುವ ದಿನವಿದು. ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಏಕೆ ಮಾಡಲಾಗುತ್ತದೆ? ಲಕ್ಷ್ಮಿ ಪೂಜೆ 2022 ಯಾವಾಗ? ಲಕ್ಷ್ಮಿ ಪೂಜೆಯನ್ನು ಹೇಗೆ ಆಚರಿಸುವುದು? ಈ ಹಬ್ಬವನ್ನು ಆಚರಿಸುವವರಿಗೆ ಕೆಲ ವಿಚಾರಗಳು ತಿಳಿದಿರುವುದು ಅತ್ಯಾವಶ್ಯಕ.

ದೀಪಾವಳಿ ದೀಪಗಳ ಹಬ್ಬ. ಮುಖ್ಯವಾಗಿ ಇದು ಲಕ್ಷ್ಮಿ ದೇವಿಗೆ ಸಮರ್ಪಿತವಾದ ಆಚರಣೆಯಾಗಿದೆ. ಲಕ್ಷ್ಮಿ ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ. ತನ್ನ ಭಕ್ತರಿಗೆ ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತಾಳೆ. ದೀಪಾವಳಿಯ ದಿನದಂದು ಲಕ್ಷ್ಮಿ ಪೂಜೆಯನ್ನು ಮಾಡುವ ಮೂಲಕ ಭಕ್ತರು ತಮ್ಮ ಕುಟುಂಬದ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ದೀಪಾವಳಿ ವಿಶೇಷ ಅಭಿಯಾನ: ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್ ದೀಪಾವಳಿ ವಿಶೇಷ ಅಭಿಯಾನ: ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್

ಲಕ್ಷ್ಮಿ ಪೂಜೆಯ ಸಮಯ ಯಾವುದು?

ಲಕ್ಷ್ಮಿ ಪೂಜೆಯ ಸಮಯ ಯಾವುದು?

ಹಿಂದೂ ಪಂಚಾಂಗ 2022ರ ಪ್ರಕಾರ, ಲಕ್ಷ್ಮಿ ಪೂಜೆಯನ್ನು ದೀಪಾವಳಿ ಹಬ್ಬದಂದು, ಅಂದರೆ ಕಾರ್ತಿಕ ಅಮಾವಾಸ್ಯೆಯಂದು ಮಾಡಲಾಗುತ್ತದೆ. ದೀಪಾವಳಿಯನ್ನು ಅಕ್ಟೋಬರ್ 24ರಿಂದ ಐದು ದಿನಗಳು ಆಚರಿಸಲಾಗುತ್ತದೆ. 1 ಧನ್ತೇರಸ್ ಅಥವಾ ಸಂಪತ್ತಿನ ಪೂಜೆ 2 ನರಕ ಚತುರ್ದಶಿ (ಅಥವಾ ಚೋಟಿ ದೀಪಾವಳಿ), 3 ಲಕ್ಷ್ಮಿ ಪೂಜೆ, 4 ಅನ್ನಕೂಟ ಅಥವಾ ಇದನ್ನು ಬಲಿ ಪಾಡ್ಯಮಿ ಎಂದೂ ಕರೆಯಲಾಗುತ್ತದೆ. ಐದನೇ ಮತ್ತು ಕೊನೆಯ ದಿನ ಭಾಯಿ ದೂಜ್. ಈ ದಿನದಂದು ಸಹೋದರಿಯರು ತಮ್ಮ ಸಹೋದರರನ್ನು ಊಟಕ್ಕೆ ಆಹ್ವಾನಿಸುತ್ತಾರೆ ಮತ್ತು ಅದಕ್ಕೂ ಮೊದಲು ದೇವರಿಗೆ ಪೂಜೆ ಸಲ್ಲಿಸಿ ತಿಲಕವಿಡುತ್ತಾರೆ. ಸಹೋದರಿಯರು ತಮ್ಮ ಸಹೋದರನ ದೀರ್ಘ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ.

ಅಕ್ಟೋಬರ್‌ 24ರ ಚತುರ್ದಶೀಯಂದು

ಲಕ್ಷ್ಮಿ ಪೂಜೆ ಮುಹೂರ್ತ - ಸಂಜೆ 07:26ರಿಂದ 08:39ರವರೆಗೆ

ಪ್ರದೋಷ ಕಾಲ - ಸಂಜೆ 6:53 ರಿಂದ 8:16 ರವರೆಗೆ

ವೃಷಭ ಕಾಲ - ಸಂಜೆ 07:26ರಿಂದ 09:26ರವರೆಗೆ

ಅಮಾವಾಸ್ಯೆ ತಿಥಿ ಪ್ರಾರಂಭ - ಅಕ್ಟೋಬರ್ 24, 2022ರಂದು ಸಂಜೆ 05:27

ಅಮಾವಾಸ್ಯೆಯ ತಿಥಿ ಅಂತ್ಯ - ಅಕ್ಟೋಬರ್ 25, 2022ರಂದು ಸಂಜೆ 04:18ಕ್ಕೆ

ದೃಕ್‌ ಪಂಚಾಂಗ ಪ್ರಕಾರ, ನಿಶ್ಚಿತ ಕಾಲ ಮುಹೂರ್ತ ಅಕ್ಟೋಬರ್‌ 24ರ ರಾತ್ರಿ 11.40ರಿಂದ ಅಕ್ಟೋಬರ್‌ 25ರ ನಸುಕಿನ 12.31

ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡುವುದು?

ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡುವುದು?

ಲಕ್ಷ್ಮಿ ಪೂಜೆ ಆಚರಣೆಗಳು ಬೆಳಿಗ್ಗೆಯಿಂದ ಪ್ರಾರಂಭವಾಗುತ್ತವೆ. ಭಕ್ತರು ಮುಂಜಾನೆ ಎದ್ದು ತಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. ಅಮಾವಾಸ್ಯೆಯ ದಿನವಾದ್ದರಿಂದ ಕೆಲವರು ತಮ್ಮ ಪೂರ್ವಜರ ಆಶೀರ್ವಾದ ಪಡೆದು ಶ್ರಾದ್ಧವನ್ನೂ ಮಾಡುತ್ತಾರೆ. ಇದರ ನಂತರ, ಭಕ್ತರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ ಮತ್ತು ನಂತರ ತಮ್ಮ ಮನೆಯ ಪ್ರತಿಯೊಂದು ಮೂಲೆಯನ್ನು ಅಲಂಕರಿಸುತ್ತಾರೆ. ಅಶೋಕ ಎಲೆಗಳು, ಚೆಂಡು ಹೂವುಗಳು, ಬಾಳೆ ಎಲೆಗಳು ಮತ್ತು ಮಾವಿನ ಎಲೆಗಳನ್ನು ಬಳಸಿ ಅಲಂಕಾರಗಳನ್ನು ಮಾಡಲಾಗುತ್ತದೆ.

ರಂಗೋಲಿ ದೀಪಾವಳಿ ಅಲಂಕಾರಗಳ ಮತ್ತೊಂದು ಅವಿಭಾಜ್ಯ ಅಂಗವಾಗಿದೆ. ಮನೆಯ ದ್ವಾರವನ್ನು ಸುಂದರವಾದ ರಂಗೋಲಿಗಳಿಂದ ಅಲಂಕರಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ದೀಪಾವಳಿಯಂದು ಲಕ್ಷ್ಮಿ ಪೂಜೆಗೆ ಬೇಕಾಗುವ ವಸ್ತುಗಳು:

ದೀಪಾವಳಿಯಂದು ಲಕ್ಷ್ಮಿ ಪೂಜೆಗೆ ಬೇಕಾಗುವ ವಸ್ತುಗಳು:

ರಂಗೋಲಿ, ಅಕ್ಷತ (ಬೇಯಿಸದ ಹಸಿ ಧಾನ್ಯ), ಹೂವಿನ ಹಾರ, ಧೂಪ್ ಸ್ಟಿಕ್, ಗಣೇಶ ಮತ್ತು ಸರಸ್ವತಿ ದೇವಿಯ ಜೊತೆಗಿನ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹ, ಕೆಂಪು ಬಟ್ಟೆ, ಎಲೆ-ಅಡಿಕೆ, ಕೊತ್ತಂಬರಿ ಬೀಜಗಳು, ಹತ್ತಿ ಬೀಜಗಳು, ಕಮಲದ ಹೂ, ಅರಿಶಿನ, ಕುಂಕುಮ, ಬೆಳ್ಳಿ ನಾಣ್ಯ, ಸಿಹಿತಿಂಡಿಗಳು ಮತ್ತು ಹಣ(ನೋಟು ಅಥವಾ ನಾಣ್ಯ).

ದೀಪಾವಳಿ ದೇವಪೂಜೆ ಮಾಡುವುದು ಹೇಗೆ?

ದೀಪಾವಳಿ ದೇವಪೂಜೆ ಮಾಡುವುದು ಹೇಗೆ?

ಲಕ್ಷ್ಮಿ ಪೂಜೆಯ ಸಿದ್ಧತೆಗಳು ಬಲಭಾಗದಲ್ಲಿ ಕೆಂಪು ಬಟ್ಟೆಯಿಂದ ಮುಚ್ಚಿದ ಎತ್ತರದ ಪೀಠದ ಮೇಲೆ ಲಕ್ಷ್ಮಿ, ಸರಸ್ವತಿ ದೇವಿ ಮತ್ತು ಗಣಪತಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ. ಇದರ ನಂತರ ಸಿಹಿತಿಂಡಿಗಳು, ಸಿರಿಧಾನ್ಯಗಳು, ಅನ್ನ ಮತ್ತು ಭೋಗ್ ಅನ್ನು ಇಡಿ. ಹೂವು, ಹಣ್ಣು, ಸಿಹಿ ಖಾದ್ಯ, ಹಣ, ಎಲೆ-ಅಡಿಕೆ ಎಲ್ಲವನ್ನೂ ಪೀಠದ ಮೇಲಿಡಿ. ಬಳಿಕ ಶುಭ ಗಳಿಗೆಯಲ್ಲಿ ಲಕ್ಷ್ಮಿ ಆರತಿಯನ್ನು ಮಾಡಿ. ಅದರ ನಂತರ ಇಡೀ ಮನೆಯನ್ನು ಸಣ್ಣ ದೀಪಗಳಿಂದ (ದಿಯಾಗಳು) ಅಲಂಕರಿಸಿ.

ನಿಮ್ಮ ಪೂಜೆಯ ಸ್ಥಳದಲ್ಲಿ ಚೌಕಿ ಇರಿಸಿ. ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ. ಲಕ್ಷ್ಮಿ, ಸರಸ್ವತಿ ಮತ್ತು ಗಣೇಶನ ಫೋಟೋ/ವಿಗ್ರಹವನ್ನು ಇರಿಸಿ. ಭಗವಾನ್ ವಿಷ್ಣು, ಕುಬೇರ ಮತ್ತು ಇಂದ್ರನಂತೆ ಲಕ್ಷ್ಮಿ ದೇವಿಯ ಫೋಟೋದ ಮುಂದೆ 3 ನೆನೆಸಿದ ಹಸಿ ಅಕ್ಕಿಯನ್ನು ಇರಿಸಿ.

ಪೂಜೆಯನ್ನು ಪ್ರಾರಂಭಿಸಲು ದೀಪವನ್ನು ಬೆಳಗಿಸಿ. ಈ ದೀಪವನ್ನು ರಾತ್ರಿಯಿಡೀ ಬೆಳಗಿಸಬೇಕು. ಇದರೊಂದಿಗೆ ಲಘು ಧೂಪದ ಕಡ್ಡಿ ಕೂಡ ಬೆಳಗಿಸಬೇಕು. ಲಕ್ಷ್ಮಿ ಪೂಜೆಯ ಸಮಯದಲ್ಲಿ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸಲು ಗಣಪತಿಯನ್ನು ಆಹ್ವಾನಿಸಿ. ಗಣೇಶನ ಹಣೆಯ ಮೇಲೆ ಕುಂಕುಮ ಮತ್ತು ತಿಲಕವನ್ನು ಹಚ್ಚಿ. ಗಣೇಶನ ಮುಂದೆ ಪರಿಮಳ ಬೀರುವ ಹೂವುಗಳು, ಧೂಪ, ಸಿಹಿತಿಂಡಿಗಳು (ನೈವೇದ್ಯ) ಮತ್ತು ಮಣ್ಣಿನ ದೀಪವನ್ನು ಇಡಿ.

ಬಳಿಕ ಈಗ ಲಕ್ಷ್ಮಿ ಪೂಜೆಯನ್ನು ಪ್ರಾರಂಭಿಸಿ. ಲಕ್ಷ್ಮಿ ದೇವಿಯ ಹಣೆಯ ಮೇಲೆ ಅಕ್ಕಿಯ ತಿಲಕವನ್ನು ಹಚ್ಚಿ. ಲಕ್ಷ್ಮಿ ದೇವಿಯ ಮುಂದೆ ಪರಿಮಳ ಭರಿತವಾದ ಹೂವುಗಳು, ಧೂಪ, ಸಿಹಿತಿಂಡಿಗಳು ಮತ್ತು ಮಣ್ಣಿನ ದೀಪವನ್ನು (ದೀಪಕ್) ಇಡಿ. ಈಗ ಕೊತ್ತಂಬರಿ ಬೀಜಗಳು, ಹತ್ತಿ ಬೀಜಗಳು, ಅರಿಶಿನ, ಬೆಳ್ಳಿ ನಾಣ್ಯ, ಕರೆನ್ಸಿ ನೋಟುಗಳು, ಎಲೆ ಅಡಿಕೆ ಮತ್ತು ಕಮಲದ ಹೂವಿನ ಬೀಜವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ.

ಲಕ್ಷ್ಮಿ ದೇವಿಯ ಜೊತೆಗೆ ಬರಲು ವಿಷ್ಣುವನ್ನು ಪ್ರಾರ್ಥಿಸಿ. ಲಕ್ಷ್ಮಿ ದೇವಿಯ ಜೊತೆಗೆ ಬಂದು ಸಂಪತ್ತನ್ನು ನೀಡುವಂತೆ ಕುಬೇರನನ್ನು ಪ್ರಾರ್ಥಿಸಿ. ಮಣ್ಣಿನ ದೀಪ, ಪರಿಮಳದ ಹೂವುಗಳು, ಧೂಪ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ ಕುಬೇರನನ್ನು ಪೂಜಿಸಿ.

ಇಂದ್ರನಿಗೆ ಸಮೃದ್ಧಿಯನ್ನು ನೀಡುವಂತೆ ಪ್ರಾರ್ಥಿಸಿ. ಸರಸ್ವತಿ ದೇವಿಯನ್ನು ಪೂಜಿಸಿ. ಜೀವನ ಪಥದಲ್ಲಿ ದೈವಿಕ ಜ್ಞಾನ ಮತ್ತು ಮಾರ್ಗದರ್ಶನವನ್ನು ಪಡೆಯಲು ಪ್ರಾರ್ಥಿಸಿ. ಆರತಿ ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.

ನೀವು ಮಾ ಲಕ್ಷ್ಮಿಯ ಮಂತ್ರದ ಜಪವನ್ನು ಮಾಡಲು ಬಯಸಿದರೆ, ಸರಳ ಮತ್ತು ಅತ್ಯಂತ ಶಕ್ತಿಯುತವಾದ ಮಂತ್ರವೆಂದರೆ "ಶ್ರೀಮ್ ಸ್ವಾಹಾ". ಈ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ.

English summary
Deepavali Lakshmi Puja 2022: Know the Date, Puja Vidhi, Muhurat Timings, Samagri, Mantra, Significance in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X