Get Updates
Get notified of breaking news, exclusive insights, and must-see stories!

ದೀಪಾವಳಿಯ ಪಟಾಕಿಗಳಿಂದ ನಿಮ್ಮ ವಾಹನ ಸಂರಕ್ಷಿಸುವುದು ಹೇಗೆ? ಈ ಕೆಲಸವನ್ನು ಮಾಡಲು ಮರೆಯಬೇಡಿ

ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬ ಅಥವಾ ಸಿಹಿತಿಂಡಿಗಳ ಹಬ್ಬವಲ್ಲ. ಬದಲಿಗೆ ಇದು ಪಟಾಕಿಗಳ ವಿನೋದವನ್ನು ಒಳಗೊಂಡಿದೆ. ಜನರು ಪಟಾಕಿಗಳನ್ನು ಮನೆಯ ಹೊರಗೆ ಸಿಡಿಸುತ್ತಾರೆ. ಇದರಿಂದ ಮನೆಯ ಹೊರಗೆ ನಿಲ್ಲಿಸಿರುವ ವಾಹನಗಳು ಹಾನಿಗೊಳಗಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕಾರ್, ಸ್ಕೂಟಿಯಂತಹ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ಜನರು ಈ ಪಟಾಕಿಗಳಿಂದ ತಮ್ಮ ವಾಹನಗಳಿಗೆ ಹಾನಿಯಾಗುವ ಭಯವನ್ನು ಹೊಂದಿರುತ್ತಾರೆ. ಆದರೆ ಚಿಂತಿಸಬೇಡಿ. ಇಂದು ನಾವು ನಿಮಗಾಗಿ ಕೆಲವು ಸಲಹೆಗಳನ್ನು ನೀಡಲಿದ್ದೇವೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಹಬ್ಬದ ಋತುವಿನಲ್ಲಿ ನಿಮ್ಮ ವಾಹನಗಳನ್ನು ಕಾಪಾಡಿಕೊಳ್ಳಲು ಮತ್ತು ಹಬ್ಬವನ್ನು ನಿಶ್ಚಿಂತೆಯಾಗಿ ಸಡಗರದಿಂದ ಆನಂದಿಸಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಜನ ಹಬ್ಬದ ಸಂದರ್ಭಗಳಲ್ಲಿ ಹೊಸ ಕಾರು, ಬೈಕ್‌ನಂತಹ ವಾಹನಗಳನ್ನು ಖರೀದಿ ಮಾಡುತ್ತಾರೆ. ವಾಹನ ದುಬಾರಿಯದ್ದಾಗಲಿ ಅಗ್ಗದ ವಾಹನವೇ ಆಗಲಿ ತಾವು ಖರೀದಿಸಿ ವಾಹನಗಳ ಮೇಲೆ ಹೆಚ್ಚು ಪ್ರೀತಿಯನ್ನು ಹೊಂದಿರುತ್ತಾರೆ. ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಕೂಡ. ಆದರೆ ದೀಪಾವಳಿ ಹಬ್ಬದ ಸಮಯದಲ್ಲಿ ವಾಹನಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ.

ದೀಪಾವಳಿ ಹಬ್ಬದಂದು ಪಟಾಕಿ ಹಚ್ಚಿದು ರೂಢಿಯಲ್ಲಿದೆ. ಆದರೆ ಈ ಸಮಯದಲ್ಲಿ ಸಿಡಿಸುವ ಪಟಾಕಿಗಳಿಂದ ವಾಹನಗಳ ಕ್ಲಾಸ್, ಸೀಟ್, ವೀಲ್‌ಗಳಿಗೆ ಹಾನಿಯಾಗಬಹುದು. ಒಂದೊಮ್ಮೆ ಪೆಟ್ರೋಲ್ ಟ್ಯಾಂಕ್‌ಗೆ ಪಟಾಕಿ ಕಿಡಿ ತಗುಲಿದರೆ ದೊಡ್ಡ ಅನಾಹುತಗಳೇ ಸಂಭವಿಸಬಹುದು. ಇದು ವಾಹನ ನಿಲ್ಲಿಸಿದಾಗ ಮಾತ್ರವಲ್ಲ, ಪ್ರಯಾಣದ ವೇಳೆ ಕೂಡ ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಇದರಿಂದಾಗಿ ಮಾಲೀಕರು ದೀಪಾವಳಿ ಹಬ್ಬದ ಆಚರಣೆಗಿಂತ ತಮ್ಮ ವಾಹನಗಳ ಬಗ್ಗೆ ಹೆಚ್ಚು ಚಿಂತಿತರಾಗಬಹುದು. ಹಾಗಾದರೆ ರಸ್ತೆ ಬದಿ ನಿಲ್ಲಿಸುವ ನಿಮ್ಮ ವಾಹನಗಳ ಬಗ್ಗೆ ದೀಪಾವಳಿಯಂದು ಯಾವರೀತಿ ಕಾಳಜಿ ವಹಿಸಿಬಹುದು ಅನ್ನೋದನ್ನು ತಿಳಿಯೋಣ.

ದೀಪಾವಳಿಯ ಪಟಾಕಿಗಳಿಂದ ವಾಹನ ರಕ್ಷಿಸಲು ಏನು ಮಾಡಬೇಕು?

ದೀಪಾವಳಿಯ ಪಟಾಕಿಗಳಿಂದ ವಾಹನ ರಕ್ಷಿಸಲು ಏನು ಮಾಡಬೇಕು?

ದೀಪಾವಳಿಯಂದು ಪಟಾಕಿ ಸಿಡಿಸುವುದರಿಂದ ನಿಮ್ಮ ವಾಹನಗಳಿಗೆ ಸಾಕಷ್ಟು ಹಾನಿಯಾಗುತ್ತದೆ. ಈ ಪಟಾಕಿಗಳಿಂದ ಹೊರಹೊಮ್ಮುವ ಕಿಡಿ ನಿಮ್ಮ ವಾಹನಕ್ಕೆ ಹಾನಿಯಾಗಬಾರದು. ಇದಕ್ಕಾಗಿ ನೀವು ನಿಮ್ಮ ಕಾರಿನಲ್ಲಿ ಅಗ್ನಿಶಾಮಕವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದರೊಂದಿಗೆ ನೀವು ಯಾವುದೇ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಅದನ್ನು ಬಳಸಲು ಸಾಧ್ಯವಾಗುತ್ತದೆ. ಜೊತೆಗೆ ದೀಪಾವಳಿಯ ದಿನದಂದು ನಿಮ್ಮ ವಾಹನದಿಂದ ದೊಡ್ಡ ಅಪಘಾತವನ್ನು ತಪ್ಪಿಸಲು ನಿಮಗೆ ಸಾಧ್ಯವಾಗುತ್ತದೆ. ಜೊತೆಗೆ ಕಾರು ನಿಲ್ಲಿಸುವಾಗ ಕವರ್ ಹಾಕುವುದನ್ನು ಮರೆಯಬೇಡಿ.

ನೀವು ದ್ವಿಚಕ್ರ ವಾಹನದ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿದ್ದರೆ, ದೀಪಾವಳಿಯ ದಿನದಂದು ಬ್ಯಾಟರಿಯನ್ನು ಹೊರತೆಗೆಯಿರಿ. ಸಾಧ್ಯವಾದರೆ, ನಿಮ್ಮ ವಾಹನದ ವೀಲರ್ ಅನ್ನು ಮತ್ತು ಸಂಪೂರ್ಣ ವಾಹನವನ್ನು ಚೆನ್ನಾಗಿ ಕವರ್ ಮಾಡಿ. ಇದು ನಿಮ್ಮ ವಾಹನವನ್ನು ಸುರಕ್ಷಿತವಾಗಿರಿಸುತ್ತದೆ.

ಇದನ್ನು ಮಾಡುವುದನ್ನು ತಪ್ಪಿಸಿ

ಇದನ್ನು ಮಾಡುವುದನ್ನು ತಪ್ಪಿಸಿ

*ನಿಮ್ಮ ವಾಹನವನ್ನು ರಸ್ತೆ ಅಥವಾ ಯಾವುದೇ ತೆರೆದ ಪ್ರದೇಶದಲ್ಲಿ ನಿಲ್ಲಿಸುವುದನ್ನು ತಪ್ಪಿಸಿ.

*ಸಾಧ್ಯವಾದರೆ, ಜನರು ಪಟಾಕಿ ಸಿಡಿಸದಂತಹ ಪಾರ್ಕಿಂಗ್ ಪ್ರದೇಶದಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ.

*ನಿಮ್ಮ ವಾಹನದ ಬಳಿ ದೀಪಗಳು ಅಥವಾ ಮೇಣದಬತ್ತಿಗಳನ್ನು ಇಡಬೇಡಿ ಎಂಬುದನ್ನು ನೆನಪಿನಲ್ಲಿಡಿ.

*ನಿಮ್ಮ ಕಾರಿನ ಕಿಟಕಿಗಳನ್ನು ತೆರೆದಿಡಬೇಡಿ.

*ಅದರಲ್ಲೂ ಪಟಾಕಿ ಸುಡಲು ಕಾರಿನ ಬಾನೆಟ್ ಬಳಸಬೇಡಿ.

*ಅನೇಕ ಜನರು ದೀಪಾವಳಿಯಂದು ಹೊಸ ವಾಹನಗಳನ್ನು ಖರೀದಿಸುತ್ತಾರೆ. ಈ ವೇಳೆ ಕೆಲವರು ತಮ್ಮ ವಾಹನದ ಬಳಿ ದೀಪವನ್ನು ಬೆಳಗಿಸುತ್ತಾರೆ. ಏಕೆಂದರೆ ಹಾಗೆ ಮಾಡುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ನೀವು ಅಂತಹ ತಪ್ಪು ಮಾಡುವುದನ್ನು ತಪ್ಪಿಸಬೇಕು. ಯಾಕೆಂದರೆ ನಿಮ್ಮ ವಾಹನಕ್ಕೆ ಯಾವುದೇ ರೀತಿಯ ಹಾನಿ ಉಂಟಾದರೆ, ಅದು ನಿಮ್ಮ ಜವಾಬ್ದಾರಿಯಾಗಿದೆ.

ದೀಪಾವಳಿಯಂದು ಪಾರ್ಕಿಂಗ್ ವ್ಯವಸ್ಥೆ

ದೀಪಾವಳಿಯಂದು ಪಾರ್ಕಿಂಗ್ ವ್ಯವಸ್ಥೆ

ಮನೆಯಲ್ಲಿ ಕಾಂಪೌಂಟ್ ಹೊಂದಿದ್ದರೆ ಅಥವಾ ಪಾರ್ಕಿಂಗ್‌ ಗಾಗಿ ಪ್ರತ್ಯೇಕ ಸ್ಥಳವನ್ನು ಹೊಂದಿದ್ದರೆ ನಿಮ್ಮ ವಾಹನವನ್ನು ಅಲ್ಲಿ ಬಿಡುವುದು ಉತ್ತಮ. ಅಥವಾ ನಿಮ್ಮ ವಾಹನ ನಿಲುಗಡೆ ಸ್ಥಳದಲ್ಲಿ ಪಟಾಕಿ ಸಿಡಿಸದಂತೆ ಬೇಲಿಯನ್ನು ನಿರ್ಮಿಸಿ. ಸಾಧ್ಯವಾದರೆ ಒಂದು ಬೋರ್ಡ್‌ ಅನ್ನು ಹಾಕಿ. ಇದರಿಂದ ಮಕ್ಕಳು ಅಥವಾ ಇನ್ಯಾರೇ ವಾಹನದ ಬಳಿ ಪಟಾಕಿ ಹಚ್ಚಿಲು ಮುಂದಾಗವುದಿಲ್ಲ. ಇನ್ನೂ ಮನೆ ಮುಂದೆ ಪಾರ್ಕಿಂಗ್ ಸ್ಥಳ ಇರದೇ ಇದ್ದಲ್ಲಿ, ನಿಮ್ಮ ಆಫೀಸ್‌ಗಳಲ್ಲಿ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದರೆ ಅಲ್ಲೂ ಕೂಡ ವಾಹನವನ್ನು ನಿಲ್ಲಿಸಬಹುದು. ಈ ರೀತಿ ದೀಪಾವಳಿ ದಿನದಂದು ವಾಹನಗಳನ್ನು ಕಾಳಜಿ ವಹಿಸಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ

ಈ ವಿಷಯಗಳನ್ನು ನೆನಪಿನಲ್ಲಿಡಿ

ನಿಮ್ಮ ಕಾರಿಗೆ ನೀವು ವಿಮೆ ಮಾಡದಿದ್ದರೆ, ದೀಪಾವಳಿಯ ಮೊದಲು ಅದನ್ನು ಮಾಡಿ. ಮತ್ತು ಅದನ್ನು ನವೀಕರಿಸದಿದ್ದರೆ ಅದನ್ನು ನವೀಕರಿಸಿ. ಹೀಗೆ ಮಾಡುವುದರಿಂದ ವಾಹನಕ್ಕೆ ಯಾವುದೇ ರೀತಿಯ ಹಾನಿ ಉಂಟಾದರೆ ವಿಮೆಯ ಸಹಾಯದಿಂದ ವಾಹನದ ವೆಚ್ಚವನ್ನು ಮರಳಿ ಪಡೆಯುತ್ತೀರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+