ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧಕಾರ ಕೊಡವಿ ಜ್ಞಾನ ಬೆಳಗುವ ದೀಪಾವಳಿ

By Staff
|
Google Oneindia Kannada News

Deepavali : Festival of lightsಅಜ್ಞಾನವೆಂಬ ಅಂಧಕಾರವನ್ನು ಹೊರಗೆಡವಿ, ಜ್ಞಾನವೆಂಬ ಬೆಳಕನು ದೀಪಾಲಂಕಾರದಿಂದ ಬೆಳಗಿಸುವುದರ ಮೂಲಕ ಹೊಸ ಬೆಳಕನ್ನು ವರ್ಷವಿಡೀ ಬಾಳಿಗೆ ತರುವ ಸಂಕೇತವೇ ದೀಪಾವಳಿಯ ಆಚರಣೆ. ಈ ದೀಪದ ಬೆಳಕು ಮನದ ಕತ್ತಲೆಗಳನ್ನೆಲ್ಲಾ ಸರಿಸಿ, ಪ್ರಜ್ವಲಿಸುವ ಮಹದಾನಂದವನ್ನು ಪ್ರತೀ ಬಾಳಿನಲ್ಲೂ ತರಲಿ ಎಂದು ಹಾರೈಸಿ ಪೂಜಿಸುವ ಪದ್ಧತಿಯೇ "ದೀಪಾವಳಿಯ ಹಬ್ಬ".

* ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ

ದೀಪಾವಳಿಯ ಪ್ರಮುಖ ಮೂರು ದಿನಗಳು, ನರಕ ಚತುರ್ದಶಿ, ಅಮಾವಾಸ್ಯೆ ಮತ್ತು ಬಲಿಪಾಡ್ಯಮಿ. ಒಟ್ಟು 5 ದಿನಗಳ ಸಡಗರದ ದೀಪಾವಳಿ ಈ ಸಾರಿ ಹಿಂದೂ ಪಂಚಾಂಗದ ಅಶ್ವಿನಿ ಮತ್ತು ಕಾರ್ತಿಕ ಮಾಸದಲ್ಲಿ ಆವರಿಸಿದೆ. ಅಕ್ಟೋಬರ್ 26 ನೀರುತುಂಬುವ ಹಬ್ಬದಿಂದ ಪ್ರಾರಂಭವಾಗಿ ಅಕ್ಟೋಬರ್ 30 ಸೋದರ ಬಿದಿಗೆಯಲ್ಲಿ ಕೊನೆಗೊಳ್ಳುತ್ತದೆ (ವಿಕ್ರಮ ಸಂವತ್ಸರ).

ನರಕಾಸುರನೆಂಬ ಅಸುರನ ಸಂಹಾರದ ಮೂಲಕ ಶ್ರೀಕೃಷ್ಣನು, ಪ್ರಜೆಗಳು ಮತ್ತು ಸ್ತ್ರೀಯರನ್ನು ಕಷ್ಟದಿಂದ ಬಿಡುಗಡೆಮಾಡಿ ದಾರಿದೀಪ ತೋರಿದ ದಿನವೇ ನರಕ ಚತುರ್ದಶಿ. ಇದರ ಮರುದಿನದಂದು ಅಮಾವಾಸ್ಯೆ, ಈ ದಿನ ಲಕ್ಷ್ಮಿಯನ್ನು ಪೂಜಿಸಿ, ಸುಖ, ಶಾಂತಿ, ಸಮೃದ್ಧಿ ಮತ್ತು ಐಷ್ವರ್ಯಗಳನ್ನು ಕರುಣಿಸೆಂದು ಪ್ರಾರ್ಥಿಸುವುದು ಸಂಪ್ರದಾಯ. ಬಲಿಪಾಡ್ಯಮಿ-ಬಲಿಚಕ್ರವರ್ತಿ ಅಹಂಕಾರದಿಂದ (ಭೂಮಿ) ರಾಜ್ಯವನ್ನೆಲ್ಲಾ ಗಳಿಸಿ, ಕಡೆಗೆ ವಾಮನ ರೂಪದಲ್ಲಿ ಬಂದ ಶ್ರೀಹರಿಗೆ ಧಾರೆಯೆರೆಯುವ ಮೂಲಕ ಮುಕ್ತಿ-ಮಾರ್ಗದ ದರ್ಶನವನ್ನು ಪಡೆದು, ತನ್ನ ಅಹಂ ಎಲ್ಲಾ ತೊರೆದು ಜೀವನ್ಮುಕ್ತನಾಗುತ್ತಾನೆ. ಇದೇ ಬಲಿಪಾಡ್ಯಮಿ ಆಚರಣೆಯ ಸಂಕೇತ.

ಭಾರತದ ಎಲ್ಲಾ ಭಾಗಗಳಲ್ಲೂ ಈ ಮೂರೂ ದಿನಗಳನ್ನು ಅಭ್ಯಂಜನ, ಪೂಜೆ, ಕಾಮಧೇನು ಪೂಜೆ(ಹಸು, ಎತ್ತು, ಮುಂತಾದ) ಮತ್ತು ಹಬ್ಬದೂಟಗಳೊಡನೆ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿಯು ಹೊಸದಾಗಿ ಮದುವೆಯಾದ ನವ ದಂಪತಿಗಳಿಗೆ ಶುಭ ಹಾರೈಸುವ ಮಂಗಳವಾದ ಸಂದರ್ಭವೂ ಹೌದು. ಸಂಭ್ರಮವನ್ನು ಇಮ್ಮಡಿಗೊಳಿಸಲು ವಿಧವಿಧವಾದ (ಭೂಚಕ್ರ, ವಿಷ್ಣುಚಕ್ರ) ಪಟಾಕಿಗಳನ್ನು ಹೊತ್ತಿಸಿ ಬೆಳಕನ್ನು ತಂದು, ದೀಪಾವಳಿಯನ್ನು "ಬೆಳಕಿನ ಹಬ್ಬ" ಎಂದು ಹೆಸರಾಗಿಸಿದೆ.

ಹಚ್ಚೋಣ ಬನ್ನಿ ಕನ್ನಡದ ದೀಪ
ಬೆಳಗೋಣ ಬನ್ನಿ ಭವ್ಯ ಪ್ರದೀಪ
ನಲಿಯೋಣ ಬನ್ನಿ ವಿವಿಧ ರೂಪ
ಸವಿಯೋಣ ಬನ್ನಿ ಕಲೆಯ ಕಲಾಪ
ಸಿಂಚೋಣ ಬನ್ನಿ ಸಂತಸದ ಸಲ್ಲಾಪ
ಉಲಿಯೋಣ ಬನ್ನಿ ಸರಿಗಮಪ
ಉಂಬೋಣ ಬನ್ನಿ ಸಜ್ಜಪ್ಪ, ಊತಪ್ಪ.

ದಟ್ಸ್ ಕನ್ನಡ ಓದುಗರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು. ದೀಪಾವಳಿಯು ಎಲ್ಲರ ಬಾಳಲ್ಲೂ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ತರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X