Get Updates
Get notified of breaking news, exclusive insights, and must-see stories!

Diwali Decoration Ideas: ಈ ದೀಪಾವಳಿಯಲ್ಲಿ ಕಡಿಮೆ ಹಣದಲ್ಲಿ ನಿಮ್ಮ ಮನೆಯ ಲುಕ್ ಬದಲಾಯಿಸಿ..

ದೀಪಾವಳಿ ಹಬ್ಬ ಬಂದೇ ಬಡ್ತು. ಈ ದೀಪಾವಳಿಯಲ್ಲಿ ಮನೆಯು ಇತರರಿಗಿಂತ ಭಿನ್ನವಾಗಿರಬೇಕು ಅನ್ನೋ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಹಾಗಂತ ಅಧಿಕ ಹಣ ಖರ್ಚು ಮಾಡಿ ಮನೆ ಅಲಂಕಾರ ಮಾಡುವುದು ಕೆಲವರಿಗೆ ಸಾಧ್ಯವಾಗುವುದಿಲ್ಲ. ಕಡಿಮೆ ವೆಚ್ಚದಲ್ಲಿ ಮನೆಯನ್ನು ದೀಪಾವಳಿ ಹಬ್ಬಕ್ಕೆ ಅಲಂಕಾರ ಮಾಡುವುದು ಒಂದು ಕಲೆ.

ಕಡಿಮೆ ದುಡ್ಡಿನಲ್ಲಿ ಇತರರಿಗಿಂತ ಸುಂದರವಾಗಿ ಚಂದವಾಗಿ ಮನೆಯನ್ನು ಅಲಂಕಾರ ಮಾಡಬೇಕು ಅಂದುಕೊಂಡಿದ್ದರೆ ಅಂಥವರಿಗಾಗಿ ನಾವು ಕೆಲ ಸಲಹೆಗಳನ್ನು ನೀಡುತ್ತೇವೆ. ಹಾಗಾದರೆ ಅವುಗಳ ಬಗ್ಗೆ ಈಗ ತಿಳಿಯೋಣ.

diwali-decoration-ideas-change-the-look

ದೀಪಾವಳಿಗೆ ಕೆಲವೇ ದಿನಗಳು ಬಾಕಿ ಇವೆ. ಬಹುತೇಕ ಮನೆಗಳಲ್ಲಿ ಅಲಂಕಾರ ಕಾರ್ಯ ನಡೆದಿದ್ದು, ಹಲವೆಡೆ ಪ್ಲಾನಿಂಗ್ ಕೂಡ ರೆಡಿ ಆಗಿದೆ. ವಾಸ್ತವವಾಗಿ ನಾವು ಅನೇಕ ಬಾರಿ ಮನೆಯನ್ನು ಅವಸರದಲ್ಲಿ ನವೀಕರಿಸುತ್ತೇವೆ. ಆದರೆ ಸರಿಯಾದ ಯೋಜನೆಯ ಕೊರತೆಯಿಂದಾಗಿ ನಾವು ಅಲಂಕಾರಕ್ಕೆ ಹೆಚ್ಚು ಹಣವನ್ನು ಖರ್ಚು ಮಾಡಬಹುದು.

ಹೀಗಾಗಿ ಸರಿಯಾದ ಯೋಜನೆ ನಿಮ್ಮ ಹಣ ಹೆಚ್ಚು ಖರ್ಚಾಗುವುದನ್ನು ತಪ್ಪಿಸುವುತ್ತದೆ ಹಾಗೂ ಸಮಯವೂ ಅಧಿಕ ಹಾಳಾಗುವುದಿಲ್ಲ. ಈ ಬಗ್ಗೆ ಇನ್ನಷ್ಟು ಸಲಹೆಗಳು ಇಲ್ಲಿವೆ.

ಅಲಂಕಾರದಲ್ಲಿ ಬದಲಾವಣೆ

ನಿಮ್ಮ ಮನೆಯ ಹಳೆಯ ಅಲಂಕಾರದಿಂದ ನಿಮಗೆ ಬೇಸರವಾಗಿದ್ದರೆ ನೀವು ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಮನೆಗೆ ಹೊಸ ನೋಟವನ್ನು ನೀಡಬಹುದು. ಇದಕ್ಕಾಗಿ ಮೊದಲು ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಮನೆಯಲ್ಲಿ ಉಪಯುಕ್ತವಾದ ವಸ್ತುಗಳನ್ನು ಮಾತ್ರ ಇರಿಸಿ, ಅನಗತ್ಯ ವಸ್ತುಗಳನ್ನು ಎಸೆಯಿರಿ ಅಥವಾ ಎಲ್ಲೋ ಲಾಕ್ ಮಾಡಿ.

diwali-decoration-ideas-change-the-look

ಅತ್ಯುತ್ತಮ ಆಯ್ಕೆ ರಂಗೋಲಿ

ಬಹುತೇಕ ಮನೆಗಳಲ್ಲಿ ರಂಗೋಲಿ ಇಲ್ಲದೆ ಬೆಳಕಿನ ಕಾರ್ಯಗಳು ಆರಂಭವಾಗುವುದಿಲ್ಲ. ಹಬ್ಬದ ಸಮಯದಲ್ಲಿ ಬಗೆ ಬಗೆಯ ರಂಗೋಲಿ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ನಿಮ್ಮ ಮನೆಯ ನೋಟವನ್ನು ಬದಲಾಯಿಸಲು ದೀಪಗಳು ನಿಮಗೆ ಹೇಗೆ ಸಹಾಯ ಮಾಡುತ್ತವೆಯೋ ಹಾಗೆ ರಂಗೋಲಿ ಕೂಡ. ಮನೆಯಲ್ಲಿ ಅಥವಾ ಮನೆ ಬಾಗಿಲಿಗೆ ಚಂದದ ರಂಗೋಲಿ ಬಿಡಿಸಿ ಇದು ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ.

ಬಣ್ಣ ಬಣ್ಣದ ಲೈಟ್ಸ್

ದೀಪಗಳ ಹಬ್ಬ ದೀಪಾವಳಿಗೆ ದೀಪಗಳಿಂದ ಮನೆಯನ್ನು ಅಲಂಕರಿಸುವುದು ತುಂಬಾನೇ ಮುಖ್ಯ. ಹೀಗಾಗಿ ಮನೆಯ ಅಲಂಕಾರದಲ್ಲಿ ದೀಪಗಳನ್ನು ಅಥವಾ ಬಗೆ ಬಗೆಯ ಲೈಟ್ಸ್ ಬಳಕೆ ಮಾಡಬಹುದು. ಈ ಹಬ್ಬದಲ್ಲಿ ನೀವು ಎಲ್ಇಡಿ ಸ್ಟ್ರಿಂಗ್ ದೀಪಗಳನ್ನು ಅಳವಡಿಸಬಹುದು. ಪರದೆಗಳಿಗೆ, ಅಡಿಗೆ ಮನೆ, ಡೈನಿಂಗ್ ಟೇಬಲ್‌ಗಳಿಗೆ ಅಥವಾ ಗೋಡೆಯ ಮೇಲೆ ಅಥವಾ ಇತರ ವಸ್ತುಗಳ ಮೇಲೆ ಅಲಂಕಾರಿಗೆ ಲೈಟ್ಸ್ ಬಳಸಬಹುದು. ಇದಲ್ಲದೆ ಗೋಡೆಗಳ ಮೇಲೆ ಹೊಸ ಪೇಂಟಿಂಗ್ ಮಾಡುವುದು, ಅಡುಗೆಮನೆ ಅಥವಾ ಮನೆಯ ಇತರ ಸ್ಥಳಗಳಲ್ಲಿ ಮಂದತೆಯನ್ನು ತೊಡೆದುಹಾಕಲು ಬಗೆ ಬಗೆಯ ಲೈಟ್ಸ್ ಬಳಕೆ ಮಾಡಬಹುದು. ಇವು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ.

ಎಲ್‌ಇಡಿ ದೀಪಗಳು

ದೀಪಾವಳಿ ಅಂದರೆ ದೀಪಗಳ ಹಬ್ಬ. ಈ ದೀಪಾವಳಿ ಹಬ್ಬ ದೀಪಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಈ ಹಬ್ಬದಲ್ಲಿ ದೀಪಗಳಿಗೆ ಹೆಚ್ಚಿನ ಮಹತ್ವವಿದೆ. ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯುವ ಈ ಹಬ್ಬವನ್ನು ಪ್ರತಿಯೊಬ್ಬರೂ ಆಚರಿಸುತ್ತಾರೆ. ಆದ್ದರಿಂದ ನಾವು ದೀಪಗಳನ್ನು ಮರೆಯಲು ಸಾಧ್ಯವಿಲ್ಲ. ಇದಕ್ಕಾಗಿ ನೆಲದ ಮೇಲೆ ವಿವಿಧ ಹಣತೆಯ ದೀಪಗಳನ್ನು ಇಟ್ಟು ಎಲ್‌ಇಡಿ ಸ್ಟ್ರಿಂಗ್ ದೀಪಗಳಿಂದ ನಿಮ್ಮ ಮನೆಯ ವಿವಿಧ ಮೂಲೆಗಳನ್ನು ಅಲಂಕರಿಸಬಹುದು. ಈ ಮೂಲಕ ಕತ್ತಲೆಯಿಂದ ಬೆಳಕಿನತ್ತ ಸಾಗುವ ದೀಪಾವಳಿಯ ಮಹತ್ವವನ್ನು ತೋರಿಸಬಹುದು.

diwali-decoration-ideas-change-the-look

ಹಳೆಯ ದೀಪಗಳನ್ನು ಬದಲಾಯಿಸಿ

ಮನೆಯಲ್ಲಿ ಹಳೆಯ ದೀಪಗಳನ್ನು ಬದಲಾಯಿಸಿ. ದೀಪಗಳು ಮನೆಯಿಂದ ಕತ್ತಲೆಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಇರುವ ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ನಿಮ್ಮ ಮನೆಯಲ್ಲಿನ ದೀಪಗಳು ಹಳೆಯದಾಗಿದ್ದರೆ ಮತ್ತು ಮಂದವಾಗಿದ್ದರೆ ಅವುಗಳನ್ನು ಈಗಲೇ ಬದಲಾಯಿಸಬೇಕು.

ಮನೆಗೆ ಹೊಸ ಬಣ್ಣ

ಸಾಮಾನ್ಯವಾಗಿ ಜನರು ದೀಪಾವಳಿಯ ಮೊದಲು ತಮ್ಮ ಮನೆಗಳಿಗೆ ಹೊಸ ಬಣ್ಣ ಬಳಿಯುತ್ತಾರೆ. ಇದರ ಬಳಿಕ ಮನೆ ಸಂಪೂರ್ಣವಾಗಿ ಹೊಸದಾಗಿ ಕಾಣುತ್ತದೆ. ನಿಮ್ಮ ಮನೆಯ ಬಣ್ಣವನ್ನು ಬದಲಾಯಿಸಿದಲ್ಲಿ ಇದು ನಿಮ್ಮ ಮನೆಗೆ ಹೊಸ ನೋಟವನ್ನು ನೀಡುತ್ತದೆ. ಬಣ್ಣವನ್ನು ಆಯ್ಕೆಮಾಡುವಾಗ ನಿಮ್ಮ ಮನೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಮನೆ ಚಿಕ್ಕದಾಗಿದ್ದರೆ ತಿಳಿ ಬಣ್ಣಗಳನ್ನು ಮಾಡಿ. ಏಕೆಂದರೆ ತಿಳಿ ಬಣ್ಣಗಳು ಚಿಕ್ಕ ಮನೆಯನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.

ನೀವು ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ತಿಳಿ ನೀಲಿ ಬಣ್ಣವನ್ನು ಆರಿಸಬೇಕು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರು ಮನೆಯ ಗೋಡೆಯ ಬಣ್ಣವನ್ನು ಹಾಳು ಮಾಡದಂತೆ ನೋಡಿಕೊಳ್ಳಬೇಕು. ಈ ಸಲಹೆಗಳ ಸಹಾಯದಿಂದ ನಿಮ್ಮ ಮನೆಯನ್ನು ಹಬ್ಬಕ್ಕೆ ಸುಂದರವಾಗಿ ಸಿದ್ಧಪಡಿಸಬಹುದು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+