Dhanteras 2024: ದೀಪಾವಳಿಗೆ ಚಿನ್ನ ಬೆಳ್ಳಿಯನ್ನೇ ಖರೀದಿಸಬೇಕೆಂದಿಲ್ಲ.. ಈ ವಸ್ತು ಕೂಡ ಲಕ್ಷ್ಮೀಯನ್ನ ಮೆಚ್ಚಿಸುತ್ತೆ
ಪ್ರತೀ ವರ್ಷದಂತೆ ಈ ವರ್ಷವೂ ಎಲ್ಲೆಡೆ ದೀಪಾವಳಿ ಹಬ್ಬದ ಆಚರಣೆಗೆ ತಯಾರಿ ನಡೆದಿದೆ. ದೀಪಗಳ ಹಬ್ಬ ದೀಪಾವಳಿಯನ್ನು ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಚಿನ್ನ, ಬೆಳ್ಳಿ, ವಾಹನ, ಮನೆ, ಭೂಮಿ ಖರೀದಿ ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಧನ್ತೇರಸ್ ಹಬ್ಬ ದೀಪಾವಳಿಯ ಮೊದಲು ಬರುತ್ತದೆ. ಈ ದಿನ ಶಾಪಿಂಗ್ ಮಾಡಲು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಸಂಪತ್ತಿನ ಅಧಿಪತಿ ಕುಬೇರ ಮತ್ತು ಧನ್ವಂತರಿ ದೇವರನ್ನು ಪೂಜಿಸಲಾಗುತ್ತದೆ. ಹೀಗೆ ಪೂಜೆ ಮಾಡುವುದರಿಂದ ವರ್ಷವಿಡೀ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ಇರುತ್ತದೆ ಎಂಬ ನಂಬಿಕೆ ಇದೆ.

ಜ್ಯೋತಿಷಿಗಳ ಪ್ರಕಾರ, ಜನರು ಧನ್ತೇರಸ್ ದಿನದಂದು ಚಿನ್ನ, ಬೆಳ್ಳಿ, ಪಾತ್ರೆಗಳು, ವಾಹನಗಳು ಮತ್ತು ಹೊಸ ಬಟ್ಟೆಗಳನ್ನು ಖರೀದಿಸುವುದು ಮಂಗಳಕರವಾಗಿದೆ. ಇದನ್ನು ಮಾಡುವುದರಿಂದ ಲಕ್ಷ್ಮಿ ದೇವಿ ಮತ್ತು ಕುಬೇರನು ಪ್ರಸನ್ನರಾಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಈ ಎಲ್ಲಾ ವಸ್ತುಗಳನ್ನು ಖರೀದಿಸುವುದು ಎಲ್ಲಾ ವರ್ಗದ ಜನರಿಗೆ ಸಾಧ್ಯವಾಗುವುದಿಲ್ಲ. ದುಬಾರಿ ವಸ್ತುಗಳನ್ನು ಖರೀದಿ ಮಾಡಲು ಸಾಮಾರ್ಥ್ಯ ಇಲ್ಲದೇ ಇರುವವರಿಗೆ ಲಕ್ಷ್ಮೀ ದೇವಿ ಆಶೀರ್ವದಿಸುವುದಿಲ್ಲ ಎಂದು ಹಲವರು ಬೇಸರಗೊಳ್ಳುತ್ತಾರೆ.
ಆದರೆ ಯಾರಿಗೆ ಚಿನ್ನ, ಬೆಳ್ಳಿ ಅಥವಾ ವಾಹನಗಳಂತಹ ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲವೋ ಅಂತವರು ಅಗ್ಗದ ವಸ್ತುವನ್ನು ಸಹ ಖರೀದಿಸಬಹುದು. ಅದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ. ಈ ಧನ್ತೇರಸ್ ದಿನವು ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಬರುತ್ತದೆ. ಈ ದಿನದ ವಿಶೇಷತೆಯೆಂದರೆ ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ. ಈ ವರ್ಷ ಧನ್ತೇರಸ್ ಹಬ್ಬವನ್ನು ಅಕ್ಟೋಬರ್ 29 ರಂದು ಆಚರಿಸಲಾಗುತ್ತದೆ.
ಅಲ್ಲದೆ ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದವರು ಧನ್ತೇರಸ್ ಸಮಯದಲ್ಲಿ ಪೊರಕೆಯನ್ನೂ ಖರೀದಿಸಬಹುದು. ಹೌದು... ಪೊರಕೆಯನ್ನು ಗೃಹಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಅದನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಗೆ ತುಂಬಾ ಸಂತೋಷವಾಗುತ್ತದೆ.

ಮನೆಯನ್ನು ಪೊರಕೆಯಿಂದ ಶುಚಿಗೊಳಿಸಲಾಗುತ್ತದೆ ಮತ್ತು ಎಲ್ಲಿ ಶುಚಿತ್ವವಿದೆಯೋ ಅಲ್ಲಿ ದೇವರು ಮತ್ತು ದೇವತೆಗಳು ನೆಲೆಸುತ್ತಾರೆ. ಹೀಗಾಗಿ ಪೊರಕೆಯನ್ನು ಖರೀದಿಸುವುದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದಲ್ಲದೆ, ಮನೆಗೆ ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಧನ್ತೇರಸ್ನಲ್ಲಿ ಪೊರಕೆಯನ್ನು ಖರೀದಿಸುವುದು ಕೈಗೆಟುಕುವ ಮತ್ತು ಸರಳವಾದ ಪರಿಹಾರವಾಗಿದೆ. ಇದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮತ್ತು ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದೀಪಾವಳಿ ದಿನಾಂಕ ಮತ್ತು ಸಮಯ:-
ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31, 2024 ರಂದು ಆಚರಿಸಲಾಗುವುದು.
ಅಮಾವಾಸ್ಯೆ ತಿಥಿ ಅಕ್ಟೋಬರ್ 31, 2024 ರಂದು ಮಧ್ಯಾಹ್ನ 03:52 ಕ್ಕೆ ಪ್ರಾರಂಭವಾಗುತ್ತದೆ
ಅಮವಾಸ್ಯೆಯ ತಿಥಿಯು ನವೆಂಬರ್ 01, 2024 ರಂದು ಸಂಜೆ 06:16ಕ್ಕೆ ಕೊನೆಗೊಳ್ಳುತ್ತದೆ
ಪ್ರದೋಷ ಕಾಲ ಮಧ್ಯಾಹ್ನ 05:12 ರಿಂದ ಸಂಜೆ 07:43
ಲಕ್ಷ್ಮಿ ಪೂಜೆ ಮುಹೂರ್ತ ಸಂಜೆ 05:12 ರಿಂದ ಸಂಜೆ 06:16
ವೃಷಭ ಮುಹೂರ್ತದಿಂದ ಸಂಜೆ 06:00 ರಿಂದ ಸಂಜೆ 07:59












Click it and Unblock the Notifications