ಯುವ ದಸರಾದಲ್ಲಿ ಟುವ್ವಿ ಟುವ್ವಿ ಎಂದ ಶಿವರಾಜ್ ಕುಮಾರ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 4: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಭರ್ಜರಿ ಆರಂಭ ದೊರೆತಿದೆ. ಮಹಾರಾಜ ಮೈದಾನದ ಅದ್ದೂರಿ ವೇದಿಕೆಯಲ್ಲಿ ಯುವ ದಸರಾಗೆ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಸೋಮವಾರ ಸಂಜೆ ಚಾಲನೆ ನೀಡಿದರು. ಜತೆಗೆ ಡ್ಯಾನ್ಸ್ ಮಾಡಿ, ಪ್ರೇಕ್ಷಕರನ್ನು ಕುಣಿಸಿದರು

ಆ ನಂತರ ಮಾತನಾಡಿದ ಅವರು, ದಸರಾಗೆ ಕೇವಲ ಪ್ರೇಕ್ಷಕನಾಗಿ ಬರುತ್ತಿದ್ದೆ. ಇಂದು ಉದ್ಘಾಟನೆಗೆ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ. ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿರುವ ದಸರಾ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇದರಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆಯ ವಿಷಯ ಎಂದರು.[ಮೈಸೂರು ದಸರಾ ವಿಶೇಷ: ಒಂದು ಅರಮನೆ.. ನೋಟ ಹಲವು..]

Shivaraj kumar entertained people in yuva dasara

ಕಾವೇರಿ ವಿವಾದದಿಂದ ದಸರಾ ರಂಗು ಕಡಿಮೆಯಾಗಿದೆ. ಆದರೆ ಈ ಜಲವಿವಾದ ವರ್ಷಗಳಿಂದಲೂ ಇದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲ ಕಷ್ಟ ಕಾರ್ಪಣ್ಯಗಳು ತೊಳೆದು ಹೋಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದಾಗಿ ಹೇಳಿದರು.

Shivaraj kumar entertained people in yuva dasara

ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ, ಬೇಡುವೆನು ವರವನ್ನು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಊರಿಂದ ಓಡಿ ಬಂದ ಜೋಗಿನ ಅಲ್ಲ ರೀ... ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ಕುಣಿಸಿದರಲ್ಲದೆ, ತಮ್ಮದೆ ಚಿತ್ರದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಯುವ ದಸರಾಗೆ ಮತ್ತಷ್ಟು ಮೆರುಗು ತಂದರು.[ಮೈಸೂರು ಯುವ ದಸರಾ: ಸ್ಯಾಂಡಲ್ ವುಡ್ ನೈಟ್ಸ್ ಮೂಲಕ ತೆರೆ]

Shivaraj kumar entertained people in yuva dasara

ವಿದ್ಯಾರ್ಥಿಗಳು ಮನಮೋಹಕ ನೃತ್ಯ ಹಾಗೂ ಹಾಡಿನ ಮೂಲಕ ರಂಜಿಸಿದರು. ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾರ್ಥಿಗಳು ಎಲ್ಲರೂ ಹುಬ್ಬೇರುವಂತೆ ನರ್ತಿಸಿ, ಚಪ್ಪಾಳೆ ಗಿಟ್ಟಿಸಿದರು.

Shivaraj kumar entertained people in yuva dasara

ಹಾಸನದ ಸರ್ಕಾರಿ ಕಲಾ ಕಾಲೇಜು, ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜು, ಗುಡ್ ಷಫರ್ಡ್ ಕಾನ್ವೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿವೇಕಾನಂದ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜುಗಳು ಕಣ್ಮನ ತಣಿಸಿದರು.[ಮೈಸೂರಿನಲ್ಲಿ ಮೇಳೈಸಿದೆ ದಸರಾ ಸಂಭ್ರಮ]

Shivaraj kumar entertained people in yuva dasara

ಮೈಸೂರಿನ ಅಖಿಲ ಕರ್ನಾಟಕ ಮಹಿಳಾ ಆಸರೆ ಬಳಗದವರು ಅತ್ಯದ್ಭುತವಾಗಿ ನರ್ತಿಸಿದರು. ಲೇಸರ್ ಡ್ಯಾನ್ಸ್ ಶೋ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಬೆನ್ನಿ ದಯಾಳ್ ಹಾಗೂ ತಂಡ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಮೂಕವಿಸ್ಮಿತರನ್ನಾಗಿಸಿತು. ಒಟ್ಟಾರೆ ಯುವ ದಸರಾ ಎಲ್ಲರನ್ನೂ ರಂಜಿಸುವಲ್ಲಿ ಯಶಸ್ವಿಯಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Shivaraj kumar entertained people by dance and song in Mysuru yuva dasara on Monday. Dance by students and other cultural programmes organised in the event and people enjoyed a lot.
Please Wait while comments are loading...