• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Navratri 2022 Day 1 : ನವರಾತ್ರಿ ಮೊದಲ ದಿನ ಸೆ. 26, ಶೈಲಪುತ್ರಿ ಪೂಜೆ ಮಹತ್ವ, ಮುಹೂರ್ತ, ಮಂತ್ರ

|
Google Oneindia Kannada News

ಇಂದು ಸೆಪ್ಟೆಂಬರ್ 25, ಮಹಾಲಯ ಅಮಾವಾಸ್ಯೆ. ಇದು ದುಷ್ಟಸಂಹಾರಕ್ಕೆ ದುರ್ಗೆ ಭೂಮಿಗೆ ಬಂದ ದಿನ. ಮುಂದಿನ ಒಂಬತ್ತು ದಿನಗಳು ನವದುರ್ಗೆಯರಿಗೆ ಪೂಜೆ ನಡೆಯುತ್ತದೆ. ಅದೇ ನವರಾತ್ರಿ.

ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ 9 ದಿನಗಳ ಕಾಲ ನವರಾತ್ರಿ ಇದೆ. ಇದಕ್ಕೆ ಶರದಿಯ ನವರಾತ್ರಿ ಎಂದೂ ಕರೆಯಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ನವರಾತ್ರಿ ಬರುತ್ತದೆ. ಈಗ ಶರದ್ ಋತುವಿನಲ್ಲಿ ಬರುವ ನವರಾತ್ರಿಯನ್ನು ಶರದಿಯ ನವರಾತ್ರಿ ಎನ್ನುತ್ತಾರೆ.

ಅಶ್ವಯುಜ ಮಾಸ ಶುಕ್ಲ ಪಕ್ಷದ ಮೊದಲನೆಯ ದಿನದಿಂದ ನವರಾತ್ರಿ ಆರಂಭವಾಗುತ್ತದೆ. ನವರಾತ್ರಿಯ ಮೊದಲ ದಿನದಂದು ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ.

ಯಾರು ಈ ಶೈಲಪುತ್ರಿ?:
ದುರ್ಗೆಯ ನವ ಅವತಾರಗಳಲ್ಲಿ ಒಬ್ಬಳು. ಈಕೆಯೇ ಪಾರ್ವತಿ. ಪರ್ವತರಾಜ ಹಿಮವಂತನ ಮಗಳು ಶೈಲಪುತ್ರಿ. ಶೈಲ ಎಂದರೆ ಬೆಟ್ಟ. ಒಂದು ಕೈಯಲ್ಲಿ ಕಮಲ, ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದು ನಿಂತಿರುವಂತೆ ಈ ದೇವತೆಯನ್ನು ಚಿತ್ರಿಸಲಾಗಿದೆ. ಈಕೆಯ ಅವತಾರದ ಹಿಂದಿನ ಪುರಾಣಕಥೆ ಹೀಗಿದೆ...

ನವರಾತ್ರಿ 2022: ಕುಲದೇವಿ ಪೂಜೆ ನವರಾತ್ರಿ ವೇಳೆ ಏಕೆ ಅಗತ್ಯ?ನವರಾತ್ರಿ 2022: ಕುಲದೇವಿ ಪೂಜೆ ನವರಾತ್ರಿ ವೇಳೆ ಏಕೆ ಅಗತ್ಯ?

ಪ್ರಜಾಪ್ರತಿ ಬ್ರಹ್ಮನ ಮಗ ದಕ್ಷ ತನ್ನ 27 ಹೆಣ್ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿಸಿದ್ದ. ಮತ್ತೊಬ್ಬ ಮಗಳು ದಾಕ್ಷಾಯಿಣಿ ಸ್ಮಶಾನವಾಸಿ ಶಿವನನ್ನು ವರಿಸುತ್ತಾಳೆ. ಶಿವನನ್ನು ಕಂಡರೆ ದಕ್ಷನಿಗೆ ಮಹಾಕೋಪ. ತನ್ನ ಸೌಂದರ್ಯವತಿ ಮಗಳು ಸ್ಮಶಾನವಾಸಿಯನ್ನು ಮದುವೆಯಾಗಿದ್ದನ್ನು ಸಹಿಸಲು ದಕ್ಷನಿಗೆ ಅಸಾಧ್ಯವಾಗಿತ್ತು.

ಒಮ್ಮೆ ದಕ್ಷ ಮಹಾ ಯಜ್ಞವೊಂದನ್ನು ಆಯೋಜಿಸಿ ಸಕಲರನ್ನೂ ಆಹ್ವಾನಿಸಿದ್ದನು. ಬ್ರಹ್ಮ, ಶಿವಾದಿಯಾಗಿ ಎಲ್ಲರೂ ಬಂದಿದ್ದರು. ಯಜ್ಞಕ್ಕೆ ದಕ್ಷ ಆಗಮಿಸಿದಾಗ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರು ಗೌರವಾರ್ಥವಾಗಿ ಎದ್ದು ನಿಂತರು. ಶಿವ ಏಳದೇ ಇದ್ದದ್ದು ದಕ್ಷನ ಕೋಪವನ್ನು ಇಮ್ಮಡಿಗೊಳಿಸಿತ್ತು. ಆ ಪ್ರತೀಕಾರಕ್ಕಾಗಿ ದಕ್ಷ ಇನ್ನೊಂದು ಯಜ್ಞ ಮಾಡಿ ಶಿವ ಮತ್ತು ತನ್ನ ಮಗಳು ದಾಕ್ಷಾಯಿಣಿ ಇಬ್ಬರನ್ನೂ ಆಹ್ವಾನಿಸುವುದಿಲ್ಲ.

ಅಪ್ಪ ಯಜ್ಞ ಮಾಡುತ್ತಿರುವ ವಿಷಯ ತಿಳಿದು ದಾಕ್ಷಾಯಿಣಿ ಅಲ್ಲಿಗೆ ಹೋಗಲು ಪತಿ ಶಿವನ ಅನುಮತಿ ಕೇಳುತ್ತಾಳೆ. ತವರು ಮನೆಯಾದರೂ ಸರಿ ಆಹ್ವಾನ ಇಲ್ಲದೇ ಹೋಗಬಾರದು ಎಂದು ಶಿವ ಹೇಳಿದರೂ ದಾಕ್ಷಾಯಿಣಿ ಬಲವಂತಪಡಿಸಿ ಅನುಮತಿ ಪಡೆಯುತ್ತಾಳೆ. ದಾಕ್ಷಾಯಿಣಿ ಮತ್ತು ಶಿವ ಇಬ್ಬರೂ ಹೋಗುತ್ತಾರೆ.

ಅದನ್ನೇ ಕಾಯುತ್ತಿದ್ದ ದಕ್ಷ ತನ್ನ ಮಗಳು ಮತ್ತು ಅಳಿಯ ಇಬ್ಬರನ್ನೂ ಅವಮಾನಿಸುತ್ತಾನೆ. ತನ್ನನ್ನಿರಲಿ, ಪತಿ ಶಿವ ಪರಮಾತ್ಮನನ್ನು ಅವಮಾನಿಸಿದನೆಂದು ಮನನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಈಕೆ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿ ಶೈಲಪುತ್ರಿಯಾಗಿ ಜನಿಸುತ್ತಾಳೆ. ದಸರಾ ಸಂದರ್ಭದಲ್ಲಿ ಮದುವೆಯಾದ ಹೆಣ್ಮಕ್ಕಳನ್ನು ತವರಿಗೆ ಆಹ್ವಾನಿಸಿ ಗೌರವಿಸುವ ಸಂಪ್ರದಾಯ ಇದೇ ಕಾರಣಕ್ಕೆ ಬೆಳೆದುಬಂದಿದೆ ಎಂದು ಹೆಳಲಾಗುತ್ತದೆ.

ಶೈಲಪುತ್ರಿ ಆದಿಶಕ್ತಿ
ದುರ್ಗೆಯ ಅವತಾರವೆನ್ನಲಾದ ಶೈಲಪುತ್ರಿ ಆದಿಶಕ್ತಿ ಎಂದು ಗುರುತಿಸಲ್ಪಡುತ್ತಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶಿಲಪುತ್ರಿಗೆ ಮಲ್ಲಿಗೆ ಹೂವೆಂದರೆ ಪ್ರಿಯ. ಗೂಳಿ ಈಕೆಯ ವಾಹನವಾದ್ದರಿಂದ ವೃಷರುಧ ಎಂಬ ಹೆಸರೂ ಇದೆ. ಮನೋಕಾರಕನಾದ ಚಂದ್ರ ಮತ್ತು ತಮೋಗುಣದ ಸಂಕೇತವಾದ ತ್ರಿಶೂಲ ಈಕೆಯ ಬಳಿ ಇದೆ.

ನವರಾತ್ರಿ 2022: ದುರ್ಗಾ ದೇವಿಯ ವಿಗ್ರಹಕ್ಕೆ ವೇಶ್ಯೆಯರ ಮನೆ ಅಂಗಳದ ಮಣ್ಣು ಏಕೆ ಬೇಕು?ನವರಾತ್ರಿ 2022: ದುರ್ಗಾ ದೇವಿಯ ವಿಗ್ರಹಕ್ಕೆ ವೇಶ್ಯೆಯರ ಮನೆ ಅಂಗಳದ ಮಣ್ಣು ಏಕೆ ಬೇಕು?

ಇಂದ್ರ ಸೇರಿದಂತೆ ದೇವಾನುದೇವತೆಗಳ ಈರ್ಷ್ಯೆ ಮನೋಭಾವನೆಯನ್ನು ಶೈಲಪುತ್ರಿ ನಿಯಂತ್ರಿಸುತ್ತಾಳೆ ಎಂದು ಉಪನಿಷತ್ತುಗಳು ಹೇಳುತ್ತವೆ. ಮೂಲಧಾರ ಚಕ್ರದಲ್ಲಿ ಈಕೆ ಯೋಗಿನಿಯಾಗಿ ನೆಲೆಗೊಂಡಿದ್ದಾಳೆ. ಈ ಮೂಲಧಾರ ಚಕ್ರ ಮನುಷ್ಯನ ಬೆನ್ನುಹುರಿಯ ಕೆಳಗಿದೆ. ಇದು ಕುಂಡಿಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ ಎಂಬುದು ನಂಬಿಕೆ. ಹೀಗಾಗಿ, ನವರತ್ರಿ ಪೂಜೆಯ ವೇಳೆ ಯೋಗಸಾಧಕರು ಮೊದಲನೆಯ ದಿನ ಮೂಲಧಾರ ಚಕ್ರಮದ ಮೇಲೆ ಗಮನಕೇಂದ್ರೀಕರಿಸಿ ಧ್ಯಾನ ಮಡುತ್ತರೆ. ಚಂಚಲ ಮನಸನ್ನು ಹತೋಟಿಗೆ ತೆಗೆದುಕೊಳ್ಳಬಯಸುವವರು ಶೈಲಪುತ್ರಿಯ ಆರಾಧನೆ ಮಾಡಬೇಕು.

ಶೈಲಪುತ್ರಿ ಕವಚ ಮಂತ್ರ:

ಓಂಕಾರಹಃ ಮೇ ಶಿರಾಹ್ ಪಟು ಮೂಲಾಧರ ನಿವಾಸಿನಿ
ಹಿಮಾಕರಹಃ ಪಟು ಲಲೇಟ್ ಬಿಜರೂಪ ಮಹೇಶ್ವರಿ
ಶ್ರೀಂಕಾರ ಪಟು ವಾದನೇ ಲಾವಣ್ಯ ಮಹೇಶ್ವರಿ
ಹಂಕಾರ ಪಟು ಹೃದಯಯಂ ತಾರಣಿ ಶಕ್ತಿ ಸ್ವಾಘ್ರಿತಾ
ಘಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಪ್ರದಾ

ನವರಾತ್ರಿಯ ಮೊದಲ ಮೂರು ದಿನ ತಮೋಗುಣವನ್ನು ಕಡಿಮೆ ಮಾಡಲು ಮಹಾಕಾಳಿಯ ಪೂಜೆ ಆಗುತ್ತದೆ. ನಂತರದ ಮೂರು ದಿನಗಳಂದು ರಜಗುಣವನ್ನು ವೃದ್ಧಿಸಲು ಮಹಾಲಕ್ಷ್ಮೀಯ ಪೂಜೆ ನಡೆಯುತ್ತದೆ. ಮುಂದಿನ ಮೂರು ದಿನಗಳಂದು ಸತ್ವಗುಣಿ ಮಹಾಸರಸ್ವತಿಯ ಆರಾಧನೆ ಆಗುತ್ತದೆ.

ಕಳಶ ಅಥವಾ ಘಟಸ್ಥಾಪನೆ:
ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 26ರಂದು ಕಳಶ ಸ್ಥಾಪನೆ ಅಥವಾ ಘಟಸ್ಥಾಪನೆ ಕಾರ್ಯ ನಡೆಯಬೇಕು. ಇದಕ್ಕೆ ಮುಹೂರ್ತ ಸೋಮವಾರ ಬೆಳಗ್ಗೆ 6:11ರಿಂದ 7:51ರವರೆಗೆ ಇದೆ.

ಘಟಸ್ಥಾಪನ ಅಭಿಜಿತ್ ಮುಹೂರ್ತ ಬೆಳಗ್ಗೆ 11:48ರಿಂದ ಮಧ್ಯಾಹ್ನ 12:36ರವರೆಗೆ ಇದೆ.

ನವರಾತ್ರಿ ಪ್ರತಿಪಾದ ತಿಥಿ ಸೋಮವಾರ ಮಧ್ಯಾಹ್ನ 3:23ಕ್ಕೆ ಅರಂಭಗೊಂಡು ಮಂಗಳವಾರ ಬೆಳಗ್ಗೆ 3:08ರವರೆಗೂ ಇರುತ್ತದೆ.

* ಮೊದಲ ದಿನದ ಬಣ್ಣ ಬಿಳಿ. ಇಲ್ಲಿ ಶೈಲಪುತ್ರಿ ಶ್ವೇತವಸ್ತ್ರಧಾರಿಣಿಯಾಗಿದ್ದಾಳೆ. ಶೈಲಪುತ್ರಿಗೆ ದೀಪದಾರತಿ, ಊದುಬತ್ತಿಯಿಂದ ಪೂಜಿಸಬೇಕು. ಹೂ, ಹಣ್ಣು, ಫಲ ಮತ್ತು ಸಿಹಿ ತಿನಿಸು ಸಮರ್ಪಿಸಬೇಕು. ಶುದ್ಧ ತುಪ್ಪದಿಂದ ಮಾಡಿದ ಪ್ರಸಾದವನ್ನು ನೈವೇದ್ಯವಾಗಿ ನೀಡಬೇಕು.

(ಒನ್ಇಂಡಿಯಾ ಸುದ್ದಿ)

English summary
Dasara Festival- Navaratri 1st day on September 26th. Goddess Shailaputri is worshipped on this day. Know about the puranas describing Shailaputri, and the significance of worshipping her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X