ಕರ್ನಾಟಕದಲ್ಲಿ ನಾಡಹಬ್ಬದ ಸಂಭ್ರಮ ಸಡಗರ ಆರಂಭ

ನವರಾತ್ರಿ ಹಿಂದೂ ಧರ್ಮದಲ್ಲಿ ಇದು ಹಬ್ಬಗಳ ಕಾಲ. ಈ ಹಬ್ಬವನ್ನು ಭಾರತದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದೆ ಹಲವು ನಂಬಿಕೆಗಳಿವೆ. ಹಿಂದೂ ಪಂಚಾಂಗದ ಪ್ರಕಾರ ಅಶ್ವಿನಿ ತಿಂಗಳಲ್ಲಿ ನವರಾತ್ರಿ ಆಚರಿಸಲಾಗುತ್ತದೆ. ಒಂಬತ್ತು ದಿನ (ನವ) ನವರಾತ್ರಿಗಳು ಈ ತಿಂಗಳು 2021 ಅಕ್ಟೋಬರ್ 7 ರಿಂದ ಅ.15ರ ವರೆಗೆ ದೇವಿಯನ್ನು ಒಂಬತ್ತು ವಿವಿಧ ರೂಪದಿಂದ ಅಲಂಕರಿಸಿ ಆರಾಧಿಸಲಾಗುತ್ತದೆ. ಹತ್ತನೇಯ ದಿನ 'ವಿಜಯ ದಶಮಿ' ಈ ದಿನ ಶಮಿ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವುದು ಕರ್ನಾಟಕ ಆಚರಣೆಯ ಪದ್ಧತಿ.

ವಿಜಯ ದಶಮಿ ಎಂದರೆ ಮೊದಲಿಗೆ ನೆನಪಾಗುವುದು ಮೈಸೂರು. ಈ ಹಬ್ಬವು ಹಿಂದೂ ಪಂಚಾಂಗದ ಪ್ರಕಾರ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಇದೇ ದಿನದಂದು ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಯ ಮೆರವಣಿಗೆ ಮೈಸೂರುನಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ದಿನ ದೇವಿಯನ್ನು ಆರಾಧಿಸುವ ಹಬ್ಬ. ಈ ಹಬ್ಬವನ್ನು ನಮ್ಮ ಕರ್ನಾಟಕದಲ್ಲಿ 'ದಸರಾ' ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದನ್ನು 'ದುರ್ಗಾ ಪೂಜಾ' ಎಂದು ಆಚರಿಸಲಾಗುತ್ತದೆ.

Navaratri,Dasara one of the most important and auspicious Hindu festivals in Karnataka

ನವರಾತ್ರಿಯ ಒಂಬತ್ತು ದಿನ ನವ ಅವತಾರಗಳಿಂದ ದೇವಿಯನ್ನು ಬೇರೆ ಬೇರೆ ನವ ಸ್ವರೂಪದಿಂದ ಪೂಜಿಸಲಾಗುತ್ತದೆ.
1. ಮೊದಲನೇ ದಿನವು ಶೈಲ ಪುತ್ರಿಯು ಶಿವನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಾಳೆ. ನಂದಿ ಮೇಲೆ ಸವಾರಿ ಮಾಡುತ್ತಾ ಎಡಗೈಯಲ್ಲಿ ಕಮಲ. ಬಲಗೈಯಲ್ಲಿ ತ್ರಿಶೂಲ ಇರುವಂತೆ ದೇವಿಯನ್ನು ಅಲಂಕರಿಸಲಾಗುತ್ತದೆ.
2. ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ. ಮೋಕ್ಷ ಮತ್ತು ಶಾಂತಿ ಸೌಹಾರ್ದತೆಯ ಅವತಾರವಾಗಿ ಈ ದೇವಿ ಕಾಣಿಸಿಕೊಳ್ಳುತ್ತಳೆ.
3. ಮೂರನೇ ದಿನ ಚಂದ್ರಘಟ್ಟ ರೂಪದಲ್ಲಿ ದೇವಿಯನ್ನು ಅಲಂಕರಿಸಲಾಗುತ್ತದೆ. ದೇವಿಯ ಹಣೆಯ ಮೇಲೆ ಅರ್ಧ ಚಂದ್ರನಿದ್ದು, ಸೌಂದರ್ಯ ಹಾಗೂ ಧೈರ್ಯದ ಸಂಕೇತವಾಗಿ ದೇವಿ ಇರುತ್ತಾಳೆ.
4. ನಾಲ್ಕನೇ ದಿನ ಕುಶ್ಮಡ ರೂಪದಲ್ಲಿ ಪೂಜಿಸಲಾಗುತ್ತದೆ. ಭೂಮಿಯ ಮೇಲಿನ ಸಸ್ಯವರ್ಗವನ್ನು ಈ ದೇವಿ ಪ್ರತಿನಿದಿಸುತ್ತಳೆ.
5. ಐದನೇ ದಿನ ಸ್ಕಂದಮಾತಾ ರೂಪದಲ್ಲಿದ್ದು ಸ್ಕಂದ (ಕಾರ್ತಿಕೇಯ)ನ ತಾಯಿಯಾಗಿ ಕಾಣಿಸಿಕೊಳುತ್ತಾಳೆ. ತನ್ನ ಮಗು ವನ್ನು ರಕ್ಷಿಸುವ ತಾಯಿಯ ಶಕ್ತಿಯನ್ನು ತೋರುವ ರೂಪದಲ್ಲಿದೆ.
6. ಆರನೇ ದಿನ ಕಾತ್ಯಾಯಣಿಯಾಗಿದ್ದು ಈಕೆ ಯೋಧ ದೇವತೆ ಎಂದು ಪ್ರಸಿದ್ದಿ.
7. ಏಳನೇ ದಿನವು ಕಲರಾತ್ರಿ ದೇವಿಯಾಗಿದೆ. ಕಣ್ಣಿನಲ್ಲಿ ಉಗ್ರತೆ ತುಂಬಿಕೊಂಡಿರುವ ಈ ದೇವಿಗೆ ಬಿಳಿ ಬಣ್ಣದಲ್ಲಿ ಅಲಂಕಾರ ಮಾಡಲಾಗುತ್ತದೆ.
8. ಎಂಟನೇ ದಿನ ಮಹಾಗೌರಿಯ ದಿನವಾಗಿದ್ದು, ಬುದ್ದಿ ಹಾಗೂ ಶಾಂತಿಯ ಪ್ರತೀಕವಾಗಿ ಪೂಜಿಸಲಾಗುತ್ತದೆ.
9. ಒಂಬತ್ತನೇ ಸಿದ್ದಿರಾತ್ರಿ ಇದ್ದು ಈಕೆ ಹಲವು ಶಕ್ತಿಗಳನ್ನು ತನ್ನ ಭಕ್ತರಿಗೆ ನೀಡುತ್ತಾಳೆ. ಎಂದು ನಂಬಿಕೆಯಿದೆ.
ಕೊನೆಯ ದಿನ ದೇವಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆಯನ್ನು ಸಲ್ಲಿಸಿ. ವಿಸರ್ಜನೆ ಮಾಡಲಾಗುವುದು.

Navaratri,Dasara one of the most important and auspicious Hindu festivals in Karnataka

ಹಿಂದೂ ಪುರಾಣದಲ್ಲಿ ಪ್ರಕಾರ ಉತ್ತರ ಭಾರತದಲ್ಲಿ ಇದಕ್ಕೆ ದಂತ ಕತೆಯಿದೆ. ಮಹಿಷಾಸುರನೆಂಬ ರಾಕ್ಷಸನಿದ್ದು, ಆತನು ದುರ್ಗೆಯ ಸೌಂದರ್ಯಕ್ಕೆ ಮಾರುಹೋದ ಮಹಿಷಾಸುರ ತನನ್ನು ಮದುವೆಯಾಗಬೇಕೆಂದು ಆಕೆಯನ್ನು ಕೇಳಿಕೊಳ್ಳುತ್ತಾನೆ. ದುರ್ಗೆಯು ಇದಕ್ಕೆ ತಯಾರಾಗುತ್ತಾಳೆ. ಆದರೆ ತನ್ನ ವಿರುದ್ಧ ಯುದ್ಧ ಗೆಲ್ಲಬೇಕೆಂದು ಆಕೆ ಹೇಳುತ್ತಾಳೆ. ಈ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು ಮತ್ತು ಒಂಬತ್ತನೆಯ ದಿನದಂದು ದುರ್ಗೆಯು ಮಹಿಷಾಸುರನನ್ನು ವಧೆ ಮಾಡಿದಳು. ಈ ಒಂಬತ್ತು ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. 9ನೇ ಹಾಗೂ ಕೊನೆಯ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಇದು ದುಷ್ಟ ಶಕ್ತಿ ವಿರುದ್ಧ ಒಳ್ಳೆಯ ವಿಜಯ. ಹೀಗೆ ಒಂಭತ್ತು ದಿನ ಒಂಬತ್ತು ಅವತಾರದಲ್ಲಿ ದೇವಿಯನ್ನು ಪೂಜಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+