ಜಂಬೂಸವಾರಿಗೆ ಕಳೆಗಟ್ಟಿದ ಸ್ತಬ್ಧ ಚಿತ್ರ, ಕಲಾತಂಡಗಳು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 12: ಐತಿಹಾಸಿಕ ಮೈಸೂರು ದಸರಾದಲ್ಲಿ ನಡೆದ ಜಂಬೂಸವಾರಿಗೆ ವಿವಿಧ ಜಿಲ್ಲೆ, ಇಲಾಖೆಗಳ ಸ್ತಬ್ಧ ಚಿತ್ರಗಳು ಮತ್ತು ಕಲಾತಂಡಗಳು ಮೆರುಗು ನೀಡಿದವು. ಈ ಬಾರಿಯ ದಸರಾ ಜಂಬೂ ಮೆರವಣಿಗೆಯಲ್ಲಿ 42 ಸ್ತಬ್ಧ ಚಿತ್ರಗಳು ಪಾಲ್ಗೊಂಡು, ಮೆರವಣಿಗೆಗೆ ಕಳೆಗಟ್ಟಿದ್ದು ವಿಶೇಷವಾಗಿತ್ತು.

ಚಾಮರಾಜನಗರ ಜಿಲ್ಲೆಯಲ್ಲಿರುವ ಸಪ್ತಮಾತೃಕಾ ದೇವಾಲಯದ ಸ್ಫೂರ್ತಿ ಸಪ್ತ ಯೋಜನೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು, ಉಡುಪಿಯ ಸೇಂಟ್ ಮೇರಿ ದ್ವೀಪ, ಉತ್ತರ ಕನ್ನಡ ಜಿಲ್ಲೆಯ ಮಾರಿಕಾಂಬ ದೇವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕಕ್ಕೆ 60 ವರ್ಷ ಬಿಂಬಿಸುವ ಸ್ತಬ್ಧ ಚಿತ್ರ. ಕಲಬುರ್ಗಿಯ ಚಂದ್ರಾಲಾಂಬಾ ಪರಮೇಶ್ವರಿ ದೇವಾಲಯ ಮತ್ತು ಸ್ತೂಪ,[ಜಿಟಿಜಿಟಿ ಮಳೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ]

Tumkur

ಕೊಡಗಿನ ಬುಡಕಟ್ಟು ಸಮುದಾಯವನ್ನು ಬಿಂಬಿಸುವ ಬುಡಕಟ್ಟು ಬಂಧು, ಕೊಪ್ಪಳದ ಘನತ್ಯಾಜ್ಯ ವಿಲೇವಾರಿ ಘಟಕ, ಕೋಲಾರದ ಸೋಮೇಶ್ವರ ದೇವಾಲಯ, ಗದುಗಿನ ಸಂಗೀತ ಕಲಾ ದಿಗ್ಗಜರು, ಚಿಕ್ಕಬಳ್ಳಾಪುರ ಕೈವಾರದ ಬಕಾಸುರ ವಧೆ, ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ ವನ್ಯಪ್ರಾಣಿಗಳ ವೈವಿಧ್ಯ ನೆಲೆಯ ಸ್ತಬ್ಧ ಚಿತ್ರ ಗಮನ ಸೆಳೆಯಿತು.

ಚಿಕ್ಕಮಗಳೂರಿನ ವಿದ್ಯಾಶಂಕರ ದೇವಾಲಯ, ಚಿತ್ರದುರ್ಗದ ಸೌರಶಕ್ತಿ ಮತ್ತು ಪವನ ಶಕ್ತಿ, ತುಮಕೂರಿನ ಕಲ್ಪತರ ನಾಡು, ಸಿರಿಧಾನ್ಯಗಳ ಬೀಡು, ವಾರ್ತಾ ಇಲಾಖೆಯ ಜನತೆಯ ಕಡೆಗೆ ಭರವಸೆ ನಡಿಗೆ, ದಕ್ಷಿಣ ಕನ್ನಡ ಜಿಲ್ಲೆಯ ರಾಣಿ ಅಬ್ಬಕ್ಕಮಹಾದೇವಿ, ದಾವಣಗೆರೆಯ ರಂಗನಾಥಸ್ವಾಮಿ ದೇವಸ್ಥಾನ, ಧಾರವಾಡದ ವೀರಯೋಧ ಹನುಮಂತಪ್ಪ, ಬಳ್ಳಾರಿಯ ಲಕ್ಷ್ಮಿನರಸಿಂಹ ಶಿಲಾಮೂರ್ತಿ, ಆರೋಗ್ಯ ಇಲಾಖೆಯ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ,[ಮಳೆ ಸಿಂಚನದ ನಡುವೆ ಸಂಚಲನ ಮೂಡಿಸಿದ ವಿಶ್ವವಿಖ್ಯಾತ ಜಂಬೂ ಸವಾರಿ]

dasra folklore

ಬಾಗಲಕೋಟೆಯ ಪಟ್ಟದಕಲ್ಲಿನ ಸಂಗಮೇಶ್ವರ ದೇವಾಲಯ, ಬೀದರ್ ನ ಅಂತರ್ಜಲ ಮರುಬಳಕೆ, ಬೆಳಗಾವಿಯ ಭೀಮಗಢ ವನ್ಯಧಾಮ, ಶಿಕ್ಷಣ ಇಲಾಖೆಯ ಶಿಕ್ಷಣದ ಸಾರ್ವತ್ರೀಕರಣ, ಬೆಂಗಳೂರು ಗ್ರಾಮಾಂತರದಿಂದ ಪಾರಂಪರಿಕ ತಾಣಗಳು ಹಾಗೂ ಅಭಿವೃದ್ಧಿ, ಬೆಂಗಳೂರು ನಗರದ ರಾಜ್ಯ ಕೇಂದ್ರ ಗ್ರಂಥಾಲಯದ ಶತಮಾನೋತ್ಸವ, ಮೈಸೂರಿನ ರಾಜಮಾತೆಯರ ಕೊಡುಗೆಗಳು, ಮಂಡ್ಯದ ಶಿವಪುರದ ಸತ್ಯಾಗ್ರಹ ಸೌಧ, ಯಾದಗಿರಿಯ ಯಾದಗೀರ್ ಕೋಟೆ,

ಚಿಂತನಹಳ್ಳಿ ಗವಿಸಿದ್ಧ ಲಿಂಗೇಶ್ವರ, ರಾಮನಗರದ ಚನ್ನಪಟ್ಟಣದ ಗೊಂಬೆ, ರಾಯಚೂರು ಹಟ್ಟಿ ಚಿನ್ನದ ಗಣಿ, ವಿಜಯಪುರ ಲಾಲ್ ಬಹಾದ್ದೂರ್ ಶಾಸ್ತ್ರಿ, ಸಾಗರ ಅಲಮಟ್ಟಿ ಜಲಾಶಯ, ಅಂಬೇಡ್ಕರ್ ಅವರ ಸ್ತಬ್ಧ ಚಿತ್ರ, ಶಿವಮೊಗ್ಗದ ಇಕ್ಕೇರಿ ದೇವಸ್ಥಾನ, ಜೋಗ್ ಫಾಲ್ಸ್, ಹಾವೇರಿಯ ವೀರಸೌಧ, ಹಾಸನದ 2018ರ ಮಹಾಮಸ್ತಾಭಿಷೇಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು,[ಮಳೆಗಾಗಿ ಸಿದ್ದು ಪ್ರಾರ್ಥನೆ.. ಮೈಸೂರಿನಲ್ಲಿ ವರುಣನ ಸಿಂಚನ]

Goravayya

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಬೆಂಗಳೂರು ವಸ್ತು ಸಂಗ್ರಹಾಲಯಕ್ಕೆ 150 ವರ್ಷದ ಸಂಭ್ರಮ, ಎಸ್ ಬಿಎಂನಿಂದ ಬ್ಯಾಂಕ್ ಸೇವೆಗಳು, ಕಾವೇರಿ ನೀರಾವರಿ ನಿಗಮದ ಜಲಜಾಗೃತಿ ಆಂದೋಲನ, ವಾಕ್ ಶ್ರವಣ ಸಂಸ್ಥೆಯ ಇಲಾಖಾ ಕಾರ್ಯಕ್ರಮಗಳು, ಭಾರತ್ ಪೆಟ್ರೋಲಿಯಂನಿಂದ ಪರಿಸರ ಸ್ನೇಹಿ ಇಂಧನ ಬಳಸಿ ಪರಿಸರ ಸಂರಕ್ಷಿಸಿ ಸ್ತಬ್ಧ ಚಿತ್ರ, ಮೈಸೂರಿನ ಮಹಾರಾಣಿ ಕಾಲೇಜು ಸ್ತಬ್ಧ ಚಿತ್ರ, ಅರಮನೆ ಮಂಡಳಿಯ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ವೀಕ್ಷಕರ ಮನಸೆಳೆದವು.[ಮೈಸೂರು ಅರಮನೆ ಆಯುಧ ಪೂಜೆಯ ವೈಖರಿ, ನಲಿದಾಡಿದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ]

dasara jamboo savaari

ಇನ್ನು ಇವುಗಳ ನಡುವೆ ಕಂಗೀಲು, ಗೊರವರ, ಭೂತ ನೃತ್ಯ, ಹುಲಿವೇಷ, ಹಾಲಕ್ಕಿ ನೃತ್ಯ, ಬೊಂಬೆ ಕಥಕಳಿಯಾಟ, ಬಹುರೂಪಿ ವೇಷಧಾರಿಗಳು, ಗಾರುಡಿಗೊಂಬೆ, ಶಿವವೇಷಧಾರಿಗಳ ನೃತ್ಯ, ಮರಗಾಲು ಕುಣಿತ, ದೊಣ್ಣೆ ವರಸೆ, ಜಗ್ಗಳಿ, ಪೂಜಾ ಕುಣಿತ, ಪಟದ ಕುಣಿತ, ಸೋಮನ ಕುನಿತ, ನವೀಲು ನೃತ್ಯ, ಚಕ್ರಿ ನೃತ್ಯ, ತಮಟೆ ನಗಾರಿ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಎಲ್ಲರ ಗಮನಸೆಳೆಯುವ ಮೂಲಕ ಜಂಬೂಸವಾರಿಯ ಮೆರವಣಿಗೆಗೆ ಮೆರುಗು ತಂದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ysuru dasara jamboo savaari is a special event. On Tuesday different districts participated in various events. Which are extended the mood of celebration.
Please Wait while comments are loading...