ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಂಬೆಗಳ ಹಬ್ಬಕ್ಕೆ ನಿಮ್ಮ ಮನೇಲಿ ತಯಾರಿ ಹೀಗಿರಲಿ

|
Google Oneindia Kannada News

Doll Festival Preparation
ಇನ್ನೇನು ನವರಾತ್ರಿಗೆ ಕೆಲವೇ ದಿನ ಬಾಕಿ ಇದೆ. (ಸೆ. 28 2011 ರಿಂದ ಅ. 6 2011 ರವರೆಗೆ) ನವರಾತ್ರಿಯೊಂದಿಗೆ ಅನೇಕ ಹಬ್ಬಗಳೂ ಸಾಲಾಗಿ ಬರಲಿವೆ. ಹಬ್ಬಗಳ ಸುಗ್ಗಿ ಈ ನವರಾತ್ರಿಯಲ್ಲಿ ಒಂಭತ್ತು ದಿನ ಮನೆಯಲ್ಲಿ ಚೆಂದ ಚೆಂದದ ಗೊಂಬೆ ಕೂರಿಸುವುದು ಮೈಸೂರಿನ ಒಡೆಯರ್ ಕಾಲದಿಂದಲೂ ನಡೆಸಿಕೊಂಡು ಬಂದಿರುವ ವಿಶೇಷ ಆಚರಣೆ.

ನಮ್ಮ ಸಾಂಸ್ಕ್ರತಿಕ, ಐತಿಹಾಸಿಕ, ಪೌರಾಣಿಕ ಕಥೆಯನ್ನು ಗೊಂಬೆ ಕೂರಿಸುವ ಮೂಲಕ ಮಕ್ಕಳಿಗೆ ಸಾರುವ ಈ ಗೊಂಬೆ ಹಬ್ಬವೆಂದರೆ ಕರ್ನಾಟಕಕ್ಕೆ ವಿಶೇಷ. ಆದರೆ ಮೊದಲ ಬಾರಿ ತಮ್ಮ ಮನೆಯಲ್ಲಿ ಗೊಂಬೆಹಬ್ಬ ಮಾಡುತ್ತಿದ್ದವರಿಗೆ ಉಪಯುಕ್ತವಾಗಲೆಂದು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಗೊಂಬೆ ಹಬ್ಬಕ್ಕೆ ತಯಾರಿ ಹೀಗಿರಲಿ:

1. ಸ್ಥಳಾವಕಾಶ: ಮೊದಲು, ಗೊಂಬೆಗಳನ್ನು ಕೂರಿಸಲು ಸೂಕ್ತ ಸ್ಥಳವನ್ನು ನಿಗದಿಪಡಿಸಿಕೊಳ್ಳಿ. ಮನೆಯ ಹಾಲ್ ನಲ್ಲೇ ಗೊಂಬೆ ಕೂರಿಸದರೆ ಚೆಂದ. ಯಾವ ಕಡೆ ಇಡಬೇಕೆಂದು ಯೋಚಿಸಿ ನಂತರ ಸಾವಕಾಶವಾಗಿರುವಂತೆ ಸ್ಥಳವನ್ನು ಸರಿಮಾಡಿಕೊಳ್ಳಿ.

2. ಟೇಬಲ್: 3 ಉದ್ದದ ಟೇಬಲ್ ಗಳನ್ನು ಹೊಂದಿಸಿಕೊಳ್ಳಿ. ಒಂದಕ್ಕಿಂತ ಒಂದು ಸ್ವಲ್ಪ ಎತ್ತರದ, ಒಟ್ಟು ಮೂರು ಟೇಬಲ್ ಗಳು ಗೊಂಬೆ ಕೂರಿಸಲು ಇರಲಿ. ಈ ಟೇಬಲ್ ಗೆ ಉತ್ತಮ ಬಟ್ಟೆಯನ್ನೂ ಹೊಂದಿಸಿಕೊಳ್ಳಿ. ರೇಷ್ಮೆ ಅಥವಾ ಸ್ವಲ್ಪ ಗಾಢ ಬಣ್ಣದ ಬಟ್ಟೆ ಟೇಬಲ್ ಹೊದಿಕೆಗೆ ಇರಲಿ.

3. ಪಟ್ಟದ ಗೊಂಬೆ: ಗೊಂಬೆ ಹಬ್ಬಕ್ಕೆ ಈ ಗೊಂಬೆಗಳು ಇರಲೇಬೇಕು. ಎತ್ತರದಲ್ಲಿ ಮತ್ತು ಮದ್ಯದಲ್ಲಿ ಪಟ್ಟದ ಗೊಂಬೆ (ಮದುವೆ ಗಂಡು ಮತ್ತು ಹೆಣ್ಣು) ಗೊಂಬೆಗಳಿರಲಿ. ವಿಷ್ಣುವಿನ ದಶಾವತಾರ, ರಾಮಾಯಣ ಪಾತ್ರಧಾರಿಗಳು ಮತ್ತು ಮಹಾಭಾರತದ ಪಾತ್ರಧಾರಿಗಳ ಗೊಂಬೆಗಳು ಮುಖ್ಯವಾಗಿ ಇರಬೇಕು.

4. ಹಳ್ಳಿ ಮತ್ತು ಕಾಡು: ಪೌರಾಣಿಕ ಗೊಂಬೆಯ ಹೊರತಾಗಿ ಹಳ್ಳಿಗಾಡಿನ ಮತ್ತು ಕಾಡಿನ ವಾತಾವರಣವನ್ನು ಗೊಂಬೆ ರೂಪದಲ್ಲಿ ಸೃಷ್ಟಿಸಬಹುದು. ಅನೇಕ ಪ್ರಾಣಿಗಳ ಮತ್ತು ವಿವಿಧ ಭಂಗಿಯ ಗೊಂಬೆಗಳನ್ನು ಅಲಂಕಾರಕ್ಕೆ ಬಳಸಬಹುದು.

5. ರಾಗಿ ಅಥವಾ ಸಾಸಿವೆ ತೆನೆ: ರಾಗಿ ಮತ್ತು ಸಾಸಿವೆ ಬೇಗ ಮೊಳಕೆ ಹೊಡೆದು ಚಿಗುರುವುದರಿಂದ ಈ ತೆನೆಯನ್ನು ಬರಿಸಿ ಟ್ರೇ ಗಳಲ್ಲಿ ಇಟ್ಟು ಹಸಿರು ವಾತಾವರಣ ಸೃಷ್ಟಿಸಬಹುದು. ಇದು ಗೊಂಬೆ ಹಬ್ಬಕ್ಕೆ ನೈಸರ್ಗಿಕ ಕಳೆ ನೀಡುತ್ತದೆ.

6. ದಸರಾ ಗೊಂಬೆ: ಮೈಸೂರಿನ ಚಿತ್ರಣ, ಆನೆ, ಚಾಮುಂಡೇಶ್ವರಿ ತೇರು, ಕುದುರೆ ಅನೇಕ ರೀತಿಯ ಗೊಂಬೆಗಳನ್ನು ಕೂರಿಸುವ ಚೆಂದದ ದೃಶ್ಯವನ್ನು ನಿಮ್ಮ ಮನೆಯಲ್ಲಿಯೇ ಸೃಷ್ಟಿಸಬಹುದು.

7. ಚನ್ನಪಟ್ಟಣದ ಗೊಂಬೆ: ಚನ್ನಪಟ್ಟಣದ ಗೊಂಬೆಗಳು ಎಲ್ಲೆಲ್ಲೂ ಲಭ್ಯವಿರುವುದರಿಂದ ವಿವಿಧ ದೃಶ್ಯಾವಳಿಯ ವಿವಿಧ ಗೊಂಬೆಗಳನ್ನು ಖರೀದಿಸಿದ ಗೊಂಬೆಹಬ್ಬಕ್ಕೆ ಇನ್ನಷ್ಟು ಕಳೆ ತರಬಹುದು.

8. ಮಣ್ಣಿನ ಗೊಂಬೆಗಳೊಂದಿಗೆ ಪ್ಲಾಸ್ಟಿಕ್, ಪೇಪರ್ ಗೊಂಬೆಗಳನ್ನೂ ಬಳಸಬಹುದು. ನಿಮ್ಮ ಮಕ್ಕಳು ಆಟವಾಡಲು ಬಳಸುವ ವಿವಿಧ ಆಟಸಾಮಾನುಗಳನ್ನೂ ಇಡಬಹುದು.

9. ಮಣ್ಣಿನ ಗೊಂಬೆಗಳು ಬೇಗ ಬಣ್ಣ ಕಳೆದುಕೊಳ್ಳುತ್ತವೆ. ಆದ್ದರಿಂದ 2 ದಿನದ ಮುನ್ನ ಆಯಿಲ್ ಪೇಂಟ್ ನಿಂದ ಬಣ್ಣ ಬಳಿದು ಜ್ಯೂಟ್ ಅಥವಾ ಪೇಪರ್ ಬ್ಯಾಗ್ ನಲ್ಲಿ ಸುತ್ತಿಟ್ಟರೆ ಬಣ್ಣ ಬಹುಬೇಗ ಮಾಸುವುದಿಲ್ಲ.

English summary
With the navratri festival just a days away (from 28th sep.2011 to 6th October 2011), we have a few ideas for decorating idols for doll festival, traditional “Gombe Habba” celebrated in Karnataka. Today, we will discuss on the navratri decoration ideas and tips for the doll festival. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X