ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರೆ: ಬನ್ನಿಮಂಟಪದ ವೈಮಾನಿಕಪ್ರದರ್ಶನ

By ವರದಿ: ಪ್ರಮೋದ್, ಮೈಸೂರು
|
Google Oneindia Kannada News

Mig 21 aircrafts to fly in dasara air showಮೈಸೂರು, ಅ. 3: ದಸರಾ ಮಹೋತ್ಸವ 2008 ರ ವೈಮಾನಿಕ ಪ್ರದರ್ಶನವನ್ನು ಸಹ ಸತತವಾಗಿ ಐದನೇ ಬಾರಿಗೆ ಮೈಸೂರಿನ ಬನ್ನಿಮಂಟಪ ಕವಾಯಿತು ಮೈದಾನದಲ್ಲಿ ಅ.5 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಪ್ರದರ್ಶನವನ್ನು ಅ.3 ರಂದು ನಡೆಸಲಾಗುತ್ತದೆ. ಈ ನಡುವೆ ಗುರುವಾರದಿಂದ ಮೈಸೂರು ಏರೋ ಸ್ಪೋರ್ಟ್ಸ್ ನವರು ದಸರಾ ಪ್ರಯುಕ್ತ ಮೈಕ್ರೋಲೈಟ್ ವಿಮಾನ ಹಾರಾಟ ವ್ಯವಸ್ಥೆಯನ್ನು ಮಾಡಿದ್ದಾರೆ ಇದು ಸಾರ್ವಜನಿಕರಿಗೆ ಮುಕ್ತವಾಗಿದ್ದು ಸಚಿವೆ ಶೋಭಾ ಕರಂದ್ಲಾಜೆ ಅವರು ಈ ವ್ಯವಸ್ಥೆಗೆ ಚಾಲನೆ ನೀಡಿದರು.

ವೈಮಾನಿಕ ಪ್ರದರ್ಶನ ಕುರಿತು ಒಂದು ಉಪಸಮಿತಿಯನ್ನು ರಚಿಸಿದ್ದು ಅಧ್ಯಕ್ಷರನ್ನಾಗಿ ಜಿ.ಪ್ರತಾಪ್, ಉಪಾಧ್ಯಕ್ಷರುಗಳಾಗಿ ಗಣೇಶ್ ಮತ್ತು ಗಿರಿಧರ್, ಜಿಲ್ಲಾಧಿಕಾರಿಗಳ ಕೇಂದ್ರಸ್ಥಾನ ಸಹಾಯಕ ಪಾಲಯ್ಯ ಕಾರ್ಯಾಧ್ಯಕ್ಷರಾಗಿ ಜಿಲ್ಲಾ ನೊಂದಣಾಧಿಕಾರಿಯವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿಯೂ ನೇಮಕ ಮಾಡಲಾಗಿದೆ.

ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ವಾಯುದಳದ ಹೆಮ್ಮೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ವಿವಿಧ ರೀತಿಯ ವೈಮಾನಿಕ ಚಮತ್ಕಾರಗಳ ಪ್ರದರ್ಶನ ನೀಡಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಆದರ್ಶ ರವರು ರಿಮೋಟ್ ಕಂಟ್ರೋಲ್ ಹೊಂದಿರುವ ತಮ್ಮ ಮಾಡೆಲ್ ಹೆಲಿಕಾಪ್ಟರ್ ಗಳೊಂದಿಗೆ ವಿವಿಧ ರೀತಿಯ ಪ್ರದರ್ಶನಗಳನ್ನು ಜನರ ಮುಂದೆ ಪ್ರದರ್ಶನ ನಡೆಸಿಕೊಡುವರು.

ವಾಯುಸೇನೆಯ ಹಿರಿಯ ಅಧಿಕಾರಿಗಳು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಕುಮಾರಿ ಶೋಭಾ ಕರಂದ್ಲಾಜೆ, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಳ್ಳುವ ಕಾರ್ಯಕ್ರಮದಲ್ಲಿ ಮೊದಲಿಗೆ ಆದರ್ಶರವರು ತಮ್ಮ ರೇಡಿಯೋ ರಿಮೋಟ್ ನಿಯಂತ್ರಿಕ ಮಾದರಿ ಹೆಲಿಕಾಪ್ಟರ್ ಹಾಗೂ ಸೂರ್ಯಕಿರಣ್ ಮಾದರಿಯ ವಿಮಾನದ ಮೂಲಕ ಇಡೀ ಮೈದಾನದಲ್ಲಿ ವಿವಿಧ ರೀತಿಯ ಚಮತ್ಕಾರಗಳನ್ನು ನಡೆಸಿ ಕೊಡಲಿದ್ದು, ನಂತರ ಎನ್.ಸಿ.ಸಿ. ಯವರಿಂದ ಮಾಡೆಲ್ ಲಘು ವಿಮಾನಗಳ ಮೂಲಕ ವೈಮಾನಿಕ ಪ್ರದರ್ಶನ ನಡೆಯುತ್ತದೆ. ಈ ಕಾರ್ಯಕ್ರಮದ ನಂತರ ಭಾರತೀಯ ವಾಯುಪಡೆಯ ಕೆಳಕಂಡ ವಿಮಾನಗಳಿಂದ ವೈಮಾನಿಕ ಪ್ರದರ್ಶನ ನಡೆಯುತ್ತದೆ.

ಚೇತಕ್ ಹೆಲಿಕಾಪ್ಟರ್‌ಗಳು
ಮೂಲತಃ ಪ್ರಾನ್ಸ್ ದೇಶದ ತಂತ್ರಜ್ಞಾನದಲ್ಲಿ ಬೆಂಗಳೂರಿನ ಹೆಚ್.ಎ.ಎಲ್. ನಲ್ಲಿನಿರ್ಮಾಣಗೊಂಡಿರುವ ಸುಧಾರಿತ ಲಘು ಹೆಲಿಕಾಪ್ಟರ್ ಆಗಿದ್ದು ತರಬೇತಿ ಮತ್ತು ಲಘು ಸರಕು ಸಾಗಾಣಿಕೆಗೆ ಬಳಸಲಾಗುತ್ತದೆ. 210 ಕಿ.ಮೀ. ಪ್ರತಿ ಗಂಟೆಗೆ ಹಾರುವ ಸಾಮರ್ಥ್ಯ ಹೊಂದಿರುತ್ತದೆ. ಈ ವೈಮಾನಿಕ ಪ್ರದರ್ಶನದಲ್ಲಿ ಎರಡು ಚೇತಕ್ ಹೆಲಿಕಾಪ್ಟರ್‌ಗಳು ಹೂದಳಗಳನ್ನು ಮುಖ್ಯ ಅತಿಥಿಗಳು ಹಾಗೂ ಪ್ರೇಕ್ಷಕರ ಮೇಲೆ ಆಗಸದಿಂದ ಚೆಲ್ಲಿ ಮೈದಾನದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಾಗಿ ಕೆಳಗೆ ನಿಲುಗಡೆ ಗೊಳಿಸಲಾಗುತ್ತದೆ.

ಹೆಚ್.ಪಿ.ಟಿ-32: ಭಾರತದ ಬಹುಪಯೋಗಿ ಹೆಚ್.ಪಿ.ಟಿ-32 ವಿಮಾನವು ಪ್ರಾಥಮಿಕವಾಗಿ ಪೈಲೆಟ್‌ಗಳ ತರಬೇತಿ ಹಾಗೂ ಇತರೆ ಉಪಯೋಗಕ್ಕಾಗಿ ಬಳಸಲಾಗುತ್ತದೆ.

ಎಂಐ-8: ಭಾರತದ ವಾಯುಪಡೆಯಲ್ಲಿ ಬಹುದಿನಗಳಿಂದ ಉಪಯೋಗಿಸಲಾಗುತ್ತಿದ್ದು, ವಾಯುಪಡೆಯ ಹೆಲಿಕಾಪ್ಟರ್ ದಳದ ಮುಖ್ಯ ಹೆಲಿಕಾಪ್ಟರ್ ಆಗಿರುತ್ತದೆ. ಪ್ರತಿ ಗಂಟೆಗೆ 275 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಮೂಲತಃ ರಷ್ಯಾ ದೇಶದಲ್ಲಿ ತಯಾರಿಸಲಾಗುತ್ತಿದೆ.

ಹೆಚ್.ಜೆ.ಟಿ.-16: ಎ) ಹೆಚ್.ಜೆ.ಟಿ. 16 ಎಂಬ ತರಬೇತಿ ವಿಮಾನವಾಗಿದ್ದು. ಎಂ.ಕೆ. II ವಿಮಾನದ ಈಗಿನ ಅವತಾರಗಳು .ಇದು ಇಬ್ಬರು ಕೂರುವ ವಿಮಾನವಿದ್ದು ಇದರ ಗರಿಷ್ಠ ವೇಗ ಗಂಟೆಗೆ 304 ಕಿ.ಮೀ.ಗಳು.

ಎಂಐ-8: ಹೆಲಿಕಾಪ್ಟರ್‌ನಿಂದ ಕಮಾಂಡೊಗಳು ಹಗ್ಗದ ನೆರವಿನೊಂದಿಗೆ ಮೈದಾನದಲ್ಲಿ ಇಳಿದು ಯುದ್ಧ ಕಾಲದಲ್ಲಿ ಶತ್ರುಗಳ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಅಣುಕು ಪ್ರದರ್ಶನವನ್ನು ನೀಡಲಿದ್ದಾರೆ.

ಜಾಗ್ವರ್: ಇದೊಂದು Deep penetration Fighter Bomber ಮತ್ತು British Aerospace ಮತ್ತು Franceನಲ್ಲಿ ಮೊದಲು ತಯಾರು ಮಾಡಲ್ಪಟ್ಟ ವಿಮಾನವನ್ನು ಈಗ ಹೆಚ್.ಎ.ಎಲ್. ತಯಾರು ಮಾಡುತ್ತಿದೆ. 1981 ರಲ್ಲಿ 40 ಜಾಗ್ವಾರ್ ವಿಮಾನಗಳನ್ನು British Aerospace ಸಂಸ್ಥೆಯು ಭಾರತೀಯ ವಾಯುಪಡೆಗೆ ಕೊಟ್ಟಿತು. ಇದು 4500 ಕೆ.ಜಿ.ಯಷ್ಟು ಭಾರ ಹೊರಬಲ್ಲದು, 150 ರೌಂಡ್ ಇರುವ ಎರಡು ADEN ಗನ್ನುಗಳು ಇದರಲ್ಲಿ ಇವೆ. ರಾತ್ರಿ ಹೊತ್ತಿನಲ್ಲಿ Laser Guided Bombsನ್ನು ಉಪಯೋಗಿಸುತ್ತದೆ. Anti Shipping Missiles ಇದರಲ್ಲಿ ಇದ್ದು, ಇದರ ವೇಗ ಗಂಟೆಗೆ 1300 ಕಿ.ಮೀಗಳು.

ಮಿಗ್-21: ಫಿಷ್ ಬೆಡ್ ಎಂಬುದಾಗಿ NATOದಿಂದಲೂ, ವಿಕ್ರಮ್ ಎಂದು ಭಾರತದಲ್ಲಿ ಕರೆಯಲ್ಪಡುವ ಮಿಗ್-21ನ್ನು ಹೆಚ್.ಎ.ಎಲ್. ನ ನಾಸಿಕ್ ವಿಭಾಗದಲ್ಲಿ ತಯಾರಿಸಲಾಗುತ್ತಿದೆ. ಸೀಟಿನ ಬಹು ಪಾತ್ರೀಯ ಈ ವಿಮಾನವನ್ನು 1965 ಮತ್ತು 1971 ರ ಯುದ್ಧಗಳಲ್ಲಿ ಉಪಯೋಗಿಸಲಾಗಿದೆ. ಈ ವಿಮಾನಗಳನ್ನು ಹೊಂದಿರುವ 16 ಸ್ಕ್ವಾಡ್ರನ್‌ಗಳು ಭಾರತೀಯ ವಾಯುಪಡೆಯ ಬೆನ್ನೆಲುಬು. ಇವುಗಳನ್ನು ಹೋರಾಟದ ಹಾರಾಟದಲ್ಲಿ ಮತ್ತು ವಿವಿಧ ರೀತಿಯ tacticsಗಳ ತರಬೇತಿ ನೀಡಲು ಉಪಯೋಗಿಸುತ್ತಾರೆ. ಹೆಚ್ಚಿನ ಹೋರಾಟ ಸಾಮರ್ಥ್ಯ ಮತ್ತು ಕವಾಯಿತು ಸಾಧ್ಯತೆಗಳಿಂದ ಇದರ ಮೌಲ್ಯ ಹೆಚ್ಚು ಧ್ವನಿಯ ದುಪ್ಪಟ್ಟು ವೇಗದಲ್ಲಿ ಇದು ಹಾರಾಡಬಲ್ಲುದು. ಇದು 50,000 ಅಡಿಗಳ ಎತ್ತರದಲ್ಲಿ ಹಾರಬಲ್ಲದು.

Small Boy Formation (ಸಣ್ಣ ಹುಡುಗನಾಕೃತಿ ರಚನೆ)
ಜಗತ್ತಿನ ಎಲ್ಲಾ ವಾಯುಪಡೆಗಳೂ ಆಕೃತಿ-ರಚನಾ ಹಾರಾಟದಂತಹ ಜಟಿಲ ಕಲೆಯಲ್ಲಿ ತಮ್ಮ ಪೈಲೆಟ್‌ಗಳನ್ನು ತರಬೇತಿಗೊಳಿಸಿರುತ್ತಾರೆ. ಇಂಥ ಹಾರಾಟಗಳಲ್ಲಿ ಎರಡು ವಿಮಾನಗಳ ನಡುವೆ ಇರುವ ಅಂತರ ಕೆಲವೇ ಅಡಿಗಳಷ್ಟಿದ್ದು, ಇದು ಪೈಲೆಟ್‌ಗಳ ಹಾರಾಟದ ಕುಶಲತೆ ಮತ್ತು ಸಾಮರ್ಥ್ಯವನ್ನು ಒರೆಗೆ ಹೆಚ್ಚುವಂತೆ ಇರುತ್ತದೆ. ಈ ಪ್ರದರ್ಶನದಲ್ಲಿ ಭಾಗವಹಿಸುವ ವಿಮಾನಗಳನ್ನು ಹಾರಾಟದ ಮತ್ತು ಸಾರಿಗೆ ಉದ್ದೇಶಕ್ಕಾಗಿ ಉಪಯೋಗಿಸಲಾಗುವುದು. ಈ ಪ್ರದರ್ಶನದಲ್ಲಿ ಸಣ್ಣ ಹುಡುಗನಾಕೃತಿ (Small Boy Formation) ಎಂಬ ಒಂದು ರಚನೆಯನ್ನು ಪ್ರದರ್ಶಿಸುತ್ತಾರೆ.

ಬಿ) ಈ ರಚನೆಯಲ್ಲಿ ಎಎನ್-32 ವಿಮಾನವನ್ನು ಮುಂಭಾಗದಲ್ಲಿ ಮತ್ತು ಎರಡು ಡಾರ್ನಿಯರ್-228 ಅದರ ಹಿಂದೆ ಎಡ ಬಲ ಗಳಲ್ಲಿ ಸಮಾನಂತರವಾಗಿ ಹಾರಾಟ ನಡೆಸುತ್ತವೆ.

ಎಎನ್-32: ಅವಳಿ ಇಂಜಿನ್‌ಗಳಿರುವ Antinov 32 ವಿಮಾನ ಇದು ಭಾರತೀಯ ವಾಯುಪಡೆಯ ಸಾರಿಗೆ ಕಾರ್ಯಕ್ರಮಗಳ ಬೆನ್ನೆಲುಬು. ಎಎನ್-32 ರ ಟೇಕ್ ಆಫ್ ತೂಕ 37 ಟನ್, ತಾಳಿಕ 41/2 ತಾಸುಗಳು ಮತ್ತು ದೂರ 1300 ಕಿ.ಮೀ.ಗಳು ಇದರ ಗರಿಷ್ಠ ವೇಗ ಗಂಟೆಗೆ 530 ಕಿ.ಮೀ.ಗಳು ಇದು 50 ಪ್ರಯಾಣಿಕರನ್ನೂ 42 Paratroopersಗಳನ್ನು 24 Stretchers ಮತ್ತು ವೈದ್ಯಕೀಯ ಸಹಾಯಕರನ್ನು ಕೊಂಡೊಯ್ಯಲು ಬಳಸುತ್ತಾರೆ.

DOR 228: ಎ) 1987ರಲ್ಲಿ ಇದನ್ನು ಐ.ಎ.ಎಫ್.ಗೆ ಸೇರಿಸಲಾಯಿತು. ಈ ಹಗುರ ವಿಮಾನ Logistics Air Support ಹಾಗೂ ಸ್ಟಾಫ್ ಅನ್ನು ಸಾಗಿಸುವ ಕೆಲಸ ಮಾಡುತ್ತದೆ.
ಬಿ) ಇದರ ತಾಳಿಕೆ 61/2 ತಾಸುಗಳು ಮತ್ತು ದೂರ 2600 ಕಿ.ಮೀ.ಗಳು ಇದ್ದು 19 ಪ್ರಯಾಣಿಕರನ್ನು ಮತ್ತು 21 Paratroopersಗಳನ್ನು ಸಾಗಿಸಬಲ್ಲದು.
7000 ಅಡಿ ಎತ್ತರದಿಂದ ಎಂಐ-8 ಹೆಲಿಕಾಪ್ಟರ್‌ಗಳ ಮೂಲಕ ಆಕಾಶದಿಂದ Air Devils ತಂಡದವರು ಪ್ಯಾರ್‍ಯಾಚ್ಯೂಟ್ ಮೂಲಕ ಜಿಗಿಯುವ ಪ್ರದರ್ಶನವನ್ನು ನಡೆಸಿಕೊಡಲಿರುತ್ತಾರೆ.

ನಂತರ ಭಾರತ ಸೇನೆಯ ಬೆಂಗಳೂರಿನ ಮಿಲಿಟರಿ ಪೋಲೀಸ್ ಸೆಂಟರ್ ನ Shwet Ashwa 37 ಸದಸ್ಯರು ಮೋಟಾರು ಬೈಕ್‌ಗಳ ಮೈನವೀರೇಳಿಸುವ ಪ್ರದರ್ಶನವನ್ನು ನೀಡಲಿದ್ದಾರೆ.

ಈ ಹಿಂದೆ ನಡೆದ ವೈಮಾನಿಕ ಪ್ರದರ್ಶನ ಕಾರ್ಯಕ್ರಮವು ಸಾವಿರಾರು ಸಂಖ್ಯೆಯಲ್ಲಿ ವೀಕ್ಷಿಸಿ ಯಶಸ್ವಿಗೊಳಿಸಿದ್ದು ಈ ಬಾರಿಯ ಕಾರ್ಯಕ್ರಮದಲ್ಲೂ ಸಹ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ.

ಸಾರ್ವಜನಿಕರಲ್ಲಿ ವಿಶೇಷ ಸೂಚನೆ: ಪ್ರದರ್ಶನಕ್ಕೆ ಆಗಮಿಸುವಂತಹ ಸಾರ್ವಜನಿಕರು ಯಾವುದೇ ರೀತಿಯ ತಿಂಡಿ ತಿನಿಸುಗಳನ್ನು ತರದಂತೆ ಮನವಿ ಮಾಡಲಾಗಿದೆ ಈ ಬಾರಿಯ ಏರ್‌ಷೋ ಕಾರ್ಯಕ್ರಮ3 ಗಂಟೆಯ ಅವಧಿಯದಾಗಿದೆ ಅದಕ್ಕಾಗಿ ದೂಳು ಮೇಲೇಳದಂತೆ ಅಳೆದ ಒಂದು ವಾರದಿಂದ ಪ್ರತಿದಿನ ಒಂದು ಲಾರಿ ಸಗಣಿ ಹಾಕಿ ಮೈದಾನ ಸಿದ್ಧ ಪಡಿಸಿದೆ. ವಾಯು ದಳದ ತಂಡದಿಂದ ಮೋಟಾರ್ ಬೈಕ್ ಷೋ ಸಹ ಅಕ್ಟೋಬರ್ 5 ರಂದು ಅದೇ ಸ್ಥಳದಲ್ಲಿ ಸಡೆಯಲಿದೆ. ಬೈಕ್ ಷೋ ಬೆಳಗಿನ ಹೋತ್ತು ನಡೆಯುತ್ತಿರುವುದು ಇದೇ ಪ್ರಥಮ ಬಾರಿ ಎಂದು ಸಮಿತಿಯ ಉಪಾಧ್ಯಕ್ಷ ಗಣೇಶ್ ತಿಳಿಸಿದ್ದಾರೆ.

ಪೂರಕ ಓದಿಗೆ:

ದಸರೆಯಲ್ಲಿ ಕವಿಗೋಷ್ಠಿ, ಹಾಸ್ಯಮೇಳ ಶುರು
ಹಿರಿಯನಟ ಅಶ್ವಥ್ ಗೆ ದಸರೆಯಲ್ಲಿ ಅವಮಾನ
ದಸರಾ ಸಿಹಿ ಸ್ಪೆಷಲ್: ಗಸಗಸೆ ಪಾಯಸ
ಅಂದಿನ ಸಂಭ್ರಮಕ್ಕೆ ಸರಿಸಾಟಿಯಿಲ್ಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X