ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾಗೆ ಸಿದ್ಧಗಂಗೆ ಶ್ರಿಗಳಿಂದ ವಿದ್ಯುಕ್ತ ಚಾಲನೆ

By Staff
|
Google Oneindia Kannada News

ಮೈಸೂರು, ಸೆ. 30 : ಐತಿಹಾಸಿಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ನಡೆದಾಡುವ ದೇವರು ಹಾಗೂ ತ್ರಿವಿಧ ದಾಸೋಹಿ ತುಮಕೂರಿನ ಶ್ರೀ ಸಿದ್ಧಗಂಗಾ ಸಂಸ್ಥಾನಮಠದ ಶಿವಕುಮಾರ ಸ್ವಾಮಿಗಳು ವಿದ್ಯುಕ್ತ ಚಾಲನೆ ನೀಡಿದರು.

ಉದ್ಘಾಟನೆ ನಂತರ ಆಶೀರ್ವಚನ ನೀಡಿದ ಶೀಗಳು, ದಸರಾ ಹಬ್ಬ ನಡೆದು ಬಂದ ಹಾದಿಯನ್ನು ನೆನಪಿಸಿದರು. ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ಶ್ರೀಗಳು ಕರೆ ನೀಡಿದರು. ಶ್ರೀ ಶಿವಕುಮಾರ ಸ್ವಾಮಿಗಳು ಉದ್ಘಾಟನೆಗೂ ಮುಂಚೆ ತಾಯಿ ಚಾಮುಂಡೇಶ್ವರಿ ದೇವಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಾಡಹಬ್ಬದ ಕಾರ್ಯಕ್ರಮ ಚಾಲನೆ ನೀಡಿದರು.

ಇದಕ್ಕೂಮುನ್ನ ಸಿದ್ಧಗಂಗಾಶ್ರೀಗಳಿಗೆ ಶಾಲು ಹೊದಿಸಿ ಆಶೀರ್ವಾದ ಬೇಡಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಸ್ವಾಗತ ಭಾಷಣ ಮಾಡಿದರು. ರಾಜ್ಯ ಸರ್ಕಾರ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬವನ್ನು 'ನಾಡಹಬ್ಬ' ಎಂದು ಘೋಷಣೆ ಮಾಡಲಾಯಿತು. ಉಗ್ರರ ಭೀತಿ ಹಿನ್ನೆಲೆಯಲ್ಲಿ ಜಗದ್ವಿಖ್ಯಾತ ಅರಮನೆಗೆ ಸಂಸತ್ ಮಾದರಿಯಲ್ಲಿ ಭದ್ರತೆ ಒದಗಿಸಲಾಗಿದೆ ಎನ್ನುವುದು ವಿಶೇಷವಾಗಿದೆ.


ದಸರಾ ಹಬ್ಬದ ಕೊಡುಗೆ : ಮೈಸೂರಿಗೆ 100 ಕೋ.ರು. ಬಿಡುಗಡೆ

ಮೈಸೂರು ನಗರದ ಅಭಿವೃದ್ಧಿಗೆ ಪ್ರತಿ ವರ್ಷ 100 ಕೋಟಿ. ರುಪಾಯಿ ಅನುದಾನ ನೀಡಲಾಗುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ಮೈಸೂರು ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲು ರಾಜ್ಯ ತೀರ್ಮಾನ ಮಾಡಿದೆ. ನಾಡಹಬ್ಬದ ಸಂಭ್ರಮಕ್ಕೆ ರಾಜ್ಯ ಸರ್ಕಾರ 5 ಕೋಟಿ ರು.ಗಳಿಂದ 10 ಕೋಟಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದಸರಾ ಹಬ್ಬದ ಭವ್ಯವಾಗಿ ಆಚರಿಸಲು ಇನ್ನಷ್ಟು ಆರ್ಥಿಕ ಸಹಾಯ ನೀಡಲು ಸಿದ್ಧ ಎಂದು ಪ್ರಕಟಿಸಿದರು.

ಮೈಸೂರು ದಸರಾ ಹಬ್ಬವನ್ನು ಕೆಲ ಕಿಡಿಗೇಡಿಗಳು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನನ್ನ ಮೇಲೆ ಸೇಡಿದ್ದರೆ ತೀರಿಸಿಕೊಳ್ಳಿ, ಭವ್ಯವಾದ ಕಾರ್ಯಕ್ರಮಕ್ಕೆ ಭಂಗ ತರುವ ಕೆಲಸ ಕೈಹಾಕುವುದು ನ್ಯಾಯವೇ ಎಂದು ಅವರು ಪ್ರಶ್ನಿಸಿದರು. ಅಂತಹ ದುಷ್ಟ ಶಕ್ತಿಗಳಿಗೆ ಚಾಮುಂಡೇಶ್ವರಿ ನೋಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ಸಹಕಾರ ಅಗತ್ಯ ಎಂದ ಯಡಿಯೂರಪ್ಪ, ಎಲ್ಲ ಸಂದರ್ಭದಲ್ಲಿ ಟೀಕೆ ಟಿಪ್ಪಣೆಗಳು ಮಾಡುವುದು ಎಷ್ಟು ಸರಿ, ಪ್ರತಿಪಕ್ಷಗಳ ನಾಯಕರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.

'ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ' ಎನ್ನುವ ಮಾತೆ ಅಕ್ಕಮಾಹಾದೇವಿಯ ವಚನ ಹೇಳುವ ಮೂಲಕ ತರಾಟೆಗೆ ತೆಗೆದುಕೊಂಡು ನಮಗೆ ಅಧಿಕಾರ ನೀಡಿದ ಆರು ಕೋಟಿ ಜನಕ್ಕೆ ಹೆದರುವೆ, ಆದರೆ ನಾಡಿನಲ್ಲಿರುವ ಮೃಗಗಳಿಗೆ ಅಂಜುವುದಿಲ್ಲ ಎಂದು ತೀಕ್ಷ್ಣವಾಗಿ ಅವರನ್ನು ವಿರೋಧಿಸುವ ಕೆಲ ವಿರೋಧಿ ಪಕ್ಷಗಳ ನಾಯಕರಿಗೆ ಉತ್ತರ ನೀಡಿದರು. ಇತ್ತೀಚೆಗೆ ಗರುಡಮಾಲ್ ಸಂಕೀರ್ಣದ ವಿಷಯದಲ್ಲಿ ಯಡಿಯೂರಪ್ಪ 50 ಕೋಟಿ ರು.ಗಳನ್ನು ಪಡೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಸತ್ಯನಾರಾಯಣ ಅಧ್ಯಕ್ಷೀಯ ಭಾಷಣ ಮಾಡಿದರು.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:

ದಸರಾಗೆ ವಿಶೇಷ ಪ್ಯಾಕೇಜ್
ಅರಮನೆಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ
ಮಾತಾಯಿ ಚರಣಕ್ಕೆ ವಂದಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X