ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಅರಮನೆಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ

By Staff
|
Google Oneindia Kannada News

ಮೈಸೂರು, ಸೆ.29: ಉಗ್ರರ ದಾಳಿಯನ್ನು ತಡೆಯಲು ಮೈಸೂರು ಅರಮನೆಗೆ ಸಂಸತ್ ಭವನದ ಮಾದರಿಯಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಿಲ್ಲಾ ಉತ್ಸುವಾರಿ ಸಚಿವೆ ಶೋಭಾ ಕರಂದ್ಲಾಜೆ, ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟ್ ಡ್ (ಇಸಿಐಎಸ್) ರು.200 ಕೋಟಿ ವೆಚ್ಚದಲ್ಲಿ ಸಂಸತ್ ಭವನಕ್ಕೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದೆ. ಇದೇ ರೀತಿಯ ಭದ್ರತಾ ವ್ಯವಸ್ಥೆಯನ್ನು ಮೈಸೂರು ಅರಮನೆಗೂ ಒದಗಿಸಲಾಗಿದೆ ಎಂದರು.

ಉಗ್ರರ ದಾಳಿಯನ್ನು ತಡೆಯಲು ರು. 2.53 ಕೋಟಿ ವೆಚ್ಚದಲ್ಲಿ ಮೈಸೂರು ಅರಮನೆಗೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೇರೆ ಬೇರೆ ಪ್ರವೇಶ ದ್ವಾರಗಳ ಮೂಲಕ ಮೈಸೂರು ಅರಮನೆಗೆ ಬರುವ ವೀಕ್ಷಕರ ಮೇಲೆ ನಿಗಾ ಇಡಲು ನಿಯಂತ್ರಣ ಕೊಠಡಿಯನ್ನು ಏರ್ಪಡಿಸಲಾಗಿದೆ. ಹಾಗೆಯೇ ಪಾರಂಪರಿಕ ಮಹತ್ವವುಳ್ಳ ಮೈಸೂರು ಅರಮನೆಗೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ ಎಂದು ಕರಂದ್ಲಾಜೆ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:

ಮಾತಾಯಿ ಚರಣಕ್ಕೆ ವಂದಿಸಿ, ದಸರೆ ಆಚರಿಸಿ
ಮೈಸೂರು ದಸರಾ ಉತ್ಸವಕ್ಕೆ ಸಿನಿಮಾ ಥಳಕು
ಮೈಸೂರು ದಸರಾಗೆ ಗಜರಾಜನ ಆಗಮನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X