• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ನೋಡಲು ದಸರೆ ನಿಮಗೊಂದು ನೆಪವಾಗಲಿ !

By Staff
|

ಮೈಸೂರು ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ನಿಮ್ಮ ಜಂಬೂಸವಾರಿ ಹೊರಡಲಿ

ಸಾಮಾನ್ಯವಾಗಿ ಜನರಿಗೆ ದಸರಾ ಎಂದೊಡನೆ ನೆನಪಾಗುವುದು ದೀಪಾಲಕೃತ ಅರಮನೆ, ಜಂಬೂಸವಾರಿ, ಪಂಜಿನ ಕವಾಯಿತು ಮಾತ್ರ. ಇದರ ಜೊತೆ ಜೊತೆಗೆ ನವರಾತ್ರಿಯಲ್ಲಿ ದಸರೆಗೆ ಬಂದವರು ಬೇರೆ ಬೇರೆ ಸ್ಥಳಗಳನ್ನು ನೋಡಬಹುದು.

ಅರಮನೆ ಆಯುಧಪೂಜೆ, ವಿಜಯದಶಮಿ ದಿನಗಳನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಬೆಳಗಿನಿಂದ ಸಂಜೆಯವರೆಗೆ ತೆರೆದಿರುತ್ತದೆ. ನವರಾತ್ರಿಯಲ್ಲಿ ಸಿಂಹಾಸನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ. ಪ್ರತಿದಿನ ಸಂಜೆ ವಿಶೇಷ ದೀಪಾಲಂಕಾರ, ಸಂಗೀತ ಕಾರ್ಯಕ್ರಮಗಳು ಇರುತ್ತವೆ. ಅರಮನೆಯ ಕೋಟೆಗೆ ಹೊಂದಿಕೊಂಡಂತೆ ಹಲವಾರು ದೇವಸ್ಥಾನಗಳಿವೆ. ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿರುವ ಆನೆಗಳು ಜಯಮಾರ್ತಾಂಡ ದ್ವಾರದ ಕಡೆ ಬೀಡುಬಿಟ್ಟಿರುತ್ತವೆ.

ವಸ್ತುಪ್ರದರ್ಶನ : ಜಂಬೂಸವಾರಿಗೆ ಮೊದಲು ಎಲ್ಲಾ ಮಳಿಗೆಗಳು ಸಂಪೂರ್ಣವಾಗಿ ಸಿದ್ಧವಾಗಿರುವುದಿಲ್ಲ. ಅರಮನೆಯ ಎದುರಿಗಿರುವ ಇಲ್ಲಿ ಸಂಜೆಯ ವೇಳೆ ಬಣ್ಣ ಬಣ್ಣದ ದೀಪಗಳಿಂದ ಪುಟಿಯುವ ಕಾರಂಜಿಗಳು, ಮಕ್ಕಳ ಮನರಂಜನಾ ಉದ್ಯಾನಗಳು, ಸರಕಾರಿ ಮತ್ತು ಖಾಸಗಿ ಮಳಿಗೆಗಳು ಇರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಸಂತ ಫಿಲೋಮಿನಾ ಚರ್ಚ್‌: ದೇಶದ ಎತ್ತರದ ಶಿಖರ ಗೋಪುರ ಹೊಂದಿರುವ ಚರ್ಚ್‌ಗಳಲ್ಲಿ ಒಂದು.

ಮೈಸೂರಿಗೆ ಸಮೀಪದಲ್ಲಿ ತಲಕಾಡು, ಸೋಮನಾಥಪುರ, ಶಿವನಸಮುದ್ರಗಳಿವೆ. ಮಕ್ಕಳ ಜೊತೆ ಬಂದರೆ ಬಂಡೀಪುರ, ನಾಗರಹೊಳೆಗೂ ಹೋಗಿ ಬರಬಹುದು. ಸಂಜೆಯ ವೇಳೆ ಬಿಡುವಿದ್ದಲ್ಲಿ ಪುರಭವನ, ಕಲಾಮಂದಿರ, ಜಗನ್ಮೋಹಿನಿ ಅರಮನೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಬಹುದು.

ಜಗನ್ಮೋಹನ ಅರಮನೆ : ವಿಶಿಷ್ಟವಾಗಿ ನಿರ್ಮಿಸಲಾಗಿರುವ ಈಗ ಕಲಾ ಗ್ಯಾಲರಿಯಾಗಿರುವ ಜಗನ್ಮೋಹನ ಅರಮನೆಯಲ್ಲಿ ರಾಜರ ಕಾಲದ ಕಲಾಕೃತಿಗಳನ್ನು ನೋಡಬಹುದು.

ಚಾಮುಂಡಿಬೆಟ್ಟ : ಹತ್ತಲು ಶಕ್ತಿಯಿರುವವರಿಗೆ ಹಾಗೂ ವೃದ್ಧರಿಗೂ ಅನುಕೂಲವಿರುವ ಚಾಮುಂಡಿ ಬೆಟ್ಟ,ದಲ್ಲಿ ಶ್ರೀ ಚಾಮುಂಡೆಶ್ವರಿ ದೇವಸ್ಥಾನ, ಬೃಹತ್‌ ಗಾತ್ರದ ನಂದಿ ವಿಗ್ರಹ, ಮಹಿಷಾಸುರನ ಪ್ರತಿಮೆ ನೋಡಬಹುದು.

ಚಾಮರಾಜೇಂದ್ರ ಮೃಗಾಲಯ : ಕಾಡನ್ನೇ ಕಣ್ಣಮುಂದೆ ತೆರೆದಿಡುವ ಚಾಮರಾಜೇಂದ್ರ ಪ್ರಾಣಿಸಂಗ್ರಹಾಲಯದಲ್ಲಿ ದೇಶವಿದೇಶಗಳ ನಾನಾ ತಳಿಯ ಪ್ರಾಣಿ-ಪಕ್ಷಿಗಳಿವೆ.

ಬೃಂದಾವನದ : ಜೊತೆಗೆ ಕರ್ನಾಟಕದ ಜೀವನದಿ ಕಾವೇರಿ ನೀರು ಸಂಗ್ರಹಿಸುವ ಕೆ.ಆರ್‌.ಎಸ್‌. ಜಲಾಶಯದ ಹಿಂಬದಿಯಲ್ಲಿರುವ ವಿಶ್ವವಿಖ್ಯಾತ ಬೃಂದಾವನ, ನಲಿದಾಡಲು ಬಣ್ಣದ ಕಾರಂಜಿಗಳು, ಬಣ್ಣ ಬಣ್ಣದ ಹೂಗಳು, ಪುಟಾಣಿ ದೋಣಿ, ವಿಶೇಷ ವಾಸ್ತು ಶಾಸ್ತ್ರದಿಂದ ನಿರ್ಮಿಸಲಾಗಿರುವ ಉಚ್ಚ ಮಟ್ಟದ ಸೌಕರ್ಯಗಳಿರುವ ಲಲಿತಮಹಲ್‌ ಹೋಟೆಲ್‌ ಇದೆ.

ರಂಗನತಿಟ್ಟು ಪಕ್ಷಿಧಾಮ : ದೇಶ-ವಿದೇಶಗಳ ಪಕ್ಷಿಗಳ ಧಾಮ ರಂಗನತಿಟ್ಟು , ಮೈಸೂರು ಹುಲಿ ಟಿಪ್ಪು ಸುಲ್ತಾನನ ಇತಿಹಾಸ ತೆರದಿಡುವ ಕೋಟೆ, ದೇವಸ್ಥಾನಗಳ ನೆಲೆ ಶ್ರೀರಂಗಪಟ್ಟಣ, ಶ್ರೀರಂಗನಾಥನನ್ನು ಪ್ರದಕ್ಷಣೆ ಹಾಕಿ ಹರಿವ ಕಾವೇರಿ, ಮೈಸೂರಿನಿಂದ ಕೇವಲ 20 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಬರುತ್ತವೆ.

ಇನ್ನೊಂದು ತುದಿಗೆ ದಕ್ಷಿಣ ಕಾಶಿ ಎಂದೇ ಹೆಸರಾದ ನಂಜನಗೂಡಿನ ನಂಜುಂಡೇಶ್ವರ, ಶಿವನಸಮುದ್ರದ ಗಗನಚುಕ್ಕಿ, ಬರಚುಕ್ಕಿ ಇವಲ್ಲವನ್ನೂ ನೋಡಲು ವರ್ಷಕ್ಕೊಮ್ಮೆ ಅವಕಾಶ ಒದಗಿಸಿಕೊಡುವ ವಿಶ್ವವಿಖ್ಯಾತ ದಸರೆ ಮಂದಿದೆ. ನಿಮಗೆ ಇನ್ನೇನು ಬೇಕು?

ಹತ್ತಿರದ ಪ್ರೇಕ್ಷಣೀಯ ಸ್ಥಳಗಳು : ಮೈಸೂರಿನ ತೀರಾ ಹತ್ತಿರದ ಸ್ಥಳಗಳನ್ನು ಬಿಟ್ಟರೆ ನೋಡಬಹುದಾದ ಇನ್ನೂ ಅನೇಕ ಸ್ಥಳಗಳು ನಗರದ ಆಸುಪಾಸಿನಲ್ಲಿವೆ. ಅವುಗಳಲ್ಲಿ ಸೋಮನಾಥಪುರ, ತಲಕಾಡು, ಬಲಮುರಿಗಳಿವೆ. ಮೈಸೂರಿನಿಂದ 80 ಕಿಲೋಮೀಟರ್‌ ದೂರದಲ್ಲಿರುವ ಶ್ರವಣಬೆಳಗೂಳದಲ್ಲಿ 17ಮೀಟರ್‌ ಎತ್ತರದ ಗೊಮ್ಮಟನ ಏಕಶಿಲಾ ಮಾರ್ತಿಯಿದೆ. 160 ಕಿ.ಮಿ. ದೂರದಲ್ಲಿರುವ ಬೇಲೂರಿನಲ್ಲಿ ಶಿಲ್ಪಕಲೆಯ ಅತ್ಯನ್ನತ ಸಾಧ್ಯತೆಗೆ ಸಾಕ್ಷಿಯಾಗಿರುವ ಹೊಯ್ಸಳರ ಕಾಲದ ದೇವಾಲವಿದೆ. ಊಟಿ ರಸ್ತೆಯಲ್ಲಿ 80 ಕಿ.ಮೀಟರ್‌ ದೂರದಲ್ಲಿರುವ ಚಿರತೆಗಳ ಸಂರಕ್ಷಣಾ ಕೇಂದ್ರ ಬಂಡೀಪುರ ಅಭಯಾರಣ್ಯ, 93ಕಿ.ಮೀ ದೂರದಲ್ಲಿರುವ ನಾಗರಹೊಳೆ ಪ್ರವಾಸಿಗರನ್ನು ನಿರಾಶೆಪಡಿಸುವುದಿಲ್ಲ.

ಸಾರಿಗೆ : ತಿರುಪತಿ, ಚೆನ್ನೈ, ಪುಣೆ, ಮುಂಬೈಗಳಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕವಿದೆ. ಬೆಂಗಳೂರಿನಿಂದ ಮೈಸೂರಿಗೆ ಬಸ್ಸು, ರೈಲು ಸಂಪರ್ಕಗಳಿವೆ. ಸ್ಥಳೀಯವಾಗಿ ಕರ್ನಾಟಕ ಪ್ರವಾಸೋದ್ಯಮ ನಿಗಮದ ಬಸ್‌ಗಳ ಸೌಕರ್ಯವಿದೆ. ಇಷ್ಟಲ್ಲದೆ ದಸರಾ ಸಂದರ್ಭದಲ್ಲಿ ವಿಶೇಷ ಬಸ್‌ಗಳ ವ್ಯವಸ್ಥೆ ಇರುತ್ತದೆ.

ಮುಖಪುಟ / ಮೈಸೂರು ದಸರಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X