ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾ-ವ-ಳಿ-ಯ-ಲ್ಲಿ ಶಾ-ರ-ದೋ-ತ್ಸ-ವ

By Staff
|
Google Oneindia Kannada News

*ರಾಜ-ಲ-ಕ್ಷ್ಮಿ ಕೆ. ರಾವ್‌

ಮಗುವಿಗೆ ನಾಲ್ಕು ವರ್ಷ ತುಂಬಿದರೆ ಅಪ್ಪ ಒಂದು ಒಳ್ಳೆಯ ದಿನಕ್ಕಾಗಿ ಪುರೋಹಿತರ ಮನೆಗೆ ಎ-ಡ-ತಾ-ಕಿ-ದ-ರೆ, ಅಮ್ಮ ಜಾತಕ ಹಿಡಿದು ಮಗುವಿಗೆ ಯಾವುದೇ ತೊಂದರೆ ಇಲ್ಲವೆಂದು ಖಚಿತ ಪಡಿಸಿಕೊಳ್ಳಲು ನಾ-ಲ್ಕಾ-ರು ಜ್ಯೋತಿಷಿಗಳ ಮನೆ ಕದ ತಟ್ಟುತ್ತಾಳೆ. ಕೊನೆಗೊಂದು ಒಳ್ಳೆಯ ದಿನದಲ್ಲಿ ಶಾರದೆಯನ್ನು ಪೂಜಿಸಿ, ಆ ಮಗು ತಂದೆಯ ತೊಡೆಯ ಮೇಲೆ ಕುಳಿತು ಹರಿವಾಣದಲ್ಲಿ ಹರಡಿರುವ ಬೆಳ್ತಿಗೆ ಅಕ್ಕಿಯ ಮೇಲೆ ತನ್ನ ಗುಲಾಬಿ ತೋರುಬೆರಳಿನಲ್ಲಿ ಓಂ ಶ್ರೀ ಗಣಾಧಿಪತಯೇ ನಮಃ ಎಂದು ಗೀಚು-ತ್ತ-ದೆ.

ಸಾಂಪ್ರದಾಯಿಕವಾಗಿ ಮಗುವಿಗೆ ಅಕ್ಷರಾಭ್ಯಾಸ ಮತ್ತೆ ಪ್ರತಿ ವರ್ಷ ಮಕ್ಕಳ ಮುಂದಾಳತ್ವದಲ್ಲಿ ಶಾರದಾ ಪೂಜೆ ಪ್ರತಿ ಮನೆಯಲ್ಲಿಯೂ ನಡೆಯುತ್ತದೆ. ಶಾರದೆ ಪುಸ್ತಕದೊಡತಿ -ಮಾ-ತ್ರ-ವಲ್ಲ. ನೇಗಿಲು ಹಿಡಿದು ಮೊಣಕಾಲು ನೀರಿನ ಕೆಸರಿನಲ್ಲಿ ಬದುಕುವ ರೈತನಿಗೆ, ಕೊಡಲಿ ಹಿಡಿದು ಸೌದೆ ಸಿಗಿ-ಯು-ವ ಕೂಲಿಯವನಿಗೆ, ಹುಟ್ಟಿನಿಂದ ಪುಸ್ತಕವೆಂದರೆ- ಪೇಪರ್‌ ಎಂದರೆ ದಿನಸಿ ಕಟ್ಟುವ ಬಿಳಿ ಹಾಳೆಯನ್ನಷ್ಟೇ ನೋಡಿದಾಕೆಗೆ ಕೂಡ ಸರಸ್ವತಿ ಮತಿಯಾಡತಿ. ಅವರೆ-ಲ್ಲರೂ ಶಾರದಾ ಪೂಜೆ ಮಾಡುತ್ತಾರೆ, ಅದೇನೋ ಬೇಡಿಕೊಳ್ಳುತ್ತಾರೆ.

ಊರು ಕೇರಿ-ಯ-ಲ್ಲೂ ಶಾರ-ದೋ-ತ್ಸ-ವ-ದ ಸಂಭ್ರ-ಮ

ಸಾರ್ವಜನಿಕ ಗಣೇಶೋತ್ಸವದಷ್ಟೇ ಸಂಭ್ರಮದಲ್ಲಿ ಸಾರ್ವಜನಿಕ ಶಾರದಾ ಪೂಜೆಯೂ ನಡೆಯುತ್ತದೆ. ನವರಾತ್ರಿಯ ಸಪ್ತಮಿಯ ದಿನ ಬೆಳಿಗ್ಗೆ ಮಣ್ಣಿನ ಶಾರದಾ ಮೂರ್ತಿಯ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾ ಪೂಜೆ, ನಂತರ ಶಾರದಾ ಭಜನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು. ವಿಜಯ ದಶಮಿಯಂದು ರಾತ್ರಿ ಮೂರ್ತಿಯನ್ನು ನೀರಿಗೆ ವಿಸರ್ಜಿಸುವ ಬೃಹತ್‌ ಮೆರವಣಿಗೆ- ಇವಿಷ್ಟೂ ಸಾಮಾನ್ಯವಾಗಿ ಒಂದು ಪುಟ್ಟ ಊರಿನಲ್ಲಿ ನಡೆಯುವ ಶಾರದಾ ಪೂಜೆಯ ಚಿತ್ರಣ.

ಮನೆಯಲ್ಲಿ ಕನ್ನಡ ಪಾಠ ಪುಸ್ತಕವನ್ನೋ, ಭಗವದ್ಗೀತೆಯನ್ನೋ ದೇವರ ಮುಂದಿಟ್ಟು ಮೂರು ದಿನ ಪೂಜೆ ಮಾಡುತ್ತಾರೆ. ಆ ಮೂರು ದಿನಗಳಲ್ಲಿ ಪುಸ್ತಕ ಬಿಡಿಸಿ ಓದುವಂತಿಲ್ಲ. ವಿಜಯ ದಶಮಿಯಂದು ಮನೆಯ ಹಿರಿಯರು ಪುಸ್ತಕ ತೆಗೆದು ಮಕ್ಕಳ ಕೈಗೆ ಕೊಡುತ್ತಾರೆ. ಹಿರಿ-ಯ-ರಿ-ಗೆ ನಮಸ್ಕರಿಸಿ ಮಕ್ಕಳು ಹತ್ತು ನಿಮಿಷ ಓದುತ್ತಾರೆ. ಆದರೆ ಇದೇ ಮೂರು ದಿನಗಳಲ್ಲಿ ಪರೀಕ್ಷೆ ಬಂದರೆ ಅನುಕೂಲ ಶಾಸ್ತ್ರ ಪ್ರಕಾರ ಓದುವುದರಿಂದ ತೊಂದರೆಯಿಲ್ಲ.

ಪಿಎಸ್‌ಎಲ್‌ವಿ ಉಡ್ಡಯನಕ್ಕೆ ಮೊದಲು ಇಡು-ಗಾ-ಯಿ

ಬುದ್ಧಿಯ ಅಧಿದೇವತೆಯೆಂದು, ಶಿಕ್ಷಣ ಮಂತ್ರಿಯೆಂದು ಶಾರದೆ ದೇಶದ ಎಲ್ಲ ಚಿಂತನ ಮಂಥನಗಳ ದಾರಿಗೆ, ಅನ್ವೇಷಣೆಗಳ ಹೊಸಿಲಿಗೆ ರೂಪವಾಗಿದ್ದಾಳೆ. ಆದ್ದರಿಂದಲೇ ಹೊಸ ಎಸಿ ಆಫೀಸಿನೊಳಗೆ ಬರುವ ಮೊದಲ ಕಂಪ್ಯೂಟರ್‌ನ ಮಾನಿಟರ್‌ ಮತ್ತು ಸಿಪಿಯು ಮೇಲೆ ಅರಿಶಿಣ ಕುಂಕುಮ ಇರುತ್ತದೆ. ಪಿಎಸ್‌ಎಲ್‌ವಿ ಉಡ್ಡಯನಕ್ಕೆ ಮೊದಲು ತೆಂಗಿನ ಕಾಯಿ ಪುಡಿಯಾಗುತ್ತದೆ. ಕಾರ್ಗಿ-ಲ್‌-ನ-ಲ್ಲಿ ಹಾರಾ-ಡು-ವ ರಾಕೆಟ್‌ನ ಯಾವುದೋ ಒಂದು ಮೂಲೆಯಲ್ಲಿ ನಿಂಬೆ ಹಣ್ಣು, ಐದು ಮೆಣಸಿನ ಕಾಯಿ ನೇತಾಡುತ್ತಿರುತ್ತದೆ.

ಕರಾವಳಿಯ ಶಾರದೆ ನವರಾತ್ರಿಯಲ್ಲಿ ಪೂಜೆ ಪಡೆದರೆ, ಬಂಗಾಳದಲ್ಲಿ ಅವಳನ್ನು ಜನವರಿಯಲ್ಲಿ ಆರಾಧಿಸುತ್ತಾರೆ. ಹೀಗೆ ಕನ್ಯಾಕುಮಾರಿಯಲ್ಲಿ ಮತ್ತೊಂದು ದಿನ, ಕಾಶ್ಮೀರದ ಶೆಡ್‌ನಲ್ಲಿ ಮಗದೊಂದು ದಿನ . ಮಣ್ಣಿನ ಸ್ಲೇಟು ಬಳಪ ಮಣ್ಣು ಸೇರಿ ಕಾಲವಾಯಿತು. ಪೆನ್ಸಿಲ್ಲು ಡ್ರಾಯಿಂಗ್‌ ಟೇಬಲ್ಲಿನಲ್ಲಿ ಮಲಗಿದೆ. ಪೆನ್ನು ಪೇಪರ್‌ಗಳು ಸಿಗ್ನೇಚರ್‌ಗಾಗಿ ಸ್ಟ್ಯಾಂಡ್‌ನಲ್ಲಿ ಕುಳಿತಿವೆ. ಕಂಪ್ಯೂಟರ್‌- ಕೀ ಬೋರ್ಡ್‌ನ ಜಾಗಕ್ಕೆ ಇನ್ಯಾವ ಹೊಸ ಅವತಾರ ಬರಲಿದೆಯೋ ಗೊತ್ತಿಲ್ಲ. ಈ ಎಲ್ಲಾ ಹಂಗಾಮಗಳ ನಡುವೆ, ಕಡಲಾಚೆಯ ಎಲಿನಾಯ್‌ ಯೂನಿವರ್ಸಿಟಿಯಿಂದ ಪರೀಕ್ಷೆ ಹತ್ತಿ-ರ-ವಾ-ದಾ-ಗ- ವಿದ್ಯಾರ್ಥಿಗಳು ಶಾರದಾ ಪೂಜೆ ಮಾಡಿದ ಸುದ್ದಿ -ಹೊ-ರ-ಬೀ-ಳು-ತ್ತ-ದೆ.

ಮುಖಪುಟ / ಮೈಸೂರು ದಸರಾ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X