ಪಟ್ಟೆ ಹುಲಿ, ಚಿಟ್ಟೆ ಹುಲಿ.. ಹುಲಿ ಬಂತು ಹುಲಿ!
*ರಾಜ-ಲ-ಕ್ಷ್ಮಿ ಕೆ. ರಾವ್
ಕರಾವಳಿಯಲ್ಲಿ ಆರು ದಿನಗಳ ನವರಾತ್ರಿ ಮುಗಿಯುತ್ತಿದ್ದಂತೆಯೇ ಹರಕೆ ಹೇಳಿಕೊಂಡವರನ್ನೆಲ್ಲಾ ಪತ್ತೆ ಹಚ್ಚುವುದು ಕಷ್ಟ . ಮನೆ ಮುಂದೆ ಬಿಳಿ ಹುಲಿ, ಪಟ್ಟೆ ಹುಲಿ, ಚಿಟ್ಟೆ ಹುಲಿ .... ದೊಡ್ಡ ತಲೆಯ ಹುಲಿ ಮುಂತಾ-ದ ಏಳೆಂಟು ಹುಲಿಗಳು ಬಂದು ಮನೆ ಯಜಮಾನ ಅಥವಾ ಯಜಮಾನತಿಯ ಕಾಲು ಮುಟ್ಟಿ ನಮಸ್ಕರಿಸಿ ನರ್ತಿಸುತ್ತ-ವೆ. -ಹಿ-ನ್ನೆ-ಲೆ-ಯ-ಲ್ಲಿ ಡಂ ಡಂ ಡರ... ಅಂತ ಹಿನ್ನೆಲೆ ವಾದ್ಯ. ಮನೆಯಾಡತಿ ಕೊಟ್ಟ ಕಾಸು ಪಡೆದು, ನೀರು ಬೆಲ್ಲವೋ... ಕಾಯಿ ಬೆಲ್ಲವೋ ತಿಂದು ಮುಂದಿನ ಮನೆಗೆ ಎಲ್ಲ ಹುಲಿಗಳು ತೆರಳುತ್ತವೆ.
ನವರಾತ್ರಿಯಲ್ಲಿ ಹುಲಿ ವೇಷ ಮಾತ್ರವಲ್ಲ. ಅನಾರ್ಕಲಿ, ಕರಡಿ, ಜಕ್ಕಮದಿನಾ (ನೃತ್ಯ ಮಾಡುವ ಹುಡುಗ ಹುಡುಗಿ ಮತ್ತು ವಿದೂಷಕ), ಶಾರ್ದೂಲ ಮತ್ತು ಬೇಟೆಗಾರ.... ಹೀಗೆ ನವರಾತ್ರಿಯ ಕೊನೆಯ ಮೂರು ದಿನಗಳಲ್ಲಿ ಕರಾವಳಿಯ ತುಂಬಾ ಬಣ್ಣ ಬಣ್ಣದ ವೇಷಗಳು ಮನೆ ಓಣಿ ಒರುಂಕುಗಳಲ್ಲಿ, ಬೀದಿಯ ಅಂಗಡಿಗಳಲ್ಲಿ ಮಂದಿಯನ್ನು ಒಂದಲ್ಲ ಒಂದು ರೀತಿಯಲ್ಲಿ ನಗಿಸುತ್ತಿರುತ್ತಾರೆ. ಚಾಪೆ ಮಾರುವಾತ, ಲೆಕ್ಕಣಿಗ, ಕಳ್ಳ, ಗಾರೆಯವ... ಹೀಗೆ ವೇಷಗಳ ಸಾಲು.
ಹುಲಿವೇಷದ ಮಜವೇ ಬೇರೆ : ಎಲ್ಲ ವೇಷಗಳಲ್ಲಿ ಹುಲಿವೇಷವೇ ಹೆಚ್ಚು ಮರ್ಯಾದೆ ಗಿಟ್ಟಿಸಿಕೊಳ್ಳುವುದು. ಹುಲಿ ವೇಷ ಹಾಕುವವರು ಸಂಕಲ್ಪ ಶಕ್ತಿ ಮತ್ತು ಸಹನೆ ಇರುವವರಾಗಿರಬೇಕು. ಯಾಕೆಂದರೆ ಆರನೇ ದಿನ ರಾತ್ರಿ ಮೈಯ ರೋಮವನ್ನೆಲ್ಲಾ ಬೋಳಿಸಿಕೊಂಡು, ಹುಲಿಯ ಬಣ್ಣವನ್ನು (ಪೈಂಟ್) ಮೈಗೆ ಲೇಪಿಸಿ ಕೊಳ್ಳುತ್ತಾರೆ. ನಂತರ ಒಂಬತ್ತನೇ ದಿನ ರಾತ್ರಿ ಯಾವ ದೇವಸ್ಥಾನಕ್ಕೆ ಹರಕೆ ಹೇಳಿಕೊಂಡಿದ್ದಾರೆಯೋ ಅಲ್ಲಿ ನ ಅರ್ಚಕರಿಂದ ಸಾಂಕೇತಿಕ ತೀರ್ಥ ಸ್ನಾನ ಮಾಡಿಸಿಕೊಂಡು ನಂತರ ನದಿ ಸ್ನಾನ ಮಾಡುತ್ತಾರೆ. ಮೂರು ದಿನಗಳ ಕಾಲ ಪೈಂಟ್ ಬಳಿದಿರುವ ಬರಿ ಮೈಯ್ಯಲ್ಲಿ ಸ್ನಾನವಿಲ್ಲದೇ ಕಳೆಯಬೇಕು.
ಮುಖಪುಟ / ಮೈಸೂರು ದಸರಾ











Click it and Unblock the Notifications