Get Updates
Get notified of breaking news, exclusive insights, and must-see stories!

ಮಿನುಗು ನಕ್ಷತ್ರ ಹೇಳಿತು ಕ್ರಿಸ್ ಮಸ್ ಹಬ್ಬದ ಕಥೆ...

ವರ್ಷದ ಆರಂಭಕ್ಕೆ ಸಂಭ್ರಮದ ಮುನ್ನುಡಿ ಬರೆದಂತೆ ಬರುವುದೇ ಈ ಕ್ರಿಸ್ ಮಸ್ ಹಬ್ಬ. ವರ್ಷದ ಅಂತ್ಯವನ್ನೂ ಸಂಭ್ರಮಿಸುವಂತೆ ಮಾಡುವ ಈ ಹಬ್ಬ ಕ್ರಿಶ್ಚಿಯನ್ ಸಮುದಾಯಕ್ಕೆ ಸಡಗರದ ದಿನ.

ಅಲಂಕೃತಗೊಂಡ ಕ್ರಿಸ್ ಮಸ್ ಮರ, ಸಾಂತಾ ಕ್ಲಾಸ್, ಉಡುಗೊರೆಗಳು, ಭಿನ್ನ ಭಿನ್ನ ಕೇಕ್ ಗಳು, ಕ್ರಿಸ್ ಮಸ್ ಸ್ಟಾರ್ ಗಳು ಈ ಹಬ್ಬವನ್ನು ಎಲ್ಲಾ ಸಮುದಾಯದವರೂ ಇಷ್ಟಪಡುವಂತೆ ಮಾಡುವ ಆಕರ್ಷಣೆಗಳು...

ಅದರಲ್ಲಿ, ಕ್ರಿಸ್ ಮಸ್ ದಿನ ಸಮೀಪಿಸುತ್ತಿದೆ ಎನ್ನುವಾಗಲೇ ಮನೆಗಳ ಮುಂದೆ ಕಾಣಿಸಿಕೊಳ್ಳುವ ಕ್ರಿಸ್ ಮಸ್ ಸ್ಟಾರ್ ಪ್ರಮುಖ ಆಕರ್ಷಣೆ. ಹಬ್ಬಕ್ಕೆ ವಾರದ ಮುನ್ನವೇ ಮನೆಗಳ ಮುಂದೆ ಈ ಸ್ಟಾರ್ ಗಳು ಕಾಣಿಸಿಕೊಳ್ಳುತ್ತವೆ. ಕತ್ತಲಲ್ಲಿ ಹೊಳೆಯುತ್ತಾ ಎಲ್ಲರ ಕಣ್ಸೆಳೆಯುತ್ತವೆ. ಆದರೆ ಇದು ಬರೀ ಕ್ರಿಸ್ ಮಸ್ ಹಬ್ಬದ ಅಲಂಕಾರಕ್ಕಿರುವ ವಸ್ತುವಲ್ಲ. ನಿಮಗೆ ಗೊತ್ತೇ? ಈ ಮಿನುಗು ನಕ್ಷತ್ರದ ಹಿಂದೆ ಅರ್ಥಪೂರ್ಣ ಕಥೆ, ಸಂದೇಶವೂ ಇದೆ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಭರವಸೆಯೂ ಇದೆ.

Story Behind Christmas Star And Importance Of Star In Christmas Festival

ಬನ್ನಿ, ಈ ನಕ್ಷತ್ರದ ಹಿಂದಿನ ಕಥೆ ಏನು ನೋಡೋಣ...

ಹೀಗೆ ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಬಾನಿನಲ್ಲಿ ಪ್ರಖರವಾಗಿ ನಕ್ಷತ್ರವೊಂದು ಮಿನುಗುತ್ತಿತ್ತು. ಬೇರೆ ನಕ್ಷತ್ರಗಳಿಗಿಂತ ಸಾವಿರ ಪಟ್ಟು ಹೆಚ್ಚು ಮಿನುಗುತ್ತಿದ್ದ ಆ ನಕ್ಷತ್ರದ ಬೆಳಕು ಬೆಟ್ಟಗುಡ್ಡವನ್ನೂ ಆವರಿಸಿತ್ತು. ಬೆಟ್ಟದಲ್ಲಿ ಮಲಗಿದ್ದ ಕುರಿಗಾಹಿಗಳಿಗೆ ಈ ಬೆಳಕು ಅಚ್ಚರಿ ತಂದಿತ್ತು. ಇಷ್ಟು ಬೆಳಕನ್ನು ನೀಡುತ್ತಿರುವ ಈ ನಕ್ಷತ್ರ ಏನನ್ನು ಸೂಚಿಸುತ್ತಿದೆ ಎಂದು ಅರೆಕ್ಷಣ ದಿಗಿಲಾದರು. ಆದರೆ ಆ ಕ್ಷಣ ಪ್ರತ್ಯಕ್ಷಗೊಂಡ ದೇವತೆ, "ಹೆದರಬೇಡಿ. ನಿಮಗೆ ಒಳಿತನ್ನು ಮಾಡುವ ಸಂಕೇತವಾಗಿಯೇ ಈ ನಕ್ಷತ್ರ ಕಾಣಿಸಿಕೊಂಡಿದೆ. ಮುಂದೆ ವಿಶ್ವದಲ್ಲಿ ಸಂತಸ, ನೆಮ್ಮದಿ ಮನೆ ಮಾಡಲಿದೆ. ಇದಕ್ಕೆ ಕಾರಣವಾಗುವ ದೇವ ಮಾನವನ ಜನನದ ಸಂಕೇತವೇ ಈ ನಕ್ಷತ್ರವಾಗಿದೆ. ಆತ ಇಡೀ ಜಗತ್ತಿಗೆ ಬೆಳಕು ನೀಡಲಿರುವನು" ಎಂದು ಅಭಯ ನೀಡಿದಳು.

Story Behind Christmas Star And Importance Of Star In Christmas Festival

ನಂತರ ಆ ಕುರಿಗಾಹಿಗಳು ಆ ಮಗುವನ್ನು ನೋಡಲು ನಿಶ್ಚಯಿಸಿ ಬೆಟ್ಟ ತೊರೆದರು. ಆ ನಕ್ಷತ್ರದ ಹಾದಿಯನ್ನೇ ಹಿಂಬಾಲಿಸಿ ನಡೆದರು. ಆ ನಕ್ಷತ್ರ ಅವರನ್ನು ಏಸು ಕ್ರಿಸ್ತ ಜನಿಸಿದ್ದ ಬೆತ್ಲೆಹೆಮ್ ಗೆ ಕರೆದುಕೊಂಡು ಹೋಯಿತು. ಆ ಮಗು ಹುಟ್ಟಿದ ಸ್ಥಳವನ್ನು ತೋರಿ, ಎಲ್ಲರ ಮೇಲೂ ಬೆಳಕು ಚೆಲ್ಲಿತು. ಅಷ್ಟರಲ್ಲಾಗಲೇ ಬೆಳಕು ಹರಿದು ನಕ್ಷತ್ರ ಮರೆಯಾಯಿತು.

Story Behind Christmas Star And Importance Of Star In Christmas Festival

ಏಸು ಕ್ರಿಸ್ತನ ಜನನವನ್ನು ಸಂಕೇತಿಸುತ್ತಲೇ ಜಗತ್ತಿನಲ್ಲಿ ಬೆಳಕಿನ ಭರವಸೆಯನ್ನೂ ಈ ನಕ್ಷತ್ರ ಪ್ರತಿನಿಧಿಸುತ್ತದೆ. ಹೊಸ ಭರವಸೆ, ಹೊಸ ಆಲೋಚನೆ, ಪ್ರಖರ ಭವಿಷ್ಯವನ್ನು ಈ ನಕ್ಷತ್ರ ಪ್ರತಿನಿಧಿಸುತ್ತದೆ. ಬದುಕಿಗೆ ಹೊಸ ಬೆಳಕಿನ ನಿರೀಕ್ಷೆಯ ಸಂಕೇತವಾಗಿಯೇ ಕ್ರಿಸ್ ಮಸ್ ನಕ್ಷತ್ರವನ್ನು ಹಬ್ಬದಲ್ಲಿ ಬಳಕೆ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+