• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆದರಿಕೆ ಬಿಡಿ, ಕ್ರಿಸ್‌ಮಸ್‌ನಲ್ಲಿ ವೈನ್ ಜೊತೆ ಚಿಯರ್ಸ್ ಹೇಳಿ

By Kiran B Hegde
|

ಮದ್ಯಪಾನದ ವಿರುದ್ಧ ಎಷ್ಟೇ ಹೋರಾಟ ನಡೆಯಲಿ. ವೈನ್ ವಿರುದ್ಧ ಮಾತ್ರ ಯಾರೂ ಬೆರಳು ತೋರಲ್ಲ. "ಇದು ಮದ್ಯವಲ್ಲ ಹಣ್ಣಿನ ರಸ ಅಷ್ಟೇ" ಎಂಬುದು ವೈನ್ ಪ್ರಿಯರು ನೀಡುವ ಸಮರ್ಥನೆ. ಜಗತ್ತಿನಾದ್ಯಂತ ಕ್ರಿಸ್‌ಮಸ್ ಆಚರಣೆಯಲ್ಲಿಯೂ ವೈನ್‌ಗೆ ಬಹುಮುಖ್ಯ ಪಾತ್ರ.

ಇವರಿಗೀಗ ವಿಜ್ಞಾನಿಗಳು ಕೂಡ ಬೆನ್ನು ತಟ್ಟಿದ್ದಾರೆ. "ಯಸ್ ಯಸ್, ವೈನ್ ಕುಡಿಯಿರಿ, ಆರೋಗ್ಯವಂತರಾಗಿ" ಎಂದು ಪ್ರೋತ್ಸಾಹಿಸಿದ್ದಾರೆ ಎಂದು ಖ್ಯಾತ ವಿಜ್ಞಾನ ಪತ್ರಿಕೆ ಜರ್ನಲ್ ನೇಚರ್ ಹೇಳಿದೆ. ಏಕೆ ಗೊತ್ತೇ...? ನೋಡೋಣ ಬನ್ನಿ.

ಧಾನ್ಯ ಹಾಗೂ ದ್ರಾಕ್ಷಿ ಹಣ್ಣಿನಲ್ಲಿರುವಂತಹ ಉತ್ಕರ್ಷಣ ನಿರೋಧಕ ಗುಣ ಕೆಂಪು ವೈನ್‌ನಲ್ಲಿ ಕೂಡ ಕಂಡುಬಂದಿದೆ. ಇದು ಹೃದಯ ರೋಗವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. [ದುಬಾರಿ ವೈನ್ ನಂ.1 : ಡಾಮ್ ರೊಮೆನ್ ಕಾಂಟಿ 1997]

ಈಗ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ರೆಡ್ ವೈನ್ ಕುಡಿದರೆ ಆನುವಂಶಿಕವಾಗಿ ಕಾಡುವ ದೈಹಿಕ ಸಮಸ್ಯೆಗಳೂ ಗಣನೀಯವಾಗಿ ಕಡಿಮೆಯಾಗುತ್ತದೆ.

ದೇಹದಲ್ಲಿ ನೈಸರ್ಗಿಕವಾಗಿಯೇ ಸೃಷ್ಟಿಯಾಗುವ ಅಮಿನೋ ಆಮ್ಲ ಎಂಬ ಕಿಣ್ವವು TyrRS ಜೊತೆ ಸಂಯೋಜನೆ ಹೊಂದಿ ಟೈರೋಸಿನ್ ಎಂಬ ರಾಸಾಯನಿಕವನ್ನು ದೇಹದಲ್ಲೇ ಉತ್ಪಾದನೆಯಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣವನ್ನು ಹೆಚ್ಚಿಸುತ್ತದೆ.

ಬೇಗ ವಯಸ್ಸಾಗಲ್ಲ : ದೇಹಕ್ಕೆ ಒತ್ತಡ ಬಿದ್ದಾಗ ಮತ್ತು ಹಾನಿಯುಂಟಾದಾಗ ಜೀವಕೋಶಕ್ಕೆ ಉಂಟಾಗುವ ನಷ್ಟವನ್ನು ಟೈರೋಸಿನ್ ರಾಸಾಯನಿಕವು ತಡೆಯಬಲ್ಲದು. ಇದರಿಂದ ದೇಹಕ್ಕೆ ಬೇಗ ವಯಸ್ಸಾಗುವುದು ಹಾಗೂ ರೋಗ ಬರುವ ಸಂಭಾವ್ಯತೆ ಕಡಿಮೆಯಾಗುತ್ತದೆ.

ರೆಸ್ವೆರಾಟ್ರೊಲ್ (ಉತ್ಕರ್ಷಣ ನಿರೋಧಕ ಗುಣ ಹೊಂದಿದ) ರಾಸಾಯನಿಕ ಹಾಗೂ TyrRS ಸಂಯೋಗವು ಕ್ಯಾನ್ಸರ್ ವಿರುದ್ಧ ಹೋರಾಡುವ ಜೀನ್ p53 ಅನ್ನೂ ಕಾರ್ಯಗತಗೊಳಿಸುತ್ತದೆ. ಇದು ಟ್ಯೂಮರ್ ಸೇರಿದಂತೆ ಇತರ ವೃದ್ಧಾಪ್ಯದ ರೋಗಗಳನ್ನು ತಡೆಯಬಲ್ಲದು. [ರಾಜಧಾನಿಯಲ್ಲಿ ವೈನ್ ಎಕ್ಸ್ ಪ್ರೆಸ್]

ಈ ಎಲ್ಲ ಕಾರಣಗಳಿಂದ ಓರ್ವ ವ್ಯಕ್ತಿಗೆ ದಿನಕ್ಕೆ ಒಂದೆರಡು ಗ್ಲಾಸ್ ರೆಡ್ ವೈನ್ ನೀಡಿದರೆ ಆತನಲ್ಲಿ ರೆಸ್ವೆರಾಟ್ರೊಲ್ ರಾಸಾಯನಿಕ ಹೆಚ್ಚು ಉತ್ಪತ್ತಿಯಾಗಿ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. [ಬೆಂಗಳೂರಲ್ಲಿ ವೈನ್ ಲೈಬ್ರರಿ, ವೈನ್ ಅಕಾಡೆಮಿ]

ಆದ್ದರಿಂದ ಇನ್ನು ಕ್ರಿಸ್ ಮಸ್ ಆಚರಣೆ ಸಂದರ್ಭ ವೈನ್ ಕುಡಿಯಲು ಹೆದರಬೇಡಿ. ಈ ದಿನ ವೈನ್ ಎಂಬ ಮದ್ಯ ಸೇವಿಸಿದರೆ ಜಠರ ಸಮಸ್ಯೆ ಉಂಟಾಗುತ್ತೆ, ರಕ್ತದೊತ್ತಡ ಹೆಚ್ಚುತ್ತದೆ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ಹೆದರಿಕೆಯನ್ನು ಪಕ್ಕದಲ್ಲಿಟ್ಟು ಬಿಡಿ. ವಿಜ್ಞಾನಿಗಳ ಹೊಸ ಸಂಶೋಧನೆಯ ವರದಿ ಓದಿಕೊಂಡು ವೈನ್‌ ಕುಡಿಯುತ್ತ ಜೊತೆಯಲ್ಲಿದ್ದವರಿಗೆ ಚಿಯರ್ಸ್ ಹೇಳಿ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Researchers found resveratrol may protect the body against age-related diseases by prompting an evolutionary defense mechanism which guards human cells against genetic damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more