ಹ್ಯಾಂಡ್‌ಸ್ಟ್ಯಾಂಡ್ ಮೂಲಕ ಕಾಲಿನಿಂದ ಬಾಣ ಬಿಟ್ಟ ಯುವತಿ: ವಿಡಿಯೋ ವೈರಲ್
ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಕಾಲಕ್ಕೆ ಕೆಲವು ಮನಮುಟ್ಟುವ ವಿಡಿಯೋಗಳು ನಮ್ಮನ್ನು ವಿಸ್ಮಯಗೊಳಿಸುತ್ತವೆ. ಅವು ನಮಗೆ ಸ್ಫೂರ್ತಿಯನ್ನು ನೀಡುತ್ತವೆ. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವತಿಯೊಬ್ಬಳು ಕಾಲಿನಿಂದ ಬಾಣ ಬಿಡುವುದನ್ನು ಕಾಣಬಹುದು. ಇನ್ನೂ ಅದ್ಭುತವಾದ ಸಂಗತಿಯೆಂದರೆ ಅವಳು ಹ್ಯಾಂಡ್‌ಸ್ಟ್ಯಾಂಡ್ ಮಾಡುವ ಮೂಲಕ ಬಾಣವನ್ನು ಬಿಡುತ್ತಾಳೆ. ಯುವತಿಯ ಅದ್ಬುತ ಪ್ರತಿಭೆಯ ವಿಡಿಯೋ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.
ಈ ಪ್ರತಿಭಾವಂತ ಯುವತಿ ಯಾರು? ಈ ವಿಡಿಯೊವನ್ನು ಒರಿಸ್ಸಾ ಕೆಲ್ಲಿ ಎಂಬುವವರು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮನ್ನು ಅಂತರರಾಷ್ಟ್ರೀಯ ಫುಟ್ ಆರ್ಚರ್ ಮತ್ತು ಕಂಟೆಂಟ್ ಕ್ರಿಯೇಟರ್ ಎಂದು ವಿವರಿಸುತ್ತಾರೆ. ಹಾಗಾದರೆ ವೈರಲ್ ವಿಡಿಯೋದಲ್ಲಿ ಏನಿದೆ ಅನ್ನೋದನ್ನು ನೋಡುವುದಾದರೆ, ವಿಡಿಯೊದಲ್ಲಿ ಯುವತಿ ಮೊದಲು ಬಾಣಕ್ಕೆ ಬೆಂಕಿ ಹಚ್ಚುತ್ತಾರೆ. ನಂತರ ಅವರು ಜ್ವಾಲೆಯ ಬಾಣವನ್ನು ತನ್ನ ಕಾಲ್ಬೆರಳುಗಳಲ್ಲಿ ಇರಿಸಿಕೊಳ್ಳುತ್ತಾರೆ. ಬಳಿಕ ಹ್ಯಾಂಡ್ಸ್ಟ್ಯಾಂಡ್ ಮಾಡುತ್ತಾರೆ. ನಂತರ ಅವಳು ತನ್ನ ಇನ್ನೊಂದು ಪಾದದ ಕಾಲ್ಬೆರಳುಗಳ ಮೇಲೆ ಬಾಣವನ್ನು ಸಮತೋಲನಗೊಳಿಸುವ ಮೂಲಕ ಬಾಣ ಬಿಡುತ್ತಾರೆ. ಬಿಳಿ ಹಾಳೆಯಂತೆ ಕಾಣುವ ಹಿಮದ ನಡುವೆ ಯುವತಿ ಈ ಸಾಹಸವನ್ನು ಮಾಡುತ್ತಾರೆ. ವಿಡಿಯೋ ಹಂಚಿಕೊಂಡ ಖಾತೆಯಲ್ಲಿ ಇಂತಹದ್ದೇ ಯುವತಿಯ ಸಾಹಸದ ಹಲವಾರು ವಿಡಿಯೋಗಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೊವನ್ನು ಒಂದು ವಾರದ ಹಿಂದೆ ಹಂಚಿಕೊಂಡಾಗಿನಿಂದ ಇಲ್ಲಿಯವರೆಗೆ 3.4 ಮಿಲಿಯನ್ ಬಾರಿ ವೀಕ್ಷಣೆಗಳನ್ನು ಗಳಿಸಿದೆ. ಆ ಸಂಖ್ಯೆಗಳು ಇನ್ನೂ ಬೆಳೆಯುತ್ತಿವೆ. "ನಿಮ್ಮ ಕಾಲ್ಬೆರಳುಗಳನ್ನು ಬೆಚ್ಚಗಾಗಿಸಲು ಅತ್ಯಂತ ಪರಿಣಾಮಕಾರಿ ಮಾರ್ಗ...", ಎಂದು ಕೆಲ್ಲಿ ತನ್ನ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಈ ವೈರಲ್ ಪೋಸ್ಟ್‌ಗೆ ಜನರು ಶೀಘ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕ ಬಳಕೆದಾರರು ಈ ಮೋಡಿಮಾಡುವ ಕಾರ್ಯಕ್ಕಾಗಿ ಮಹಿಳೆಯನ್ನು ಹೊಗಳಿದ್ದಾರೆ. ವಿಡಿಯೊಕ್ಕೆ ಕಾಮೆಂಟ್ ಮಾಡುವಾಗ ಬಳಕೆದಾರರು- "ಒಲಂಪಿಕ್ ನಲ್ಲಿ ದೀಪವನ್ನು ಬೆಳಗಿಸಲು ಇದು ಸರಿಯಾದ ಮಾರ್ಗವಾಗಿದೆ" ಎಂದು ಬರೆದಿದ್ದಾರೆ.












Click it and Unblock the Notifications