ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋರ್ ಅಂತ 3.5 ಕೋಟಿ ಸಂಬಳ ಬರೋ ಕೆಲಸ ಬಿಟ್ಟ ‍ಇಂಜಿನಿಯರ್

|
Google Oneindia Kannada News

ಕೆಲಸ ಇಲ್ಲ ಅಂತ ಒಂದೆಡೆ ಯುವಕರು ಬೀದಿ, ಬೀದಿ ಅಲೆಯುತ್ತಿದ್ದಾರೆ, ಓದಿಗೆ ತಕ್ಕ ಕೆಲಸ ಸಿಗಲಿಲ್ಲ ಅಂತಂದ್ರು ಸಿಕ್ಕ ಯಾವುದಾರು ಒಂದು ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುವ ಯುವಕರಿಗೇನು ಕೊರತೆಯಿಲ್ಲ.

ಇನ್ನು ಜಗತ್ತಿನ ಉತ್ತಮ ಕಂಪನಿಗಳಲ್ಲಿ ಕೆಲಸ ಪಡಿಬೇಕು ಅನ್ನೋದು ಎಷ್ಟೋ ಯುವಕರ ಕನಸು. ಅದರಲ್ಲೂ ಒಳ್ಳೆ ಸಂಬಳ ಸಿಕ್ಕರಂತು ಸಂತೋಷಕ್ಕೆ ಪಾರವೇ ಇಲ್ಲ ಎನ್ನುವ ಮಂದಿಯೇ ಹೆಚ್ಚು.

ಅವಮಾನಗಳನ್ನು ಮೆಟ್ಟಿನಿಂತ ರಾಧಿಕಾ ಗುಪ್ತಾ ದೇಶದ ಅತ್ಯಂತ ಕಿರಿಯ ಸಿಇಒಅವಮಾನಗಳನ್ನು ಮೆಟ್ಟಿನಿಂತ ರಾಧಿಕಾ ಗುಪ್ತಾ ದೇಶದ ಅತ್ಯಂತ ಕಿರಿಯ ಸಿಇಒ

ಇನ್ನೂ ಕೆಲವರಿದ್ದಾರೆ ಮಾಡೋ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಾಗ ಉತ್ತಮ ಸಂಬಳದ ಕಾರಣಕ್ಕೋ, ಮನೆ ನಿಭಾಯಿಸಬೇಕೆಂಬ ಜವಾಬ್ದಾರಿಗೋ, ಇಷ್ಟವೋ ಕಷ್ಟವೋ ಬೆಳಿಗ್ಗೆ ಆಫೀಸಿಗೆ ಹೋಗಿ ಸಂಜೆ ಮನೆಗೆ ಬರುವ ಮಂದಿಗೂ ಕಡಿಮೆ ಇಲ್ಲ. ಇನ್ನು ಸಿಕ್ಕ ಒಂದೆರಡು ದಿನದ ರಜೆಯಲ್ಲೇ ಎಲ್ಲಾದರೂ ಪ್ರವಾಸ ಮಾಡಿ, ಮತ್ತೆ ಹೊಸ ಹುರುಪಿನೊಂದಿಗೆ ಕೆಲಸಕ್ಕೆ ಬಂದು ಹೇಗೋ ನಿಭಾಯಿಸುತ್ತಾರೆ.

ಆದರೆ ಇಲ್ಲೊಬ್ಬ ನೆಟ್‌ಫ್ಲಿಕ್ಸ್‌ ಎನ್ನುವ ದೊಡ್ಡ ಸಂಸ್ಥೆಯಲ್ಲಿ 3.5 ಕೋಟಿ ಸಂಬಳ ಬರುವ ಕೆಲಸವನ್ನೇ ಬಿಟ್ಟಿದ್ದಾನೆ. ಕಾರಣ ಏನು ಅಂತ ಕೇಳುದ್ರೆ, ಬೇಜಾರಾಗ್ತಿತ್ತು ಅದಕ್ಕೆ ಕೆಲಸ ಬಿಟ್ಟೆ ಎಂದಿದ್ದಾನೆ ಈ ಭೂಪ.

 ನೆಟ್‌ಫ್ಲಿಕ್ಸ್‌ನಲ್ಲಿ ಕೋಟಿ ರುಪಾಯಿ ಸಂಬಳ

ನೆಟ್‌ಫ್ಲಿಕ್ಸ್‌ನಲ್ಲಿ ಕೋಟಿ ರುಪಾಯಿ ಸಂಬಳ

ಮೈಕೆಲ್ ಲಿನ್ ಎನ್ನುವಾತ ಅಮೆರಿಕದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ. ಅವನಿಗೆ ವರ್ಷಕ್ಕೆ 4.5 ಲಕ್ಷ ಡಾಲರ್ (3.5 ಕೋಟಿ ರುಪಾಯಿ) ಸಂಬಳ ಕೂಡ ಬರುತ್ತಿತ್ತು.

2017 ರಲ್ಲಿ ಅಮೆಜಾನ್ ತೊರೆದು ಲಿನ್ ನೆಟ್‌ಫ್ಲಿಕ್ಸ್ ಸೇರಿದ್ದ. 2021ರ ಮೇ ತಿಂಗಳಲ್ಲಿ ಲಿನ್ ನೆಟ್‌ಫ್ಲಿಕ್ಸ್‌ಗೆ ರಾಜೀನಾಮೆ ನೀಡಿದ್ದಾನೆ. ಕೆಲಸ ಮಾಡಲು ಬೋರ್ ಆಗ್ತಿದೆ ಅದಕ್ಕೆ ಕೆಲಸ ಬಿಟ್ಟೆ ಎನ್ನುತ್ತಾನೆ ಲಿನ್.

ಲಿನ್ ಕಂಪನಿಗೆ ಸೇರಿದ ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಎರಡು ವರ್ಷಗಳ ಕಾಲ ಎಲ್ಲವೂ ಸರಿಯಾಗಿತ್ತು, ಹೊಸದನ್ನು ಕಲಿಯಲು ಸಂಬಳ ಪಡೆಯುತ್ತಿದ್ದೆ, ಕಲಿಯುವುದು ಇಷ್ಟವಾಗಿತ್ತು ಎಂದಿದ್ದಾನೆ.

 ಲಾಕ್‌ಡೌನ್; ಚಾಕೊಲೇಟ್ ಮಾಡಿ ಉದ್ಯಮಿಗಳಾದ ಸಾಫ್ಟ್‌ವೇರ್ ದಂಪತಿ! ಲಾಕ್‌ಡೌನ್; ಚಾಕೊಲೇಟ್ ಮಾಡಿ ಉದ್ಯಮಿಗಳಾದ ಸಾಫ್ಟ್‌ವೇರ್ ದಂಪತಿ!

 ಕೋವಿಡ್-19 ನಂತರ ಬದಲಾವಣೆ

ಕೋವಿಡ್-19 ನಂತರ ಬದಲಾವಣೆ

ಎಲ್ಲವೂ ಸರಾಗವಾಗಿ ನಡೆಯಬೇಕಾದರೆ ಜಗತ್ತಿಗೆ ಕೋವಿಡ್-19 ಸಾಂಕ್ರಾಮಿಕ ಅಪ್ಪಳಿಸಿತ್ತು. ಪ್ರಪಂಚದ ಎಲ್ಲೆಡೆ ಕೆಲಸಗಾರರು ಮನೆಯಲ್ಲೇ ಉಳಿಯುವಂತಾಯಿತು. ಜಗತ್ತಿನ ಹಲವು ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳಿದವು. ಅದರಂತೆ ನೆಟ್‌ಫ್ಲಿಕ್ಸ್ ಕೂಡ ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ನಿರ್ವಹಿಸಲು ತಿಳಿಸಿತು.

"ಕೋವಿಡ್‌ನಿಂದ ಲಕ್ಷಾಂತರ ಜನರು ಸಾಯುವುದನ್ನು ನೋಡುವುದರಿಂದ ನಾಳೆ ಗ್ಯಾರಂಟಿ ಇಲ್ಲ ಎಂದು ನನಗೆ ಅರ್ಥವಾಯಿತು. ನಿಮ್ಮ ಯಾವುದೇ ಕನಸುಗಳು ನನಸಾಗುವ ಮೊದಲು ನೀವು ಕೋವಿಡ್‌ನಿಂದ ಸಾಯಬಹುದು. ಮತ್ತು ನೀವು ಕನಸನ್ನು ಎಷ್ಟು ಸಮಯ ಮುಂದೂಡುವದರಿಂದ, ಅದು ಎಂದಿಗೂ ನನಸಾಗದ ಅಪಾಯವಿದೆ. ಆದ್ದರಿಂದ ನಿಮಗೆ ಏನಾದರೂ ಬೇಕಾದರೆ, ನೀವು ಈಗಿನಿಂದಲೇ ಪಡೆಯಲು ಪ್ರಯತ್ನಿಸಬೇಕು," ಎನ್ನುತ್ತಾನೆ ಲಿನ್.

 ಕಾಪಿ ಪೇಸ್ಟ್ ಕೆಲಸ ಬೇಜಾರು ಎಂದ ಲಿನ್

ಕಾಪಿ ಪೇಸ್ಟ್ ಕೆಲಸ ಬೇಜಾರು ಎಂದ ಲಿನ್

ನೆಟ್‌ಫ್ಲಿಕ್ಸ್‌ ಸಂಸ್ಥೆಗೆ ಸೇರಿದ ಹೊಸತರಲ್ಲಿ ಕೆಲಸ ಮಾಡಲು ಆನಂದಿಸುತ್ತಿದ್ದ ಲಿನ್‌ಗೆ ಕೊನೆ ಕೊನೆಯಲ್ಲಿ ಅವನ ಎಂಜಿನಿಯರಿಂಗ್ ಕೆಲಸವು "ಕಾಪಿ-ಪೇಸ್ಟ್" ನಂತೆ ಆಗುತ್ತಿದೆ ಎಂದು ಎನಿಸಲು ಶುರುವಾಗಿತ್ತು.

ಈ ಕುರಿತು ತನ್ನ ಅನಿಸಿಕೆ ಹಂಚಿಕೊಂಡಿರುವ ಲಿನ್, ಹೊಸ ಮೈಕ್ರೋ ಸರ್ವೀಸ್ ಸ್ಪಿನ್ ಅಪ್ ಮಾಡಬೇಕೇ? ಹಳೆಯದನ್ನು ಕಾಪಿ ಮಾಡಿ ಪೇಸ್ಟ್ ಮಾಡಿ. ಹೊಸ ಎ/ಬಿ ಪರೀಕ್ಷೆ ಮಾಡಬೇಕೆ? ಹಳೆಯದನ್ನು ಕಾಪಿ ಮಾಡಿ ಪೇಸ್ಟ್ ಮಾಡಿ. ಹೊಸ ಇಮೇಲ್ ಪರೀಕ್ಷೆ ಮಾಡಲು ಹಳೆಯದನ್ನು ಕಾಪಿ ಪೇಸ್ಟ್ ಮಾಡಿದರೆ ಸಾಕಿತ್ತು, ಎಂದು ತನ್ನ ಕೆಲಸದ ಬಗ್ಗೆ ವಿವರಿಸಿದ್ದಾನೆ.

 ಹೊಸ ಕೆಲಸ ಆರಂಭಿಸಿದ ಲಿನ್

ಹೊಸ ಕೆಲಸ ಆರಂಭಿಸಿದ ಲಿನ್

"ನೆಟ್‌ಫ್ಲಿಕ್ಸ್ ಕೆಲಸ ಬಿಟ್ಟಿದ್ದಕ್ಕೆ ಜನ ನನ್ನನ್ನು ಹುಚ್ಚ ಎಂದು ಅಂದುಕೊಂಡಿದ್ದರು. ಪೋಷಕರು ಕೂಡ ಕೆಲಸ ಬಿಡುವ ನಿರ್ಧಾರವನ್ನು ವಿರೋಧಿಸಿದ್ದರು. ಹೆಚ್ಚಿನ ಸಂಬಳದ ಕೆಲಸ ಕಳೆದುಕೊಳ್ಳುತ್ತೇನೆ ಎಂದು ಅವರು ಆಕ್ಷೇಪಿಸಿದ್ದರು" ಎಂದು ಹೇಳಿದ್ದಾನೆ.

ಈಗ ಸ್ವಂತ ವ್ಯವಹಾರ ಆರಂಭಿಸಿರುವ ಲಿನ್, ಖುಷಿ ಕೊಡುವ ಕೆಲಸ ಮಾಡಲು ನಿರ್ಧರಿಸಿದ್ದಾನೆ. ಹೊಸ ವ್ಯವಹಾರದ ಕಾರಣದಿಂದ ಹೆಚ್ಚಿನ ಜನರನ್ನು, ಉದ್ಯಮಿಗಳು, ಬರಹಗಾರರನ್ನು ಭೇಟಿ ಮಾಡಲು ಸಾಧ್ಯವಾಗಿದೆ. ಹೊಸ ಕೆಲಸ ಖುಷಿ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾನೆ.

(ಒನ್ಇಂಡಿಯಾ ಸುದ್ದಿ)

English summary
Young Engineer Quits Rs 3.5 Crore Salary Job at Netflix: Michael Lin Said He felt boring with job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X