
ಕದ್ದ ಬೈಕ್‌ನಲ್ಲಿ ಮೈಮರೆತ ಯುವ ಜೋಡಿ: ವಿಡಿಯೋ ವೈರಲ್ ಬಳಿಕ ಆಗಿದ್ದೇನು?
ರಾಯ್‌ಪುರ ಜನವರಿ 23: ಛತ್ತೀಸ್‌ಗಢದ ದುರ್ಗ್ ಪ್ರದೇಶದಲ್ಲಿ ಪ್ರೇಮಿಗಳು ಬೈಕ್‌ನಲ್ಲಿ ಮೈಮರೆತ ವಿಡಿಯೋವೊಂದು ವೈರಲ್ ಆಗಿದೆ. ಅಸಭ್ಯ ವರ್ತನೆ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಪ್ರೇಮಿಗಳ ಬಂಧನದ ಬಳಿಕ ಸವಾರಿ ಮಾಡಿದ ಬೈಕ್ ಕದ್ದಿದ್ದು ಎಂದು ತಿಳಿದುಬಂದಿದೆ. ಛತ್ತೀಸ್‌ಗಢ ಪೊಲೀಸರು ಕ್ರಮ ಕೈಗೊಂಡಿದ್ದು, ಅಂತರ್ಜಾಲದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ.
ರಾಮನಗರದ ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕೈದಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿ ಬೈಕ್ ಓಡಿಸುವಾಗ ರೊಮ್ಯಾಂಟಿಕ್ ದೃಶ್ಯ ಕಂಡು ಬಂದಿದೆ. ಹುಡುಗ ಬೈಕ್ ಓಡಿಸುತ್ತಿರುವಾಗ ಹುಡುಗಿ ಬೈಕ್‌ನ ಟ್ಯಾಂಕ್ ಮೇಲೆ ಹುಡುಗನ ಎದುರು ಕುಳಿತಿದ್ದಾಳೆ. ಕದ್ದ ಬೈಕ್‌ನಲ್ಲಿ ಈ ಜೋಡಿ ಅಸಭ್ಯವಾಗಿ ವರ್ತಿಸಿದ್ದು ಹಿಂಬದಿ ಸವಾರರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಹುಡುಗಿ ಸವಾರನನ್ನು ತಬ್ಬಿಕೊಳ್ಳುತ್ತಿರುವುದನ್ನು ನೋಡಬಹುದು. ಈ ವೇಳೆ ಸವಾರ ಬೈಕ್ ಓಡಿಸುತ್ತಿದ್ದು ಇಬ್ಬರೂ ಕೂಡ ಹೆಲ್ಮೆಡ್ ಅನ್ನು ಧರಿಸಿಲ್ಲ.
"ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದ ಮತ್ತು ಅಶ್ಲೀಲವಾಗಿ ಮೈಮರೆತ ಪ್ರೇಮಿಗಳ ವಿಡಿಯೊ ವೈರಲ್ ಆಗಿದೆ. ಪೊಲೀಸರು ಇದನ್ನು ಗಮನದಲ್ಲಿಟ್ಟುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ'' ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.
भिलाई : चलती बाइक पर कपल का रोमांस pic.twitter.com/G6WNu5lJ0K
— Anoop mishra rahul (@rahulmi50606036) January 21, 2023
ತನಿಖೆಯ ಮೂಲಕ ಪ್ರೇಮಿಗಳು ಯಾವುದೇ ದಾಖಲೆಗಳಿಲ್ಲದೆ ಕದ್ದ ಬೈಕ್‌ನಲ್ಲಿ ತೆರಳುತ್ತಿರುವುದು ಪೊಲೀಸರಿಗೆ ತಿಳಿದು ಬಂದಿದೆ.
"ಅವರು ಬಳಸುತ್ತಿದ್ದ ಬೈಕ್ ನೋಂದಣಿ ಫಲಕವನ್ನು ಹೊಂದಿಲ್ಲ ಮತ್ತು ತನಿಖೆಯ ಸಮಯದಲ್ಲಿ, ಬೈಕು ಒಂದು ವರ್ಷದ ಹಿಂದೆ ಹಳ್ಳಿಯಿಂದ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಬೈಕ್ ಮಾರುಕಟ್ಟೆ ಬೆಲೆ 1.50 ಲಕ್ಷ ರೂ. ಆಗಿದೆ. ಆದರೆ ಆರೋಪಿಗಳು ಯಾವುದೇ ದಾಖಲೆಗಳಿಲ್ಲದೆ ಬೈಕ್‌ನಲ್ಲಿ ಸವಾರಿ ಮಾಡಿದ್ದಾರೆ. ಇದೀಗ ಬೈಕ್ ವಶಪಡಿಸಿಕೊಳ್ಳಲಾಗಿದೆ'' ಎಂದು ಎಸ್ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.