ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Year end 2022; ಈ ವರ್ಷ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲುಗಳು

|
Google Oneindia Kannada News

ಭಾರತದಲ್ಲಿ ಶತಾಬ್ದಿ ರೈಲಿಗೆ ಪರ್ಯಾಯವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಾಗುತ್ತದೆ. ದೇಶದಲ್ಲಿಯೇ ತಯಾರಾದ ವಿಶೇಷ ವಿನ್ಯಾಸಗಳನ್ನು ಒಳಗೊಂಡಿರುವ ಈ ರೈಲು ಪ್ರಧಾನಿ ನರೇಂದ್ರ ಮೋದಿ ಕನಸಿನ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಯಲ್ಲಿ ತಯಾರಾಗಿದೆ. ದೇಶದಲ್ಲಿ ಪ್ರಸ್ತುತ 6 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.

2016ರಲ್ಲಿ ವಂದೇ ಭಾರತ್ ರೈಲಿನ ಪರಿಕಲ್ಪನೆ ಸಿದ್ಧವಾಯಿತು. 2019ರಲ್ಲಿ ಮೊದಲ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಕೋವಿಡ್ ಪರಿಸ್ಥಿತಿ ಇಲ್ಲದಿದ್ದರೆ ಈ ವೇಳೆಗೆ ಹಲವು ರೈಲುಗಳು ದೇಶದಲ್ಲಿ ಸಂಚಾರ ನಡೆಸುತ್ತಿದ್ದವು. 2023ರಲ್ಲಿ 75 ವಂದೇ ಭಾರತ್ ರೈಲುಗಳನ್ನು ಓಡಿಸುತ್ತೇವೆ. ಮುಂದಿನ ಮೂರು ವರ್ಷದಲ್ಲಿ 400 ವಂದೇ ಭಾರತ್ ರೈಲು ಓಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಹೊಸ ವರ್ಷದಲ್ಲಿ 75 ವಂದೇ ಭಾರತ್ ರೈಲು ಸಂಚಾರ ಸಾಧ್ಯವೇ?ಹೊಸ ವರ್ಷದಲ್ಲಿ 75 ವಂದೇ ಭಾರತ್ ರೈಲು ಸಂಚಾರ ಸಾಧ್ಯವೇ?

ತಮಿಳುನಾಡಿನ ಚೆನ್ನೈನ ಇಂಟಿಗ್ರಲ್ ಕೋಚ್‌ ಫ್ಯಾಕ್ಟರಿ ಮತ್ತು ಇತರ ಸಂಸ್ಥೆಗಳು ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡಿ ವಂದೇ ಭಾರತ್ ರೈಲುಗಳ ವಿನ್ಯಾಸ ಮಾಡಿವೆ. ಎರಡು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಿದ ಬಳಿಕ ವಿನ್ಯಾಸ ಬದಲಿಸಲಾಗಿದೆ. ಸದ್ಯ ದೇಶದಲ್ಲಿ ಸಂಚಾರ ನಡೆಸುತ್ತಿರುವುದು ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ವಂದೇ ಭಾರತ್ 2.0 ಮಾದರಿಯ ರೈಲುಗಳು.

Year end 2022; ಕರ್ನಾಟಕಕ್ಕೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುYear end 2022; ಕರ್ನಾಟಕಕ್ಕೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ವಂದೇ ಭಾರತ್ 2.0 ರೈಲುಗಳು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೈಲು ಘರ್ಷಣೆ ತಪ್ಪಿಸುವ 'ಕವಚ್' ವ್ಯವಸ್ಥೆ ಹೊಂದಿವೆ. ಕೇವಲ 52 ಸೆಕೆಂಡ್‌ಗಳಲ್ಲಿ ಗಂಟೆಗೆ 0 ಯಿಂದ 100 ಕಿಲೋಮೀಟರ್‌ಗಳ ವೇಗವನ್ನು ಮತ್ತು ಗಂಟೆಗೆ 180 ಕಿಲೋಮೀಟರ್‌ಗಳವರೆಗೆ ಗರಿಷ್ಠ ವೇಗವನ್ನು ತಲುಪುವಂತಹ ಸುಧಾರಿತ ವ್ಯವಸ್ಥೆಯನ್ನು ಒಳಗೊಂಡಿವೆ. ರೈಲು ಪ್ರಯಾಣದ ವೇಳೆ ಮನರಂಜನೆ ಒದಗಿಸಲು ಪ್ರತಿ ಬೋಗಿಯಲ್ಲಿ 32 ಇಂಚಿನ ಟಿವಿ ಪರದೆಗಳು ಇವೆ. ಇದು ಪರಿಸರ ಸ್ನೇಹಿಯಾಗಿದ್ದು, ಎಸಿಗಳು ಶೇಕಡಾ 15 ರಷ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ. 2022ರಲ್ಲಿ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲುಗಳ ಮಾಹಿತಿ ಇಲ್ಲಿದೆ....

Vande Bharat; ಧಾರವಾಡ-ಹುಬ್ಬಳ್ಳಿ ಮಾರ್ಗದ ವೇಗ ಪರೀಕ್ಷೆ ಯಶಸ್ವಿVande Bharat; ಧಾರವಾಡ-ಹುಬ್ಬಳ್ಳಿ ಮಾರ್ಗದ ವೇಗ ಪರೀಕ್ಷೆ ಯಶಸ್ವಿ

ವಂದೇ ಭಾರತ್ ಮೊದಲ, 2ನೇ ರೈಲುಗಳು

ವಂದೇ ಭಾರತ್ ಮೊದಲ, 2ನೇ ರೈಲುಗಳು

2019ರಲ್ಲಿ ಭಾರತದಲ್ಲಿ ವಂದೇ ಭಾರತ್ ರೈಲುಗಳ ಸಂಚಾರನ್ನು ಆರಂಭಿಸಲಾಯಿತು. ಮೊದಲ ರೈಲು ನವದೆಹಲಿ-ವಾರಣಾಸಿ ನಡುವೆ ಸಂಚಾರ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ದೆಹಲಿ-ವಾರಣಾಸಿ ನಡುವೆ ರೈಲು ಕೇವಲ 8 ಗಂಟೆಗಳಲ್ಲಿ ಸಂಚಾರ ನಡೆಸುತ್ತದೆ.

ದೇಶದ 2ನೇ ರೈಲು ಸಹ ನವದೆಹಲಿಯಿಂದಲೇ ಆರಂಭವಾಯಿತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ನವದೆಹಲಿ-ಶ್ರೀ ವೈಷ್ಣೋದೇವಿ ಮಾತಾ, ಕತ್ರಾ ನಡುವೆ ಸಂಚಾರ ಆರಂಭಿಸಿತು. ಪ್ರಸಿದ್ಧ ಧಾರ್ಮಿ ಕೇಂದ್ರ ವೈಷ್ಣೋದೇವಿಗೆ ಸಂಚಾರ ನಡೆಸುವ ಭಕ್ತರಿಗೆ ಇದರಿಂದಾಗಿ ಅನುಕೂಲಾಗಿದೆ.

ಗಾಂಧಿನಗರ-ಮುಂಬೈ ಸೆಂಟ್ರಲ್

ಗಾಂಧಿನಗರ-ಮುಂಬೈ ಸೆಂಟ್ರಲ್

2022ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ ನಿಲ್ದಾಣದಲ್ಲಿ ಗಾಂಧಿನಗರ- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದರು. ನರೇಂದ್ರ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್ 2.0ದ ರೈಲು ಬೋಗಿಗಳನ್ನು ಪರಿಶೀಲಿಸಿದರು ಮತ್ತು ಲೋಕೋಮೋಟಿವ್ ಎಂಜಿನ್‌ನ ನಿಯಂತ್ರಣ ಕೇಂದ್ರವನ್ನು ಸಹ ಪರಿಶೀಲಿಸಿ ಮಾಹಿತಿ ಪಡೆದರು. ರೈಲಿಗೆ ಚಾಲನೆ ನೀಡಿದ ಬಳಿಕ ಕಲುಪುರ ರೈಲು ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಿದರು. ಸಹ-ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ರೈಲಿನ ಇಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದರು.

ಗಾಂಧಿನಗರ ಮತ್ತು ಮುಂಬೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತದ ಎರಡು ವ್ಯಾಪಾರ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುತ್ತಿದೆ. ಗುಜರಾತ್‌ನ ವ್ಯಾಪಾರಿಗೆಗೆ ಮುಂಬೈಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದೆ. ಗಾಂಧಿನಗರದಿಂದ ಮುಂಬೈ ಪ್ರಯಾಣದ ಅವಧಿ ಸುಮಾರು ಐದೂವರೆ ಗಂಟೆಗಳು.

4ನೇ ವಂದೇ ಭಾರತ್ ರೈಲು ಸಂಚಾರ ಆರಂಭ

4ನೇ ವಂದೇ ಭಾರತ್ ರೈಲು ಸಂಚಾರ ಆರಂಭ

ಪ್ರಧಾನಿ ನರೇಂದ್ರ ಮೋದಿ 2022ರ ಅಕ್ಟೋಬರ್‌ನಲ್ಲಿ ಅಂಬ್ ಅಂಡೌರಾ ಮತ್ತು ನವದೆಹಲಿ ನಡುವೆ ಸಂಚಾರ ನಡೆಸುವ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ದಿನ ಈ ರೈಲು ಸಂಚಾರ ನಡೆಸುತ್ತದೆ. ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ ಮತ್ತು ಉನಾದಲ್ಲಿ ನಿಲುಗಡೆ ಹೊಂದಿದೆ. ಈ ರೈಲು ಸುಮಾರು 483 ಕಿ. ಮೀ. ದೂರವನ್ನು ಕ್ರಮಿಸುತ್ತದೆ. ರೈಲು ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಮತ್ತು ಹರ್ಯಾಣದ ಮುಖ್ಯಮಂತ್ರಿಗಳು ದೇಶದ ಸೆಮಿ-ಹೈಸ್ಪೀಡ್ ರೈಲಿನಲ್ಲಿ ಸಂಚಾರ ನಡೆಸಿದರು.

5ನೇ ವಂದೇ ಭಾರತ್ ರೈಲು ಸಂಚಾರ

5ನೇ ವಂದೇ ಭಾರತ್ ರೈಲು ಸಂಚಾರ

ದೇಶದ 5ನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಈ ರೈಲು ಸಂಚಾರ ನಡೆಸುತ್ತದೆ.

ಈ ಹೊಸ ರೈಲು ಕೈಗಾರಿಕಾ ತಾಣ ಚೆನ್ನೈ ಮತ್ತು ಸಾಫ್ಟ್‌ವೇರ್ ನವೋದ್ಯಮ ತಂತ್ರಜ್ಞಾನ ತಾಣ ಬೆಂಗಳೂರು ಹಾಗೂ ವಿಶ್ವದ ಪ್ರಮುಖ ಪ್ರವಾಸಿ ತಾಣ ಮೈಸೂರು ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ಸೇವೆಯಿಂದ ಸಾಫ್ಟ್‌ವೇರ್ ಮತ್ತು ವ್ಯಾಪಾರ ವೃತ್ತಿಪರರು, ತಂತ್ರಜ್ಞಾನ ವಲಯದವರು, ಪ್ರವಾಸಿಗರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

6ನೇ ವಂದೇ ಭಾರತ್ ರೈಲು

6ನೇ ವಂದೇ ಭಾರತ್ ರೈಲು

ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ 11ರಂದು ನಾಗ್ಪುರ ರೈಲು ನಿಲ್ದಾಣದಲ್ಲಿ ನಾಗ್ಪುರ ಮತ್ತು ಬಿಲಾಸ್‌ಪುರವನ್ನು ಸಂಪರ್ಕಿಸುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದು ಭಾರತದ 6ನೇ ಈ ಮಾದರಿಯ ರೈಲಾಗಿದೆ. ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೋಗಿಗಳನ್ನು ಪರಿಶೀಲಿಸಿದರು ಲೋಕೋಮೋಟಿವ್ ಎಂಜಿನ್‌ನ ನಿಯಂತ್ರಣ ಕೇಂದ್ರವನ್ನು ಪರಿಶೀಲಿಸಿದರು. ಈ ರೈಲು ಮಹಾರಾಷ್ಟ್ರದ ನಾಗ್ಪುರದಿಂದ ಬಿಲಾಸ್‌ಪುರಕ್ಕೆ ಪ್ರಯಾಣದ ಸಮಯವನ್ನು 7 ಗಂಟೆಗಳಿಂದ 5 ಗಂಟೆ 30 ನಿಮಿಷಗಳಿಗೆ ಇಳಿಕೆ ಮಾಡಿದೆ.

English summary
Year end 2022; Year end 2022; The Indian Railways has introduced new avatar of Vande Bharat 2.0. Here are the list of Vande Bharat Express train which flagged off in 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X