ಕೈಗೆಟಕುವ ದರದಲ್ಲಿ ಮೊಟ್ಟ ಮೊದಲ 150 ಸಿಸಿ ಹೊಸ ಬೈಕ್‌ ಬಿಡುಗಡೆ ಮಾಡಿದ ಯಮಹಾ

ಜಪಾನ್ ಮೂಲದ ಯಮಹಾ ಕಂಪನಿಯು ಆಗಾಗ ಹೊಸ ಹೊಸ ಮಾದರಿಯ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಪಂಕನಿಯ ಬೈಕ್‌ಗಳು ಭಾತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಅಷ್ಟೇ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಹಾಗೆಯೇ ಇದೀಗ ಮೊಟ್ಟ ಮೊದಲ ಬಾರಿಗೆ 150cc ಹೈಬ್ರಿಡ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹಾಗಾದ್ರೆ ವಿಶೇಷತೆ ಹಾಗೂ ಬೆಲೆಗಳ ವಿವರನ್ನು ಇಲ್ಲಿ ತಿಳಿಯಿರಿ.

ಯಮಹಾ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಆಗಿದ್ದು, ಅತ್ಯಾಧುನಿಕ ಮಾದರಿಯ, ಸ್ಟೈಲೀಶ್‌ ಬೈಕ್ ಹಾಗೂ ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಾ ಬಂದಿದೆ. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಲೇ ಇದ್ದಾರೆ ಕೂಡ.

Yamaha Launches First 150cc Bike at Affordable Price In India

ಇದೀಗ ಯಮಹಾ ಹೈಬ್ರಿಡ್ ಟೆಕ್ನಾಲಜಿಯನ್ನು ಒಳಗೊಂಡಿರುವ ಹೊಸ FZ-S Fi ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ತಂದಿದ್ದು, ಇದನ್ನು ಕೊಂಡುಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ. ಈ ಹೊಸ ಯಮಹಾ Yamaha FZ-S Fi Hybrid ಬೈಕ್, ಗ್ರಾಹಕರ ಕೈಗೆಟಕುವ ಕೈಗೆಟುಕುವ ಬೆಲೆಯಲ್ಲಿಯೇ ಬಿಡುಗಡೆ ಆಗಿದೆ.

ಹೊಸ ಯಮಹಾ ಬೈಕ್‌ನ ಎಕ್ಸ್‌ ಶೋ ರೂಂ ಬೆಲೆ 1.45 ಲಕ್ಷ ರೂಪಾಯಿ ಆಗಿದೆ. ಇದು 150 ಸಿಸಿಯಲ್ಲಿ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ದೇಶದ ಮೊದಲ ಬೈಕ್ ಆಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2025ರ ಹೊಸ ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ ಬೈಕ್‌, ಹೊರಭಾಗದಲ್ಲಿ ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ.

ಈ ಬೈಕ್‌ ಅತ್ಯುತ್ತಮ ಹೈಡ್‌ಲೈಟ್, ದೊಡ್ಡದಾದ ಫ್ಯುಯೆಲ್ ಟ್ಯಾಂಕ್ ಹಾಗೂ ಇಂಟಿಗ್ರೇಟೆಡ್ ಫ್ರಂಟ್ ಟರ್ನ್ ಸಿಗ್ನಲ್‌ಗಳನ್ನು ಹೊಂದಿದೆ. ಗ್ರಾಹಕರಿಗೆ ರೇಸಿಂಗ್ ಬ್ಲೂ & ಸಯಾನ್ ಮೆಟಾಲಿಕ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದು 149 ಸಿಸಿ ಫೋರ್-ಸ್ಟ್ರೋಕ್, ಟೂ-ವಾಲ್ವ್, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್‌ ಅನ್ನು ಒಳಗೊಂಡಿದೆ.

7,250 ಆರ್‌ಪಿಎಂನಲ್ಲಿ 12.4 ಹಾರ್ಸ್ ಪವರ್ ಹಾಗೂ 13.3 ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸ್ಲಿಪ್ಪರ್ ಕ್ಲಚ್ ಆಯ್ಕೆಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದ್ದು, ಇದರ ಪವರ್ ‌ಟ್ರೇನ್‌ ಒಬಿಡಿ-2ಬಿ ಮಾನದಂಡಗಳನ್ನು ಪೂರೈಸಿದೆ.

ನೂತನ ಯಮಹಾ ಎಫ್‌ಝಡ್‌-ಎಸ್ ಫೈ ಮೋಟಾರ್‌ ಸೈಕಲ್‌, ಹೈಬ್ರಿಡ್ ಟೆಕ್ನಾಲಜಿ ಹೊಂದಿರುವುದರಿಂದ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ. ಈ ಬೈಕ್, ಸ್ಮಾರ್ಟ್ ಮೋಟಾರ್ ಜನರೇಟರ್ ಮತ್ತು ಸ್ಟಾಪ್ & ಸ್ಟಾರ್ಟ್ ಸಿಸ್ಟಮ್ ಟೆಕ್ನಾಲಜಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+