ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World Beard Day 2022 : ವಿಶ್ವ ಗಡ್ಡ ದಿನ: ದಾಟಿ ಬಿಟ್ಟವ ದೇವದಾಸ ಅನ್ನೋ ಕಾಲ ಹೋಯ್ತು

|
Google Oneindia Kannada News

ಗಡ್ಡ ಬಿಡದ ಗಂಡಸರು ಯಾರಿದ್ದಾರೆ? ಗಡ್ಡ ಎಂಬುದು ಬಹುತೇಕ ಪುರುಷರಿಗೆ ಗಂಡಸುತನದ ಒಂದು ಸಂಕೇತ. ಆದಿಮಾನವರ ಕಾಲದಿಂದಲೂ ಗಡ್ಡಕ್ಕೆ ಅದರದ್ದೇ ಪ್ರಾಶಸ್ತ್ಯ ಬಂದಿದೆ. ಈಗ ಅನೇಕ ಕ್ಲೀನ್ ಶೇವರ್‌ಗಳು ಬಂದರೂ ಗಡ್ಡಕ್ಕೆ ಮಹತ್ವ ಇದ್ದೇ ಇದೆ. ಅಂತೆಯೇ ಸೆಪ್ಟೆಂಬರ 3ರಂದು ವಿಶ್ವ ಗಡ್ಡ ದಿನವಾಗಿ ಆಚರಿಸಲಾಗುತ್ತದೆ.

ಉದ್ದುದ್ದ ಗಡ್ಡ ಬಿಡುವುದು ಟ್ರೆಂಡ್ ಸೆಟ್ಟರ್ ಅಗಿದೆ. ರಾಕ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾ ಬಂದ ಮೇಲೆ ಉದ್ದುದ್ದ ಗಡ್ಡ ಒಂದು ರೀತಿ ಜನಪ್ರಿಯವಾಗಿದೆ. ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾ ಕೂಡ ಗಡ್ಡಕ್ಕೆ ಕಳೆ ಕೊಟ್ಟಿದೆ. ರಿಷಭ್ ಶೆಟ್ಟಿಯ ಗಡ್ಡ ಯಾರಿಗೆ ಇಷ್ಟವಾಗಲ್ಲ ಹೇಳಿ? ಕನ್ನಡದ ಮಟ್ಟಿಗೆ ಸ್ವಸ್ತಿಕ್ ಸಿನಿಮಾದಲ್ಲಿ ನಿರ್ದೇಶಕ ಉಪೇಂದ್ರ ನಾಯಕನಟ ರಾಘವೇಂದ್ರ ರಾಜಕುಮಾರ್‌ಗೆ ಗಡ್ಡ ಹಾಕಿಸಿದ್ದು ವಿಶೇಷ. ಕನ್ನಡ ಸಿನಿಮಾ ರಂಗದಲ್ಲಿ ಒಂದು ಸಿನಿಮಾದ ನಾಯಕ ಗಡ್ಡದಾರಿಯಾಗಿದ್ದು ಅದೇ ಮೊದಲು ಇರಬಹುದು. ವಿಷ್ಣುವರ್ಧನ್ ಅನೇಕ ಸಿನಿಮಾಗಳಲ್ಲಿ ಗಡ್ಡ ಬಿಟ್ಟಿದ್ದುಂಟು. ನಟರಾದ ಅಜಿತ್, ರಜಿನೀಕಾಂತ್, ದುನಿಯಾ ವಿಜಿ ಮೊದಲಾದ ಅನೇಕ ನಟರು ಗಡ್ಡದಲ್ಲಿ ಭರ್ಜರಿ ಲುಕ್ ಕಂಡಿದ್ದಾರೆ.

World Coconut Day 2022 : ವಿಶ್ವ ತೆಂಗು ದಿನ- ತೆಂಗಿನಕಾಯಿಯ ಅದ್ಭುತ ಪ್ರಯೋಜನಗಳು ಇವುWorld Coconut Day 2022 : ವಿಶ್ವ ತೆಂಗು ದಿನ- ತೆಂಗಿನಕಾಯಿಯ ಅದ್ಭುತ ಪ್ರಯೋಜನಗಳು ಇವು

ಗಡ್ಡ ಪುರುಷರ ಮುಖದ ಸೌಂದರ್ಯವರ್ಧಕವೂ ಹೌದು. ಹಲವು ವ್ಯಕ್ತಿಗಳ ಮುಖಕ್ಕೆ ಕ್ಲೀನ್ ಶೇವ್‌ಗಿಂತ ಗಡ್ಡ ಹೆಚ್ಚು ಸುಂದರವಾಗಿ ಕಾಣುವುದನ್ನು ನೀವು ಗಮನಿಸಿರಬಹುದು. ನಮ್ಮಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ಯಾರಾದರೂ ಗಡ್ಡ ಬಿಟ್ಟರೆ ಯಾಕೋ ದೇವದಾಸ ಎಂದು ಹಾಸ್ಯ ಮಾಡುತ್ತಿದ್ದರು. ಹುಚ್ಚು ಹಿಡಿದವರು, ಲವ್ ಫೇಲ್ಯೂರ್ ಆದವರು, ಪೊರಿಕಿಗಳು ಗಡ್ಡ ಬಿಡುತ್ತಾರೆ ಎನ್ನುವ ಕಾಲ ಇತ್ತು. ಆದರೆ, ಅದೀಗ ಬದಲಾಗಿ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಗಡ್ಡ ಬಿಟ್ಟು ಟ್ರೆಂಡ್ ಸೃಷ್ಟಿಸಿದ್ದಾರೆ.

World Beard Day 2022 Date, History, Theme & Significance, Trending Styles in Kannada

ಗಡ್ಡದ ಇತಿಹಾಸ
ಆದಿಮಾನವರ ಕಾಲದಲ್ಲಿ ಗಡ್ಡ ಅನಿವಾರ್ಯವಾಗಿತ್ತು. ರೇಜರ್ ಬ್ಲೇಡ್ ಆವಿಷ್ಕಾರ ಆಗುವವರೆಗೂ ಗಂಡಸರು ಗಡ್ಡ ಬಿಡುವುದು ಇದ್ದೇ ಇತ್ತು.

ಭಾರತದಲ್ಲಿ ಇತಿಹಾಸ ಪೂರ್ವದಲ್ಲಿ ಋಷಿ ಮುನಿಗಳಿಗೆ ಗಡ್ಡ ಬಿಡುವುದು ಟ್ರೆಂಡ್ ಆಗಿತ್ತು. ಸಿಖ್, ಇಸ್ಲಾಂ ಧರ್ಮಗಳಲ್ಲಿ ಗಡ್ಡ ಆ ಧರ್ಮಗಳ ಪ್ರಮುಖ ಭಾಗವಾಗಿದೆ.

ವಿಕ್ರಾಂತ್ ಆಯ್ತು, ಬರಲಿದೆ ವಿಶಾಲ್; ಇದಾಗಲಿದೆ ವಿಶ್ವದ 4ನೇ ಅತಿದೊಡ್ಡ ಯುದ್ಧನೌಕೆವಿಕ್ರಾಂತ್ ಆಯ್ತು, ಬರಲಿದೆ ವಿಶಾಲ್; ಇದಾಗಲಿದೆ ವಿಶ್ವದ 4ನೇ ಅತಿದೊಡ್ಡ ಯುದ್ಧನೌಕೆ

ಗಡ್ಡ ಬಿಡದವರು ಕಾಡಿಗೆ
ವಿಶ್ವ ಗಡ್ಡ ದಿನದಂದು ವಿವಿಧ ಶೈಲಿಯ ಗಡ್ಡದಾರಿಗಳು ಮಿರಮಿರ ಮಿಂಚುವ ಗಳಿಗೆ. ಸ್ವೀಡನ್ ದೇಶದಲ್ಲಿ ಟಾಕೆ ಡಾನ್ಸ್‌ಬೋರ್ಗ್ ಮೊದಲಾದ ಕೆಲ ಪ್ರದೇಶಗಳಲ್ಲಿ ಕುತೂಹಲಕಾರಿ ಆಚರಣೆ ಇದೆ. ಅಲ್ಲಿ ಗಡ್ಡ ಬಿಡದ ಎಲ್ಲಾ ಜನರನ್ನೂ ಕಾಡಿಗೆ ಕಳುಹಿಸಿ ಒಂದು ದಿನವರೆಗೂ ನಗರಕ್ಕೆ ಬರದಂತೆ ಬಹಿಷ್ಕರಿಸುತ್ತಾರಂತೆ.

ಥರಹೇವಾರಿ ಶೈಲಿಯ ಗಡ್ಡ
ವಿಶ್ವಾದ್ಯಂತ ವಿವಿಧ ಶೈಲಿಯ ಗಡ್ಡಗಳು ಇವೆ. ನೂರೆಂಟು ರೀತಿಯ ದಾಡಿಗಳನ್ನು ಕಾಣಬಹುದು. ಕುರುಚುಲು ಗಡ್ಡ, ಮೇಕೆ ಗಡ್ಡ, ಫ್ರೆಂಚ್ ಗಡ್ಡ ಇತ್ಯಾದಿ ನಾನಾ ರೀತಿಯ ಗಡ್ಡಗಳನ್ನು ಕಾಣಬಹುದು.

ಗಡ್ಡದ ದಾಖಲೆಗಳು
ನಾರ್ವೆ ದೇಶದ ಹಾನ್ಸ್ ಎನ್ ಲಾಂಗಸೆತ್ ಎಂಬ ವ್ಯಕ್ತಿ 19ನೇ ಶತಮಾನದಲ್ಲಿ 17 ಅಡಿ 6 ಅಂಗುಲದಷ್ಟು ಉದ್ದ ಗಡ್ಡ ಬಿಟ್ಟಿದ್ದ. ಅದು ವಿಶ್ವದ ಅತಿ ದೊಡ್ಡ ಗಡ್ಡ ಎಂಬ ದಾಖಲೆ ಆಗಿದೆ. ಆ ದಾಖಲೆಯನ್ನು ಯಾರಿಗೂ ಮುರಿಯಲು ಆಗಿಲ್ಲ. ಈಗ ಅಷ್ಟು ದೊಡ್ಡ ಗಡ್ಡ ಬಿಡುವ ಆಲೋಚನೆ ಯಾರಿಗೂ ಬರಲ್ಲ ಬಿಡಿ.

World Beard Day 2022 Date, History, Theme & Significance, Trending Styles in Kannada

ಇನ್ನು, 2013ರಲ್ಲಿ ಲಿತುವೇಇಯಾ ದೇಶದ ಆಂಟನಾಸ್ ಕಾಂಟ್ರಿಮಾಸ್ ಎಂಬಾತ ತಮ್ಮ ಉದ್ದದ ಗಡ್ಡದಿಂದ 140 ಪೌಂಡ್ ತೂಕದ ಮಹಿಳೆಯನ್ನು ಕಟ್ಟಿ ಮೇಲೆತ್ತಿದ್ದ. 140 ಪೌಂಡ್ ಅಂದರೆ ಸುಮಾರು 63 ಕಿಲೋ ತೂಕ.

ಗಡ್ಡ ಸಂಭಾಳಿಸುವುದು
ಗಡ್ಡ ಬಿಡುವುದು ದೊಡ್ಡ ವಿಷಯವಲ್ಲ. ಗಡ್ಡವನ್ನು ನಿಯಮಿತವಾಗಿ ಟ್ರಿಮ್ ಮಾಡುತ್ತಿರಬೇಕು. ಇಲ್ಲದಿದ್ದರೆ ಯದ್ವಾತದ್ವಾ ಆಗಿ ಬೆಳೆಯುತ್ತದೆ. ಗಡ್ಡವನ್ನು ನಿಯಮಿತವಾಗಿ ಸ್ಚಚ್ಛಗೊಳಿಸುತ್ತಿರಬೇಕು. ಅದಕ್ಕೆ ಕೆಲ ಟಿಪ್ಸ್ ಇಲ್ಲಿದೆ.

* ಮೈಲ್ಡ್ ಆಗಿರುವ ಶಾಂಪೂವನ್ನು ನಿಮ್ಮ ಗಡ್ಡ ಸ್ವಚ್ಛತೆಗೆ ಬಳಸಬೇಕು. ತಲೆಗೆ ಹಾಕುವ ಶಾಂಪೂವನ್ನು ಗಡ್ಡಕ್ಕೆ ಹಚ್ಚಬೇಡಿ. ಇದರಿಂದ ಮುಖದ ಚರ್ಮಕ್ಕೆ ತೊಂದರೆಯಾಗಬಹುದು, ಗಡ್ಡದ ಕೂದಲೂ ಒರಟೊರಟಾಗಬಹುದು.

* ಗಡ್ಡಕ್ಕೆಂದೇ ತೈಲ ಸಿಗುತ್ತದೆ. ಅದನ್ನು ಹಚ್ಚಿಕೊಳ್ಳುವುದರಿಂದ ಗಡ್ಡ ಬಹಳ ನೀಟ್ ಆಗಿ ಕೂರುತ್ತದೆ.

* ಗಡ್ಡವನ್ನು ಟ್ರಿಮ್ ಮಾಡಿಕೊಳ್ಳಲು ಒಳ್ಳೆಯ ಟ್ರಿಮ್ಮರ್ ಇಟ್ಟುಕೊಳ್ಳಿ. ಆದರೆ ಟ್ರಿಮ್ ಮಾಡುವಾಗ ಜೋಪಾನ.

* ಕ್ಲೀನ್ಸರ್ ಮೂಲಕ ನಿಮ್ಮ ಗಡ್ಡವನ್ನು ಆಗಾಗ್ಗೇ ತೊಳೆದುಕೊಳ್ಳಿ. ಆದರೆ, ತೇವವನ್ನು ಟವಲಿನಿಂದ ಉಜ್ಜಿ ಒರೆಸಬೇಡಿ. ಟವಲನ್ನು ಮೆದವಾಗಿ ಒತ್ತಿದರೆ ಸಾಕು.

* ಬಾಚಣಿಕೆಯಿಂದ ಗಡ್ಡವನ್ನು ದಿನವೂ ಬಾಚಿರಿ.

(ಒನ್ಇಂಡಿಯಾ ಸುದ್ದಿ)

English summary
September 3 is celebrated as World Beard Day. Beard is considered as manly and it enhances the beauty of men. Beard has religious significance in few regions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X