'Makes me feel' ನಿತ್ಯ ಒಂದು ಬಾಟಲ್ ಜಾನ್ಸನ್ ಬೇಬಿ ಪೌಡರ್‌ ತಿನ್ನುವ ಮಹಿಳೆ!

ಜಗತ್ತು ಬದಲಾಗಿ ಹೋಗಿದೆ. ತಿನ್ನಬಾರದನ್ನ ಮನುಷ್ಯ ಇಷ್ಟ ಪಟ್ಟು ತಿನ್ನಲು ರೂಢಿಸಿಕೊಳ್ಳುತ್ತಿದ್ದಾನೆ. ಯುಎಸ್‌ನ ಒಬ್ಬ ಮಹಿಳೆ ಜಾನ್ಸನ್ ಬೇಬಿ ಪೌಡರ್‌ ಅನ್ನು ತಿನ್ನುವುದನ್ನು ರೂಢಿಸಿಕೊಂಡಿದ್ದಾಳೆ. ಇದನ್ನು ಸ್ವತ: ಮಹಿಳೆ ಹೇಳಿಕೊಂಡಿದ್ದು ಇದಕ್ಕೆ ಕಾರಣವನ್ನೂ ಕೇಳಿಕೊಂಡಿದ್ದಾಳೆ.

ಹೀಗೆ ಬೇಬಿ ಪೌಡರ್‌ ತಿನ್ನುವ ಮಹಿಳೆಯ ಹೆಸರು ಡ್ರೆಕಾ ಮಾರ್ಟಿನ್. 27 ವರ್ಷದ ಡ್ರೆಕಾ ಮಾರ್ಟಿನ್ ನ್ಯೂ ಓರ್ಲಿಯನ್ಸ್ನ ಲೂಯಿಸಿಯಾನದಿಂದ ಬಂದವರು. ಅಮೆರಿಕದಲ್ಲಿರುವ ಇವರು ಬ್ಯೂಟೀಷಿಯನ್ ಆಗಿದ್ದಾರೆ. ಇವರು ಸಂದರ್ಶನವೊಂದರಲ್ಲಿ ನಿತ್ಯ ಒಂದು ಬಾಟಲ್ ಜಾನ್ಸನ್ ಬೇಬಿ ಪೌಡರ್‌ನನ್ನು ಸಂಪೂರ್ಣ ತಿಂದು ಖಾಲಿ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ. ಹೀಗೆ ವರ್ಷಕ್ಕೆ ಇವರು 3 ಲಕ್ಷ ರೂಪಾಯಿ ಇದಕ್ಕಾಗಿ ಖರ್ಚು ಮಾಡುತ್ತಾರಂತೆ. ಈ ಹೇಳಿಕೆ ಕೇಳುಗರನ್ನು ಬೆಚ್ಚಿ ಬೀಳಿಸಿದೆ.

 Woman eats a bottle of Johnsons baby powder daily!

ಇವರು ಈ ಹಿಂದೆ ತನ್ನ ಮಗುವಿಗಾಗಿ ಜಾನ್ಸನ್ ಬೇಬಿ ಪೌಡರ್‌ ಅನ್ನು ತಂದಿದ್ದರು. ಆರಂಭದಲ್ಲಿ ಇದನ್ನು ಸ್ವಲ್ಪ ರುಚಿ ನೋಡಿದರು ಅಷ್ಟೇ. ಬಳಿಕ ಇದನ್ನು ನಿತ್ಯ ತಿನ್ನುವುದನ್ನು ರೂಢಿಸಿಕೊಂಡು ಈಗ ದಿನಕ್ಕೆ ಒಂದು ಬಾಟಲ್ ಖಾಲಿ ಮಾಡುತ್ತಾರೆ. ಅಂದರೆ 623gನ ಜಾನ್ಸನ್‌ನ ಅಲೋ ಮತ್ತು ವಿಟಮಿನ್ ಇ ಯ ಬಾಟಲಿಯಲ್ಲಿನ ಪೌಡರ್‌ ಅನ್ನು ನಿತ್ಯ ಸೇವಿಸುತ್ತಾರೆ. ಇದಕ್ಕಾಗಿ ಅವರು ನಿತ್ಯದ ಆಹಾರವನ್ನೂ ತ್ಯಾಗ ಮಾಡಿದ್ದಾರೆ. ಸ್ಪೂನ್‌ನಿಂದ ಅದನ್ನು ಬಾಯಿಯಲ್ಲಿ ಇಟ್ಟುಕೊಂಡು ಕರಗಿಸಿಕೊಳ್ಳುತ್ತಾ ನುಂಗುವ ಮೊದಲು 40 ಸೆಕೆಂಡುಗಳವರೆಗೆ ಅದನ್ನು ಅಗಿಯುವುದಾಗಿ ಹೇಳಿಕೊಂಡಿದ್ದಾರೆ.

ಜೊತೆಗೆ ಅವರು ಒಂದು ಬಾಟಲಿಗೆ ಪ್ರತಿದಿನ 1,162 ರೂಪಾಯಿ ಖರ್ಚು ಮಾಡುತ್ತಾರೆ. ಈ ವರ್ಷ ಸುಮಾರು 3.1 ಲಕ್ಷ ರೂಪಾಯಿ ಇದಕ್ಕಾಗಿ ಖರ್ಚು ಮಾಡಿದ್ದಾರಂತೆ. ಬೇಬಿ ಪೌಡರ್ ಚರ್ಮದ ಬಳಕೆಗೆ ಮಾತ್ರ ಎಂದು ಜಾನ್ಸನ್ ಎಚ್ಚರಿಕೆ ನೀಡಿದರೂ, ಇದನ್ನು ಸೇವಿಸುವ ಮೇಕಪ್ ಕಲಾವಿದೆಯಾದ ಡ್ರೆಕಾಗೆ ಯಾವುದೇ ಆರೋಗ್ಯ ಅಥವಾ ಜೀರ್ಣಕಾರಿ ಸಮಸ್ಯೆಗಳು ಕಂಡು ಬಂದಿಲ್ಲ. ತನ್ನ ಮಗನು ಅದೇ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದೆಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ. ಏಕೆಂದರೆ ಅವರು ಅದನ್ನು ಸೇವಿಸುವುದನ್ನು ನೋಡಿದ ನಂತರ ಮಗನು ಪುಡಿಯನ್ನು ತಿನ್ನಲು ಕೇಳುತ್ತಾನೆ ಎಂದು ಅವರು ಹೇಳಿದ್ದಾರೆ.

ಡ್ರೆಕಾ ಮಾರ್ಟಿನ್ ಅವರು ಪಿಕಾದಿಂದ ಬಳಲುತ್ತಿದ್ದಾರೆ. ಇದು ಆಹಾರೇತರ ವಸ್ತುಗಳ ಸೇವನೆಯ ಕಾಯಿಲೆಯಾಗಿದೆ. ಡ್ರೆಕಾ ಇದನ್ನು ವಿವರಿಸುತ್ತಾ... "ನಾನು ಬೇಬಿ ಪೌಡರ್ ತಿನ್ನಲು ಇಷ್ಟಪಡುತ್ತೇನೆ. ಅದರ ವಾಸನೆಯು ತಿನ್ನಲು ಮನಸ್ಸಾಗಿಸುತ್ತದೆ. ಇದು ನನಗೆ ಒಳ್ಳೆಯ ಅನುಭವವನ್ನು ನೀಡುತ್ತದೆ ಮತ್ತು ನನಗೆ ಸಂತೋಷವನ್ನು ನೀಡುತ್ತದೆ'' ಎನ್ನುತ್ತಾರೆ ಡ್ರೆಕಾ.

ಇದು ಒಂದು ಚಟವಾಗಿದ್ದು ನಾನು ನಿಲ್ಲಿಸಲು ಪ್ರಯತ್ನಿಸುತ್ತೇನೆ ಆದರೆ ನನಗೆ ಸಾಧ್ಯವಾಗುತ್ತಿಲ್ಲ. ಅದರ ಬಗ್ಗೆ ಯೋಚಿಸಿದಾಗ ನನ್ನ ಬಾಯಲ್ಲಿ ನೀರೂರುತ್ತದೆ. ನಾನು ಬೇಬಿ ಪೌಡರ್ ತಿನ್ನುವಷ್ಟು ಆಹಾರವನ್ನು ತಿನ್ನುವ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಪೌಡರ್ ಹಾಗೂ ಆಹಾರ ಎರಡನ್ನು ಇಟ್ಟು ಯಾವುದು ಬೇಕು ಎಂದರೆ ನನಗೆ ಆಹಾರಕ್ಕಿಂತ ಬೇಬಿ ಪೌಡರ್ ಮುಖ್ಯ ಎನಿಸುತ್ತದೆ. ಹೀಗಾಗಿ ನಾನು ಇದಕ್ಕಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತೇನೆ ಎನ್ನುತ್ತಾರೆ ಡ್ರೆಕಾ.

ನಾನು ಒಂದು ತಿಂಗಳ ಕಾಲ ಅದನ್ನು ನನ್ನ ಅಮ್ಮನಿಂದ ರಹಸ್ಯವಾಗಿಟ್ಟಿದ್ದೇನೆ. ಆದರೆ ಬೇಬಿ ಪೌಡರ್ ಅನ್ನು ಬೇಗನೆ ಬಳಸುವುದನ್ನು ಅವಳು ಗಮನಿಸಿದಳು. ಸಾಮಾನ್ಯವಾಗಿ ಇದು ಎರಡು ತಿಂಗಳು ಇರುತ್ತದೆ. ಆದರೆ ಅದು ಬೇಗ ಖಾಲಿಯಾಗುತ್ತಿತ್ತು. ಆದ್ದರಿಂದ ಅವಳಿಗೆ ಅನುಮಾನ ಬಂದಿದೆ. ನಾನು ಅದನ್ನು ಎಲ್ಲರಿಂದ ಮರೆಮಾಡಲು ಪ್ರಯತ್ನಿಸುತ್ತೇನೆ. ನನ್ನ ಬಾಯಿಯಲ್ಲಿ ಅದನ್ನು ತುಂಬಿಕೊಂಡಾಗ ಏನಿದೆ ಎಂದು ಅವರು ಕೇಳುತ್ತಾರೆ. ಆಗ ನಾನು ಇದು ಮಗುವಿನ ಪುಡಿ ಎಂದು ನಾನು ಅವರಿಗೆ ಸುಳ್ಳು ಹೇಳುತ್ತೇನೆ. ಆದರೂ ಇದನ್ನು ತಿಳಿದ ಸ್ನೇಹಿತರು ಮತ್ತು ಕುಟುಂಬದವರು ನನ್ನ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿ ಇದನ್ನು ತಿನ್ನುವುದನ್ನು ನಿಲ್ಲಿಸಲು ನನಗೆ ಸಲಹೆ ನೀಡುತ್ತಾರೆ ಎಂದು ಅವರು ಹೇಳುತ್ತಾರೆ.

ಒಟ್ಟಿನಲ್ಲಿ ಏನೇ ಆಗಲಿ ಇಂತಹ ವಿಚಿತ್ರ ಘಟನೆಗಳು ನಮ್ಮನ್ನು ನಿಜಕ್ಕೂ ಬೆಚ್ಚಿ ಬೀಳಿಸುತ್ತವೆ. ಮುಂಬರುವ ದಿನಗಳ ಬಗ್ಗೆ ಭೀತಿಯನ್ನು ಹುಟ್ಟಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+