• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಪಾಲಿಗೆ ಕಾಂಗರೂ ಆದ ಒಕ್ಕಲಿಗ ಮಠದ ನಂಜಾವಧೂತ ಸ್ವಾಮೀಜಿ

By ಒನ್ಇಂಡಿಯಾ ಡೆಸ್ಕ್
|

ರಾಜಕಾರಣದಲ್ಲಿ ಜಾತಿ ಎಂಬ ಸಮೀಕರಣ ಬಿಟ್ಟು ಫಲಿತಾಂಶಗಳನ್ನು ಆಲೋಚಿಸುವುದೇ ಕಷ್ಟ. ಮೇಲುನೋಟಕ್ಕೆ ಆಡುವಂಥ ಜಾತ್ಯತೀತದ ಮಾತುಗಳು ಜಾತಿಯ ಬೇರುಗಳನ್ನು ಕತ್ತರಿಸುವಷ್ಟು ಶಕ್ತಿಶಾಲಿ ಆಗಿಲ್ಲ ಅನ್ನೋದು ಚುನಾವಣೆಗಳಲ್ಲಿ ಸಾಬೀತಾಗುತ್ತಲೇ ಬರುತ್ತಿವೆ. ಇಲ್ಲಿ ತಪ್ಪು- ಸರಿಗಳೆಂಬ ತೀರ್ಪು ನೀಡುವುದು ಅಸಾಧ್ಯ ಎನಿಸಿಬಿಡುತ್ತದೆ.

ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಮಾತುಗಳನ್ನೇ ಗಮನಿಸಿ, ಒಕ್ಕಲಿಗರ ಕೋಪವನ್ನು ಎದುರಿಸುವ ಧೈರ್ಯ ಮಾಡಬೇಡಿ. ಒಂದು ವೇಳೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರ ಕೆಡುವುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು 'ಸಾಫ್ಟ್' ಧ್ವನಿಯಲ್ಲೇ ಎಚ್ಚರಿಕೆ ನೀಡಿದ್ದಾರೆ.

ಮೋದಿಗೆ ವಾರ್ನಿಂಗ್ ಕೊಟ್ಟ ನಂಜಾವಧೂತ ಶ್ರೀಗಳಿಗೆ ಐದು ಪ್ರಶ್ನೆಗಳು

ಇಂಥದ್ದೊಂದು ಮಾತು ಬಂದಿದ್ದು ಯಾವ ಹಿನ್ನೆಲೆಯಲ್ಲಿ ಅನ್ನೋದನ್ನು ಗಮನಿಸಿ ನೋಡಿ. ಎಸ್ಸೆಂ ಕೃಷ್ಣ ನಂತರ ಕರ್ನಾಟಕದ ಮುಖ್ಯಮಂತ್ರಿ ಗಾದಿ ಅಲಂಕರಿಸಿದ ಇಬ್ಬರು ಒಕ್ಕಲಿಗರು ಅಂದರೆ ಅದು ಕುಮಾರಸ್ವಾಮಿ ಹಾಗೂ ಸದಾನಂದ ಗೌಡ. ಉಳಿದಂತೆ ಧರಂ ಸಿಂಗ್ ಹೊರತುಪಡಿಸಿದರೆ, ಇಬ್ಬರು ಲಿಂಗಾಯತರು (ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್) ಮತ್ತು ಕುರುಬ ಸಮುದಾಯದ ಸಿದ್ದರಾಮಯ್ಯ ಸಿಎಂ ಆದರು.

ಅದೇ ಸಮಾಜದ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ

ಅದೇ ಸಮಾಜದ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ

ಹೀಗೆ ಲಿಂಗಾಯತರು ಹಾಗೂ ಕುರುಬ ಸಮಾಜದಿಂದ ಬಂದವರು ಮುಖ್ಯಮಂತ್ರಿ ಆದಾಗ ತುಂಬ ಸಹಜವೇನೋ ಅನ್ನೋ ಹಾಗೆ ಅದೇ ಸಮಾಜದ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ ಬಂದು ಕೂರುತ್ತಾರೆ. ಕೆಲವು ಅನುಕೂಲಗಳು ಅವರ ಪಾಲಿಗೆ ದೊರೆಯುತ್ತವೆ. ಆ ಸಮಾಜದ ಮಠ-ಮಾನ್ಯಗಳು, ವಿದ್ಯಾರ್ಥಿ ನಿಲಯಗಳು, ಸಭಾ ಭವನಗಳು ಉಸಿರು ಪಡೆದುಕೊಳ್ಳುತ್ತವೆ. ಈ ಪೈಕಿ ಅಧಿಕಾರ ಕೇಂದ್ರದಲ್ಲಿ ಆ ಸಮಾಜದ ಪ್ರಮುಖ ಮುಖಂಡರು ಇದ್ದು, ಬೇಕಾದ ಕೆಲಸಗಳನ್ನು ಒಂದಿಷ್ಟು ಅಕ್ಕರಾಸ್ಥೆಯಿಂದ ಮಾಡಿಕೊಡುತ್ತಾರೆ. ಸಿದ್ದರಾಮಯ್ಯ ಅವರು ಒಕ್ಕಲಿಗ ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಹುಯಿಲೆದ್ದಿದ್ದು ನಿಜ.

ಒಕ್ಕಲಿಗರ ವಿರೋಧಿ ಎಂಬ ಇಮೇಜ್

ಒಕ್ಕಲಿಗರ ವಿರೋಧಿ ಎಂಬ ಇಮೇಜ್

ಕೆಂಪಯ್ಯ ಅಂಥವರು ಸರಕಾರದ ಮಟ್ಟದಲ್ಲಿ ಪ್ರಭಾವಿಗಳಾದರು. ಕುರುಬ ಸಮಾಜದ ಕೆಲವರನ್ನು ವಿಶ್ವವಿದ್ಯಾಲಯದಲ್ಲಿ ಒಳ್ಳೆ ಸ್ಥಾನಗಳಲ್ಲಿ ಕೂರಿಸಲಾಯಿತು. ಒಟ್ಟಾರೆ ಕಾಂಗ್ರೆಸ್ ಗೆ ಒಕ್ಕಲಿಗರ ವಿರೋಧಿ ಎಂಬ ಹಣೆಪಟ್ಟಿ ಅಂಟಿಕೊಂಡು, ಅದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಬೇಕಾಯಿತು. ಒಕ್ಕಲಿಗ ಸಮಾಜದ ಅಧಿಕಾರಿಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂಬುದು ದೊಡ್ಡ ಮಟ್ಟದಲ್ಲೇ ಸುದ್ದಿಯಾಯಿತು. ಎಸ್ಸೆಂ ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರು ಲಿಂಗಾಯತರ ವಿರೋಧಿ ಎಂದು ಹೇಗೆ ಬಿಂಬಿತವಾಗಿತ್ತೋ ಅದೇ ರೀತಿ ಈಗ ಸಿದ್ದರಾಮಯ್ಯ ಸರಕಾರ ಒಕ್ಕಲಿಗರ ವಿರೋಧಿ ಎಂಬ ಇಮೇಜ್ ಸೃಷ್ಟಿಯಾಯಿತು.

ಒಕ್ಕಲಿಗರು ಮುಖ್ಯಮಂತ್ರಿ ಆಗಲಿ, ಆದರೆ ಸಲೀಸಾಗಿ ಬಿಡಲ್ಲ

ಒಕ್ಕಲಿಗರು ಮುಖ್ಯಮಂತ್ರಿ ಆಗಲಿ, ಆದರೆ ಸಲೀಸಾಗಿ ಬಿಡಲ್ಲ

ಈ ಮಧ್ಯೆ ಒಕ್ಕಲಿಗರ ಸಂಘದ ಕಾರ್ಯಕ್ರಮವೊಂದರಲ್ಲಿ ದೇವೇಗೌಡರು ಹೇಳಿದ್ದ ಮಾತೊಂದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ಡಿ.ಕೆ.ಶಿವಕುಮಾರೋ, ಆರ್.ಅಶೋಕೋ ಅಥವಾ ಕುಮಾರಸ್ವಾಮಿಯೋ ಯಾರಾದರೂ ಮುಖ್ಯಮಂತ್ರಿ ಆಗಲಿ, ಪರವಾಗಿಲ್ಲ. ಆದರೆ ಅಷ್ಟು ಸುಲಭಕ್ಕೆ ಒಕ್ಕಲಿಗರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಬಿಡ್ತಾರೆ ಅಂದುಕೊಂಡಿದ್ದೀರಾ ಎಂದು ಹೇಳಿದ್ದರು. ಈಗಲೂ ಶಿವಕುಮಾರ್ ತಮ್ಮೆಲ್ಲ ರಾಜಕೀಯ ದ್ವೇಷ ಮರೆತು ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತಿದ್ದಾರೆ ಅಂದರೆ ಅದಕ್ಕೆ ಕಾರಣ ಒಕ್ಕಲಿಗ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದಾರಲ್ಲ ಅಂತಲೇ.

ಕುಮಾರಸ್ವಾಮಿ ಪಾಲಿಗೆ ಕಾಂಗರೂ ಅಂತಾದ ನಂಜಾವಧೂತ ಸ್ವಾಮೀಜಿ

ಕುಮಾರಸ್ವಾಮಿ ಪಾಲಿಗೆ ಕಾಂಗರೂ ಅಂತಾದ ನಂಜಾವಧೂತ ಸ್ವಾಮೀಜಿ

ಡಿ.ಕೆ.ಶಿವಕುಮಾರ್ ಅವರಿಗೆ ಬೆನ್ನಟ್ಟಿರುವ ಇಡಿ, ಐಟಿ ಇಲಾಖೆಗಳು, ಯಾವಾಗಲಾದರೂ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಕೆಡವಲು ಕಾದು ನಿಂತಿರುವ ಬಿಜೆಪಿ, ಸಿದ್ದರಾಮಯ್ಯ ಮತ್ತವರ ಟೀಂ ಭಿನ್ನಮತ ಇವೆಲ್ಲಕ್ಕೂ ಒಂದು ಪ್ರಬಲ ಸಂದೇಶ ರವಾನಿಸುವ ಅಗತ್ಯವಿತ್ತು. ಇವೆಲ್ಲವನ್ನು ಒಬ್ಬ ರಾಜಕೀಯ ನಾಯಕರು ಮಾಡಿದರೆ ಒಕ್ಕಲಿಗ ಸಮಾಜ ಅಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಒಬ್ಬರು ಸ್ವಾಮೀಜಿ ಮಾಡಿದರೆ ಅದರ ತೂಕವೇ ಬೇರೆ. ನಮ್ಮ ಸಮುದಾಯವನ್ನು ಕೆಣಕಿದರೆ, ಎದುರು ಹಾಕಿಕೊಂಡರೆ ಉತ್ತರ ಕೊಡಲು ಹಿಂದೆ- ಮುಂದೆ ಆಲೋಚಿಸುವುದಿಲ್ಲ ಎಂದಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನೇ ಗಮನಿಸಿ: ಬಿಜೆಪಿಗೆ ಮತ ಹಾಕಿ ಎನ್ನುತ್ತಿದ್ದ ಪೇಜಾವರ ಶ್ರೀಗಳು, ಬ್ರಾಹ್ಮಣ ಅಭ್ಯರ್ಥಿಗಳು ಯಾವುದೇ ಪಕ್ಷದಲ್ಲಿದ್ದರೂ ಗೆಲ್ಲಿಸಿ ಎಂಬ ಹೇಳಿಕೆ ನೀಡಿದ್ದರು. ಇನ್ನು ಲಿಂಗಾಯತ- ವೀರಶೈವ ಗಲಾಟೆ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಆದರೆ ನಂಜಾವಧೂತ ಸ್ವಾಮೀಜಿ ಒಕ್ಕಲಿಗ ಸಮಾಜದ ಧ್ವನಿ ಆಗಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಹೊಟ್ಟೆಯಲ್ಲಿಟ್ಟು ಕಾಯುವಂಥ ಕಾಂಗರೂ ಆಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why Pattanayakanahalli Nanjavadhootha seer backed CM Kumaraswamy?Here are the reasons behind warning to BJP. Swamiji supported JDS- Congress coalition government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more