ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಬಾರಿ ಬಜೆಟ್ ಮಂಡನೆ ದಾಖಲೆ ಯಾರ ಹೆಸರಿನಲ್ಲಿದೆ?

|
Google Oneindia Kannada News

ಬೆಂಗಳೂರು, ಮಾರ್ಚ್ 5: ಕರ್ನಾಟಕದ ಮುಖ್ಯಮಂತ್ರಿ ಹಾಗೂ ವಿತ್ತ ಸಚಿವರೂ ಆಗಿರುವ ಬಿ. ಎಸ್ ಯಡಿಯೂರಪ್ಪ ಅವರು 7ನೇ ಬಾರಿಗೆ ರಾಜ್ಯದ ಆಯವ್ಯಯ ಪತ್ರ ಮಂಡನೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.

ಆದರೆ ಹೆಚ್ಚು ಬಾರಿ ಬಜೆಟ್ ಮಂಡನೆ ದಾಖಲೆ ಕರ್ನಾಟಕದಲ್ಲಿ ದಿವಂಗತ ಸಿಎಂ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿದೆ. ಈ ದಾಖಲೆ ಸಮಕ್ಕೆ ನಿಂತಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ. ಬಿ.ಎಸ್ ಯಡಿಯೂರಪ್ಪ ಅವರು ಎಚ್. ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಉಪ ಮುಖ್ಯಮಂತ್ರಿ ಹಾಗೂ ವಿತ್ತ ಸಚಿವರಾಗಿ ಹಾಗೂ ಮುಖ್ಯಮಂತ್ರಿಗಳಾಗಿ ಒಟ್ಟು 7 ಬಾರಿ ಬಜೆಟ್ ಮಂಡಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸಿಎಂ ಪಟ್ಟ ತಪ್ಪಿದ್ದೇಕೆ?ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸಿಎಂ ಪಟ್ಟ ತಪ್ಪಿದ್ದೇಕೆ?

ರಾಮಕೃಷ್ಣ ಹೆಗಡೆ ಅವರು 23 ವರ್ಷಗಳ ಅವಧಿಯಲ್ಲಿ 13 ಬಜೆಟ್‌ಗಳನ್ನು ಮಂಡಿಸಿದ್ದರು. ಹೆಗಡೆಯವರು, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ವಿತ್ತ ಸಚಿವರಾಗಿ ಬಜೆಟ್ ಮಂಡಿಸಿದ್ದಾರೆ.

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿ ಹಾಗೂ ವಿತ್ತ ಸಚಿವರಾಗಿ ಬಜೆಟ್ ಮುಂದಿಟ್ಟಿದ್ದಾರೆ. ಆದರೆ, ಈ ಮೂವರನ್ನು ಗುಜರಾತಿನ ಮಾಜಿ ವಿತ್ತ ಸಚಿವರೊಬ್ಬರು ಮೀರಿಸಿದ್ದಾರೆ. ಕರ್ನಾಟಕದೊಡನೆ ಈಗಲೂ ಅವರು ನಂಟು ಹೊಂದಿದ್ದಾರೆ. ಹೆಚ್ಚಿನ ವಿವರ ಮುಂದಿದೆ...

23 ವರ್ಷ ಅವಧಿಯಲ್ಲಿ 13 ಬಾರಿ

23 ವರ್ಷ ಅವಧಿಯಲ್ಲಿ 13 ಬಾರಿ

ರಾಮಕೃಷ್ಣ ಹೆಗಡೆ ಅವರು 23 ವರ್ಷಗಳ ಅವಧಿಯಲ್ಲಿ 13 ಬಜೆಟ್‌ಗಳನ್ನು ಮಂಡಿಸಿದ್ದರು. ಮೊದಲು ವೀರೇಂದ್ರ ಪಾಟೀಲರು ಮುಖ್ಯ ಮಂತ್ರಿಯಾಗಿದ್ದಾಗ (1966-1971) ಹೆಗಡೆಯವರು ಹಣಕಾಸು ಸಚಿವರಾಗಿ ಆರು ಬಜೆಟ್ ಮಂಡಿಸಿದ್ದರು. ಆಮೇಲೆ ಸ್ವತಃ ತಾವೇ ಮುಖ್ಯ ಮಂತ್ರಿ ಮತ್ತು ಹಣಕಾಸು ಸಚಿವರಾಗಿ (1983 - 1988) ಏಳು ಬಜೆಟ್ ಮಾಡಿದ್ದರು.

ಹೆಗಡೆ ಸಮಕ್ಕೆ ನಿಂತ ಸಿದ್ದರಾಮಯ್ಯ

ಹೆಗಡೆ ಸಮಕ್ಕೆ ನಿಂತ ಸಿದ್ದರಾಮಯ್ಯ

ಸಿದ್ದರಾಮಯ್ಯ ಸಾಧನೆ: ಇಪ್ಪತ್ಮೂರು ವರ್ಷಗಳಲ್ಲೇ 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಅದರಲ್ಲಿ ಎರಡು ಬಜೆಟ್‌ಗಳನ್ನು ಹಣಕಾಸು ಸಚಿವನಾಗಿ ಮಂಡಿಸಿದ್ದರೆ, ಐದು ಬಜೆಟ್‌ಗಳನ್ನು ಉಪಮುಖ್ಯಮಂತ್ರಿಯಾಗಿ ಮಂಡಿಸಿದ್ದಾರೆ. ಇನ್ನು ಮುಖ್ಯಮಂತ್ರಿಯಾಗಿ ಸತತ 6 ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಯಡಿಯೂರಪ್ಪ ಸತತ ಬಜೆಟ್ ಮಂಡನೆ ಸಾಧನೆಯನ್ನು ಮುರಿದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸಿಎಂ ಪಟ್ಟ ತಪ್ಪಿದ್ದೇಕೆ?ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸಿಎಂ ಪಟ್ಟ ತಪ್ಪಿದ್ದೇಕೆ?

ಮೂವರು ಸಿಎಂ ಆಡಳಿತದಲ್ಲಿ ಬಜೆಟ್

ಮೂವರು ಸಿಎಂ ಆಡಳಿತದಲ್ಲಿ ಬಜೆಟ್

1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಮೊದಲ ಬಾರಿಗೆ ಹಣಕಾಸು ಸಚಿವನಾಗಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದರು. ನಂತರ 1996ರಲ್ಲೂ ಬಜೆಟ್ ಮಂಡನೆ ಮಾಡಿದ್ದರು. ಜೆ.ಎಚ್ ಪಟೇಲ್ ಸರ್ಕಾರದಲ್ಲಿ 3 ಬಾರಿ(1997, 1998, 1999ರಲ್ಲಿ) ಹಾಗೂ ಧರಂಸಿಂಗ್ ಸರ್ಕಾರದಲ್ಲಿ 2005 ಹಾಗೂ 2006ರಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ.

ದಾಖಲೆ ವಜುಭಾಯಿವಾಲ ಹೆಸರಿನಲ್ಲಿದೆ

ದಾಖಲೆ ವಜುಭಾಯಿವಾಲ ಹೆಸರಿನಲ್ಲಿದೆ

ಆದರೆ, ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ದಾಖಲೆ ಕರ್ನಾಟಕದ ಹಾಲಿ ರಾಜ್ಯಪಾಲ ವಜುಭಾಯಿ ವಾಲ ಹೆಸರಿನಲ್ಲಿದೆ. ವಜುಭಾಯಿ ವಾಲ ಅವರು ಗುಜರಾತ್ ರಾಜ್ಯದಲ್ಲಿ ವಿತ್ತ ಸಚಿವರಾಗಿ 18 ಬಾರಿ ಬಜೆಟ್ ಮಂಡನೆ ಮಾಡಿದ್ದು, ಇಂದಿಗೂ ದಾಖಲೆಯಾಗಿ ಉಳಿದಿದೆ. ಐದು ಬಾರಿ ಶಾಸಕರಾಗಿದ್ದ ವಜುಭಾಯಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವ ಮುನ್ನ 2012ರಲ್ಲಿ 18ನೇ ಬಾರಿಗೆ ಬಜೆಟ್ ಮಂಡಿಸಿದ್ದರು. 1996-97ರಲ್ಲಿ ಮೊದಲ ಬಜೆಟ್, 2011-12ರಲ್ಲಿ ಕೊನೆಯ ಬಜೆಟ್ ಮಂಡಿಸಿದ್ದರು.

English summary
Who has presented Budget more times Siddaramaih or Yediyurappa? Siddaramaiah presented record 13th time and 6th time in a row, Late CM Ramakrishna Hegde also presented 13 times.Yediyurappa 7 times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X