• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತಾಬ್ ಬಚ್ಚನ್ ನೋಡಲು ಬಂದಿದ್ದೆ ಎಂದಿದ್ದ 26/11ರ ದಾಳಿಯ ಉಗ್ರ ಕಸಬ್

|

"ನೀವು ಗೆದ್ದಿರಿ, ನಾನು ಸೋತೆ" ನಿವೃತ್ತ ಪೊಲೀಸ್ ಅಧಿಕಾರಿ ರಮೇಶ್ ಮಹಲೆ ಅವರಿಗೆ ಉಗ್ರಗಾಮಿ ಅಜ್ಮಲ್ ಕಸಬ್ ತನ್ನನ್ನು ನೇಣಿಗೇರಿಸುವ ಮುನ್ನ ಹಿಂದಿಯಲ್ಲಿ ಹೇಳಿದ ಮಾತಿದು. 2012ರ ನವೆಂಬರ್ ನಲ್ಲಿ ಆತನನ್ನು ನೇಣಿಗೇರಿಸುವ ಒಂದು ದಿನ ಮೊದಲು ಆತ ಹೇಳಿದ ಮಾತಿದು ಎಂದಿದ್ದಾರೆ ರಮೇಶ್.

ನವೆಂಬರ್ 26, 2008ರಲ್ಲಿ ನಡೆದ ಮುಂಬೈ ದಾಳಿ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿದ್ದ ರಮೇಶ್ ಕೆಲ ವಿಚಾರಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಲಷ್ಕರ್-ಇ-ತೈಬಾದಿಂದ ತರಬೇತು ಪಡೆದಿದ್ದ ಕಸಬ್, ಸಿಕ್ಕಿಬಿದ್ದಿದ್ದ. ಆತನ ವಿರುದ್ಧ ಎಂಬತ್ತು ಅಪರಾಧ ಪ್ರಕರಣಗಳು ದಾಖಲಾಗಿದ್ದವು.

ಉಗ್ರ ಹೆಡ್ಲಿ ತಪ್ಪೊಪ್ಪಿಗೆ, ರೋಚಕ ಸತ್ಯಗಳ ವಿವರ ಇಲ್ಲಿದೆ

ಆತ ಸೆರೆ ಸಿಕ್ಕ ನಂತರ ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ದಾಖಲಿಸಿ, ಮೊದಲ ಬಾರಿಗೆ ಪ್ರಶ್ನೆ ಮಾಡಲು ಆರಂಭಿಸಿದ್ದನ್ನು ಮಹಲೆ ನೆನಪಿಸಿಕೊಳ್ಳುತ್ತಾರೆ. ಅವರೀಗ ನಿವೃತ್ತರಾಗಿದ್ದಾರೆ. ಅಂದಹಾಗೆ ಆರ್ಥರ್ ರಸ್ತೆಯಲ್ಲಿ ವಿಶೇಷವಾಗಿ ನಿರ್ಮಿಸಿದ ಬುಲೆಟ್ ಪ್ರೂಫ್, ಹೆಚ್ಚು ಭದ್ರತಾ ವ್ಯವಸ್ಥೆಯ ಜೈಲಿಗೆ ಸ್ಥಳಾಂತರ ಮಾಡುವ ಮುಂಚೆ ಕಸಬ್ ಎಂಬತ್ತೊಂದು ದಿನಗಳ ಕಾಲ ಕ್ರೈಂ ಬ್ರ್ಯಾಂಚ್ ವಶದಲ್ಲೇ ಇದ್ದ.

ಅಫ್ಜಲ್ ಗುರುವನ್ನು ನೇಣಿಗೆ ಹಾಕಿಲ್ಲ, ತಾನೂ ಬದುಕ್ತೀನಿ ಅಂದಿದ್ದ

ಅಫ್ಜಲ್ ಗುರುವನ್ನು ನೇಣಿಗೆ ಹಾಕಿಲ್ಲ, ತಾನೂ ಬದುಕ್ತೀನಿ ಅಂದಿದ್ದ

"ಕೋರ್ಟ್ ನಿಂದ ಮರಣದಂಡನೆ ವಾರಂಟ್ ಬರುವ ತನಕ ಭಾರತದ ಕಾನೂನು ತಾನು ಬದುಕುತ್ತೇನೆ ಅಂತಲೇ ಅಂದುಕೊಂಡಿದ್ದ" ಎನ್ನುತ್ತಾರೆ 2013ರಲ್ಲಿ ನಿವೃತ್ತರಾಗಿರುವ ಮಹಲೆ. ಇಪ್ಪತ್ತೊಂದು ವರ್ಷದ ಕಸಬ್ ನಿಂದ ಕಠಿಣ ವಿಚಾರಣೆ ಮೂಲಕ ಬಾಯಿ ಬಿಡಿಸಲು ಸಾಧ್ಯವಿಲ್ಲ ಎಂಬುದು ಬಹಳ ಬೇಗ ಗೊತ್ತಾಯಿತು. ಆದ್ದರಿಂದ ತಾನಾಗಿಯೇ ಎಲ್ಲ ವಿಚಾರ ಹೇಳಿಕೊಳ್ಳಬೇಕು ಆ ರೀತಿ ಮಾಡಿದೆವು. ಆತನಿಗೆ ಎರಡು ಜತೆ ಹೊಸ ಬಟ್ಟೆ ಕೂಡ ಕೊಡಿಸಿದೆವು. ಒಂದು ದಿನ ಆತನ ಜತೆಗೆ ಮಾತನಾಡುತ್ತಿದ್ದಾಗ ಅವನ ಮನಸ್ಸಿನಲ್ಲಿದ್ದ ವಿಚಾರ ತಿಳಿದು ಅಚ್ಚರಿ ಆಯಿತು. ಭಾರತದಲ್ಲಿ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ತನಗೆ ಆ ಶಿಕ್ಷೆ ಆಗುವುದಿಲ್ಲ ಅಂತಲೇ ನಂಬಿದ್ದ ಕಸಬ್. ಭಾರತದ ಸಂಸತ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿನ ಅಫ್ಜಲ್ ಗುರು ಉದಾಹರಣೆ ನೀಡಿದ ಆತ, ಕೋರ್ಟ್ ನಿಂದ ಮರಣದಂಡನೆ ವಿಧಿಸಿ ಎಂಟು ವರ್ಷವೇ ಆದರೂ ಈ ವರೆಗೂ ಶಿಕ್ಷೆ ವಿಧಿಸಿಲ್ಲ ಎಂದು ಹೇಳಿಕೊಂಡಿದ್ದ ಎಂಬುದನ್ನು ಮಹಲೆ ನೆನಪಿಸಿಕೊಳ್ಳುತ್ತಾರೆ.

ಅಜ್ಮಲ್ ಕಸಬ್‌ಗಿಂತ ಮೊದಲು ಗಲ್ಲಿಗೇರಿದ್ದು ಯಾರು?

ಅಮಿತಾಬ್ ಬಚ್ಚನ್ ನೋಡಕ್ಕೆ ಪಾಕಿಸ್ತಾನದಿಂದ ಮುಂಬೈಗೆ ಬಂದಿದ್ದೆ

ಅಮಿತಾಬ್ ಬಚ್ಚನ್ ನೋಡಕ್ಕೆ ಪಾಕಿಸ್ತಾನದಿಂದ ಮುಂಬೈಗೆ ಬಂದಿದ್ದೆ

ಹಲವಾರು ಸಲ ತನಿಖಾ ತಂಡವನ್ನು ಅಚ್ಚರಿಗೆ ದೂಡಿದ್ದ ಕಸಬ್. ವಿಚಾರಣೆಯ ಕೊನೆಯಲ್ಲಿ ಅವನ ಹೇಳಿಕೆಯನ್ನು ದಾಖಲಿಸುವಂತೆ ಹೇಳಿದಾಗ ಮತ್ತೂ ಅಚ್ಚರಿಗೆ ಕಾರಣನಾಗಿದ್ದ. "ನಾನು ಪಾಕಿಸ್ತಾನಿ. ಸರಿಯಾದ ವೀಸಾ ಪಡೆದೇ ಮುಂಬೈಗೆ ಬಂದಿದ್ದೆ. ನಟ ಅಮಿತಾಬ್ ಬಚ್ಚನ್ ಅವರನ್ನು ನೋಡಲು ಜುಹು ಬಂಗಲೆಯ ಹೊರಗೆ ನಿಂತಿದ್ದಾಗ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನವರು ಹಿಡಿದು, ಮುಂಬೈ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಲಾಕಪ್ ಗೆ ಹಾಕುವ ಮುನ್ನ ತೋಳಿಗೆ ಗುಂಡು ಹಾರಿಸಿದರು. ನಾಲ್ಕು ದಿನದ ನಂತರ ಈ ಪ್ರಕರಣದಲ್ಲಿ ಪೊಲೀಸರು ನನ್ನ ಹೆಸರು ಸೇರಿಸಿದರು" ಎಂದು ಹೇಳಿಕೆ ದಾಖಲಿಸಿದ್ದನ್ನು ಅಧಿಕಾರಿ ನೆನಪಿಸಿಕೊಳ್ಳುತ್ತಾರೆ. ಅವನು ಯಾವಾಗಲೂ ನಮ್ಮ ಪ್ರಶ್ನೆಗೆ ನೇರ ಉತ್ತರ ನೀಡುತ್ತಲೇ ಇರಲಿಲ್ಲ ಎಂಬುದನ್ನು ಕೂಡ ಇದೇ ವೇಳೆ ಹೇಳುತ್ತಾರೆ.

ನಾಲ್ಕು ವರ್ಷದ ಹಿಂದೆ ಏನು ಹೇಳಿದ್ದೆ ಎಂಬುದು ನೆನಪಿದೆಯಾ?

ನಾಲ್ಕು ವರ್ಷದ ಹಿಂದೆ ಏನು ಹೇಳಿದ್ದೆ ಎಂಬುದು ನೆನಪಿದೆಯಾ?

ನವೆಂಬರ್ 11, 2012ರಂದು ವಿಶೇಷ ಕೋರ್ಟ್ ನಿಂದ ಕಸಬ್ ನ ಮರಣದಂಡನೆ ವಾರಂಟ್ ಬರುತ್ತದೆ. ಆಗ ಪೊಲೀಸ್ ಕಮಿಷನರ್ ಆಗಿದ್ದ ಡಾ. ಸತ್ಯಪಾಲ್ ಸಿಂಗ್ ಒಂದು ವಿಶೇಷ ತಂಡ ಮಾಡಿಕೊಳ್ಳುತ್ತಾರೆ. ಅದರಲ್ಲಿ ರಮೇಶ್ ಮಹಲೆ ಕೂಡ ಇರುತ್ತಾರೆ. ಆ ತಂಡವೇ ಕಸಬ್ ನನ್ನು ಪುಣೆಯ ಯರವಾಡ ಜೈಲಿಗೆ ಸ್ಥಳಾಂತರ ಮಾಡುತ್ತದೆ. ಏಕೆಂದರೆ ಆತನನ್ನು ನವೆಂಬರ್ 21ರಂದು ಅಲ್ಲೇ ನೇಣಿಗೆ ಹಾಕುವುದು ಅಂತಾಗಿರುತ್ತದೆ. ನವೆಂಬರ್ 19ರ ಮಧ್ಯರಾತ್ರಿ ಮಹಲೆ ಅವರು ಕಸಬ್ ನ ಸೆಲ್ ಬಳಿ ಹೋಗುತ್ತಾರೆ. ಆ ಸಮಯದಲ್ಲಿ ಕಸಬ್ ಈ ಹಿಂದೆ ಹೇಳಿದ್ದ ಮಾತೊಂದನ್ನು ಅವರು ನೆನಪಿಸುತ್ತಾರೆ. "ನೀನು ಏನು ಹೇಳಿದ್ದೆ ಎಂಬುದು ನೆನಪಿದೆಯಾ? ನಾಲ್ಕು ವರ್ಷ ಕೂಡ ಕಳೆದಿಲ್ಲ. ಇನ್ನು ಒಂದು ವಾರ ಇದು" ಎಂದು ಮಹಲೆ ಹೇಳುತ್ತಾರೆ.

ಹಸನ್ಮುಖಿ ವಸುಂಧರೆಯ ಮಡಿಲಲ್ಲಿ ನಿಗಿನಿಗಿ ಜ್ವಾಲಾಮುಖಿ!

ನೀವು ಗೆದ್ದುಬಿಟ್ಟಿರಿ, ನಾನು ಸೋತೆ

ನೀವು ಗೆದ್ದುಬಿಟ್ಟಿರಿ, ನಾನು ಸೋತೆ

ಆ ವೇಳೆ, "ನೀವು ಗೆದ್ದುಬಿಟ್ಟಿರಿ, ನಾನು ಸೋತೆ" ಎನ್ನುತ್ತಾನೆ ಕಸಬ್. ಅದಾದ ಮೇಲೆ ಪುಣೆಗೆ ತೆರಳುವ ಮೂರೂವರೆ ಗಂಟೆಯ ಪಯಣದಲ್ಲಿ ಆತ ಒಂದೇ ಒಂದು ಮಾತನ್ನೂ ಆಡುವುದಿಲ್ಲ. "ಆತನಲ್ಲಿ ಮುಖದಲ್ಲಿ ತುಳುಕಾಡುತ್ತಿದ್ದ ಆತ್ಮವಿಶ್ವಾಸ ಹಾಗೂ ನಂಬಿಕೆ ಜಾಗದಲ್ಲಿ ಸಾವಿನ ಭಯ ಇಣುಕುತ್ತಿತ್ತು" ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ರಮೇಶ್ ಮಹಲೆ. ನವೆಂಬರ್ 21ರಂದು ಬೆಳಗ್ಗೆ ಕಸಬ್ ನನ್ನು ನೇಣಿಗೆ ಹಾಕಲಾಯಿತು. "ನನ್ನ ಜೀವನದಲ್ಲೇ ಅತ್ಯಂತ ಸಂತೋಷಕರವಾದ ದಿನ ಅದು. ನ್ಯಾಯ ಸಿಕ್ಕಿತು ಹಾಗೂ ಸೈತಾನ ಸತ್ತ" ಎಂದಿದ್ದಾರೆ ಅವರು. ಮುಂಬೈ ಮೇಲೆ ದಾಳಿ ಮಾಡಿ, ಅಪಾರ ಸಂಖ್ಯೆ ಸಾವು-ನೋವಿಗೆ, ಆಸ್ತಿ ಹಾನಿಗೆ ಕಾರಣವಾದ ಭೀಕರ ಭಯೋತ್ಪಾದನಾ ದಾಳಿ ಅದು. ಅದರಲ್ಲಿ ಜೀವಂತವಾಗಿ ಸೆರೆ ಸಿಕ್ಕ ಉಗ್ರ ಕಸಬ್ ನನ್ನು ಆ ನಂತರ ನೇಣಿಗೆ ಹಾಕಲಾಯಿತು.

English summary
The last words Lashkar-e-Taiba operative Ajmal Amir Kasab said to senior police inspector Ramesh Mahale were, you won, I lost. The admission came in November 2012, a day before Kasab would be hanged to death for being guilty of 80 offenses, including waging war against India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X