Get Updates
Get notified of breaking news, exclusive insights, and must-see stories!

ಮಧುಮೇಹದೊಂದಿಗೆ ನಿತ್ಯ ಜೀವನ ಹೇಗಿರಬೇಕು? ವೈದ್ಯರ ಸಲಹೆಗಳೇನು?

ಈಗ ಮಧುಮೇಹ ಎಲ್ಲರನ್ನು ಕಾಡುವ ಸಾಮಾನ್ಯ ರೋಗವಾಗಿದೆ. ಇದು ಅನುವಂಶೀಯವಾಗಿ ಬರುತ್ತದೆ ಎಂದು ಹೇಳಿದರೂ ಅದಕ್ಕಿಂತ ಹೆಚ್ಚಾಗಿ ಇಂದಿನ ನಮ್ಮ ಲೈಫ್ ಸ್ಟೈಲ್ ಕೂಡ ಕಾರಣವಾಗಿದೆ ಎಂದರೂ ತಪ್ಪಾಗಲಾರದು. ಇನ್ನು ದೈಹಿಕಕ್ಕಿಂತ ಮಾನಸಿಕ ಒತ್ತಡವೂ ಮಧುಮೇಹ ಹೆಚ್ಚುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಇವತ್ತಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಮಧುಮೇಹದೊಂದಿಗೆ ಬದುಕಲೇ ಬೇಕಾಗಿದೆ.

ಮಧುಮೇಹ ಬರದಂತೆ ಆರೋಗ್ಯವನ್ನು ನಾವು ನೋಡಿಕೊಳ್ಳಬೇಕಾಗಿದೆ. ಆದರೆ ಈಗಿನ ಬದುಕಿನಲ್ಲಿ ನಾವು, ನೀವು ಎಲ್ಲರೂ ದೈಹಿಕಕ್ಕಿಂತ ಮಾನಸಿಕ ಶ್ರಮದಿಂದ ಬಳಲುತ್ತಿದ್ದೇವೆ. ದೈಹಿಕ ಶ್ರಮದ ಕೆಲಸಗಳು ಹೆಚ್ಚಿನ ತೊಂದರೆ ನೀಡಲಾರದು. ಹಗಲಿಡೀ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತರು, ಇತರೆ ಕೆಲಸಗಳನ್ನು ಮಾಡುವ ಕಾರ್ಮಿಕರು ಕೆಲಸ ದೈಹಿಕ ಆರೋಗ್ಯವನ್ನು ನೋಡಿಕೊಂಡರೆ ಸಾಕು ಆರೋಗ್ಯವಾಗಿ ಇರಬಹುದು.

What Should Daily Life Be Like With Diabetes What Are The Doctor s Suggestions

ದೈಹಿಕ ಶ್ರಮವಲ್ಲದ ಕೆಲಸಗಳನ್ನು ಮಾಡುವ ಬಹಳಷ್ಟು ಮಂದಿ ಮಾನಸಿಕವಾಗಿ ಒತ್ತಡದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಂತಹವರು ಸದಾ ಒತ್ತಡದಲ್ಲಿ ಬಳಲುತ್ತಿರುತ್ತಾರೆ. ಇದು ನೇರವಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸುತ್ತದೆ. ಇಂತಹವರನ್ನು ರಕ್ತದೊತ್ತಡ ಮತ್ತು ಮಧುಮೇಹ ಬಹುಬೇಗ ಕಾಡುತ್ತದೆ. ಇಂತಹವರು ವ್ಯಾಯಾಮ, ಯೋಗ ಮುಂತಾದವುಗಳನ್ನು ಮಾಡುವ ಮೂಲಕ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮಧುಮೇಹದೊಂದಿ ಬದುಕುವವರ ಸಂಖ್ಯೆ ಹೆಚ್ಚಿದೆ.

ಗ್ಲೂಕೋಸ್ ಮಾನಿಟರಿಂಗ್ ಆದ್ಯತೆ ನೀಡಿ

ಮಧುಮೇಹದಿಂದ ಬಳಲುವವರು ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದಷ್ಟು ತೊಂದರೆಗಳನ್ನು ಜಾಸ್ತಿ ,ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅಂತಹವರು ಮೊದಲಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು. ಏಕೆಂದರೆ ಮಾನಸಿಕ ಒತ್ತಡಗಳು ಮಧುಮೇಹದ ಶತ್ರುವೆಂದರೆ ಗೊತ್ತಾಗಲಾರದು. ಅದರಲ್ಲೂ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗುತ್ತದೆ.

What Should Daily Life Be Like With Diabetes What Are The Doctor s Suggestions

ನಿಜಹೇಳಬೇಕೆಂದರೆ ಮಧುಮೇಹದ ಜೊತೆಗೆ ಜೀವನ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಎಲ್ಲವನ್ನು ಮನದಲ್ಲಿಟ್ಟುಕೊಂಡು ಜೀವನ ಮಾಡಬೇಕಾಗುತ್ತದೆ. ಸೇವಿಸುವ ಆಹಾರದಿಂದ ಆರಂಭವಾಗಿ ನಿತ್ಯದ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ನಿಗಾವಹಿಸಬೇಕಾಗುತ್ತದೆ. ಅದರಲ್ಲೂ ನಿತ್ಯವೂ ಗ್ಲೂಕೋಸ್ ಮಾನಿಟರಿಂಗ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಹಾರವನ್ನು ಯೋಜಿಸುವುದು ಮತ್ತು ವ್ಯಾಯಾಮದ ದಿನಚರಿಯನ್ನು ನಿರ್ವಹಿಸುವುದು ಅಗತ್ಯತೆಯಾಗಿದೆ.

ತಜ್ಞರು ನೀಡುವ ಸಲಹೆಗಳೇನು ಗೊತ್ತಾ?

ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಒತ್ತಡದಿಂದ ಬಳಲುವವರೇ ಆಗಿದ್ದಾರೆ. ಹೀಗಾಗಿ ಕೆಲಸದ ನಡುವೆ ನಿತ್ಯದ ಊಟ, ತಿಂಡಿ ಎಲ್ಲರದರಲ್ಲಿ ಶಿಸ್ತು ಅಳವಡಿಸಿಕೊಳ್ಳದಿರುವುದು, ಸಣ್ಣಪುಟ್ಟ ವಿಚಾರಗಳಿಗೂ ಟೆನ್ಷನ್ ಮಾಡಿಕೊಳ್ಳುವುದು ಮಧುಮೇಹ ಇರುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ನಡುವೆಯೂ ಆರೋಗ್ಯವಂತಾಗಿ ಜೀವನ ನಡೆಸಬೇಕು ಎನ್ನುವುದಾದರೆ ಕೆಲವೊಂದು ನಿಯಮಗಳನ್ನು ಬದುಕಿನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಇನ್ನು ಬೆಂಗಳೂರಿನ ಡಯಾಪ್ಲಸ್ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌, ಡಯಾಪ್ಲಸ್ ಕ್ಲಿನಿಕ್‌ನ ಸಲಹೆಗಾರ ಎಂಡೋಕ್ರೈನಾಲಜಿಸ್ಟ್ ಡಾ.ಪ್ರವೀಣ್ ರಾಮಚಂದ್ರ ಅವರು ಹೇಳುವಂತೆ ದೈನಂದಿನ ಒತ್ತಡಗಳನ್ನು ಸಹಿಸಿಕೊಂಡು ಕಾಳಜಿ ಮತ್ತು ಎಚ್ಚರಿಕೆಯಿಂದ ಜೀವನ ನಡೆಸಬೇಕಾಗುತ್ತದೆ. ಇದು ಕಠಿಣ ಎಂದೆನಿಸಿದರೂ ಅದನ್ನು ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಏಕೆಂದರೆ ಮಧುಮೇಹ ಹೆಚ್ಚಿಸುವಲ್ಲಿ ಮಾನಸಿಕ ಆಯಾಸ ಮತ್ತು ಒತ್ತಡ, ಹೆಚ್ಚುತ್ತಿರುವ ಹತಾಶೆ, ಒಂಟಿತನ ಮತ್ತು ಅತೀವ ದಣಿವು ಕಾರಣವಾಗುತ್ತವೆ ಎನ್ನುವುದನ್ನು ತಳ್ಳಿಹಾಕಲಾಗದು.

ಆರೋಗ್ಯಕರ ಜೀವನ ಶೈಲಿ ಬಹುಮುಖ್ಯ

ಅವುಗಳೆಲ್ಲವನ್ನು ಹೊತ್ತುಕೊಂಡು ಮಧುಮೇಹವನ್ನು ನಿಭಾಯಿಸಲು ಸಾಧ್ಯವಾಗಲಾರದು. ಹೀಗಾಗಿ ಅದೆಲ್ಲವನ್ನು ಬದಿಗೊತ್ತಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಕಂಟಿನ್ಯೂಸ್ ಗ್ಲೂಕೋಸ್ ಮಾನಿಟರಿಂಗ್ ಡಿವೈಸ್ ಗಳಂತಹ ಸರಳ ಸಾಧನಗಳೊಂದಿಗೆ ಗ್ಲೂಕೋಸ್ ಮಟ್ಟದ ಮೇಲೆ ಗಮನವಿರಿಸಿಕೊಂಡು ಆರೋಗ್ಯಕರ ಆಹಾರಪದ್ಧತಿಯನ್ನು ಅನುಸರಿಸುವ ಮೂಲಕ ಜನರು ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಬಹುದು ಮತ್ತು ಒಳ್ಳೆಯ ಆರೋಗ್ಯ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಎಮರ್ಜಿಂಗ್ ಏಷ್ಯಾ ಅಂಡ್ ಇಂಡಿಯಾ, ಡಯಾಬಿಟಿಸ್ ಕೇರ್, ಅಬಾಟ್ ನ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥರಾದ ಡಾ.ಪ್ರಶಾಂತ್ ಸುಬ್ರಮಣಿಯನ್ ಅವರು ಹೇಳುವ ಪ್ರಕಾರ ಚಿಂತೆಗೇಡು ಮಾಡುವ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪರಿಹಾರಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು ಒಂದು ಸಮಗ್ರ ವಿಧಾನವನ್ನು ಕಂಡುಕೊಳ್ಳುವ ಅಗತ್ಯತೆಯಿದೆ.

ನಿಟ್ಟಿನ ನಿಯಮ ಪಾಲನೆ ಮಾಡಬೇಕು

ಕಂಟಿನ್ಯೂಸ್ ಗ್ಲೂಕೋಸ್ ಮಾನಿಟರಿಂಗ್ ಡಿವೈಸ್ ಗಳಂತಹ ತಂತ್ರಜ್ಞಾನ, ಇದು ಅವರ ರಕ್ತದ ಸಕ್ಕರೆಯ ಮಟ್ಟದ ಹೆಚ್ಚಳ ಅಥವಾ ಇಳಿಕೆಗಳ ಬಗ್ಗೆ ಉಪಯುಕ್ತ ನೈಜ-ಸಮಯದ ಮಾಹಿತಿಯನ್ನು ನೀಡುತ್ತದೆ ಮತ್ತು ಆಹಾರ ಪದ್ಧತಿ ಮತ್ತು ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಈ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂಬುದಾಗಿ ಹೇಳುತ್ತಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಮಧುಮೇಹದ ಬಗ್ಗೆ ಆರಂಭದಿಂದಲೇ ನಿರ್ಲಕ್ಷ್ಯ ವಹಿಸದೆ ವೈದ್ಯರ ಸಲಹೆಯನ್ನು ಆದರಿಸಿ ಆಹಾರಕ್ರಮದಲ್ಲಿ ಜಾಗೃತೆ ವಹಿಸುವುದು, ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಯೋಗ ಮೊದಲಾದವುಗಳಿಗೆ ಆದ್ಯತೆ ನೀಡುವುದು ಜಾಣತನವಾಗಿದೆ. ಅದರಲ್ಲೂ ಆಹಾರದ ವಿಷಯದಲ್ಲಿ ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡುವುದು ಅತಿ ಮುಖ್ಯವಾಗಿದೆ. ಇದೆಲ್ಲವೂ ಕಷ್ಟ ಎಂದೆನಿಸಿದರೂ ನಾವು ಆರೋಗ್ಯವಾಗಿರ ಬೇಕಾದರೆ ಕೆಲವೊಂದು ಕಷ್ಟವನ್ನು ಸುಲಭ ಅಂತಲೇ ಭಾವಿಸಿಕೊಂಡು ಮುಂದುವರೆಯಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+