ದೇಹದ ಎತ್ತರಕ್ಕೆ ತಕ್ಕಂತೆ ತೂಕ ಇರಬೇಕೇ? ಇಲ್ಲಿದೆ ಸರಳ ಸಲಹೆ

ದೇಹದ ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡೋದು ಹೇಗೆ? ಬಹುಶಃ ಇಂತಹದೊಂದು ಪ್ರಶ್ನೆಗಳನ್ನು ಇತ್ತೀಚೆಗೆ ಎಲ್ಲರೂ ಕೇಳಿಕೊಳ್ಳುತ್ತಿರುತ್ತಾರೆ. ಇವತ್ತು ಎಲ್ಲರಿಗೂ ತಮ್ಮ ದೇಹದ ಮತ್ತು ಆರೋಗ್ಯದ ಕಾಳಜಿಯಿದೆ. ಅದರಲ್ಲೂ ತಮ್ಮ ದೇಹ ಆಕರ್ಷಕವಾಗಿರಬೇಕೆಂದು ಬಯಸುತ್ತಾರೆ. ತೂಕ ಹೆಚ್ಚಾದರೆ ಗಾಬರಿಪಡುತ್ತಾರೆ. ಸದಾ ತೆಳ್ಳಗೆ ಕಾಣಬೇಕೆಂದು ಆಶಿಸುತ್ತಾರೆ. ಅದಕ್ಕೆ ಬೇಕಾದ ಕಸರತ್ತುಗಳನ್ನು ಸದಾ ಮಾಡುತ್ತಿರುತ್ತಾರೆ.

ಕೆಲವರು ದೇಹವನ್ನು ದಂಡಿಸಿ ತೂಕವನ್ನು ಕಾಪಾಡಿಕೊಂಡರೆ ಇನ್ನು ಕೆಲವರು ಪಥ್ಯಗಳಿಂದ ದೇಹದಲ್ಲಿ ಬೊಜ್ಜು ಬೆಳೆಯದಂತೆ ನೋಡಿಕೊಳ್ಳುತ್ತಾರೆ. ಪಥ್ಯ ಮಾಡಿ ದೇಹದ ತೂಕವನ್ನು ಕಳೆದುಕೊಳ್ಳಬಹುದಾದರೂ ಅಂತಹವರು ಕಠಿಣವಾದ ಕೆಲಸ ಮಾಡುವುದು ಕಷ್ಟವಾಗುತ್ತದೆ. ಇನ್ನು ಕಠಿಣ ದೈಹಿಕ ಶ್ರಮದ ಕೆಲಸ ಮಾಡುವವರು ಮತ್ತು ವ್ಯಾಯಾಮ, ಯೋಗ ಮಾಡುವವರು ತಮ್ಮ ಅಂಗಸಾಧನೆಯಿಂದಲೇ ದೇಹದ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತಾರೆ.

What Should Be Done To Have Body Weight According To Height With Nutritional Food

ಏನೂ ಕೆಲಸ ಮಾಡದೆ ಮನೆಯಲ್ಲೇ ಇರುವವರು ಹೆಚ್ಚಿನ ಬೊಜ್ಜು ಸಮಸ್ಯೆಯಿಂದ ಬಳಲುತ್ತಾರೆ. ತಾವು ಸೇವಿಸಿದ ಆಹಾರ ಜೀರ್ಣವಾಗಲು ಯಾವುದಾದರೊಂದು ದೈಹಿಕ ಶ್ರಮದ ಕೆಲಸ ಮಾಡಬೇಕು ಏನಿಲ್ಲವೆಂದರೂ ಒಂದಷ್ಟು ದೂರವಾದರೂ ನಡೆಯ ಬೇಕು. ಇದೇನು ಮಾಡದೆ ತಾವು ಸಣ್ಣಗೆ, ತೆಳ್ಳಗೆ ಕಾಣಿಸಬೇಕೆಂದು ಬಯಸುವುದು ಮೂರ್ಖತನವಾಗುತ್ತದೆ. ಮತ್ತು ಅಂತಹವರು ಇಲ್ಲ ಸಲ್ಲದ ಔಷಧಿಯ ಮೊರೆ ಹೋಗಿ ಇದ್ದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.

ಉಪವಾಸ ಮಾಡಿದರೆ ಸಣ್ಣಗೆ ಆಗುವುದಿಲ್ಲ

ಕೆಲವರು ಉಪವಾಸ ಮಾಡಿದರೆ ಸಣ್ಣಗೆ ಆಗಬಹುದು ಎಂದು ತಿಳಿದುಕೊಂಡಿದ್ದಾರೆ. ಇದೊಂದು ತಪ್ಪುಕಲ್ಪನೆಯಷ್ಟೆ. ಇದನ್ನು ದೂರಮಾಡಿ ಕೆಲವೊಂದು ವಿಧಾನಗಳನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗಲಿದೆ. ನಮ್ಮ ದೇಹದ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಕಷ್ಟಪಟ್ಟು ಒಂದಷ್ಟು ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಆಹಾರ ಸೇವನೆಯಲ್ಲಿ ಒಂದಷ್ಟು ಹಿತಮಿತ, ಪಥ್ಯಾಕ್ರಮಗಳನ್ನು ಅಳವಡಿಸಿಕೊಂಡರೆ ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೂ ನಮ್ಮೆಲ್ಲರ ದೇಹದ ಸೌಂದರ್ಯ ಮತ್ತು ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಅಡ್ಡ ಬರುವುದೇ ಬೊಜ್ಜು. ಶರೀರದಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ ಶರೀರದ ಗಾತ್ರಹಿಗ್ಗುತ್ತದೆ. ಕಾಯಿಲೆಗಳು ಒಂದರ ಮೇಲೆ ಒಂದರಂತೆ ಅಡರಿಕೊಳ್ಳುತ್ತದೆ. ಒಂದು ವೇಳೆ ಬೊಜ್ಜನ್ನು ಕರಗಿಸದೆ ಹೋದರೆ ರಕ್ತದೊತ್ತಡ, ಹೃದಯದ ಕಾಯಿಲೆ, ಪಿತ್ತಕೋಶದ ಕಾಯಿಲೆ, ಮೂಳೆ ಸವೆತ, ಕೀಲುಗಳ ಕಾಯಿಲೆ, ಉಸಿರಾಟದ ತೊಂದರೆ, ಸುಸ್ತು, ಆಯಾಸದಂತಹ ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ.

What Should Be Done To Have Body Weight According To Height With Nutritional Food

ಬೊಜ್ಜು ಅನುವಂಶೀಯವಾಗಿ ಬರಬಹುದು

ಬೊಜ್ಜು ಬೆಳೆಯಲು ಜಂಕ್ ಫುಡ್ ಸೇವನೆ, ಆಹಾರ ಸೇವನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳದೆ, ಸಿಕ್ಕಿದನ್ನೆಲ್ಲ ಸೇವಿಸೋದು, ಕುಳಿತಲ್ಲೇ ಹೆಚ್ಚು ಹೊತ್ತು ಇರುವುದು, ವಾಕಿಂಗ್, ವ್ಯಾಯಾಮ, ದೈಹಿಕ ಶ್ರಮದ ಕೆಲಸ ಮಾಡದಿರುವುದು ಕಾರಣವಾಗಿದೆ. ಇಷ್ಟೇ ಅಲ್ಲದೆ ಬೊಜ್ಜು ಅನುವಂಶೀಯವಾಗಿಯೂ ಬರಬಹುದು. ಇಲ್ಲವೆ ದೇಹದ ಶ್ರಮ ಕಡಿಮೆಯಾಗಿ ಆಹಾರ ಸೇವನೆ ಜಾಸ್ತಿಯಾದರೂ ಬರಬಹುದು.

ನಡವಳಿಕೆಯಲ್ಲಿನ ವಿಭಿನ್ನತೆ, ತಿನ್ನುವುದನ್ನು ಪ್ರೇರೇಪಿಸುವುದು, ಕಂಡಿದೆಲ್ಲವನ್ನೂ ತಿನ್ನಬೇಕೆಂಬ ಬಯಕೆ, ಆಗಾಗ್ಗೆ ಆಹಾರ ಸೇವಿಸುವುದು. ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ತಿನ್ನುವುದು. ದೈಹಿಕ ಶ್ರಮಕ್ಕೆ ಒತ್ತು ನೀಡದಿರುವುದು ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಇನ್ನು ತೂಕ ಹೆಚ್ಚಾಯಿತೆಂದು ಯಾರೋ ಹೇಳಿದರೆಂಬ ಕಾರಣಕ್ಕೆ ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಬೇಡಿ.

What Should Be Done To Have Body Weight According To Height With Nutritional Food

ವ್ಯಾಯಾಮ, ವಾಕಿಂಗ್ ತಪ್ಪದೆ ಮಾಡಿ

ಕಠಿಣ ವ್ಯಾಯಾಮ, ಯೋಗಗಳ ಮೂಲಕ ವಾರಕ್ಕೆ ಅರ್ಧ ಕೆಜಿಯಿಂದ ಒಂದು ಕೆಜಿಯಷ್ಟು ಇಳಿಸುವ ಪ್ರಯತ್ನ ಮಾಡಬೇಕು. ಇದನ್ನು ಹೊರತುಪಡಿಸಿ ತೂಕ ಇಳಿಕೆಗಾಗಿ ಔಷಧಿ, ಮಾತ್ರೆ ಇನ್ನಿತರ ಚಿಕಿತ್ಸೆಗೆ ಮೊರೆ ಹೋಗುವುದು ಅಪಾಯಕಾರಿ. ಈ ವಿಷಯದಲ್ಲಿ ವೈದ್ಯರ ಸಲಹೆ ಇಲ್ಲದೆ ಸ್ವಯಂ ಚಿಕಿತ್ಸೆ ಆರೋಗ್ಯಕ್ಕೆ ಮಾರಕ. ನಿಯಮಿತ ಆಹಾರದೊಂದಿಗೆ ವ್ಯಾಯಾಮ ಮಾಡುವುದು, ಮುಂಜಾನೆ ಸುಮಾರು ಮುಕ್ಕಾಲು ಅಥವಾ ಒಂದು ಗಂಟೆಕಾಲ ವೇಗದ ನಡಿಗೆಯೂ ಕೊಬ್ಬಿನ ಅಂಶವನ್ನು ಕರಗಿಸಿ ಬೊಜ್ಜು ಬರುವುದನ್ನು ತಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+