ಸನ್ನಿ ಲಿಯೋನ್‌ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದು ಸತ್ಯವೋ? ಸುಳ್ಳೋ?

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಜಾಗತೀಕ ಮಟ್ಟದ ಹಿಂದೂ ಧರ್ಮದ ಅತ್ಯಂತ ಬೃಹತ್‌ ಉತ್ಸವ ಮಹಾ ಕುಂಭಮೇಳಕ್ಕೆ ಇನ್ನೇನು ಎರಡು ದಿನಗಳಲ್ಲಿ ತೆರೆ ಬೀಳಲಿದೆ. ಈ ವರ್ಷದ ಮಕರ ಸಂಕ್ರಾತಿಯ ಹಿಂದಿನ ದಿನ ಅಂದರೆ ಜನವರಿ 13ರಂದು ಆರಂಭವಾದ ಈ ಮಹಾ ಕುಂಭಮೇಳವು ಈಗಾಗಲೇ 43 ದಿನಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದೆ.

ಈ ಬಾರಿಯ ಮಹಾ ಕುಂಭಮೇಳದಲ್ಲಿ 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆ ಇತ್ತು. ಆದರೆ ಆಯೋಜಕರ ನಿರೀಕ್ಷೆಗೂ ಮೀರಿ ಭಕ್ತ ಸಾಗರ ಹರಿದು ಬಂದಿದ್ದು, ಭಾರತದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರು ಹಾಗೂ ಗಣ್ಯರು ಆಗಮಿಸಿದ್ದು ಈವರೆಗೂ ಐವತೈದು ಕೋಟಿಗೂ ಅಧಿಕ ಭಕ್ತರು ಈ ಬಾರಿಯ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.

What Is The Fact Of Sunny Leone Viral Video From Mahakumbh Mela 2025

ಜಾಗತೀಕ ಮಟ್ಟದ ಉತ್ಸವವಾಗಿರುವ ಮಹಾ ಕುಂಭಮೇಳ ಆರಂಭವಾದ ದಿನದಿಂದಲೂ ಟ್ರೆಂಡಿಂಗ್‌ನಲ್ಲಿದೆ. ಹೀಗಾಗಿ ಮಹಾ ಕುಂಭಮೇಳದ ಹೆಸರಿನಲ್ಲಿ ಲಕ್ಷಾಂತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದರಲ್ಲಿ ಅನೇಕ ಸುಳ್ಳು ವಿಡಿಯೋಗಳು ಕೂಡ ವೈರಲ್‌ ಆಗಿವೆ. ಈ ಫೇಕ್‌ ವಿಡಿಯೋ ಸಾಲಿಗೆ ಮತ್ತೊಂದು ವಿಡಿಯೋ ಕೂಡ ಈಗ ಸೇರಿಕೊಂಡಿದೆ.

ಬಾಲಿವುಡ್‌ ನಟಿ ಸನ್ನಿ ಲಿಯೋನ್ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿತ್ತು. ಗುಲಾಬಿ ಬಣ್ಣದ ಚೂಡಿದಾರ್‌ ಧರಿಸಿರುವ ಸನ್ನಿ ಲಿಯೋನ್ ಹಣೆಗೆ ಪಟ್ಟಿ ಬಳಿದುಕೊಂಡು ತ್ರಿವೇಣಿ ಸಂಗಮದಲ್ಲಿ ಮಾಡಿದ ವಿಡಿಯೋ ಇದಾಗಿದೆ. ಇದೇ ವಿಡಿಯೋವನ್ನು ಶೇರ್‌ ಮಾಡಿರುವ ವ್ಯಕ್ತಿಯೊಬ್ಬ 'ಸನ್ನಿ ಲಿಯೋನ್ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿ ಪಾಪ ತೊಳೆದುಕೊಂಡಿದ್ದಾರೆ' ಎಂದು ಕ್ಯಾಪ್ಷನ್‌ ಕೊಟ್ಟು ವೈರಲ್‌ ಮಾಡಲಾಗಿತ್ತು. ಇದು ಸುಳ್ಳಿರಬಹುದು ಎಂದು ಅನೇಕರಿಗೆ ಅನಿಸಿತ್ತು. ಆದರೆ ಸುಳ್ಳೋ? ಸತ್ಯವೋ ಎನ್ನುವ ಗೊಂದಲ ಇತ್ತು. ಕೊನೆಗೂ ಆ ಗೊಂದಲಕ್ಕೆ ತೆಗೆ ಬಿದ್ದಿದೆ.

ಸನ್ನಿ ಲಿಯೋನ್ ಮಹಾ ಕುಂಭಮೇಳದಲ್ಲಿ ಭಾಗಿ ಎನ್ನುವ ವಿಡಿಯೋ ಸುಳ್ಳಾಗಿದೆ. ಮೂಲಗಳ ಪ್ರಕಾರ ಸನ್ನಿ ಲಿಯೋನ್ ಮಹಾ ಕುಂಭಮೇಳಕ್ಕೆ ಭೇಟಿ ನೀಡಿಲ್ಲ. ಸನ್ನಿ ಲಿಯೋನ್ 2023ರಲ್ಲಿ ಆಲ್ಬಮ್‌ನ ಪ್ರಚಾರವೊಂದಕ್ಕೆ ವಾರಣಾಸಿಗೆ ಬಂದಿದ್ದರು. ಈ ಸಮಯದಲ್ಲಿ ಬಾಬಾ ವಿಶ್ವನಾಥರನ್ನು ಭೇಟಿ ಮಾಡಿ, ಗಂಗಾ ಆರತಿ ಪಡೆದುಕೊಂಡಿದ್ದರು. ಈ ಸಮಯದಲ್ಲಿ ಮಾಡಿದ ವಿಡಿಯೋವನ್ನು ಈಗ ಮಹಾ ಕುಂಭಮೇಳವೆಂದು ನಕಲಿ ಕ್ಯಾಪ್ಷನ್‌ ನೀಡಿ ವೈರಲ್‌ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+