ರಾಜ್ಯಸಭೆ ಚುನಾವಣೆ ಬಳಿಕ ಪಕ್ಷಗಳ ಬಲಾಬಲ: ಎನ್ಡಿಎ 116, ಯುಪಿಎ 61

ಕೊರೊನಾವೈರಸ್ ಹಿನ್ನೆಲೆಯಿಂದ ಮುಂದೂಡಲ್ಪಟ್ಟಿದ್ದ ರಾಜ್ಯಸಭೆ ಚುನಾವಣೆ ಕೊನೆಗೂ ಶುಕ್ರವಾರ (ಜೂನ್ 19) ರಂದು ನಡೆದು ಅಧಿಕೃತ ಫಲಿತಾಂಶ ಹೊರ ಬಂದಿದೆ. ರಾಜ್ಯಸಭೆಯ 19 ಸ್ಥಾನಗಳ ಫಲಿತಾಂಶ ಹೊರ ಬಂದ ನಂತರ ಮೇಲ್ಮನೆಯಲ್ಲಿ ಪಕ್ಷಗಳ ಬಲಾಬಲ ಹೇಗಿದೆ? ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಅಂತರ ಎಷ್ಟಿದೆ? ಇಲ್ಲಿದೆ ಮಾಹಿತಿ...

Recommended Video

      ಕೊರೊನ ಸೋಂಕಿತ MLA ಹೊರಗೆ ಬಂದು ಮತ ಚಲಾಯಿಸಿದ ವಿಚಿತ್ರ ಘಟನೆ | Oneindia Kannada

      ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ ಎಂದು ಕರೆಯಲ್ಪಡುವ ರಾಜ್ಯಸಭೆಯಲ್ಲಿ ಗರಿಷ್ಠ 250 ಸದಸ್ಯರನ್ನು ಮಾತ್ರ ಹೊಂದಬಹುದು.

      ರಾಜ್ಯಸಭೆ ಸದಸ್ಯರ ಪೈಕಿ 12 ಜನರನ್ನು ಭಾರತದ ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ. ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ ಮುಂತಾದ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ.

      What is Rajya Sabha? What is the strength of Upper house?

      ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಭೆಯ ಸದಸ್ಯರ ಅವಧಿ 6ವರ್ಷ. ಇದರಲ್ಲಿ ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ.

      ರಾಜ್ಯಸಭೆ ಚುನಾವಣೆ 2020: ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಣಿಪುರ, ಜಾರ್ಖಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ ಕರ್ನಾಟಕದ 4 ಹಾಗೂ ಅರುಣಾಚಲಪ್ರದೇಶದ ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.

      ಅಂಧ್ರಪ್ರದೇಶ (4 ಸ್ಥಾನ), ಗುಜರಾತ್ (4), ಮಧ್ಯಪ್ರದೇಶ(3), ಜಾರ್ಖಂಡ್(2), ಮಣಿಪುರ(1), ಮೇಘಾಲಯ (1), ಮಿಜೋರಾಂ (1) ಹಾಗೂ ರಾಜಸ್ಥಾನದ (3) ಸ್ಥಾನಗಳಿಗೆ ಚುನಾವಣೆ ನಡೆದು ಫಲಿತಾಂಶ ಬಂದಿದೆ.

      ಫಲಿತಾಂಶ 2020: 19 ಸ್ಥಾನ- ಎನ್ಡಿಎ 10, ಕಾಂಗ್ರೆಸ್
      * ಬಿಜೆಪಿ 8, ಕಾಂಗ್ರೆಸ್ 5, ವೈಎಸ್ಸಾರ್ ಕಾಂಗ್ರೆಸ್ 4, ಎನ್ಪಿಪಿ 1, ಎಂಎನ್ಎಫ್ 1

      ರಾಜ್ಯವಾರು ಫಲಿತಾಂಶ
      * ಗುಜರಾತ್ (4): ಬಿಜೆಪಿ 3, ಕಾಂಗ್ರೆಸ್ 1
      * ಮಿಜೋರಾಂ (1) : ಎಂಎನ್ಎಫ್ ಗೆ ಗೆಲುವು
      * ಮಣಿಪುರ (1): ಬಿಜೆಪಿಗೆ ಗೆಲುವು
      * ಮೇಘಾಲಯ (1): ಎನ್ ಪಿಪಿಗೆ ಗೆಲುವು
      * ಆಂಧ್ರಪ್ರದೇಶ (4): 4 ವೈಎಸ್ಸಾರ್ ಕಾಂಗ್ರೆಸ್
      * ಜಾರ್ಖಂಡ್ (2) : ಬಿಜೆಪಿ 1, ಜೆಎಂಎಂ 1
      * ರಾಜಸ್ಥಾನ (3): ಕಾಂಗ್ರೆಸ್ 2, ಬಿಜೆಪಿ 1
      * ಮಧ್ಯಪ್ರದೇಶ (3) : ಬಿಜೆಪಿ 2, ಕಾಂಗ್ರೆಸ್ 1

      ರಾಜ್ಯಸಭೆ ಬಲಾಬಲ ಜೂನ್ 21, 2020
      ಒಟ್ಟು ಸದಸ್ಯ ಬಲ: 245
      * ಆಡಳಿತ ಪಕ್ಷ 116, ವಿಪಕ್ಷ 126
      * 2 ಸದಸ್ಯ ಸ್ಥಾನ ಖಾಲಿಯಿದೆ
      * 233 ಸದಸ್ಯರು ಚುನಾವಣೆ ಮೂಲಕ ಆಯ್ಕೆ, 12 ಮಂದಿ ನಾಮಾಂಕಿತ.
      * ಇತ್ತೀಚಿನ ಚುನಾವಣೆ: ಜೂನ್ 19, 2020.
      * ಮುಂಬರುವ ಚುನಾವಣೆ: ನವೆಂಬರ್ 2020.

      ಎನ್ಡಿಎ 116, ಯುಪಿಎ 61, ಇತರೆ 65
      ಬಿಜೆಪಿ (85)
      ಎಐಎಡಿಎಂಕೆ (9)
      ಜೆಡಿಯು (5)
      ಎಸ್ಎಡಿ (3)
      ಎಜಿಪಿ (1)
      ಬಿಪಿಎಫ್ (1)
      ಎಲ್ ಜೆಪಿ (1)
      ಎಂಎನ್ಎಫ್ (1)
      ಎನ್ ಪಿಪಿ (1)
      ಪಿಎಂಕೆ (1)
      ಆರ್ ಪಿಐ (ಎ) (1)
      ಟಿಎಂಸಿ (ಎಂ) (1)
      ಸ್ವತಂತ್ರ (2)
      ನಾಮಕರಣ ಸದಸ್ಯರು (4)

      ಯುಪಿಎ (61)

      ಐಎನ್‌ಸಿ (40)
      ಡಿಎಂಕೆ (7)
      ಆರ್‌ಜೆಡಿ (5)
      ಎನ್‌ಸಿಪಿ (4)
      ಜೆಎಂಎಂ (1)
      ಕೆಸಿ(ಎಂ) (1)
      ಎಂಡಿಎಂಕೆ (1)
      ಐಯುಎಂಎಲ್ (1)
      ಸ್ವತಂತ್ರ (1)

      ಇತರರು (66)

      ಎಐಟಿಸಿ (13)
      ಎಸ್‌ಪಿ (8)
      ಬಿಜೆಡಿ (9)
      ಟಿಆರ್‌ಎಸ್ (7)
      ಸಿಪಿಐ(ಎಂ) (5)
      ಬಿಎಸ್‌ಪಿ (4)
      ಶಿವಸೇನೆ (3)
      ಎಎಪಿ (3)
      ಜೆಕೆಪಿಡಿಪಿ (2)
      ಟಿಡಿಪಿ (1)
      ವೈಎಸ್ಆರ್ ಕಾಂಗ್ರೆಸ್ (6)
      ಸಿಪಿಐ (1)
      ಜೆಡಿಎಸ್ (2)
      ಎನ್‌ಪಿಎಫ್ (1)
      ಎಸ್‌ಡಿಎಫ್ (1)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+