ಏನಿದು Generation Z ತಲೆಮಾರು: ಬೇರೆ ತಲೆಮಾರಿಗಿಂತ ಹೇಗೆ ಭಿನ್ನ ?
Generation Z: ನೇಪಾಳದಲ್ಲಿ ಹೊಸ ತಲೆಮಾರು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ನೇಪಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿದ್ದು 19ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ Genz Generation ಅಥವಾ Gen Z, or Generation Z ಎಂದು ಕರೆಯಲ್ಪಡುವ (1997 ನಡುವೆ 2012 ಜನಿಸಿದವರು) ಯುವ ಸಮೂಹದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಹಾಗಾದರೆ ಏನಿದು ಜನರೇಷನ್ Z ಎನ್ನುವ ವಿವರ ಇಲ್ಲಿದೆ.
1997 ಮತ್ತು 2012 ರ ನಡುವೆ ಜನಿಸಿದವರನ್ನು ಜನರೇಷನ್ Z ಎಂದು ಕರೆಯಲಾಗುತ್ತದೆ. ಈ ಜನರೇಷನ್ ಅನ್ನು ಜೂಮರ್‌ಗಳು ಎಂದೂ ಕರೆಯಲಾಗುತ್ತದೆ. ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಆಗುತ್ತಿದ್ದಂತೆಯೇ ಈ ಜನರೇಷನ್ ಬೀದಿಗೆ ಇಳಿದು ಉಗ್ರ ಪ್ರತಿಭಟನೆಯನ್ನು ಮಾಡಿದೆ. ವಿಶ್ವದಲ್ಲೇ ಜನರೇಷನ್ Z ಯುವಕ ಮತ್ತು ಯುವತಿಯರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಈ ಸಮುದಾಯವು ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನದಲ್ಲೇ ಬೆಳೆದ ತಲೆಮಾರು.

ಡಿಜಿಟಲ್ ಕ್ಷೇತ್ರ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಬುದ್ಧಿವಂತರು - ಡಿಜಿಟಲ್ ತಜ್ಞರು ಅಂತಲೂ ಪರಿಗಣಿಸಲಾಗುತ್ತದೆ. ಈ ತಲೆಮಾರು ಪ್ರೈವಸಿಗೆ ಹೆಚ್ಚು ಆದ್ಯತೆ ಕೊಡುತ್ತದೆ. ಅಲ್ಲದೇ ಹೊಸ ವಿಷಯಗಳಿಗೆ ಬೇಗ ಅಪ್ಡೇಟ್ಸ್ ಆಗುತ್ತಾರೆ. ಜನರೇಷನ್ Z ಚಿಕ್ಕ ವಯಸ್ಸಿನಿಂದಲೇ ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆ ಮಾಡಿರುತ್ತಾರೆ.
ಇನ್ನು Gen Z ಇತರ ತಲೆಮಾರುಗಳಿಗಿಂತ ಹೇಗೆ ಭಿನ್ನವಾಗಿದೆ ಎಂದು ನೋಡುವುದಾದರೆ, Gen Z ನ ಜನರು ಹೆಚ್ಚು ತಂತ್ರಜ್ಞಾನ ಜ್ಞಾನವುಳ್ಳವರು ಮತ್ತು ಇಂಟರ್ನೆಟ್ ಸ್ನೇಹಿಯಾಗಿರುವ ಸಾಧ್ಯತೆ ಹೆಚ್ಚು. ಅವರು ಬದಲಾವಣೆಗೆ ಹೆಚ್ಚು ಮುಕ್ತರಾಗಿರುತ್ತಾರೆ. ಹೊಸ ಬೆಳೆವಣಿಗೆ ಅಥವಾ ಬದಲಾವಣೆಗಳಿಗೆ ಬಹುಬೇಗ ಹೊಂದಿಕೊಳ್ಳುತ್ತಾರೆ. ಇದಲ್ಲದೆ, Gen Z ಇದುವರೆಗಿನ ಯಾವುದೇ ಪೀಳಿಗೆಗೆ ಹೋಲಿಸಿದರೆ ಹೆಚ್ಚು ಭಿನ್ನರಾಗಿರುತ್ತಾರೆ.
ಜನರೇಷನ್ ಝಡ್ ತಮ್ಮ ಉದ್ಯೋಗ ಹೇಗೆ ಮಾಡುತ್ತಾರೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೇಗೆ ಇರುತ್ತಾರೆ ಎನ್ನುವುದು ಹೆಚ್ಚು ಚರ್ಚೆಗೆ ಒಳಪಡುತ್ತಿದೆ. ಕಾರಣ ಈ ಹಿಂದಿನ ಜನರೇಷನ್‌ನ ರೀತಿ ಇವರು ಎಲ್ಲವನ್ನೂ ಸಹಿಸಿಕೊಳ್ಳುವುದು ಅಥವಾ ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ. ಈ ಜನರೇಷನ್ ಕೆಲಸದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಯಾವುದೇ ಒತ್ತಡ ರೂಪುಗೊಳ್ಳದಂತೆ ಹಾಗೂ ಸುಖ ಜೀವನ ನಡೆಸುವುದಕ್ಕೆ ಇಚ್ಛಿಸುತ್ತಾರೆ. ಅಲ್ಲದೇ ಹೆಚ್ಚು ಶ್ರಮ ವಹಿಸದೆ ಸ್ಮಾರ್ಟ್ ವರ್ಕ್‌ಗೆ ಆದ್ಯತೆ ಕೊಡುತ್ತಾರೆ. ಆದರೆ ಕೆಲವೊಂದು ನ್ಯೂನ್ಯತೆಯೂ ಈ ಜನರೇಷನ್‌ನಲ್ಲಿ ಇದೆ. ಈ ಜನರೇಷನ್ ಯುವ ಸಮೂಹ ಬೇಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಈ ಜನರೇಷನ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ತುಸು ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ












Click it and Unblock the Notifications