ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ರೋಗಿಗಳ ಗುದನಾಳದಲ್ಲಿ ರಕ್ತಸ್ರಾವಕ್ಕೆ ಸೈಟೊಮೆಗಾಲೊವೈರಸ್ ಕಾರಣ?

|
Google Oneindia Kannada News

ನವದೆಹಲಿ, ಜೂನ್ 30: ಕೊರೊನಾವೈರಸ್ ಸೋಂಕಿತರದಲ್ಲಿ ಕೆಮ್ಮು, ನೆಗಡಿ, ಶೀತ, ತಲೆನೋವು, ಉದರ ಬಾಧೆ ರೀತಿಯ ಲಕ್ಷಣಗಳು ಗೋಚರಿಸುತ್ತವೆ ಎಂಬುದು ಗೊತ್ತಿರುವ ವಿಷಯ. ಇದರ ಜೊತೆ ಮೊದಲ ಬಾರಿಗೆ ಕೊವಿಡ್-19 ಸೋಂಕಿತರ ಹೊಸ ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ನವದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಐದು ಮಂದಿ ಕೊರೊನಾವೈರಸ್ ರೋಗಿಗಳಲ್ಲಿ ಸೈಟೊಮೆಗಾಲೋವೈರಸ್(ಸಿವಿಎಂ) ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಿದೆ. ಈ ರೋಗಿಗಳ ಗುದನಾಳದಲ್ಲಿ ರಕ್ತಸ್ರಾವ ಆಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

Explained: ಭಾರತದಲ್ಲಿ ಮಕ್ಕಳಿಗೆ Covid-19 ಅಲ್ಲ MIS-C ಭಯ! Explained: ಭಾರತದಲ್ಲಿ ಮಕ್ಕಳಿಗೆ Covid-19 ಅಲ್ಲ MIS-C ಭಯ!

"ಗುದನಾಳದ ರಕ್ತಸ್ರಾವದ ಬಗ್ಗೆ ಕೆಲವು ರೋಗಿಗಳು ಮೊದಲು ದೂರು ನೀಡಿದ್ದರು. ಪರೀಕ್ಷೆ ನಂತರ ಇದು ಸೈಟೊಮೆಗಾಲೊವೈರಸ್ ಸಂಬಂಧಿತ ರೋಗ ಎಂದು ನಿರ್ಧರಿಸಲಾಗಿದ್ದು, ಕೊವಿಡ್ -19 ಸೋಂಕಿತ ಎಲ್ಲಾ ರೋಗಿಗಳಲ್ಲಿ ಈ ಸಮಸ್ಯೆ ಗೋಚರಿಸುತ್ತಿದೆ," ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕೊರೊನಾವೈರಸ್ ಸೋಂಕಿತರಲ್ಲಿ ಈ ಹೊಸ ಸೈಟೊಮೆಗಾಲೊವೈರಸ್ ಸಂಬಂಧಿತ ರೋಗ ಕಾಣಿಸಿಕೊಳ್ಳುತ್ತಿರುವುದು ಏಕೆ, ಈ ಸೈಟೊಮೆಗಾಲೊವೈರಸ್ ರೋಗ ಎಂದರೇನು, ಸೈಟೊಮೆಗಾಲೊವೈರಸ್ ಸಂಬಂಧಿತ ಲಕ್ಷಣಗಳು ಹೇಗಿರುತ್ತವೆ, ಕೊವಿಡ್-19 ಸೋಂಕಿತರಲ್ಲಿ ಏಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರವನ್ನು ಕಂಡುಕೊಳ್ಳಿರಿ.

ಗಂಗಾರಾಮ್ ಆಸ್ಪತ್ರೆ ಹಿರಿಯ ವೈದ್ಯರ ವರದಿ ಉಲ್ಲೇಖ

ಗಂಗಾರಾಮ್ ಆಸ್ಪತ್ರೆ ಹಿರಿಯ ವೈದ್ಯರ ವರದಿ ಉಲ್ಲೇಖ

ನವದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಯ ಹಿರಿಯ ವೈದ್ಯರ ತಂಡ ಸಿದ್ಧಪಡಿಸಿರುವ ವರದಿ ಪ್ರಕಾರ, "ಏಪ್ರಿಲ್-ಮೇ ತಿಂಗಳಿನಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕು ತಗುಲಿರುವ ರೋಗಿಗಳಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಕೊವಿಡ್-19 ಸೋಂಕು ತಗುಲಿದ 20 ರಿಂದ 30 ದಿನಗಳಲ್ಲಿ ಪ್ರತಿಕಾಯ ವ್ಯವಸ್ಥೆಯಲ್ಲಿ ಸಮಸ್ಯೆ, ಹೊಟ್ಟೆ ನೋವು ಹಾಗೂ ಗುದನಾಳದಲ್ಲಿ ರಕ್ತಸ್ರಾವ ಆಗುತ್ತಿರುವುದು ಗೊತ್ತಾಗಿದೆ. ಇಬ್ಬರು ರೋಗಿಗಳಲ್ಲಿ ತೀವ್ರ ರಕ್ತಸ್ರಾವ ಆಗುತ್ತಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆ ನೀಡಲಾಯಿತು. ಅದಾಗ್ಯೂ, ಒಬ್ಬ ರೋಗಿಯು ಎದೆನೋವು ಹಾಗೂ ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾರೆ," ಎಂದು ಹೇಳಲಾಗಿದೆ.

ಏನಿದು ಸೈಟೊಮೆಗಾಲೊವೈರಸ್?

ಏನಿದು ಸೈಟೊಮೆಗಾಲೊವೈರಸ್?

ಸೈಟೊಮೆಗಾಲೊವೈರಸ್ ಅಥವಾ CMV ಎಂಬುದು ಒಂದು ಸಾಮಾನ್ಯ ರೋಗಾಣು. ಮಾಯೋ ಕ್ಲಿನಿಕ್ ಪ್ರಕಾರ, ಒಂದು ಬಾರಿ ಈ ವೈರಸ್ ಮನುಷ್ಯನ ದೇಹ ಹೊಕ್ಕರೆ ಅದು ಜೀವಿತಾವಧಿ ವರಿಗೂ ಜೀವಂತವಾಗಿ ಉಳಿದುಕೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಈ ರೋಗಾಣುವಿನಿಂದ ಆರೋಗ್ಯ ಸಮಸ್ಯೆಗಳು ಎದುರಾಗುವುದು ತೀರಾ ಕಡಿಮೆಯಾಗಿರುತ್ತದೆ. ಆದರೆ ಪ್ರತಿಕಾಯ ವ್ಯವಸ್ಥೆಯಲ್ಲಿ ಸಮಸ್ಯೆ ಹೊಂದಿರುವವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಾಣು ಒಂದು ಬಾರಿ ಅಂಟಿಕೊಂಡರೆ ಸುಲಭವಾಗಿ ರಕ್ತ, ಲಾಲಾರಸ, ಮೂತ್ರ ಸೇರಿದಂತೆ ದ್ರವರೂಪವಿರುವ ಭಾಗಗಳಿಗೆ ಬೇಗನೇ ಹರಡುತ್ತವೆ. ಈ ರೋಗಾಣುವಿನಿಂದ ನೀರುಗುಳ್ಳಿಗಳು ಕಾಣಿಸಿಕೊಳ್ಳುತ್ತವೆ.

ಕೊರೊನಾ ಲಸಿಕೆ ಪಡೆದ ನಂತರ ಮುಟ್ಟಿನಲ್ಲಿ ಏರುಪೇರು? ವೈದ್ಯರ ವಿವರಣೆಕೊರೊನಾ ಲಸಿಕೆ ಪಡೆದ ನಂತರ ಮುಟ್ಟಿನಲ್ಲಿ ಏರುಪೇರು? ವೈದ್ಯರ ವಿವರಣೆ

ಸೈಟೊಮೆಗಾಲೊವೈರಸ್ ರೋಗದ ಲಕ್ಷಣಗಳು?

ಸೈಟೊಮೆಗಾಲೊವೈರಸ್ ರೋಗದ ಲಕ್ಷಣಗಳು?

ಆರೋಗ್ಯವಂತ ವ್ಯಕ್ತಿಗಳಲ್ಲಿ ಸೈಟೊಮೆಗಾಲೊವೈರಸ್ ಯಾವುದೇ ರೀತಿ ಸಮಸ್ಯೆ ಇರುವುದಿಲ್ಲ, ಹೆಚ್ಚಾಗಿ ಎಷ್ಟೋ ಜನರಲ್ಲಿ ಈ ರೋಗಾಣು ಪ್ರವೇಶಿಸಿದ್ದರೂ ಗೊತ್ತಾಗುವುದಿಲ್ಲ. ಈ ಸೋಂಕು ಹೆಚ್ಚಾಗಿ ಪುಟ್ಟ ಮಕ್ಕಳಲ್ಲಿ ಹೆಚ್ಚಾಗಿ ಹರಡುತ್ತವೆ. ಡೇ ಕೇರ್ ಮತ್ತು ನರ್ಸರಿಗಳಿಗೆ ತೆರಳುವ ಮಕ್ಕಳಲ್ಲಿ ಈ ರೋಗಾಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೈಟೊಮೆಗಾಲೊವೈರಸ್ ಪ್ರಾಥಮಿಕ ಲಕ್ಷಣಗಳು ಹೀಗಿವೆ.

* ಗಂಟಲು ನೋವು,

* ಸ್ನಾಯು ನೋವು,

* ಆಯಾಸ,

* ಗ್ರಂಥಿಗಳ ಊದಿಕೊಳ್ಳುವಿಕೆ

* ಜ್ವರ

 ವಿಶೇಷ ವರದಿ: ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ MIS-C, A-NEC ಸೋಂಕು ಪತ್ತೆ ವಿಶೇಷ ವರದಿ: ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ MIS-C, A-NEC ಸೋಂಕು ಪತ್ತೆ

ಯಾರಿಗೆ ಸೈಟೊಮೆಗಾಲೊವೈರಸ್ ರೋಗಾಣು ಮಾರಕ?

ಯಾರಿಗೆ ಸೈಟೊಮೆಗಾಲೊವೈರಸ್ ರೋಗಾಣು ಮಾರಕ?

"ಆರೋಗ್ಯವಂತರಲ್ಲಿ ಸೈಟೊಮೆಗಾಲೊವೈರಸ್ ರೋಗಾಣು ಯಾವುದೇ ರೀತಿ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರ ಹೊರತಾಗಿಯೂ ಪ್ರತಿಕಾಯ ವ್ಯವಸ್ಥೆ ದೋಷ, ರೋಗ ನಿರೋಧಕ ಶಕ್ತಿ ಪ್ರಮಾಣ ಕಡಿಮೆ ಇರುವವರು, ವಿಶೇಷವಾಗಿ ಅಂಗಾಂಶ, ಕಾಂಡಕೋಶ ಮತ್ತು ಮೂಳೆ ಮಜ್ಜೆಗಳ ಸಮಸ್ಯೆ ಹೊಂದಿರುವವರಿಗೆ ಮಾರಕವಾಗಿದೆ," ಎಂದು ಮಾಯೋ ಕ್ಲಿನಿಕ್ ಎಚ್ಚರಿಸಿದೆ.

"ಒಂದು ವೇಳೆ ಗರ್ಭಿಣಿಯರಲ್ಲಿ ರೋಗ ನಿರೋಧಕಶಕ್ತಿ ಕಡಿಮೆಯಾಗಿದ್ದು, ಸೈಟೊಮೆಗಾಲೊವೈರಸ್ ರೋಗಾಣು ತಗುಲಿದರೆ ಹೆಚ್ಚು ಅಪಾಯಕಾರಿ ಆಗಿರುತ್ತದೆ. ಗರ್ಭಾವಸ್ಥೆಯಲ್ಲಿ ಸೈಟೊಮೆಗಾಲೊವೈರಸ್ ರೋಗಾಣುವನ್ನೂ ಬೆಳೆಸುವ ಮಹಿಳೆಯರು ತಮ್ಮ ಶಿಶುವಿಗೆ ಅದನ್ನು ರವಾನಿಸಬಹುದು. ಆಗ ಹುಟ್ಟುವ ಮಗುವಿನಲ್ಲೂ ಈ ರೋಗಾಣುವಿನ ಲಕ್ಷಣಗಳು ಕಾಣಸಿಕೊಳ್ಳುವ ಅಪಾಯವಿರುತ್ತದೆ," ಎಂದು ಅದು ಹೇಳಿದೆ.

ಅಲ್ಲದೇ, ಈ ವೈರಸ್‌ನ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಾದ ಶ್ವಾಸಕೋಶ, ಲಿವರ್, ಅನ್ನನಾಳ, ಹೊಟ್ಟೆ, ಕರುಳು ಮತ್ತು ಮೆದುಳಿನ ಮೇಲೆ ದುಷ್ಪರಿಣಾಮ ಬೀರುವ ಅಪಾಯ ಹೆಚ್ಚಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೈಟೊಮೆಗಾಲೊವೈರಸ್ ಹೇಗೆ ಹರಡುತ್ತದೆ?

ಸೈಟೊಮೆಗಾಲೊವೈರಸ್ ಹೇಗೆ ಹರಡುತ್ತದೆ?

ಸೈಟೊಮೆಗಾಲೊವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಕಣ್ಣುಗಳು, ಮೂಗು ಮತ್ತು ಬಾಯಿ ಮೂಲಕ ಹರಡುತ್ತದೆ. ನಂತರದಲ್ಲಿ ವೈರಸ್ ಸೋಂಕಿತನ ದೇಹದ ಲಾಲಾರಸ, ರಕ್ತ, ಮೂತ್ರ, ವೀರ್ಯ, ಯೋನಿ ದ್ರವಗಳು ಅಥವಾ ಎದೆ ಹಾಲಿನಲ್ಲಿ ಹರಡುತ್ತದೆ.

ಸೈಟೊಮೆಗಾಲೊವೈರಸ್ ಪರೀಕ್ಷೆ ಹಾಗೂ ನಿರ್ಣಯಿಸುವುದು?

ಸೈಟೊಮೆಗಾಲೊವೈರಸ್ ಪರೀಕ್ಷೆ ಹಾಗೂ ನಿರ್ಣಯಿಸುವುದು?

ಈ ಸೈಟೊಮೆಗಾಲೊವೈರಸ್ ಸೋಂಕು ಪತ್ತೆಗೆ ಮೂರು ರೀತಿ ಪರೀಕ್ಷೆಗಳು ಸಾಮಾನ್ಯವಾಗಿದೆ. ರಕ್ತ ಮತ್ತು ಮೂತ್ರ ಪರೀಕ್ಷೆ, ರೆಟಿನಾದಲ್ಲಿ ಉರಿಯೂತವನ್ನು ಪರೀಕ್ಷಿಸಲು ಬಯಾಪ್ಸಿ ಮತ್ತು ಕಣ್ಣುಗಳ ಪರೀಕ್ಷೆ ಸೇರಿದಂತೆ ಒಟ್ಟು ಮೂರು ಸಾಮಾನ್ಯ ವಿಧಾನಗಳಲ್ಲಿ ಸೋಂಕು ತಪಾಸಣೆ ನಡೆಸಲಾಗುತ್ತದೆ.

ರಕ್ತ ಮತ್ತು ಮೂತ್ರ ಪರೀಕ್ಷೆಗಳಲ್ಲಿ ಸಿಎಮ್‌ವಿ ಆಂಟಿಜೆನ್, ವೈರಸ್ ಲಕ್ಷಣ ಅಥವಾ ಆಣ್ವಿಕ ಪರೀಕ್ಷೆ ಸೇರಿವೆ. ಸೆರೊಲಾಜಿಕ್ ಪರೀಕ್ಷೆಗಳು ನಿಮ್ಮ ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯು ಸಿಎಮ್‌ವಿ ವಿರುದ್ಧ ಹೋರಾಡುತ್ತಿವೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಬಯಾಪ್ಸಿಯಲ್ಲಿ ಶಂಕಿತ ರೋಗಿಯ ಅನ್ನನಾಳ, ಶ್ವಾಸಕೋಶ ಅಥವಾ ಕರುಳಿನಿಂದ ಪಡೆದ ಅಂಗಾಂಶಗಳ ಸಣ್ಣ ಮಾದರಿಯನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಪರಿಶೀಲಿಸಲಾಗುತ್ತದೆ.

English summary
What is Cytomegalovirus Causing Severe Ailments in Delhi Covid-19 Patients? Know Causes, Symptoms and Diagnosis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X