ABP-C Voter Opinion Poll: ಪಶ್ಚಿಮ ಬಂಗಾಳದಲ್ಲಿ ಜನರ ಒಲವು ಯಾರ ಪರ?
ನವದೆಹಲಿ, ಜನವರಿ 18: ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಎಡಪಂಥೀಯ ನಿಲುವಿನ ಭದ್ರಕೋಟೆಯಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸುವ ಬಯಕೆ ಹೊಂದಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸುವುದು ಬಿಜೆಪಿಯ ಗುರಿ.
ಈಗಾಗಲೇ ಟಿಎಂಸಿಯ ಕೆಲವು ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ರಣರಂಗ ಮತ್ತಷ್ಟು ರಂಗೇರಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ತಮ್ಮ ಅಸ್ತಿತ್ವ ಪ್ರದರ್ಶಿಸಲು ಉಳಿದ ಪಕ್ಷಗಳು ಪ್ರಯತ್ನ ನಡೆಸುವ ಸವಾಲು ಎದುರಿಸಲಿವೆ.
ಬಂಗಾಳದಲ್ಲಿ 294 ವಿಧಾನಸಭೆ ಕ್ಷೇತ್ರಗಳಿದ್ದು, ಕಳೆದ 2016ರ ಚುನಾವಣೆಯಲ್ಲಿ ಟಿಎಂಸಿ 203 ಸೀಟುಗಳಲ್ಲಿ ಗೆಲುವು ಕಂಡಿತ್ತು. 291 ಕಡೆ ಸ್ಪರ್ಧಿಸಿದ್ದ ಬಿಜೆಪಿ ಕೇವಲ ಮೂರು ಸೀಟುಗಳಲ್ಲಿ ಜಯಗಳಿಸಿತ್ತು. 161 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಒಂದರಲ್ಲಿಯೂ ಗೆದ್ದಿರಲಿಲ್ಲ.
ಎಬಿಪಿ-ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ ಹೇಗಿದೆ ಎನ್ನುವುದು ಬಹಿರಂಗವಾಗಿದೆ. ಮುಂದೆ ಓದಿ.

ಯಾವ ಪಕ್ಷಕ್ಕೆ ಎಷ್ಟು ಸೀಟು?
ಟಿಎಂಸಿ: 158
ಬಿಜೆಪಿ: 102
ಎಡಪಕ್ಷ/ಕಾಂಗ್ರೆಸ್: 30
ಇತರೆ: 4

ರಾಜ್ಯ ಸರ್ಕಾರದ ಆಡಳಿತ ಎಷ್ಟು ತೃಪ್ತಿಕರ
ತುಂಬಾ ತೃಪ್ತಿಕರ: 16%
ತೃಪ್ತಿಕರ: 22%
ಅತೃಪ್ತಿಕರ: 49%
ಹೇಳಲು ಅಸಾಧ್ಯ: 13%

ಮುಖ್ಯಮಂತ್ರಿ ಆಡಳಿತ ಎಷ್ಟು ತೃಪ್ತಿಕರ
ತುಂಬಾ ತೃಪ್ತಿಕರ: 43%
ತೃಪ್ತಿಕರ: 32%
ಅತೃಪ್ತಿಕರ: 22%
ಹೇಳಲು ಅಸಾಧ್ಯ: 03%

ಮೋದಿ ಕಾರ್ಯವೈಖರಿ ಎಷ್ಟು ತೃಪ್ತಿಕರ?
ತುಂಬಾ ತೃಪ್ತಿಕರ: 37%
ತೃಪ್ತಿಕರ: 37%
ಅತೃಪ್ತಿಕರ: 24%
ಹೇಳಲು ಅಸಾಧ್ಯ: 02%

ಕೇಂದ್ರ ಸರ್ಕಾರದ ಆಡಳಿತ ಸಮಾಧಾನಕರವೇ?
ತುಂಬಾ ತೃಪ್ತಿಕರ: 33%
ತೃಪ್ತಿಕರ: 38%
ಅತೃಪ್ತಿಕರ: 27%
ಹೇಳಲು ಅಸಾಧ್ಯ: 2%












Click it and Unblock the Notifications