• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆ. 17 ರಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ಕಥೆ ವೀಕ್ಷಿಸಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: HistoryTV18 ರ ಹೊಚ್ಚಹೊಸ ಸಾಕ್ಷ್ಯಚಿತ್ರ, 'ಸೆಪ್ಟೆಂಬರ್ 17 ರಂದು ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿರುವ 'Modern Marvel: World's Largest Cricket Stadium' ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮಹತ್ವಾಕಾಂಕ್ಷೆಯ ಹೊಸ ನರೇಂದ್ರ ಮೋದಿ ಕ್ರೀಡಾಂಗಣವನ್ನು ನಿರ್ಮಿಸಿದ್ದರ ವಿವರಣಾತ್ಮಕ ಕಥೆಯಾಗಿದೆ. ಈ ವರ್ಷದ ಆರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಉದ್ಘಾಟಿಸಿದ ಈ ಹೊಚ್ಚ ಹೊಸ ಕ್ರೀಡಾಂಗಣವು 1,32,000ರ ಆಸನ ಸಾಮರ್ಥ್ಯವನ್ನು ಹೊಂದಿದ್ದು, ಈ ಮೂಲಕ ಇದು ಆಸ್ಟ್ರೇಲಿಯಾದ ಎಂಸಿಜಿಯನ್ನು ಮೀರಿಸುವ ಮೂಲಕ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದನ್ನು ಇತ್ತೀಚೆಗೆ ಹಳೆಯ ಮೊಟೆರಾ ಕ್ರೀಡಾಂಗಣದ ಅದೇ ಮೈದಾನದಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಿಸಲಾಯಿತು.

ಈಗ, HistoryTV18 ಈ ಬೃಹತ್ ಎಂಜಿನಿಯರಿಂಗ್ ಸಾಧನೆಯ ಬಗ್ಗೆ ವಿವರವಾದ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸುತ್ತಿದೆ - ಇದು ಆಧುನಿಕ ದಿನದ ಆಟಕ್ಕಾಗಿ ನಿರ್ಮಿಸಲಾದ ಭವಿಷ್ಯಮುಖಿ ಕ್ರೀಡಾಂಗಣದ ಕಥೆಯನ್ನು ಹೇಳುತ್ತದೆ. ಹೈ-ಡೆಫಿನಿಶನ್ ನಲ್ಲಿ ಚಿತ್ರೀಕರಿಸಲಾದ ಈ ಸಾಕ್ಷ್ಯಚಿತ್ರವು ವೀಕ್ಷಕರನ್ನು ಆಕರ್ಷಿಸುವ ಬೆಚ್ಚಿ ಬೀಳಿಸುವ ಸಂಗತಿಗಳನ್ನು ಪ್ರಸ್ತುತಪಡಿಸುವ ಜೊತೆಗೆ ಈ ವಾಸ್ತುಶಿಲ್ಪದ ಅದ್ಭುತವನ್ನು ರಚಿಸಲು ಬೇಕಾಗುವ ಸಾಮಾನ್ಯ ಸರಂಜಾಮುಗಳ ಬಗೆಗಿನ ಹಿಂದೆಂದೂ ಕಂಡಿರದ ಅಂಶಗಳನ್ನು ಬಹಿರಂಗಪಡಿಸುತ್ತದೆ.

ನಮಸ್ತೆ ಟ್ರಂಪ್‌ಗೆ ವೇದಿಕೆ ಒದಗಿಸಿದ ಸ್ಟೇಡಿಯಂ ವಿಶೇಷತೆಗಳೇನು?

ಈ ಚಿತ್ರದಲ್ಲಿ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ರವಿಶಾಸ್ತ್ರಿಯಂಥ ಕ್ರಿಕೆಟ್ ದಿಗ್ಗಜರು ಮತ್ತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ಕ್ರಿಕೆಟ್ ಪ್ರತಿಭೆಗಳೂ ಕಾಣಿಸಿಕೊಂಡಿದ್ದಾರೆ. ವೀಕ್ಷಕರು ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಪಾರ್ಥಿವ್ ಪಟೇಲ್ ಮತ್ತು ಈ ಯೋಜನೆಯನ್ನು ಪ್ರಾರಂಭದಿಂದ ಅಂತ್ಯದವರೆಗೆ ಮೇಲ್ವಿಚಾರಣೆ ಮಾಡಿದ ವ್ಯಕ್ತಿಯಾದ, ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರ ಮಾತುಗಳನ್ನು ಕೂಡ ಕೇಳಲಿದ್ದಾರೆ.

ಕ್ರಿಕೆಟ್ ವಿಶ್ವದ ಕೇವಲ ಹೊಸ ಹೆಗ್ಗುರುತು

ಕ್ರಿಕೆಟ್ ವಿಶ್ವದ ಕೇವಲ ಹೊಸ ಹೆಗ್ಗುರುತು

‘Modern Marvel: World's Largest Cricket Stadium', ಕ್ರಿಕೆಟ್ ವಿಶ್ವದ ಕೇವಲ ಹೊಸ ಹೆಗ್ಗುರುತನ್ನು ಕುರಿತು ಆಶ್ಚರ್ಯಕರ ಸಂಗತಿಗಳು ಮತ್ತು ಅಂಕಿಅಂಶಗಳೊಂದಿಗೆ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವುದಷ್ಟೇ ಮಾಡುವುದಿಲ್ಲ ಇದು ಭಾರತದ ಕ್ರಿಕೆಟ್ ಸೂಪರ್ ಸ್ಟಾರ್‌ಗಳು ಹಳೆಯ ಮೊಟೆರಾ ಪಿಚ್ ಸಾಕ್ಷಿಯಾದ ಭಾರತೀಯ ಕ್ರಿಕೆಟ್‌ನ ಐತಿಹಾಸಿಕ ಕ್ಷಣಗಳನ್ನು ನೆನಪಿಸಿಕೊಳ್ಳುವುದನ್ನು ಕೂಡ ಒಳಗೊಂಡಿದೆ. ರವಿಶಾಸ್ತ್ರಿ "1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುವ" ಬಗ್ಗೆ ಮಾತನಾಡುವುದನ್ನು ಕೂಡ ವೀಕ್ಷಕರು ನೋಡುತ್ತಾರೆ. 'ಹರಿಯಾಣ ಚಂಡಮಾರುತ' ಕಪಿಲ್ ದೇವ್ ಅವರು ಹಳೆಯ ಮೊಟೆರಾ ಕ್ರೀಡಾಂಗಣದಲ್ಲಿ ಸುನಿಲ್ ಗವಾಸ್ಕರ್ 10,000 ರನ್ ಪೂರ್ಣಗೊಳಿಸಿದ್ದರ ಬಗ್ಗೆ ಮಾತನಾಡುತ್ತಾರೆ.

ಹಲವು ಸಂಭ್ರಮಗಳಿಗೆ ಸಾಕ್ಷಿ

ಹಲವು ಸಂಭ್ರಮಗಳಿಗೆ ಸಾಕ್ಷಿ

"ಇದು ನಾವು ಸಂಭ್ರಮಾಚರಿಸಲು ಒಂದು ದೊಡ್ಡ ವಿಷಯವಾಗಿತ್ತು... ನಮ್ಮ ಪೀಳಿಗೆಯ ಒಬ್ಬ ಕ್ರಿಕೆಟಿಗ 10,000 ರನ್ ಗಳಿಸಿದ್ದರು, ಆದ್ದರಿಂದ ಅದು ತುಂಬಾ ದೊಡ್ಡದಾಗಿತ್ತು!" ಎಂದು ಅವರು ಹೇಳುತ್ತಾರೆ. ಮತ್ತು ಗೌತಮ್ ಗಂಭೀರ್ ಅವರು 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಠಿಣವಾದ ವಿಶ್ವಕಪ್ ಕ್ವಾರ್ಟರ್ ಫೈನಲ್ ಆಡಿದ್ದನ್ನು ನೆನಪಿಸಿಕೊಂಡರೆ, ಮೋಟೆರಾದಲ್ಲಿ ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯನ್ನು ಮುರಿದಿದ್ದನ್ನು ಪಾರ್ಥಿವ್ ಪಟೇಲ್ ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಗರಿಯಿಟ್ಟಂತೆ, ಬಿಸಿಸಿಐ ಕಾರ್ಯದರ್ಶಿ ಜೇ ಶಾ ವೀಕ್ಷಕರಿಗೆ ಭಾರತ ರತ್ನ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದ್ದು ಸಹ ಇಲ್ಲಿಯೇ ಎಂದು ನೆನಪಿಸುತ್ತಾರೆ.

ಈಡನ್ ಗಾರ್ಡನ್ಸ್ ಗಿಂತ ಎರಡು ಪಟ್ಟು ದೊಡ್ಡದಾಗಿದೆ

ಈಡನ್ ಗಾರ್ಡನ್ಸ್ ಗಿಂತ ಎರಡು ಪಟ್ಟು ದೊಡ್ಡದಾಗಿದೆ

ಈಗ, ಈ ಖ್ಯಾತಿವೆತ್ತ ನೆಲದ ಮೇಲೆ ಅಹಮದಾಬಾದ್‌ನ ಮಿನುಗುವ ಹೊಸ ಕಟ್ಟಡ, ವಿನ್ಯಾಸ ಮತ್ತು ಎಂಜಿನಿಯರಿಂಗ್‌ನ ಆಧುನಿಕ ಅದ್ಭುತ ಮತ್ತು ಶತಕೋಟಿ ಜನರಿಗೆ ಅವರ ಅತ್ಯಂತ ಪ್ರೀತಿಯ ನೆನಪುಗಳನ್ನು ನೀಡಿದ ಕ್ರೀಡೆಗೆ ಸೂಕ್ತವಾದ ಸಮರ್ಪಣೆ ಬಂದಿದೆ. HistoryTV18 ರ ' ‘Modern Marvel: World's Largest Cricket Stadium',' ಭಾರತದ ನೆಚ್ಚಿನ ಕ್ರೀಡೆಯ ಈ ಹೊಸ ಹೆಗ್ಗುರುತಿನ ಪಥವನ್ನು ನೋಡುತ್ತದೆ, ಇದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಗಿಂತ ಎರಡು ಪಟ್ಟು ದೊಡ್ಡದಾಗಿದೆ ಮತ್ತು ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ.

ಲಾರ್ಸೆನ್ & ಟೌಬ್ರೊ (ಎಲ್&ಟಿ) ಸಂಸ್ಥೆಯಿಂದ ನಿರ್ಮಾಣ

ಲಾರ್ಸೆನ್ & ಟೌಬ್ರೊ (ಎಲ್&ಟಿ) ಸಂಸ್ಥೆಯಿಂದ ನಿರ್ಮಾಣ

ನರೇಂದ್ರ ಮೋದಿ ಕ್ರೀಡಾಂಗಣವನ್ನು ಲಾರ್ಸೆನ್ & ಟೌಬ್ರೊ (ಎಲ್&ಟಿ) ನಿರ್ಮಿಸಿದ್ದು, ಇದು ವಿಶ್ವದ ಅತಿ ಎತ್ತರದ ಪ್ರತಿಮೆಯೂ ಸೇರಿದಂತೆ ದೇಶದ ಕೆಲವು ಅಪ್ರತಿಮ ಹೆಗ್ಗುರುತುಗಳನ್ನು ನಿರ್ಮಿಸಿದ ಕೀರ್ತಿಗೂ ಪಾತ್ರವಾಗಿದೆ. ಯೋಜನೆಯ ಅಗಾಧ ಗಾತ್ರದ ಪ್ರಮಾಣ ಮತ್ತು ಸಂಕೀರ್ಣತೆಯಿಂದಾಗಿ ಆಸ್ಟ್ರೇಲಿಯಾದಿಂದ ವಿನ್ಯಾಸ ವಾಸ್ತುಶಿಲ್ಪಿಗಳು, ಅಮೇರಿಕದಿಂದ ಛಾವಣಿ ತಜ್ಞರು, ಜಪಾನ್‌ನಿಂದ ವಿಶೇಷ ಕ್ಯಾನೋಪಿ ಫ್ಯಾಬ್ರಿಕ್, ಇಟಲಿಯಿಂದ ಕೇಬಲ್‌ಗಳು ಮತ್ತು ಸ್ಪೇನ್‌ನಿಂದ ಕ್ರಾಂತಿಕಾರಿ ಸ್ಟೇಡಿಯಂ ಲೈಟಿಂಗ್ ಅನ್ನು ತರಲಾಗಿತ್ತು! ಈ ಬೃಹತ್ ಎಂಜಿನಿಯರಿಂಗ್ ಯೋಜನೆಯ ಹಿಂದಿರುವ ಜನರೊಂದಿಗೆ ವಿವರಗಳಿಗೆ ಹೆಚ್ಚಿನ ಗಮನ ನೀಡುತ್ತ ಬೆಳಕು ಚೆಲ್ಲುವ ಸಂದರ್ಶನಗಳೊಂದಿಗೆ, HistoryTV18 ರ ವಿವರಣಾತ್ಮಕ ಸಾಕ್ಷ್ಯಚಿತ್ರವು ಈ ಕ್ರೀಡಾಂಗಣವನ್ನು ನಿಜವಾಗಿಯೂ ಅದ್ಭುತವನ್ನಾಗಿ ಮಾಡುವ ಆಶ್ಚರ್ಯಕರ ಸಂಗತಿಗಳೊಂದಿಗೆ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ಬಲವಾದ ಒಳನೋಟಗಳನ್ನು ಒದಗಿಸುತ್ತದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ

HistoryTV8 ನಿರಂತರವಾಗಿ ಭಾರತದ ಬಗ್ಗೆ ಪ್ರಸ್ತುತವಾದ ಮತ್ತು ಮಾಹಿತಿಯುಕ್ತ ಆಕರ್ಷಕ ಮತ್ತು ಮನರಂಜನೀಯ ಕಥೆಗಳನ್ನು ಹೇಳುವ ಗುರಿಯನ್ನು ಹೊಂದಿದೆ. 'Modern Marvel: World's Largest Cricket Stadium' ಸೆಪ್ಟೆಂಬರ್ 17ರಂದು ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿರುವ ಭಾರತ ಮತ್ತು ಭಾರತೀಯರ ಬಗ್ಗೆ ನೆಟ್‌ವರ್ಕ್‌ನ ಸಾಕ್ಷ್ಯಚಿತ್ರಗಳ ಸರಣಿಯಲ್ಲಿ ಇತ್ತೀಚಿನದಾಗಿದೆ.

ಚಿತ್ರದ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಹೇಳಿದರು, "ನರೇಂದ್ರ ಮೋದಿ ಕ್ರೀಡಾಂಗಣವು 21ನೇ ಶತಮಾನದ ಶ್ರೇಷ್ಠ ಆಧುನಿಕ ಅದ್ಭುತಗಳಲ್ಲಿ ಒಂದಾಗಿದೆ. HistoryTV18 ಕ್ರಿಕೆಟ್ ನ ಅತಿದೊಡ್ಡ ವೇದಿಕೆಯನ್ನು ಅದರ ಪ್ರಮಾಣ ಮತ್ತು ಭವ್ಯತೆಗೆ ಸರಿಹೊಂದುವ ರೀತಿಯಲ್ಲಿ ಪ್ರದರ್ಶಿಸಿದೆ."

 TV18 ಅವಿನಾಶ್ ಕೌಲ್ ಮಾತನಾಡಿ

TV18 ಅವಿನಾಶ್ ಕೌಲ್ ಮಾತನಾಡಿ

ಎಂಡಿ ಎ+ಇ ನೆಟ್‌ವರ್ಕ್ಸ್, TV18 ಅವಿನಾಶ್ ಕೌಲ್, ಹೇಳುತ್ತಾರೆ, "HistoryTV18 ನಲ್ಲಿ, ನಾವು ಒಳ್ಳೆಯ ಕಥೆಯಲ್ಲಿ ಇರುವ ಶಕ್ತಿಯಲ್ಲಿ ನಂಬಿಕೆ ಇರಿಸಿದ್ದೇವೆ. ನಮ್ಮ ತಂಡಗಳು ಬಲವಾದ ಕಥೆಗಳಿಗೆ ಜೀವ ನೀಡಲು ಶ್ರಮಿಸುತ್ತವೆ, ಅವು ನಮ್ಮ ವೀಕ್ಷಕರಿಗೆ ವಿಭಿನ್ನವಾದ, ದೃಶ್ಯಾತ್ಮಕವಾಗಿ ಅದ್ಭುತವಾದ ಮತ್ತು ಪ್ರಸ್ತುತವಾದ ವಿಷಯವನ್ನು ನೀಡುತ್ತವೆ. ನರೇಂದ್ರ ಮೋದಿ ಕ್ರೀಡಾಂಗಣವು ಕ್ರಿಕೆಟ್ ಮೇಲಿನ ದೇಶದ ಪ್ರೀತಿಗೆ ಗೌರವವಾಗಿದೆ ಮತ್ತು ಉದಯೋನ್ಮುಖ ಭಾರತದ ಪ್ರಭಾವಶಾಲಿ ಕ್ರೀಡಾಂಗಣವಾಗಿದೆ. ಈ ಗಮನಾರ್ಹವಾದ ಕಥೆ ಹೇಳುವ ಅವಕಾಶ ಪಡೆದಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ ಮತ್ತು ನಮ್ಮ ವೀಕ್ಷಕರು ಅದನ್ನು ಅಪಾರವಾಗಿ ಆನಂದಿಸುತ್ತಾರೆಂದು ನನಗೆ ಖಾತ್ರಿಯಿದೆ."

English summary
This September 17 Watch ‘Modern Marvel: World’s Largest Cricket Stadium’ on HistoryTV18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X