Vivo T3X ಬಜೆಟ್ ಫ್ರೆಂಡ್ಲಿ; ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಈ ಸ್ಮಾರ್ಟ್‌ಫೋನ್?
ಫೋನ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ Vivo ಫೋನ್‌ನ ಹೆಸರು Vivo T3x 5G, ಇದರ ಟೀಸರ್ ಅನ್ನು ಕಂಪನಿಯು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ಇದೀಗ ಕಂಪನಿಯು ಈ ಫೋನಿನ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಿದೆ. ಈ ಫೋನ್‌ನ ಬಿಡುಗಡೆ ದಿನಾಂಕ ಸೇರಿದಂತೆ ಎಲ್ಲಾ ಇಲ್ಲಿದೆ.
ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆದ ಗುರುತು ಹೊಂದಿರುವ ವಿವೋ, ತನ್ನ ವಿಭಿನ್ನ ಲುಕ್, ತಂತ್ರಜ್ಞಾನದಿಂದಲೇ ಗ್ರಾಹಕರನ್ನು ಸೆಳೆಯುತ್ತಿದೆ. ವಿವೋ ಮೊಬೈಲ್‌ಗಳು ವಿವಿಧ ಬಜೆಟ್‌ನಲ್ಲಿ ಗ್ರಾಹರಕರನ್ನು ಆಕರ್ಷಿಸುತ್ತಿವೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ರೇಂಜ್‌ಗೆ ಈಗ ಮತ್ತೊಂದು ಫೋನ್ ಎಂಟ್ರಿ ನೀಡಲಿದೆ. ಈ ಫೋನ್ ಕೊಳ್ಳಲು ಗ್ರಾಹಕ ತುದಿಗಾಲಿನಲ್ಲಿ ನಿಂತಿದ್ದಾನೆ. Vivo T3X ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 17ರಂದು ಎಂಟ್ರಿ ನೀಡಲಿದೆ.

ಬ್ಯಾಟರಿ ಹೇಗಿದೆ?
ಈಗಾಗಲೇ ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ವಿವೋದ ಹಲವು ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, Vivo T3X ಹೊಸ ಲುಕ್‌ನೊಂದಿಗೆ ಬರಲಿದೆ. ಸುಮಾರು 14999 ರೂಗಳಿಗೆ ಈ ಸ್ಮಾರ್ಟ್‌ಫೋನ್ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ. ಈ ರೇಂಜ್‌ನಲ್ಲಿ ವಿವೋ 6000 ಎಂಎಎಚ್ ಬ್ಯಾಟರಿ ಹಾಗೂ 44 ವ್ಯಾಟ್ ಚಾರ್ಜರ್‌ಗೆ ಸಪೋರ್ಟ್ ಮಾಡುವ ಫೋನ್ ಲಾಂಚ್ ಮಾಡಿದೆ. ಇದು ಟರ್ಬೊ ಚಾರ್ಜ್ ಟೆಕ್ ಅನ್ನು ಸಹ ಒಳಗೊಂಡಿರುತ್ತದೆ. ಅಂದರೆ ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಸಾಧ್ಯತೆ ಇದೆ.
ಡಿಸ್‌ಪ್ಲೇ ಹೇಗಿದೆ?
Vivo T3X ಫೋನ್‌ನಲ್ಲಿ 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒದಗಿಸಬಹುದು. ಈ ಮೊಬೈಲ್ ರಿಫ್ರೆಶ್ ರೇಟ್ 120Hz ಆಗಿರುವ ಸಾಧ್ಯತೆ ಇದೆ. ಈ ಫೋನ್ ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಬಹುದು. ಈ ಫೋನ್ 4GB ರ್ಯಾಮ್, +128GB ಇಂಟರ್‌ನಲ್ ಸ್ಟೋರೆಜ್ ಹೊಂದಿದ್ದು, 6GB+128G ಮತ್ತು 8GB+128GB ಸ್ಮಾರ್ಟ್‌ಫೋನ್‌ಗಳನ್ನು ಏಕ ಕಾಲಕ್ಕೆ ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎಷ್ಟು ಮೆಗಾ ಪಿಕ್ಸಲ್ ಕ್ಯಾಮೇರಾ ಹೊಂದಿದೆ?
ಈ ಫೋನ್‌ನ ಹಿಂದಿನ ಕ್ಯಾಮೆರಾ ಸೆಟಪ್ ಟ್ರಿಪಲ್ ರಿಯರ್ ಆಗಿದ್ದು ಆಕರ್ಷಕವಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿರುವ ಸಾಧ್ಯತೆ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋಗಳಿಗೆ ಫ್ರಂಟ್ ಕ್ಯಾಮೆರಾ 8 ಮೆಗಾ ಪಿಕ್ಸಲ್ ಹೊಂದಿರ ಬಹುದು.

ಫ್ಲಿಪ್ ಕಾರ್ಟ್ ಪುಟದಲ್ಲಿ ನಮೂದಿಸಿರುವ ಮಾಹಿತಿಯಂತೆ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನೊಂದಿಗೆ ಹೋಲಿಸಲಾಗಿದೆ. ವರದಿಗಳನ್ನು ನಂಬುವುದಾದರೆ, ಈ Vivo ಮೊಬೈಲ್ ಫೋನ್‌ನಲ್ಲಿ Snapdragon 6 ಜನರೇಷನ್ 1 ಪ್ರೊಸೆಸರ್ ಅನ್ನು ಬಳಸಬಹುದು.
ಕಳೆದ ವರ್ಷ ಬಿಡುಗಡೆಯಾದ Vivo T2X ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು MediaTek ಡೈಮೆನ್ಶನ್ 6020 ಪ್ರೊಸೆಸರ್ ಅನ್ನು ಒದಗಿಸಿತ್ತು. ಅಂದರೆ ಈ ವರ್ಷ ಈ ಫೋನ್‌ನ ಅಪ್‌ಗ್ರೇಡ್ ಮಾಡೆಲ್ ಜೊತೆಗೆ ಪ್ರೊಸೆಸರ್ ಕೂಡ ಅಪ್‌ಗ್ರೇಡ್ ಆಗಲಿದೆ.












Click it and Unblock the Notifications