Chenab Railway Bridge: ವಿಶ್ವದ ಅತೀ ಎತ್ತರದ 'ರೈಲ್ವೆ ಬ್ರಿಡ್ಜ್' ಮೇಲೆ ಟ್ರಯಲ್ ರನ್ ಯಶಸ್ವಿ: Video

ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್ ಆಗಿರುವ 'ಚೆನಾಬ್ ನದಿ' ಮೇಲೆ ಭಾರತೀಯ ರೈಲ್ವೆ ನಿರ್ಮಿಸಿರುವ ರೈಲ್ವೆ ಬ್ರಿಡ್ಜ್ (Chenab Railway Bridge) ಮೇಲೆ ಇಂದು ಪ್ರಾಯೋಗಿಕ ಸಂಚಾರ ಯಶಸ್ವಿಯಾಯಿತು. ಕಣಿವೆ ಪ್ರದೇಶದಲ್ಲಿ ಮೊದಲ ಭಾರಿಗೆ ಎತ್ತರದ ಬ್ರಿಡ್ಜ್ ಮೇಲೆ ರೈಲು ಸಂಚರಿಸಿದ ಮನಮೋಹಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಕಣಿವೆಯ ಭಾಗದಲ್ಲಿ ಚೆನಾಬ್ ನದಿ ಮೇಲೆ ಅಡ್ಡಲಾಗಿದೆ ಈ ರೈಲ್ವೆ ಬ್ರಿಡ್ಜ್ ನಿರ್ಮಿಸಲಾಗಿದೆ. ಇದಕ್ಕೆಉಧಂಪುರ್-ಶ್ರೀನಗರ-ಬಾರಾಮುಲಾ ರೈಲ್ ಲಿಂಕ್ (USBRL) ಯೋಜನೆ ಎಂದು ಕರೆಯುತ್ತಾರೆ. ಇದು ಉಧಂಪುರ್-ಶ್ರೀನಗರ-ಬಾರಾಮುಲ್ಲಾ ಸಂಪರ್ಕ ಸಾಧಿಸುತ್ತದೆ.

Viral Video Successful Trial Railway Run on World s Highest Chenab Railway Bridge in JK

ಒಟ್ಟು 46 ಕಿಮೀ ಉದ್ದದ ಈ ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಲಾದ ಎಲೆಕ್ಟ್ರಿಫೈಡ್ ಲೈನ್ ವಿಭಾಗದಲ್ಲಿ (ರಿಯಾಸಿ-ಸಂಗಲ್ದನ್) ಮೆಮು ರೈಲಿನ (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಪ್ರಾಯೋಗಿಕ ಚಾಲನೆ ನಡೆಸಲಾಯಿತು.

ಸಾಹಸಮಯ ರೈಲು ದಾರಿ

ರೈಲ್ವೆ ಇಲಾಖೆಯ ಅಧಿಕೃತ ಮೂಲಗಳ ಪ್ರಕಾರ, ಸಂಗಲ್ದಾನ್‌ನಿಂದ ಗುರುವಾರ ಮಧ್ಯಾಹ್ನ 12:35 ಕ್ಕೆ ಪ್ರಾಯೋಗಿಕ ಸಂಚಾರ ಆರಂಭವಾಯಿತು. ಅಲ್ಲಿಂದ ರಿಯಾಸಿಗೆ ಸ್ಥಳಕ್ಕೆ 14:05ಕ್ಕೆ ತಲುಪಿತು. ಇದೊಂದು ಸಾಹಸಮಯ ರೈಲು ದಾರಿ ಎಂದರು ತಪ್ಪಾಗಲಾರದು. ಕಾರಣ ಈ ಮಾರ್ಗದಲ್ಲಿ ಕೇವಲ ರೈಲ್ವೆ ಬ್ರಿಡ್ಜ್ ಮಾತ್ರವಲ್ಲದೇ ಒಟ್ಟು 09 ಸುರಂಗಗಳು ಪ್ರಯಾಣದ ವೇಳೆ ಎದುರಾಗುತ್ತವೆ.

ಮೊದಲ ಬಾರಿಗೆ ಪೂರ್ಣ ರೈಲು ಚೆನಾಬ್ ನದಿಗೆ ಅಡ್ಡಲಾಗಿರುವ ದುಗ್ಗಾ ಮತ್ತು ಬಕ್ಕಲ್ ನಿಲ್ದಾಣಗಳ ಮಧ್ಯೆ ಸಾಂಪ್ರದಾಯಿಕ ಸೇತುವೆಯ ಮೇಲೆ ಯಶಸ್ವಿಯಾಗಿ ದಾಟಿತು. ಇದು 359 ಮೀಟರ್ ಎತ್ತರದಲ್ಲಿ 467 ಮೀಟರ್ ಕೇಂದ್ರ ವ್ಯಾಪ್ತಿಯನ್ನು ಹೊಂದಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಆಗಿದೆ.

Viral Video Successful Trial Railway Run on World s Highest Chenab Railway Bridge in JK

ಪ್ರಾಯೋಗಿಕ ರೈಲು ಸಂಚಾರದ ವಿಡಿಯೋ ವೈರಲ್

ಈ ಚೆನಾಬ್ ರೈಲ್ವೆ ಬ್ರಿಡ್ಜ್ ಗೆ ಪ್ಯಾರಿಸ್‌ನಲ್ಲಿನ ಐಫೆಲ್ ಟವರ್‌ಗಿಂತಲೂ ಎತ್ತರದಲ್ಲಿದೆ. ಒಟ್ಟು 359 ಮೀಟರ್ ಎತ್ತರದಲ್ಲಿದೆ. ಇಲ್ಲಿನ ಪ್ರಾಯೋಗಿಕ ರೈಲು ಸಂಚಾರದ ವಿಡಿಯೋವನ್ನು ಡ್ರೋನ್ ಮೂಲಕ ಸೆರೆ ಹಿಡಿಯಲಾಗಿದೆ. ಇದಕ್ಕೆ ನೆಟ್ಟಿಗರು ಮನಸೋತಿದ್ದಾರೆ. ವಿಡಿಯೋ ಹೆಚ್ಚು ಹೆಚ್ಚು ಹಂಚಿಕೆಯಾಗುತ್ತಿದೆ.

ಸದ್ಯ ರೈಲುಗಳು ಕನ್ಯಾಕುಮಾರಿಯಿಂದ ಕತ್ರಾಗೆ ಕಾರ್ಯ ನಿರ್ವಹಿಸುತ್ತವೆ. ಕಾಶ್ಮೀರ ಕಣಿವೆಯಲ್ಲಿ ಬಾರಾಮುಲ್ಲಾದಿಂದ ಸಂಗಲ್ದನ್‌ವರೆಗೆ ಸೇವೆಗಳನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲ್ವೆ ಮಾರ್ಗ ಇದೇ ವರ್ಷ ಉದ್ಘಾಟನೆ

2024 ರಲ್ಲಿ ಫೆಬ್ರವರಿ ಮೂರನೇ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ USBRL ಯೋಜನೆ ಉದ್ಘಾಟಿಸಿದ್ದರು. ಒಟ್ಟು 48.1 ಕಿಮೀ ಬನಿಹಾಲ್-ಸಂಗಲ್ದನ್ ವಿಭಾಗ ಸೇರಿದಂತೆ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯು ವರ್ಷದ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ.

ಇದೇ ವಿಚಾರ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣ (ಎಕ್ಸ್‌) ದಲ್ಲಿ ಫೋಟೋ ವಿಡಿಯೋ ಹಂಚಿಕೊಂಡಿದ್ದಾರೆ. USBRL ಯೋಜನೆಯ ಮಾರ್ಗದಲ್ಲಿ ಯಶಸ್ವಿಯಾಗಿ ರೈಲಿನ ಪ್ರಾಯೋಗಿಕ ಚಾಲನೆ ಆಗಿದೆ ಎಂದು ಅವರು ಅಧಿಕೃತಪಡಿಸಿದ್ದಾರೆ. ಇತ್ತೀಚೆಗೆ ಪ್ರಾಯೋಗಿಕ ಪರೀಕ್ಷೆಗೂ ಮೊದಲು ಪರೀಕ್ಷಾರ್ಥ ರೈಲ್ವೆ ಇಂಜಿನ್‌ ಅನ್ನು ಇದೇ ಬ್ರಿಡ್ಜ್ ಮೇಲೆ ಓಡಿಸಲಾಗಿತ್ತು.

ನಲ್ಲಿನ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, "USBRL ಯೋಜನೆಯ ಸಂಗಲ್ಡಾನ್ - ರಿಯಾಸಿ ವಿಭಾಗದ ನಡುವೆ MEMU ರೈಲಿನ ಯಶಸ್ವಿ ಪ್ರಾಯೋಗಿಕ ಚಾಲನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+