Viral video: ಅಮೆರಿಕದಲ್ಲಿ ಪರಾಠಾ ಮಾಡೋದೇ ಸಾಹಸ : ಬಾಗಿಲ ಬಳಿ ರೆಡಿ ಇರ್ತಾರೆ ಫೈರ್ ಫೈಟರ್ಸ್
Viral Video: ನಾವು ಭಾರತೀಯರಿಗೆ ನಮ್ಮ ಊಟದ ಬಗ್ಗೆ ಅದೊಂಥರಾ ಪ್ರೀತಿ. ಬೇರೆ ಕಡೆ ಹೋದರೆ ಒಂದೆರಡು ದಿನ ಅಲ್ಲಿನ ಊಟ, ಆಹಾರ ತಿನ್ನಬಹುದು. ಆದ್ರೆ ಮೂರನೇ ದಿನ ಮತ್ತೆ ನಮ್ಮ ಊಟವೇ ನಮಗೆ ಚಂದ. ದಕ್ಷಣ ಭಾರತದವರಿಗಾದರೆ ಅನ್ನ ಸಾಂಬಾರ್, ರಸಂ, ಇಡ್ಲಿ, ದೋಸೆ ಬೇಕೇ ಬೇಕು. ಅದೇ ಉತ್ತರ ಭಾರತೀಯರಿಗೆ ಪರಾಠದ ಮೇಲೆ ಎಲ್ಲಿಲ್ಲದ ಮೋಹ. ಪರಾಠದಲ್ಲೂ ತುಂಬಾ ವೆರೈಟಿ ಇದೆ.
ಅವರಿಗೆ ಭಾರತದ ಯಾವ ಮೂಲೆಯೇ ಆಗಿರಲಿ, ದೇಶ ಬಿಟ್ಟು ಹೊರಗೆ ಹೋಗಲಿ ಪರಾಠದ ಮೇಲಿನ ಪ್ರೀತಿ ಕಡಿಮೆಯಾಗೋದಿಲ್ಲ. ಬಿಸಿ ಬಿಸಿ ಪರಾಠದ ಮೇಲೆ ಬೆಣ್ಣೆ ಸವರಿ ತಿಂದರೆ ಅದರ ಆನಂದವೇ ಬೇರೆ. ಇದೀಗ ಅಮೆರಿಕಾದಲ್ಲಿ ನೆಲೆಸಿರೋ ಭಾರತದ ಕಟೆಂಟ್ ಕ್ರಿಯೇಟರ್ ರಿತು ಗುಪ್ತಾ ಅಮೆರಿಕಾ ಪರಾಠದ ಬಗ್ಗೆ ವಿಡಿಯೋ ಮಾಡಿದ್ದಾರೆ.

ಹೊಗೆಯದ್ದೇ ತಲೆನೋವು
ಪರಾಠ ಮಾಡುವಾಗ ಅಡುಗೆ ತುಂಬಾ ಹೊಗೆ ತುಂಬಿ ಕೊಳ್ಳುವುದು ಸಹಜ. ಯಾಕಂದ್ರೆ ಪರಾಠವನ್ನು ತವಾ ಮೇಲೆ ಹಾಕಿ ಅದ್ರ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಬದಿ ಸರಿಯಾಗಿ ಬೇಯುವವರೆಗೆ ಕಾಯಬೇಕು. ಈ ಹಂತದಲ್ಲಿ ಹೊಗೆ ಏಳುವುದು ಸಾಮಾನ್ಯ. ಈ ಹೊಗೆ ಅಡುಗೆ ಮನೆ ಮಾತ್ರ ಅಲ್ಲ ಡ್ರಾಯಿಂಗ್ ರೂಮನ್ನು ಕೂಡಾ ಆವರಿಸಿ ಬಿಡುತ್ತದೆ. ಇಲ್ಲಿ ರಿತು ಅವರಿಗೆ ತಲೆನೋವಾಗಿದ್ದೇ ಈ ಹೊಗೆ.
ಹಾಜರಿರುತ್ತದೆ ಅಗ್ನಿಶಾಮಕ ದಳ
ಪರಾಠ ಮಾಡ್ತಾ ಇದ್ದಾಗ ಹೊಗೆ ಏಳುತ್ತಿದ್ದ ಹಾಗೆ ಮನೆಯಲ್ಲಿನ ಸ್ಮೋಕ್ ಅಲಾರಂ ಕೂಗಿ ಕೊಳ್ಳುತ್ತದೆ. ಈ ಅಲಾರಾಂ ಬೆಂಕಿ ಬಿದ್ದಿದೆ ಎನ್ನುವ ಎಚ್ಚರಿಕೆ ನೀಡುತ್ತದೆ. ಅಲಾರಾಂ ಆಗುತ್ತಿದ್ದ ಹಾಗೆಯೇ ಅಲ್ಲಿನ ಅಗ್ನಿಶಾಮಕ ದಳ ಕ್ಷಣ ಮಾತ್ರದಲ್ಲಿ ಸ್ಥಳಕ್ಕೆ ಬಂದು ಬಿಡುತ್ತದೆ. ಪರಾಠ ಆಗುತ್ತೋ ಬಿಡುತ್ತೋ ಆದರೆ ಬೆಂಕಿ ಆರಿಸುವುದಕ್ಕೆ ಜನ ಮಾತ್ರ ರೆಡಿ ಇರುತ್ತಾರೆ.
ಪರಾಠ ಮಾಡುವುದು ಪರಮ ಸಾಹಸ
ಇದನ್ನು ರಿತು ಗುಪ್ತಾ ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಮೆರಿಕದಲ್ಲಿ ಪರಾಠ ಹೇಗೆ ತಯಾರಾಗುತ್ತದೆ ನೋಡಿ ಎಂದು ವಿವರಿಸ್ತಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಅಮೆರಿಕಾದಲ್ಲಿ ಪರಾಠಾ ಮಾಡಿ ತಿನ್ನುವುದು ಕೂಡಾ ದೊಡ್ಡ ಸಾಹಸವೇ ಎನ್ನುವುದು ತಿಳಿಯುತ್ತದೆ. ರಿತು ಶೇರ್ ಮಾಡಿರುವ ಈ ಪರಾಠ ವಿಡಿಯೋ ವೈರಲ್ ಆಗಿದೆ.
ರಿತು ಆಗಾಗ ತಮ್ಮ ನಿತ್ಯ ಜೀವನ ಹೇಗೆ ನಡೆಯುತ್ತದೆ ಎನ್ನುವುದರ ವಿಡಿಯೋ ಮಾಡಿ ಶೇರ್ ಮಾಡುತ್ತಾ ಇರುತ್ತಾರೆ. ಇದೀಗ ಪರಾಠದಂತಹ ಸಿಂಪಲ್ ತಿಂಡಿ ಅಮೆರಿಕಾದಲ್ಲಿ ಟ್ರಿಕಿ ಟಾಸ್ಕ್ ಅಂತ ತೋರಿಸೋ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲರ ಗಮನ ಸೆಳಿತಾ ಇದೆ.
ನೆಟ್ಟಿಗರ ಪ್ರತಿಕ್ರಿಯೆ
ತುಂಬಾ ಜನ ಈ ವಿಡಿಯೋಗೆ ರಿಯಾಕ್ಟ್ ಮಾಡಿದ್ದಾರೆ. ನನಗೂ ಈ ಹೋರಾಟದ ಅನುಭವ ಇದೆ ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು ತಮಾಷೆಯನ್ನು ಬದಿಗಿಟ್ಟು ನೋಡುವುದಾದರೆ ಅಷ್ಟು ಬೇಗ ಸ್ಪಂದಿಸುವ ಅಗ್ನಿಶಾಮಕ ವ್ಯವಸ್ಥೆಯ ಬಗ್ಗೆ ಶ್ಲಾಘಿಸಿದ್ದಾರೆ. ವೆಲ್ ಕಮ್ ಟು ಇಂಡಿಯಾ ಪರಾಠಾ ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ. ಫೈರ್ ಅಲಾರಾಂ ಅನ್ನು ಮೊದಲು ಬಂದ್ ಮಾಡಿ ನಂತರ ಪರಾಠ ಮಾಡಿ ಎಂದು ಮತ್ತೊಬ್ಬರು ಸಲಹೆ ಕೊಟ್ಟಿದ್ದಾರೆ. ಇಲ್ಲಿ ಬೆಂಕಿ ಬಿದ್ದು ಪೂರ್ತಿ ಮನೆ ಸುಟ್ಟು ಹೋದ ನಂತರವೇ ಅಗ್ನಿಶಾಮಕದವರು ಬರೋದು ಅಂತ ಇನ್ನೊಬ್ಬರು ತಮಾಷೆ ಮಾಡಿದ್ದಾರೆ.ಅನೇಕ ಮಂದಿ ಸ್ಮೈಲಿಂಗ್ ಇಮೋಜಿಯನ್ನು ಕಳುಹಿಸಿದ್ದಾರೆ.


Click it and Unblock the Notifications
