Get Updates
Get notified of breaking news, exclusive insights, and must-see stories!

Viral Video: ಹೆದ್ದಾರಿಯಲ್ಲಿ ಚಲಿಸುವ ಟ್ರಕ್‌ನಿಂದ ಸಿನಿಮೀಯ ರೀತಿ ಕಳ್ಳತನ: 'ಧೂಮ್' ಗೆ ಹೋಲಿಸಿದ ನೆಟ್ಟಿಗರು

ವಾಹನಗಳ ಚೇಸಿಂಗ್ ಮಾಡಿ ಕಳ್ಳತನ ಮಾಡುವ ಕ್ರಮವನ್ನು ನೀವೆಲ್ಲ ಸಿನಿಮಾದಲ್ಲಿ ನೋಡಿರುತ್ತೇವೆ. ಇವೆಲ್ಲವುಗಳನ್ನು ವಾಸ್ತವದಲ್ಲಿ ನಾವು ಇವೆಲ್ಲ ಕ್ರಮಗಳನ್ನು ಕಲ್ಪನೆ ಸಹ ಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ಆದರೆ ಇಲ್ಲೊಂದು ಮೂವರು ಗ್ಯಾಂಗ್ ಸಿನಿಮೀಯ ರೀತಿಯಲ್ಲಿ ಚಲಿಸುವ ಟ್ರಕ್‌ನಿಂದ ಕಳ್ಳತನ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಸರಕು ಕಳ್ಳತನದ ವಿಡಿಯೋ ಹೆಚ್ಚು ಹೆಚ್ಚು ಶೇರ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಧೋಮ್ ಸರಣಿ ಸಿನಿಮಾ, ಫಾಸ್ಟ್ ಆಂಡ್ ಫ್ಯೂರಿಯಸ್ ನಂತಹ ಡೇರಿಂಗ್ ಸಿನಿಮಾಗಳಿಗೆ ಹೋಲಿಕೆ ಮಾಡಿ, ಪ್ರತಿಕ್ರಿಯಿಸಿದ್ದಾರೆ.

Viral Video of Goods Theft on Truck in Travel at Highway Netizens Compare for Dhoom film

ನಿಜ ಜೀವನದಲ್ಲಿ ಈ ಲಾರಿ ಕಳ್ಳತನ ವಿಡಿಯೋ ನೋಡಿದರೆ ರೋಮಾಂಚನವಾಗುತ್ತದೆ. ಒಂದು ಕ್ಷಣ ಇದು ಸಿನಿಮಾ ದೃಶ್ಯವೇನೋ ಎಂದನಿಬಿಡುತ್ತದೆ. ಅಷ್ಟರ ಮಟ್ಟಿಗೆ ಒಂದೇ ಬೈಕಿನಲ್ಲಿ ತೆರಳುವ ಖದೀಮರು ಚಲಿಸುವ ಲಾರಿಯಲ್ಲಿನ ಸರಕು ಕದಿಯುತ್ತಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಹೆದ್ದಾರಿಯೊಂದರಲ್ಲಿ ಸರಕು ಹೊತ್ತ ಲಾರಿಯೊಂದು ಒಂದೇ ವೇಗದಲ್ಲಿ ಚಲಿಸುತ್ತಿರುತ್ತದೆ. ಹಿಂದಿನಿಂದ ಮೂವರ ಗ್ಯಾಂಗ್ ಒಂದೇ ಬೈಕ್‌ನಲ್ಲಿ ಲಾರಿಯನ್ನು ಹಿಂಚಾಲಿಸುತ್ತದೆ. ಅದರಲ್ಲಿ ಇಬ್ಬರು ಚಲಿಸುತ್ತಿದ್ದ ಲಾರಿ ಏರಿ, ಅದರಲ್ಲಿ ಸರಕಿನ ಚೀಲವನ್ನು ರಸ್ತೆಗೆ ಎಸೆಯುತ್ತಾರೆ.

ಬಳಿಕ ಅದೇ ಲಾರಿಯಿಂದ ಒಬ್ಬೊಬ್ಬರಾಗಿ ಇಳಿಯುತ್ತಾ ಹಿಂದೆ ಬರುತ್ತಿದ್ದ ಸಹಚರನ ಬೈಕಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಾರೆ. ಘಟನೆಯಲ್ಲಿ ಈ ಮೂವರ ಮಧ್ಯದ ಸಮನ್ವಯತೆ, ಸಹಕಾರ, ಧೈರ್ಯವು ಒಂದು ಕ್ಷಣ ಎಲ್ಲರಿಂದಲೂ ಶಹಬ್ಬಾಶ್‌ಗಿರಿಗೆ ಪಡೆಯಲು ಅರ್ಹ ಎನಿಸುತ್ತದೆ.

ಕದ್ದ ಮಾಲನ್ನು ರಸ್ತೆಯ ಮೇಲೆ ಎಸೆದ ನಂತರ ಮರಳಿ ಬಂದು ಅದನ್ನು ತೆಗೆದುಕೊಂಡು ಹೋಗುವ ಪ್ಲಾನ್ ಅವರದ್ದಾಗಿದೆ. ಈ ಇಡಿ ದೃಶ್ಯಾವಳಿಗಳನ್ನು ಲಾರಿ ಮತ್ತು ಬೈಕಿನ ಹಿಂದೆ ಅವರಷ್ಟೆ ಸರಿಸಮಾನ ವೇಗದಲ್ಲಿ ಬರುವ ಮತ್ತೊಂದು ವಾಹನ ಸವಾರರ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಅದೀಗ ವೈರಲ್ ಆಗಿದೆ.

ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆ?

ಇಷ್ಟು ನೀಟಾಗಿ ಲಾರಿಯಿಂದ ಸರಕು ಕದ್ದ ಖದೀಮರ ಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಧೂಮ್ ಸರಣಿ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಫಾಸ್ಟ್ ಅಂಡ್ ಫ್ಯೂರಿಯಸ್‌ನ ಕಥಾವಸ್ತುವಿಗೂ ಹೋಲಿಕೆ ಮಾಡಿ ಕಾಮೆಂಟ್ ಮಾಡಿದ್ದಾರೆ. ಇದು ಇಂತಹ ಚಿತ್ರಗಳ ಕಳ್ಳರ ಶೌರ್ಯ ಮತ್ತು ಸಾಹಸ ದೃಶ್ಯಗಳಿಂದ ಇವರು ಪ್ರೆರೇಪಿತವಾಗಿಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೆ ಬೈಕ್ ಬರುತ್ತಿರುವುದು ಮೀರ್‌ ನಲ್ಲಿ ನೋಡಿ ಟ್ರಕ್ ಡ್ರೈವರ್ ಖಾಲಿ ರಸ್ತೆಯಲ್ಲಿ ನಿಧಾನವಾಗಿ ಓಡಿಸುತ್ತಿರುವುದು ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಲಾರಿ ಚಾಲಕನು ಖಾಲಿಯಾದ ರಸ್ತೆಯಲ್ಲಿ ಸ್ಥಿರ ವೇಗದಲ್ಲಿ ಓಡಿಸಿದ್ದಾನೆ. ಇದು ಘಟನೆ ಸಲೀಸಾಗಿ ಪೂರ್ಣಗೊಳ್ಳಲು ಸಹಾಯವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Viral Video of Goods Theft on Truck in Travel at Highway Netizens Compare for Dhoom film

ಸಿಸಿಟಿವಿ ಬ್ಯಾಕಪ್ ಬ್ಯಾಟರಿ ಕಳ್ಳರ ಬಂಧನ

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ದೆಹಲಿ ಪೊಲೀಸರು, ಹೆಚ್ಚಿನ ಭದ್ರತಾ ವಲಯದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಬ್ಯಾಕಪ್ ಬ್ಯಾಟರಿಗಳ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಶನಿವಾರ ಬಂಧಿಸಿದ್ದಾರೆ.

ಸ್ಯಾನ್ ಮಾರ್ಟಿನ್ ರಸ್ತೆ, ವಿನಯ್ ಮಾರ್ಗ, ಸರ್ದಾರ್ ಪಟೇಲ್ ಮಾರ್ಗ ಮತ್ತು ತುಘಲಕ್ ರಸ್ತೆ ಪ್ರದೇಶಗಳಲ್ಲಿ ಸಿಸಿಟಿವಿ ಬ್ಯಾಕಪ್ ಬ್ಯಾಟರಿ ಕಳ್ಳತನವಾಗಿವೆ. ಇದರಿಂದಾಗಿ ಬ್ಯಾಕಪ್ ಬ್ಯಾಟರಿ ಇಲ್ಲದೇ ವಿದ್ಯುತ್ ಕಡಿತದ ವೇಳೆ, ರಕ್ಷಣೆಗೆ ಹಾಕಿದ್ದ ಸಿಸಿ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿವೆ. ಇದರಿಂದ ಭದ್ರತೆಗೆ ತೊಂದರೆ ಆಗಬಹುದು. ವಿಡಿಯೋ ರೆಕಾರ್ಡಿಂಗ್ ತೊಂದರೆ ಆಗಬಹುದು. ಇದೊಂದು ಗಂಭೀರ ಘಟನೆ ಎಂದು ದೆಹಲಿ ಪೊಲೀಸರು ಭಾವಿಸಿದ್ದಾರೆ.

ಏಕೆಂದರೆ ಈ ಪ್ರದೇಶದಲ್ಲಿ ವಿಐಪಿಗಳು ಮತ್ತು ರಾಜತಾಂತ್ರಿಕ ಸಿಬ್ಬಂದಿಗಳು ವಾಸಿವಿದ್ದಾರೆ. ಅವರ ಭದ್ರತೆ, ಸುರಕ್ಷತಾ ಕ್ರಮವಾಗಿ ಅಳವಡಿಸಲಾಗಿದ್ದ ಸಿಸಿಟಿವಿಗಳ ಬ್ಯಾಕಪ್ ಬ್ಯಾಟರಿಗಳನ್ನು ನಾಲ್ವರು ಖದಿಯುತ್ತಿದ್ದರು. ಸದ್ಯ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ (ನವದೆಹಲಿ) ದೇವೇಶ್ ಕುಮಾರ್ ಮಹ್ಲಾ ಮಾಹಿತಿ ನೀಡಿದ್ದಾರೆ.

ದೆಹಲಿಯಂತಹ ಮಹಾನಗರದಲ್ಲಿ ಈ ಸಿಸಿಟಿವಿ ಬ್ಯಾಟರಿ ಬ್ಯಾಕಪ್ ಕಳ್ಳತನ ಗ್ಯಾಂಗ್ ಸಕ್ರಿಯವಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಖದೀಮರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮತ್ತೆ ಎಲ್ಲಿಯಾದರೂ ಇಂತಹ ಘಟನೆಗಳನ್ನು ಮಾಡಿದ್ದಲ್ಲಿ ಅವುಗಳ ಮಾಹಿತಿ ಕಲೆ ಹಾಕಿದ್ದಾರೆ. ಪ್ರತಿಷ್ಠಿತ ಏರಿಯಾದಲ್ಲಿ ಭದ್ರತೆಗೆ ಹಾಕಿದ್ದ ಸಿಸಿಟಿವಿಗಳಿಗೆ ಮತ್ತೆ ಬ್ಯಾಕಪ್ ಬ್ಯಾಟರಿ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+