ವಿಡಿಯೋ: ಕಾಡಿನಿಂದ ನಾಡಿಗೆ ಬಂದು ತೆಂಗಿನ ಮರ ಹತ್ತಿದ ಚಿರತೆ
ಈಗಾಗಲೇ ವೈರಲ್ ಆಗಿರುವ ವಿಡಿಯೋಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವ ಹಲವು ವಿಡಿಯೋಗಳನ್ನು ನೋಡಿದ್ದೀರಿ. ಅವು ಆಹಾರವನ್ನು ಹುಡುಕುತ್ತಾ ನಾಡಿಗೆ ಬರುವುದು ತಿಳಿದಿರುವ ವಿಚಾರ. ಹೀಗೆ ಬರುವಾಗ ದಾರಿ ತಪ್ಪಿ ಊರು ಸೇರುತ್ತವೆ. ಇಲ್ಲಿರುವ ಈ ವಿಡಿಯೋದಲ್ಲಿಯೂ ಅದೇ ಆಗಿದೆ. ಈ ಚಿರತೆಗಳು ನಾಸಿಕ್‌ಗೆ ಬಂದಿವೆ. ಆದರೆ ಎಳನೀರು ಕುಡಿಯಲು ಅಲ್ಲ ಬದಲಿಗೆ ಅಲ್ಲಿ ಮನುಷ್ಯರ ಸುಳಿವು ಸಿಕ್ಕಿದ್ದರಿಂದ ಪ್ರಾಣಭಯದಿಂದ ಪಾರಾಗಲು ಬೆಕ್ಕಿನಂತೆ ತೆಂಗಿನ ಮರ ಹತ್ತಿವೆ.
67,000 ಕ್ಕೂ ಹೆಚ್ಚು ಜನರು ಈ ವಿಡಿಯೊವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಐಪಿಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋವನ್ನು ವಾಟ್ಸಾಪ್ ಮೂಲಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಅವು ತ್ವರಿತ ಗುಣಲಕ್ಷಣಗಳನ್ನು ಹೊಂದಿವೆ. ಜೊತೆಗೆ ಎಲ್ಲಾ ರೀತಿಯ ಪ್ರದೇಶಗಳಿಗೆ ಸೂಕ್ತವಾಗಿವೆ. ಅವು ರಾಜಸ್ಥಾನ ಮತ್ತು ರಾಕಿ ಹಿಲ್ಸ್‌ನಿಂದ ಈಶಾನ್ಯದ ಕಾಡುಗಳವರೆಗೆ, ಮುಂಬೈ ಮತ್ತು ಗುರ್ಗಾಂವ್ ನಗರಗಳಿಂದ ಹಿಮಾಲಯ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವು ಆಹಾರಕ್ಕಾಗಿ ಬೇಟೆಯಾಡುವ ಅತ್ಯಂತ ಚುರುಕಾದ ಪ್ರಾಣಿಗಳಾಗಿವೆ.
ಈ ಪೋಸ್ಟ್‌ನಿಂದ ಸ್ಫೂರ್ತಿಗೊಂಡ ಅವರು ಮತ್ತೊಂದು ಪೋಸ್ಟ್ ಅನ್ನು ಟ್ವೀಟ್ ಮಾಡಿದ್ದಾರೆ.

'ಇವು ಚಹಾ ತೋಟಗಳು ಮತ್ತು ಕಬ್ಬಿನ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಚಹಾ ತೋಟಗಳು ಅವರಿಗೆ ನೆಚ್ಚಿನ ಸ್ಥಳಗಳಾಗಿವೆ. ಅಲ್ಲಿ ಆಹಾರ ಸುಲಭವಾಗಿ ದೊರೆಯುತ್ತದೆ. ವಿಶ್ರಾಂತಿಗಾಗಿ ನೆರಳು ಲಭ್ಯವಿರುತ್ತದೆ. ಇದರ ಮರಿಗಳೂ ಇದೇ ವಾತಾವರಣದಲ್ಲಿ ಬೆಳೆಯುತ್ತವೆ' ಎಂದು ಚಿರತೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
Look at the agility of these cats. Somewhere from MH via WhatsApp. That is why leopards are omnipresent in India. pic.twitter.com/LruY3Hfnom
— Parveen Kaswan, IFS (@ParveenKaswan) September 18, 2022












Click it and Unblock the Notifications